ನಿನಗೆ ಬೇರೆ ಹೆಸರು ಬೇಕೆ? ಇಂದು ವಿಶ್ವ ಹೆಣ್ಣು ಮಕ್ಕಳ ದಿನ
Team Udayavani, Oct 11, 2022, 7:20 AM IST
ಹೆಣ್ಣು ಎಂದರೆ ಮನೆಯ ಬೆಳಕು. ಹೆಣ್ಣೆಂದರೆ ನಮ್ಮ ಹುಟ್ಟಿನಿಂದ ಹಿಡಿದು ಸಾಯುವ ತನಕ ಆಕೆಯ ಪಾತ್ರ ವಿಧ ವಿಧವಾದದ್ದು, ಆಕೆ ಇಲ್ಲದೆ ಜೀವನವಿದೆಯಾ? ಖಂಡಿತವಾಗಿಯೂ ಇಲ್ಲ. ಜಗದ ಸೃಷ್ಟಿಕರ್ತೆಯೇ ಅವಳಾಗಿರುವಾಗ ಆಕೆ ಇಲ್ಲದೆ ನಾವು ಹೇಗೆ ಜೀವಿಸುವುದು.
ಇದು ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಯಾರಿಗೂ ಈ ಮಾತು ಬೆಳಕಾಗಿರಲಿಲ್ಲ. ವಂಶೋದ್ಧಾರಕ ಪುತ್ರ ಮಾತ್ರ ಎಂಬುದು ಸತ್ಯ ಎನಿಸುತ್ತಿತ್ತು. ಇಂದು ಕಾಲ ಬದಲಾಗುತ್ತಿದೆ. ಕೆಲವು ಮನೆಗಳಲ್ಲಿ ಯಾವುದಾದರೂ ಇರಲಿ, ಮಕ್ಕಳಿರಲಿ ಎಂಬ ಭಾವ ಇದ್ದರೂ ಮನದಲ್ಲಿ ಗಂಡೇ ಇರಲಿ ಎಂಬ ಮನೋಭಾವ ಬೆಳೆದಿರುತ್ತದೆ. ಇನ್ನು ಕೆಲವರು ಹೆಣ್ಣು ಮಗುವನ್ನು ಮನಸಾರೆ ಆಶಿಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಇವರ ಸಂಖ್ಯೆ ತುಂಬಾ ಹೆಚ್ಚಿದೆ ಎಂದರೆ ತಪ್ಪಾಗಲಾರದು.
ಐದು ವರ್ಷಗಳ ಹಿಂದೆ ನೋಡಿದರೆ ಲಿಂಗಾನುಪಾತ ಸಮತೋಲನ ಇಲ್ಲದ ತಕ್ಕಡಿಯಾಗಿತ್ತು. ಈಗ ಸಮತೋಲನಕ್ಕೆ ಬಂದು ನಿಂತಿದೆ. ಈ ಮನೋಧರ್ಮ ಯಾವಾಗಲೂ ಹೀಗೆ ಇದ್ದರೆ ಬಹುಶಃ ಗಂಡು, ಹೆಣ್ಣು ಎಂಬ ತಾರತಮ್ಯವಿಲ್ಲದಂತಾಗುತ್ತದೆ. ಮಗನಿರಲಿ, ಮಗಳಿರಲಿ ಮಕ್ಕಳಿಗಾಗಿ ಸಡಗರ ಪಡಬೇಕು, ಸಂಭ್ರಮಿಸಬೇಕು. ಇಂದು ತುಂಬಾ ಮನೆಗಳಲ್ಲಿ ಅವು ಸಾಧ್ಯವಾಗಿದೆಯಾದರೂ ಅದರ ಪೂರ್ಣ ಫಲಿತಾಂಶ ಸಿಕ್ಕಾಗ ಬಹುಶಃ ಈ ದಿನ ಆಚರಿಸುತ್ತಿರುವುದಕ್ಕೆ ಒಂದು ಅರ್ಥಬಂದಂತಾಗುತ್ತದೆ.
ಆಚರಣೆ
ಹೆಣ್ಣು ಮಕ್ಕಳಿಗೂ ಸ್ಥಾನಮಾನ ಸಿಗಬೇಕು. ಅವರ ಕುರಿತಾಗಿನ ಕೀಳರಿಮೆ ತೊಲಗಬೇಕು ಎಂಬ ಉದ್ದೇಶದಿಂದ 2012ರ ಅಕ್ಟೋಬರ್ 11ರಂದು ವಿಶ್ವಸಂಸ್ಥೆ ಈ ದಿನವನ್ನು ಆಚರಣೆಗೆ ತಂದಿತು. ಇದರ ಮುಖ್ಯ ಉದ್ದೇಶ ಹೆಣ್ಣು ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
ಥೀಮ್
ಪ್ರತೀ ವರ್ಷ ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನವನ್ನು ಒಂದು ಥೀಮ್‌ನೊಂದಿಗೆ ಆಚರಿಸಲಾಗುತ್ತದೆ. 2022ರ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಥೀಮ್ “ಈಗ ನಮ್ಮ ಸಮಯ- ನಮ್ಮ ಹಕ್ಕುಗಳು’ ಎಂಬುದಾಗಿದೆ. ಜಗತ್ತಿನಾದ್ಯಂತ ಮಹಿಳೆಯರ ಹಕ್ಕುಗಳ ಕುರಿತಾಗಿ ಜಾಗೃತಿ ಮೂಡಿಸಿ ಆಕೆಯನ್ನು ಸಬಲೆಯನ್ನಾಗಿಸುವುದು ಮತ್ತು ಆಕೆಗೆ ಗೌರವಪೂರ್ಣ ಬದುಕು ಕಲ್ಪಿಸು ವಂತೆ ಮಾಡುವುದೇ ಇದರ ಉದ್ದೇಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.