ಕೊರೊನಾ ಭಯಬೇಡ ಎಚ್ಚರ ಇರಲಿ
Team Udayavani, Mar 14, 2020, 7:15 AM IST
ಕೊರೊನಾ ವೈರಸ್ ತಡೆಗಟ್ಟಲು ಕೇಂದ್ರ ಆರೋಗ್ಯ ಸಚಿವಾಲಯ ಹಲವು ಮುನ್ನೆಚ್ಚರಿಕಾ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಒಂದಷ್ಟು ಎಚ್ಚರ ವಹಿಸಿಕೊಂಡರೆ ಸಂಭವನೀಯ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಸೋಂಕಿನ ಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಯನ್ನು ಸಂಪರ್ಕಿಸಲು ಭಯಬೇಡ.
ಲಿಫ್ಟ್ ಬಟನ್, ಡೋರ್
ಎಲಿವೇಟರ್‌ನ ಬಟನ್‌ಗಳು ಹೆಚ್ಚು ಸೋಂಕಿಗೆ ಒಳಗಾಗುತ್ತವೆ. ಪ್ರತಿ ಬಾಗಿಲಿನ ಹ್ಯಾಂಡಲ್‌ಗಳನ್ನು ಹೆಚ್ಚು ಕಡಿಮೆ ಎಲ್ಲರೂ ಬಳಸುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಇವುಗಳನ್ನು ಬಳಸಿದ ಕೂಡಲೇ ಕೈಗಳನ್ನು ತೊಳೆಯಬೇಕು.
ಮೆಟ್ರೋ ಮತ್ತು ಬಸ್‌ಗಳು
ಮೆಟ್ರೋ ಅಥವಾ ಬಸ್‌ಗಳಲ್ಲಿ ಪ್ರಯಾಣಿಸುವವರಾಗಿದ್ದರೆ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಲು ಮರೆಯದಿರಿ. ಮಾಸ್ಕ್ ಇಲ್ಲದಿದ್ದರೆ ಶೀತ ಮತ್ತು ಕೆಮ್ಮಿನಿಂದ ಅಂತರ ಕಾಯ್ದುಕೊಳ್ಳಿ. ನಿಮ್ಮಲ್ಲಿ ಮಾಸ್ಕ್ ಇಲ್ಲದೇ ಇದ್ದರೆ ಕರವಸ್ತ್ರವನ್ನೂ ಮುಖಕ್ಕೆ ಕಟ್ಟಿಕೊಳ್ಳಬಹುದಾಗಿದೆ. ಪ್ರಯಾಣದ ಸಂದರ್ಭದಲ್ಲೂ ಇದನ್ನು ಅನುಸರಿಸಿ.
ಎಚ್ಚರ ಅಗತ್ಯ
ಕೈಗಳನ್ನು ಮೂಗು, ಕಣ್ಣು ಮತ್ತು ಬಾಯಿಯಲ್ಲಿ ಪದೇ ಪದೆ ಇಡುವುದನ್ನು ತಪ್ಪಿಸಬೇಕು. ಅಜಾಗರೂಕತೆಯಿಂದ ಆ ವೈರಸ್ ದೇಹವನ್ನು ಪ್ರವೇಶಿಸಬಹುದು. ಮುಖವನ್ನು ಸುರಕ್ಷಿತವಾಗಿರಿಸಿ. ಸಿನೆಮಾ, ಅಥವಾ ಮಾಲ್‌ಗಳಿಗೆ ಪ್ರತಿ ದಿನ ನೂರಾರು ಮಂದಿ ಆಗಮಿಸುತ್ತಾರೆ. ಈ ಕಾರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರ ವಹಿಸುವುದು ಅಗತ್ಯ.
ವೈದ್ಯರ ಸಂಪರ್ಕ ಸಾಧಿಸಿ
ಅನಾರೋಗ್ಯ ಅನಿಸಿದರೆ ಮನೆಯಲ್ಲೇ ಇರಿ. ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದರೆ ಚಿಕಿತ್ಸೆ ಪಡೆಯಿರಿ. ಸ್ಥಳೀಯ ಆರೋಗ್ಯ ಪ್ರಾಧಿಕಾರದ ಸಲಹೆಗಳನ್ನು ಪಾಲಿಸಿ. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರವನ್ನು ಅಡ್ಡಹಿಡಿಯಲೇಬೇಕು. ಇತರರ ಸುರಕ್ಷತೆಯೂ ಅಗತ್ಯ.
ಕೇರಳದ ಪ್ಲೋಚಾರ್ಟ್
ಕೇರಳ ಸರಕಾರ ಈ ವೈರಸ್ ಅನ್ನು ತಡೆಗಟ್ಟಲು ಚುರುಕಾಗಿ ಕೆಲಸಮಾಡುತ್ತಿದೆ. ಇಲ್ಲಿ ಆರೋಗ್ಯ ಇಲಾಖೆಯು ಕೊರೊನಾ ರೋಗಿಗಳು ಬಂದಿಳಿದ ಬಳಿಕ ಎಲ್ಲೆಲ್ಲೆ ಓಡಾಡಿದ್ದಾರೆ ಎಂಬುದರ ಮಾಹಿತಿಯನ್ನು ಕಳೆ ಹಾಕುತ್ತಿದ್ದಾರೆ. ಸೋಂಕಿತ ಅಥವಾ ಶಂಕಿತ ಓಡಾಡಿದ ಪ್ರತಿಯೊಂದು ಜಾಗಗಳು, ಜನರೊಂದಿಗಿದ್ದ ಆಯಕಟ್ಟಿನ ಸ್ಥಳಗಳೆಲ್ಲವನ್ನೂ ಪ್ಲೋಚಾರ್ಟ್ ಮೂಲಕ ಸಿದ್ಧಪಡಿಸಿಕೊಳ್ಳುತ್ತಿದೆ.
ವಿನಾಕಾರಣ ಆಸ್ಪತ್ರೆಗೆ ಹೋಗಬೇಡಿ
ಸಣ್ಣಪುಟ್ಟ ಜ್ವರ ಬಂದ ಕಾರಣ ಕೊರೊನಾ ಶಂಕೆಯಿಂದ ಆಸ್ಪತ್ರೆಗೆ ತೆರಳಬೇಡಿ. ಸೋಂಕಿಲ್ಲದೇ ಇದ್ದರೂ, ಅಲ್ಲಿ ಬಂದವರಿಗೆ ಯಾರಿಗಾದರೂ ತಗುಲಿದ್ದರೆ ಅದು ಹರಡುವ ಸಾಧ್ಯತೆ ಇದೆ. ಸೋಂಕಿನ ಲಕ್ಷಣ ಕಂಡು ಬಂದರೆ ಮಾತ್ರ ಕಡೆಗಣಿಸಲೇಬೇಡಿ.
ಯಾರು ಆಸ್ಪತ್ರೆಗೆ ತೆರಳಬೇಕು?
ಈ ಒಂದು ಗೊಂದಲ ಎಲ್ಲರಲ್ಲೂ ಇದೆ. ಸಣ್ಣಗೆ ಮೈ ಕೈ ನೋವಾಗಿ ಜ್ವರ ಬಂದಿದ್ದರೂ ನಾನು ಕೊರೊನಾ ರೋಗಿನಾ ಎಂದು ಅಂದುಕೊಳ್ಳಬೇಕಿಲ್ಲ. ನೀವು ಸೋಂಕಿತರೊಂದಿಗೆ ಗುರುತಿಸಿಕೊಂಡವರಾಗಿದ್ದು ಅಥವಾ ಅವರು ಪ್ರಯಾಣಿಸಿದ ಬಸ್‌ನಲ್ಲಿ ನೀವೂ ಪ್ರಯಾಣಿಸಿದ್ದರೆ ಅಗತ್ಯವಾಗಿ ಆಸ್ಪತ್ರೆಗೆ ತೆರಳಲೇಬೇಕು.
ಹೇಗೆ ಹೋಗಬೇಕು?
ಸೋಂಕಿತ ಅಥವಾ ಶಂಕಿತರು ಸಾರ್ವಜನಿಕ ವಾಹನಗಳಲ್ಲಿ ಆಸ್ಪತ್ರೆಗೆ ಹೋಗಲೇಬಾರದು. ಇಂತಹ ಪ್ರಕರಣಗಳಿಗೆ ಆರೋಗ್ಯ ಇಲಾಖೆ ಸಹಾಯವಾಣಿ 104 (ಆ್ಯಂಬುಲೆನ್ಸ್)ಗೆ ಕರೆಮಾಡಿ, ಸೌಲಭ್ಯ ಪಡೆಯಿರಿ.
ಬಳಿಕ ಏನು?
ನಿಮ್ಮನ್ನು ಪರೀಕ್ಷಿಸಿದ ಬಳಿಕ ಒಂದಷ್ಟು ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ನಿಮ್ಮ ಫಲಿತಾಂಶ ನೆಗೆಟಿವ್ ಆಗಿದ್ದರೆ ಸುರಕ್ಷೆ ವಹಿಸಲು ಹೇಳಿ ಮನೆಗೆ ಕಳುಹಿಸಬಹುದು. ಪಾಸಿಟಿವ್ ಆದರೆ ನಿಮ್ಮನ್ನು 14 ದಿನಗಳ ಕಾಲ ತೀವ್ರ ನಿಗಾ ಘಟಕಗಳಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Story Of Generations: ಪೀಳಿಗೆಗಳ ವೃತ್ತಾಂತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.