ಡಾಲರ್ v/s ಯುವಾನ್: ಅಮೆರಿಕಕ್ಕೆ ಸಡ್ಡು ಹೊಡೆಯಲು ಚೀನ, ರಷ್ಯಾ ಕಾರ್ಯತಂತ್ರ
Team Udayavani, Dec 3, 2022, 7:23 AM IST
ವಿಶ್ವದ ದೊಡ್ಡಣ್ಣ ಎಂದು ಕರೆಸಿ ಕೊಳ್ಳುವ ಅಮೆರಿಕದ ಕರೆನ್ಸಿಯಾಗಿ ರುವ ಡಾಲರ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಹೊಂದಿದೆ. ಡಾಲರ್‌ಗೆ ಪೈಪೋಟಿ ನೀಡಲು ವಿವಿಧ ದೇಶಗಳು ತಮ್ಮ ಕರೆನ್ಸಿಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು ಹರಸಾಹಸ ಪಟ್ಟದ್ದು ರಹಸ್ಯವಾಗಿ ಏನೂ ಉಳಿದಿಲ್ಲ. 2008ರಲ್ಲಿ ಜಗತ್ತನ್ನು ಕಾಡಿದ ಆರ್ಥಿಕ ಹಿಂಜರಿತದ ಬಳಿಕ ಯುಎಸ್ ಡಾಲರ್‌ಗೆ ಪ್ರತಿಯಾಗಿ ಪರ್ಯಾಯ ಕರೆನ್ಸಿ ಅಥವಾ ಬದಲಿ ಹಣ ವರ್ಗಾವಣೆ ಜಾಲವನ್ನು ಹೊಂದಲು ಅಮೆರಿಕ ವಿರೋಧಿ ರಾಷ್ಟ್ರಗಳು ಕಾರ್ಯತಂತ್ರವನ್ನು ರೂಪಿಸುತ್ತಲೇ ಬಂದಿವೆ. ಆದರೆ ಇದರ ಹೊರತಾಗಿಯೂ ವಿಶ್ವದ ದೊಡ್ಡಣ್ಣನ ಮುಂದೆ ತಲೆ ಎತ್ತಿ ನಿಲ್ಲಲು ವಿಶ್ವದ ಯಾವುದೇ ದೇಶದ ಕರೆನ್ಸಿಗಾಗಲೀ ಹಣ ವರ್ಗಾವಣೆ ಜಾಲಕ್ಕಾಗಲೀ ಸಾಧ್ಯವಾಗಿಲ್ಲ. ಆದರೆ ಈ ಬಾರಿ ರಷ್ಯಾ ಮತ್ತು ಚೀನ ಡಾಲರ್‌ಗೆ ಬದಲಿಯಾಗಿ ಯುವಾನ್ ಅನ್ನು ತಮ್ಮತಮ್ಮ ಹಣಕಾಸು ವ್ಯವಹಾರಗಳಿಗೆ ಬಳಸಿಕೊಳ್ಳುವ ಮೂಲಕ ಡಾಲರ್ ಅನ್ನು ಹಿನ್ನೆಲೆಗೆ ಸರಿಸಲು ಕಾರ್ಯತಂತ್ರ ರೂಪಿಸಿ, ಕಾರ್ಯಾಚರಣೆ ಆರಂಭಿಸಿದೆ.
ಎಲ್ಲಿ?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೀಘ್ರಗತಿಯಲ್ಲಿ ಆಗುತ್ತಿರುವ ಬದಲಾವಣೆಗಳು, ಯುರೋಪಿಯನ್ ಒಕ್ಕೂಟದಲ್ಲಾಗುತ್ತಿರುವ ಬೆಳವಣಿಗೆಗಳು, ಚೀನ ಸಹಿತ ಹಲವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಎದುರು ಯುಎಸ್ ಡಾಲರ್ ಹೆಚ್ಚು ಸ್ಥಿರವಾಗಿ ನಿಲ್ಲುವುದು ಕಠಿನವಾಗುತ್ತಿದೆ. ಒಮ್ಮೆ ಯುಎಸ್ ಆರ್ಥಿಕತೆಯು ವಿಶ್ವಾಸಾ ರ್ಹತೆಯನ್ನು ಕಳೆದುಕೊಂಡರೆ ಜಾಗತಿಕ ಮಟ್ಟದಲ್ಲಿ ಯುಎಸ್ ಡಾಲರ್ ತನ್ನಿಂತಾನೇ ಪ್ರಾಮುಖ್ಯವನ್ನು ಕಳೆದುಕೊಳ್ಳುವುದು.
ಹೇಗಿದೆ ಪರಿಸ್ಥಿತಿ?
ಯುಎಸ್ ತನ್ನ ಈ ಕಠಿನ ನಿರ್ಧಾರದ ಮೂಲಕ ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಸೃಷ್ಟಿಸಿರುವುದು ಮಾತ್ರವಲ್ಲ ಆಂತರಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿಯೂ ವಿಫಲವಾಗಿದೆ. ಹೀಗಾಗಿ ವಾಷಿಂಗ್ಟನ್ ಸದ್ಯ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗುತ್ತಿದೆ ಎನ್ನುವುದು ಹಲವಾರು ದೇಶಗಳ ಅಭಿಪ್ರಾಯ. ಇದನ್ನೇ ಬಂಡವಾಳ ಮಾಡಿಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೇಲಿನ ವಿಶ್ವಾಸಾರ್ಹತೆಯನ್ನು ಕಡಿಮೆಗೊಳಿಸಲು ಬಹುತೇಕ ರಾಷ್ಟ್ರಗಳು ಸಿದ್ಧತೆ ನಡೆಸಿಕೊಂಡಿವೆ. ಇದರಲ್ಲಿ ಚೀನ ಮತ್ತು ರಷ್ಯಾ ಮುಂಚೂಣಿಯಲ್ಲಿದೆ.
ಏನಾಗಿದೆ?
ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಆಹಾರ, ಇಂಧನ ಕೊರತೆ ಕಾಣಿಸಿಕೊಂಡಿದೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಕೊರೊನಾ ಸಾಂಕ್ರಾಮಿಕ, ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ಇದು ಎಂಬ ಸಾರ್ವತ್ರಿಕ ವಿಶ್ಲೇಷಣೆಯೂ ಕೇಳಿಬರುತ್ತಿದೆ. ಆದರೆ ಇದರ ಹಿಂದಿರುವ ಪ್ರಬಲ ಕಾರಣ ವೆಂದರೆ ರಷ್ಯಾ, ಚೀನ ಸಹಿತ ಇತರ ಕೆಲವು ದೇಶಗಳು ಜಾಗತಿಕ ಮಾರುಕಟ್ಟೆಯಲ್ಲಿ ಯುಎಸ್ ಕರೆನ್ಸಿ ಡಾಲರ್‌ನ ಪ್ರಾಬಲ್ಯವನ್ನು ತಗ್ಗಿಸಲು ಹೊರಟಿ ರುವುದು. ಇದು ನಿನ್ನೆ-ಮೊನ್ನೆಯ ಕಥೆಯೇನಲ್ಲ. 2008ರಿಂದಲೇ ಇಂಥ ಪ್ರಯತ್ನಗಳು ನಡೆಯುತ್ತಿವೆ. ಈ ವರ್ಷದ ಮಾರ್ಚ್‌ನಿಂದೀಚೆಗೆ ರಷ್ಯಾದ ವಿರುದ್ಧ ಅಮೆರಿಕ ಸಹಿತ ಐರೋಪ್ಯ ರಾಷ್ಟ್ರಗಳು ನಿರಂತರ ಆರ್ಥಿಕ, ವಾಣಿಜ್ಯ ನಿರ್ಬಂಧಗಳನ್ನು ಹೇರಿದ ಬಳಿಕ ರಷ್ಯಾ ಅಮೆರಿಕದ ಡಾಲರ್ ಅನ್ನು ಹಣಿಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಪ್ರಯತ್ನಕ್ಕೆ ಚೀನ ಆದಿಯಾಗಿ ವಿಶ್ವದ ಇನ್ನಿತರ ಕೆಲವೊಂದು ರಾಷ್ಟ್ರಗಳು ಕೈಜೋಡಿಸಿರುವ ಪರಿಣಾಮವಾಗಿ ರಷ್ಯಾ ಆರ್ಥಿಕ ಸಂಕಷ್ಟದಿಂದ ಭಾಗಶಃ ಪಾರಾಗಿದೆ.
ಯಾಕೆ?
ಜಾಗತಿಕ ಮಾರುಕಟ್ಟೆಯಲ್ಲಿ ಮುಖ್ಯವಾಗಿ ವಿದೇಶಿ ವಿನಿಮಯ, ತೈಲ, ಇಂಧನ, ವ್ಯಾಪಾರ ಒಪ್ಪಂದಗಳಲ್ಲಿ ಯುಎಸ್ ಡಾಲರ್ ಬಳಕೆಯಾಗುತ್ತಿದೆ. ಇದು ಎಲ್ಲ ರಾಷ್ಟ್ರಗಳ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ. 1970ರ ಬಳಿಕ ಇದೇ ಮೊದಲ ಬಾರಿಗೆ ಯುಎಸ್ ಫೆಡರಲ್ ರಿಸರ್ವ್ ಭಾವೀ ಪರಿಣಾಮದ ಬಗ್ಗೆ ಯೋಚಿಸದೆ ಬಡ್ಡಿ ದರವನ್ನು ತೀವ್ರವಾಗಿ ಏರಿಸಿದೆ. ತತ್ಪರಿಣಾಮ ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ ಅನಿಶ್ಚತತೆಯ ವಾತಾವರಣ ಸೃಷ್ಟಿಯಾಗಿದೆ. ಯುಎಸ್ ಇತರ ದೇಶಗಳ ಮೇಲೆ ತನ್ನ ಕರೆನ್ಸಿಯನ್ನು ಆಯುಧವಾಗಿ ಬಳಸುತ್ತಿದೆ ಎಂದು ಹಲವು ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿವೆ.
ಹಿಂದೆ ಏನಾಗಿತ್ತು?
ಚೀನ ಮತ್ತು ರಷ್ಯಾದ ಬ್ಯಾಂಕ್‌ಗಳ ವಿರುದ್ಧ ಯುಎಸ್ ಸರಕಾರವು ನಿರ್ಬಂಧಗಳನ್ನು ಘೋಷಿಸಿದ ಅನಂತರ ರಷ್ಯಾದ ಘಟಕಗಳೊಂದಿಗೆ ಯುರೋಪಿಯನ್ ರಾಷ್ಟ್ರಗಳು ತತ್‌ಕ್ಷಣವೇ ವಹಿವಾಟುಗಳನ್ನು ನಿಲ್ಲಿಸಿತು. ಒಂದು ರೀತಿಯಲ್ಲಿ ರಷ್ಯಾಕ್ಕೆ ಆರ್ಥಿಕ ದಿಗ್ಬಂಧನ ಉಂಟಾಯಿತು. ಆಗ ರಷ್ಯಾದ ಬ್ಯಾಂಕ್ ಮತ್ತು ಕಂಪೆನಿಗಳಿಗೆ ಗಡಿಯಾಚೆಗೆ ಯುವಾನ್ ವಸಾಹತುಗಳು ಪ್ರಬಲ ಆರ್ಥಿಕ ಶಕ್ತಿಯಾಗಿ ಕಂಡು ಬಂದಿತ್ತು. ಕೇವಲ ವಿಮಾನ ಮಾತ್ರವಲ್ಲ ಭೂ ಸಾರಿಗೆಯ ಮೂಲಕವೂ ರಷ್ಯಾಕ್ಕೆ ಯುವಾನ್ ಅನ್ನು ನಗದು ರೂಪದಲ್ಲಿ ಪೂರೈಸುವುದು ಜಾಗತಿಕ ಆರ್ಥಿಕ ನಿರ್ಬಂಧದಿಂದ ತಪ್ಪಿಸಲು ದಾರಿಯಾಯಿತು. 2018ರಿಂದಲೇ ಚೀನದ ಹಾರ್ಬಿನ್ ಬ್ಯಾಂಕ್ ಹೀಲಾಂಗಿಜಿಯಾಂಗ್ ಪ್ರಾಂತದಲ್ಲಿ ಹಲವಾರು ಸಣ್ಣ ಬ್ಯಾಂಕ್‌ಗಳನ್ನು ಅಭಿವೃದ್ಧಿಪಡಿಸಿ ವಿಸ್ತರಿಸಿವೆ. ಇದರ ಸ್ಥಳೀಯ ಶಾಖೆಯು 2019ರಲ್ಲಿ ರಷ್ಯಾದ ಪೋಲ್ಟಾವಾR ಕಸ್ಟಮ್ಸ್ ಪೋಸ್ಟ್‌ಗೆ 15 ಮಿಲಿಯನ್ ಯುವಾನ್ ಅನ್ನು ವಿತರಿಸಿದೆ.
ಯಾರು?
ಜಾಗತಿಕ ಮಟ್ಟ ದಲ್ಲಿ ಡಾಲರ್‌ನ ಸ್ಥಾನಮಾನವನ್ನು ದುರ್ಬಲಗೊಳಿಸಲು ಈಗ ಚೀನ ಮಹತ್ವದ ಹೆಜ್ಜೆ ಇಟ್ಟಿದೆ. ಉಜ್ಬೇಕಿಸ್ಥಾನದಲ್ಲಿ ತಿಂಗಳುಗಳ ಹಿಂದೆ ನಡೆದ ಶೃಂಗಸಭೆಯಲ್ಲಿ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ಸದಸ್ಯ ರಾಷ್ಟ್ರ ಗಳು ಚೀನ ಮತ್ತು ರಷ್ಯಾ ನೇತೃತ್ವದ ಪ್ರಮುಖ ಪ್ರಾದೇಶಿಕ ಸಂಸ್ಥೆ ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರವನ್ನು ವಿಸ್ತರಿಸಲುಬೇಕಾದ ಮಾರ್ಗಸೂಚಿಯನ್ನು ಒಪ್ಪಿ ಕೊಂಡವು. ವ್ಯಾಪಾರದಲ್ಲಿ ಸ್ಥಳೀಯ ಕರೆನ್ಸಿಗಳನ್ನು ಬಳಸಲು, ಪರ್ಯಾಯ ಪಾವತಿ ಮತ್ತು ವಸಾಹತು ವ್ಯವಸ್ಥೆಗಳ ಅಭಿವೃದ್ಧಿಗಾಗಿ ಈ ಮಾರ್ಗ ಸೂಚಿಯು ಹಲವು ವರ್ಷಗಳಿಂದ ಎಸ್‌ಸಿಒದ ಆರ್ಥಿಕ ಯೋಜನೆಯ ಭಾಗವಾಗಿದೆ.
ಹೇಗೆ?
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದರಿಂದ ರಷ್ಯಾದ ಹಣಕಾಸು ಸಂಸ್ಥೆಗಳ ವಿರುದ್ಧ ಯುಎಸ್ ನಿರ್ಬಂಧಗಳನ್ನು ವಿಧಿಸಿತ್ತು. ಅಮೆರಿಕದೊಂದಿಗೆ ಈಗಾಗಲೇ ಚೀನದ ಸಂಬಂಧ ಹದಗೆಟ್ಟಿದೆ. ಹೀಗಾಗಿ ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧಗಳನ್ನು ತಗ್ಗಿಸಲು ರಷ್ಯಾ ಮಾಡುತ್ತಿರುವ ಪ್ರಯತ್ನಕ್ಕೆ ಚೀನ ಕೈ ಜೋಡಿಸಿದೆ. ಜಾಗತಿಕ ಮಟ್ಟದಲ್ಲಿ ತನ್ನ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶ ಹೊಂದಿರುವ ರಷ್ಯಾ-ಚೀನದ ಈ ಯೋಜನೆಯ ಗುಂಪಿನ ಸದಸ್ಯ ರಾಷ್ಟ್ರಗಳ ವೈಯಕ್ತಿಕ ನೀತಿಗಳಿಂದ ಪ್ರೇರಿತವಾಗಿವೆ. ಇದರಲ್ಲಿ ರಷ್ಯಾ ದೊಂದಿಗೆ ವ್ಯಾಪಾರದ ವೇಳೆ ಡಾಲರ್ ಅಲ್ಲದ ಕರೆನ್ಸಿಗಳನ್ನು ಬಳಸುವ ಪ್ರಸ್ತಾವನೆಯನ್ನು ಇದೂ ಹೊಂದಿದೆ.
ಪ್ರಾರಂಭ ಎಲ್ಲಿಂದ?
ಚೀನದ ಹಣಕಾಸು ಒಕ್ಕೂಟದಲ್ಲಿ 25 ಸದಸ್ಯರಿದ್ದು, ಈ ಯೋಜನೆಯನ್ನು ಬೀಜಿಂಗ್‌ನಲ್ಲಿ ಮಾತ್ರ ಅಲ್ಲಿನ ಸರಕಾರ ಜಾರಿಗೊಳಿಸಿಲ್ಲ. ಹಲವು ಸ್ಥಳೀಯ ಸರಕಾರ, ಆರ್ಥಿಕ ಸಂಸ್ಥೆಗಳ ಸಹಿತ ಚೀನದ ಒಟ್ಟು 18 ಪ್ರಮುಖ ಹಣಕಾಸು ಸಂಸ್ಥೆಗಳು, ರಷ್ಯಾದ 17 ಸಂಸ್ಥೆಗಳಲ್ಲೂ ಇದನ್ನು ಪರಿಚಯಿಸಿದೆ.
ಉದ್ದೇಶ?
ಪ್ರಾದೇಶಿಕ ಏಕೀಕರಣದ ಮೂಲಕ ಅಭಿವೃದ್ಧಿ ಕಾರ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವುದು, ಸ್ಥಳೀಯ ಕರೆನ್ಸಿ ಷೇರುಗಳನ್ನು ವಿಸ್ತರಿಸುವ ಮೂಲಕ ಗಡಿಯಾಚೆ ಸ್ಥಳೀಯ ಕರೆನ್ಸಿ ಪಾವತಿ ಮತ್ತು ವಸಾಹತು ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಲು ಶಾಂಘೈ ಸಹಕಾರ ಸಂಘಟನೆ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆಗೆ ಉತ್ತೇಜನ ನೀಡಿದೆ ಎನ್ನುತ್ತಾರೆ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್. ಡಾಲರ್ ಅವಲಂಬನೆ ಯಿಂದ ಭೌಗೋಳಿಕ, ರಾಜಕೀಯ ಅಪಾಯಗಳು ಎದುರಾಗುವ ಸಾಧ್ಯತೆ ಇದೆ ಎನ್ನುವುದನ್ನು ಅವರು ಬಹಿರಂಗವಾಗಿ ಹೇಳದೇ ಇದ್ದರೂ ಅವರ ಹೇಳಿಕೆ ಯುಎಸ್ ಡಾಲರ್ ಪ್ರಾಬಲ್ಯದಿಂದ ಚೀನ ಆರ್ಥಿಕತೆ ದುರ್ಬಲವಾಗುತ್ತಿದೆ ಎನ್ನುವುದನ್ನು ಪ್ರತಿಬಿಂಬಿಸಿದೆ. ಹೀಗಾಗಿ ಡಾಲರ್ ಪ್ರಾಬಲ್ಯವನ್ನು ಮಟ್ಟ ಹಾಕಲು ಚೀನ ಪರ್ಯಾಯ ದಾರಿ ಹುಡುಕುತ್ತಿದೆ.
ಕಾರಣ?
ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯುಎಸ್ ತನ್ನ ಹಿಡಿತವನ್ನು ಸಾಧಿಸುತ್ತಿದೆ. ಪ್ರಪಂಚದಾದ್ಯಂತ ಇರುವ ದೊಡ್ಡ ಕಂಪೆನಿಗಳು ಬಂಡವಾಳವನ್ನು ಸಂಗ್ರಹಿಸಲು ಸ್ಟಾಕ್ ಮಾರುಕಟ್ಟೆಗೆ ತೆರಳುತ್ತವೆ. ಅಲ್ಲಿ ಯುಎಸ್ ಡಾಲರ್ ಮತ್ತು ಹಣಕಾಸು ಮಾರುಕಟ್ಟೆ ಎರಡನ್ನು ಅಸ್ತ್ರವಾಗಿ ಬಳಸುತ್ತದೆ. ಈ ಮೂಲಕ ಈಗಾಗಲೇ ಅದು ಚೀನದ ಹಲವು ಕಂಪೆನಿಗಳನ್ನು ಯುಎಸ್ ಷೇರು ಮಾರುಕಟ್ಟೆಯಿಂದ ಹೊರಹಾಕಿದೆ. ಇದರಿಂದ ಯುಎಸ್ ಆರ್ಥಿಕ ನಾಯಕತ್ವ ಮತ್ತು ಡಾಲರ್‌ನ ಜಾಗತಿಕ ಸ್ಥಾನಮಾನ ದುರ್ಬಲಗೊಂಡಿದೆ.
ಪರಿಣಾಮ?
ಡಾಲರ್ ಅವಲಂಬನೆಯನ್ನು ಕಡಿಮೆ ಮಾಡಿ ಸ್ಥಳೀಯ ಸರಕಾರಿ ಸಂಸ್ಥೆಗಳು ಮತ್ತು ಎಸ್‌ಸಿಒನಂತಹ ಪ್ರಾದೇಶಿಕ ಸಂಸ್ಥೆಗಳ ಮೂಲಕ ದೇಶದ ಕರೆನ್ಸಿ ಯುವಾನ್ ಅನ್ನು ಶಕ್ತಿಯುತ ಕರೆನ್ಸಿಯನ್ನಾಗಿ ಮಾಡಲು ಕ್ರಮಕೈಗೊಳ್ಳುತ್ತಿರುವ ಚೀನ, ಗಡಿಯಾಚೆಗೆ ವ್ಯಾಪಾರ ವಸಾಹತು ಮತ್ತು ಹೂಡಿಕೆಯಲ್ಲಿ ಯುವಾನ್ ಬಳಕೆ ಯನ್ನು ಹೆಚ್ಚಿಸಲು ಬಯಸುತ್ತಿದೆ. ಇದು ಭೌಗೋಳಿಕ ಮತ್ತು ರಾಜಕೀಯ ಬಿಕ್ಕಟ್ಟಿನ ವೇಳೆ ಎದುರಾಗುವ ಡಾಲರ್ ದ್ರವ್ಯತೆ ಕೊರತೆ ಮತ್ತು ಜಾಗತಿಕ ಮಾರುಕಟ್ಟೆ ಪ್ರವೇಶ ಸಮಸ್ಯೆಗಳನ್ನು ನೀಗಿಸಬಲ್ಲದು.
-ವಿದ್ಯಾ ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.