ಸೆಲ್ಫಿ ಗುಂಗಿನಲ್ಲಿ ಬದುಕ ಮರೆಯದಿರಿ


Team Udayavani, Sep 23, 2018, 12:30 AM IST

s-26.jpg

ಕೇವಲ ಸೆಲ್ಫಿ ಹುಚ್ಚಿನಿಂದಾಗಿ ಯಾರೋ ಪ್ರಾಣ ಕಳೆದುಕೊಂಡಾಗಷ್ಟೇ ನಾವು ಗಂಭೀರವಾಗಿ ಮಾತನಾಡಿದರೆ ಪ್ರಯೋಜನವಿಲ್ಲ. ನಮ್ಮ ನಿತ್ಯದ ಚಟುವಟಿಕೆಗಳಲ್ಲೂ ಸೆಲ್ಫಿಗೆ ನೀಡುವ ಪ್ರಾಧಾನ್ಯತೆ ಕಡಿಮೆ ಆಗಬೇಕಿದೆ. ಹಾಗಾಗಲಿ ಎಂದು ಆಶಿಸೋಣ. ಸೆಲ್ಫಿಗೆ ಕೊಡುವ ಸಮಯವನ್ನು ಸಂಬಂಧಗಳನ್ನು ಬೆಳೆಸಲು ಪ್ರಕೃತಿಯನ್ನು ಆಸ್ವಾದಿಸಲು ಮತ್ತು ಇನ್ನಿತರ ಕೆಲಸಗಳಿಗೆ ಕೊಡೋಣ. ಸೆಲ್ಫಿಯ ಗುಂಗಿನಲ್ಲಿ ಜೀವನದ ನಿಜವಾದ ರಸಮಯ ಕ್ಷಣಗಳನ್ನು ಕಳೆದುಕೊಳ್ಳದಿರೋಣ.

ಸೆಲ್ಫಿ ಬರುವುದಕ್ಕೆ ಮೊದಲು ನಮಗೆ ಗೊತ್ತಿದ್ದ ಎರಡು ಪದ ಸೆಲ್ಫಿಶ್‌ ಎನ್ನುವ ಇಂಗ್ಲೀಷಿನ ಸ್ವಾರ್ಥ ಹಾಗೂ ಕುಲ್ಫಿà ಎನ್ನುವ ಹಾಲಿನಿಂದ ತಯಾರು ಮಾಡಲಾಗುವ ಒಂದು ಬಗೆಯ ಐಸ್‌ಕ್ಯಾಂಡಿ. ಅದು ಬಹಳ ರುಚಿಕಟ್ಟಾಗಿರುತಿತ್ತು. ಈಗಲೂ ಅಲ್ಲಲ್ಲಿ ಕುಲ್ಫಿ ಸಿಗುತ್ತದಾದರೂ ಆ ಹಳೆಯ ರುಚಿ ಅದರಲ್ಲಿ ಕಾಣಿಸುತ್ತಿಲ್ಲ. ಎಲ್ಲಾ ತಿಂದಾದ ಮೇಲೆ ಸ್ನೇಹಿತರನ್ನು ಗೋಳು ಹೊಯ್ದುಕೊಳ್ಳುವ ಸಲುವಾಗಿ ಅದರ ಕಡ್ಡಿಯನ್ನು ಒಮ್ಮೆ ಮೂಸಿ ನೋಡು ಬಹಳ ಚೆನ್ನಾಗಿದೆ ಎನ್ನುತ್ತಿದ್ದೆವು. ಅಪ್ಪಿತಪ್ಪಿ ಆ ವಿಚಾರ ತಿಳಿಯದೆ ಮೂಸಿ ನೋಡಿದರೆ ಆ ಕಡ್ಡಿಯ ಕೆಟ್ಟ ವಾಸನೆಗೆ ಹೊಟ್ಟೆಯಲ್ಲಿ ತಿಂದಿದ್ದ ಕುಲ್ಫಿ ಮೊಸರು ಕಡೆದಂತಾಗುತಿತ್ತು. ಅಯ್ಯೋ ಇದೆಲ್ಲಾ ಏಕೆ ಎಂದಿರಾ ಮೊನ್ನೆ ಒಬ್ಬರು ಕುಲ್ಫಿಯೊಂದಿಗೂ ಸೆಲ್ಫಿಯನ್ನು ಫೇಸ್‌ಬುಕ್ಕಿನಲ್ಲಿ ಹಾಕಿಬಿಟ್ಟಿದ್ದರು. ಹಾಗಾಗಿ ಇದೆಲ್ಲಾ ನೆನಪಾಯಿತು. 

ಈಗಿನ ದಿನಗಳಲ್ಲಿ ಮೊಬೈಲ್‌ ಇರಲಿ ಇಲ್ಲದಿರಲಿ ಸೆಲ್ಫಿ ತೆಗೆಯದವನು ಅಥವಾ ಸೆಲ್ಫಿಗೊಂದು ಫೋಸು ನೀಡದವನು ಮೂರ್ಖ, ಅಪ್‌ಡೇಟ್‌ ಆಗಿಲ್ಲ ಅಂತನ್ನಿಸಿಕೊಳ್ಳತೊಡಗಿದ್ದಾನೆ. ಕಂಡಲ್ಲಿ, ಕೇಳಿದಲ್ಲಿ, ನಿಂತಲ್ಲಿ ನಡೆದಲ್ಲಿ, ನುಡಿದಲ್ಲಿ ,ಅಲ್ಲಿ, ಇಲ್ಲಿ ಮತ್ತೆ ಹೇಳಬಾರದ ಮತ್ತು ನಮೂದಿಸಲಾಗದ ಜಾಗಗಳಲ್ಲೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಮಾಮೂಲಿ ಎನ್ನುವಂತಾಗಿಬಿಟ್ಟಿದೆ. ಈ ಸೆಲ್ಫಿ ಎನ್ನುವ ಮಾಯೆ ಅದ್ಯಾವ ಪರಿ ನಮ್ಮನ್ನು ಆವರಿಸಿದೆಯೆಂದರೆ ತೀರಾ ಬೆಡ್‌ರೂಮಿನೊಳಕ್ಕೂ ಸಾಗಿ ಜಗತ್ತಿನೆದುರು ನಮ್ಮನ್ನು ಬೆತ್ತಲಾಗಿಸುವಷ್ಟು ಎಂದರೆ ಅದರ ಪರಿಣಾಮಗಳು ಅದೆಷ್ಟು ಘೋರ ಎನ್ನುವುದರ ಅರಿವಾಗಬಹುದು. 

ಹಾಗಾದರೆ ಸೆಲ್ಫಿ ಕೆಟ್ಟದ್ದಾ? ಖಂಡಿತಾ ಅಲ್ಲ. ಖುಷಿಯಾಯ್ತು ಎಂದರೆ ಒಮ್ಮೆ ನಗಬೇಕು ಮತ್ತೂಮ್ಮೆ ನಗಬೇಕು ಮತ್ತೆ ಮತ್ತೆ ನಗುತ್ತಲೇ ಇದ್ದರೆ ಅದು ಹುಚ್ಚುತನ ಎನ್ನಿಸಿಕೊಳ್ಳುತ್ತದೆ. ಅದು ಸೆಲ್ಫಿ ವಿಚಾರಕ್ಕೂ ಸತ್ಯ. ನಿಜವಾಗಿ ಹೇಳಬೇಕೆಂದರೆ ಪ್ರತಿ ಮನುಷ್ಯನಿಗೂ ತಾನು ಎಲ್ಲಾದರೂ ಒಂದು ಕಡೆ ಗುರುತಿಸಿಕೊಳ್ಳಬೇಕು.ನಾಲ್ಕು ಜನರು ನನ್ನನ್ನು ಹೊಗಳಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಹಾಗಾಗಿ ಆನ್‌ಲೈನಿನಲ್ಲಿ ಕಾಣಸಿಗುವ ಬಹುತೇಕ ಜನರು ಸೆಲ್ಫಿಯ ಮೂಲಕ ಜನರಿಂದ ಲೈಕು ಕಮೆಂಟುಗಳ ನಿರೀಕ್ಷೆ ಮಾಡತೊಡಗುತ್ತಾರೆ. 

ಒಮ್ಮೆ ಒಂದಷ್ಟು ಲೈಕು ಕಮೆಂಟುಗಳು ಬಿದ್ದು ಯಾರಾದರೂ ಒಂದಷ್ಟು ಜನ ಯೂ ಆರ್‌ ಲುಕಿಂಗ್‌ ಸೋ ಹ್ಯಾಂಡ್‌ಸಮ್‌ ಅಥವಾ ಬ್ಯೂಟಿಫ‌ುಲ್‌ ಅಂದರೆ ಸಾಕು ಮತ್ತೆ ಮರುದಿನ ಮತ್ತೂಂದಷ್ಟು ಸೆಲ್ಫಿಗಳು ಜಾಲತಾಣಗಳಲ್ಲಿ ಅಪ್‌ಲೋಡ್‌ ಆಗಿರುತ್ತವೆ. ಬಹುತೇಕ ಸಂದರ್ಭಗಳಲ್ಲಿ ಈ ಪ್ರಯತ್ನ ನಿರಂತರ ವಾಗಿ ಕೊನೆಗೊಮ್ಮೆ ಚಟವಾಗಿಬಿಡುತ್ತದೆ. 

ಜೀವನದ ಹಲವಷ್ಟು ಸಿಹಿ ಗಳಿಗೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಸೆಲ್ಫಿ ಸಹಾಯ ಮಾಡುವುದು ನಿಜವಾದರೂ ಸಾಧನೆಗಳನ್ನು ಮಾಡುವ ವ್ಯವಧಾನವಿಲ್ಲದೆ ಪರಿಶ್ರಮ ಪಡಲು ತಯಾರಿಲ್ಲದೆ ತನ್ನ ಮುಖವನ್ನು ಎಲ್ಲರೂ ಗುರುತಿಸಬೇಕು ಎನ್ನುವ ಹುಚ್ಚು ಹಂಬಲಕ್ಕೆ ಬಿದ್ದು ಸೆಲ್ಫಿ ತೆಗೆದುಕೊಂಡು ಅದನ್ನೇ ಸಾಧನೆ ಎಂಬಂತೆ ಫೇಸುºಕ್ಕು ಇನ್‌ಸ್ಟಾಗ್ರಾಮ್‌, ವಾಟ್ಸಪ್‌, ಹೈಕು ಎಂದೆಲ್ಲಾ ಅಪ್‌ಲೋಡ್‌ ಮಾಡಿ ಅಲ್ಲಿ ಬರುವ ಲೈಕು ಕಮೆಂಟುಗಳನ್ನು ಲೆಕ್ಕ ಹಾಕುತ್ತಾ ತಮ್ಮ ವ್ಯಕ್ತಿತ್ವದ ಜನಪ್ರಿಯತೆಯನ್ನು ಅಳೆಯುತ್ತಾ ಕೂರುವವರೆ ಇಂದು ಅಧಿಕ ಸಂಖ್ಯೆಯಲ್ಲಿರುವುದು ಸತ್ಯ. ಹಾಗಾದರೆ ಸೆಲೆಬ್ರಿಟಿಗಳು ಸೆಲ್ಫಿ ತೆಗೆಯುತ್ತಾರಲ್ಲಾ ಅಂತೀರಾ?ಅದು ಮತ್ತೂಂದು ರೀತಿಯ ಗೀಳು. ಸೆಲ್ಫಿ ಎನ್ನುವುದು ಮಾನಸಿಕ ರೋಗವಾಗು ವಷ್ಟರ ಮಟ್ಟಿಗೆ ಬೆಳೆಯವುದಕ್ಕೆ ಯಾರೊಬ್ಬರೂ ಅವಕಾಶ ಮಾಡಿಕೊಡಬಾರದು. 

ಇತ್ತೀಚೆಗೆ ಪರಿಚಿತರೊಬ್ಬರು ತಾನು ಅಷ್ಟೇನು ಸುಂದರವಾಗಿಲ, ಫೋಟೋಗಳಲ್ಲಿ ತನ್ನ ಮುಖ ಚೆಂದ ಬರುವುದಿಲ್ಲ ಎನ್ನುವ ಕಾರಣಕ್ಕೆ ಪ್ರೀತಿಸುವ ಹುಡುಗಿ ಸೆಲ್ಫಿ ತೆಗೆದುಕೊಳ್ಳೋಣ ಎಂದಾಗ ನಿರಾಕರಿಸಿದ್ದ. ಎಷ್ಟು ಒತ್ತಾಯಿಸಿದರೂ ಇವನು ಕೇಳದಿದ್ದಾಗ ಕೋಪಗೊಂಡ ಹುಡುಗಿ ಇವನ ಕೆನ್ನೆಗೆ ಬಾರಿಸಿದ್ದಳು. ನೀ ಚೆಂದ ಇಲ್ಲದಿದ್ದರೇನು ನಾನು ಚೆಂದ ಇದ್ದೇನಲ್ಲ ಸಾಕು ಎಂದು ಬೈದು ಒತ್ತಾಯ ಮಾಡಿ ಸೆಲ್ಫಿ ಕ್ಲಿಕ್ಕಿಸಿದ್ದಳು. ಇದು ಬೇರೆಯವರನ್ನು ಕೆಳದೂಡಿ ಸ್ವಪ್ರತಿಷ್ಠೆ ಮೆರೆಯುವ ಅಹಮಿಕೆಯ ಲಕ್ಷಣವಾಗಿತ್ತು. ಸೆಲ್ಫಿ ಹುಚ್ಚನ್ನು ಈ ಮಟ್ಟಿಗೆ ಬೆಳೆಯಗೊಡಬಾರದು. ಸೆಲ್ಫಿ ಮಿತವಾದರೆ ರಸ. ಅತಿಯಾದರೆ ವಿಷ. 

ಒಂದಂತೂ ನಿಜ ಯಾವ ಸೆಲ್ಫಿಯೂ ಮನುಷ್ಯನ ವ್ಯಕ್ತಿತ್ವವನ್ನು ಕಟ್ಟಿಕೊಡಲಾರದು. ಇದರ ಗೀಳಿನಿಂದಾಗಿ ವ್ಯಕ್ತಿ ತನ್ನ ಅಮೂಲ್ಯ ಸಮಯವನ್ನು ಹಾಳುಮಾಡಿಕೊಳ್ಳುತ್ತಿದ್ದಾನೆ. ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾನೆ. ವಸ್ತುಸ್ಥಿತಿ ಹೀಗಿರುವಾಗ ಸೆಲ್ಫಿ ಎನ್ನುವ ಮಾನಸಿಕ ಗೀಳಿನ ಬಗೆಗೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಎಚ್ಚರವನ್ನು ಮೂಡಿಸಬೇಕಾದ ಅನಿವಾರ್ಯತೆ ಇದೆ. ಅದು ಸಮಾಜದ ಪ್ರತಿಯೊಬ್ಬರ ಕರ್ತವ್ಯ ಕೂಡ. ಕೆಲವೊಮ್ಮೆ ಜಾತ್ರೆ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಜನರಿಗಾಗಿ ಸೆಲ್ಫಿ ಸ್ಪರ್ಧೆಯನ್ನು ಆಯೋಜಿಸಿ ಉತ್ತಮ ಸೆಲ್ಫಿಗೆ ಬಹುಮಾನ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಯೋಚಿಸಬೇಕಾಗಿದೆ. 

ಕೆಲವೊಂದು ಸ್ಪರ್ಧೆಗಳ ಉದ್ದೇಶ ಒಳ್ಳೆಯ ದಾಗಿರುತ್ತದೆ. ಅಂತಹ ಸ್ಪರ್ಧೆಗಳನ್ನು ಒಂದು ಮಟ್ಟಿಗೆ ಒಪ್ಪಬಹುದು. ಆದರೆ ಕೇವಲ ಮನರಂಜನೆಗಾಗಿ ಆಯೋಜಿಸುವ ಸೆಲ್ಫಿ ಸ್ಪರ್ಧೆಗಳಿಗೆ ಕಡಿವಾಣ ಹಾಕುವ ಅವಶ್ಯಕತೆ ಖಂಡಿತಾ ಇದೆ. ಕೇವಲ ಸೆಲ್ಫಿ ಹುಚ್ಚಿನಿಂದಾಗಿ ಯಾರೋ ಪ್ರಾಣ ಕಳೆದುಕೊಂಡಾಗಷ್ಟೇ ನಾವು ಗಂಭೀರವಾಗಿ ಮಾತನಾಡಿದರೆ ಪ್ರಯೋಜನ ವಿಲ್ಲ. ನಮ್ಮ ನಿತ್ಯದ ಚಟುವಟಿಕೆಗಳಲ್ಲೂ ಸೆಲ್ಫಿಗೆ ನೀಡುವ ಪ್ರಾಧಾನ್ಯತೆ ಕಡಿಮೆ ಆಗಬೇಕಿದೆ. ಹಾಗಾಗಲಿ ಎಂದು ಆಶಿಸೋಣ. ಸೆಲ್ಫಿಗೆ ಕೊಡುವ ಸಮಯವನ್ನು ಸಂಬಂಧಗಳನ್ನು ಬೆಳೆಸಲು ಪ್ರಕೃತಿಯನ್ನು ಆಸ್ವಾದಿಸಲು ಮತ್ತು ಇನ್ನಿತರ ಕೆಲಸಗಳಿಗೆ ಕೊಡೋಣ. ಸೆಲ್ಫಿಯ ಗುಂಗಿನಲ್ಲಿ ಜೀವನದ ನಿಜವಾದ ರಸಮಯ ಕ್ಷಣಗಳನ್ನು ಕಳೆದುಕೊಳ್ಳದಿರೋಣ.

ನರೇಂದ್ರ ಎಸ್‌ ಗಂಗೊಳ್ಳಿ 

ಟಾಪ್ ನ್ಯೂಸ್

Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?

Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?

Shiva Rajkumar returns on January 26th: Grand preparations for the welcome

Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್‌: ಸ್ವಾಗತಕ್ಕೆ ಅದ್ಧೂರಿ ತಯಾರಿ

Belagavi: Finance loan fraud

Belagavi: ಫೈನಾನ್ಸ್ ಸಾಲದ ವಂಚನೆ; ಜಿಲ್ಲೆಯಲ್ಲಿ ಮೊದಲ ಬಲಿ

Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ

Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ

ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Los Angeles: Another wildfire; More than 30,000 people displaced

Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ…

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಿಜಿಟಲ್‌ ಪಠ್ಯಕ್ಕೆ ಬೈ, ಪುಸ್ತಕಕ್ಕೆ ಹಾಯ್‌!

ಡಿಜಿಟಲ್‌ ಪಠ್ಯಕ್ಕೆ ಬೈ, ಪುಸ್ತಕಕ್ಕೆ ಹಾಯ್‌!

ಅನುದಾನಿತ ಶಾಲೆಗಳಿಗೆ ಬೇಕಿದೆ ಕಾಯಕಲ್ಪ

ಅನುದಾನಿತ ಶಾಲೆಗಳಿಗೆ ಬೇಕಿದೆ ಕಾಯಕಲ್ಪ

Kho Kho: ಮುದ್ದೆಯೂಟ ತಿಂದೇ ವಿಶ್ವಕಪ್‌ ಗೆದ್ದ ಕನ್ನಡದ ಕುವರಿ!

Kho Kho: ಮುದ್ದೆಯೂಟ ತಿಂದೇ ವಿಶ್ವಕಪ್‌ ಗೆದ್ದ ಕನ್ನಡದ ಕುವರಿ!

ಒಂಟೆ ನೀ ಎಲ್ಲಿಗೆ ಹೊಂಟೇ? 5 ದಶಕದಲ್ಲಿ ಭಾರತದ ಒಂಟೆಗಳ ಸಂಖ್ಯೆಯಲ್ಲಿ ಶೇ.80ರಷ್ಟು ಕುಸಿತ

ಒಂಟೆ ನೀ ಎಲ್ಲಿಗೆ ಹೊಂಟೇ? 5 ದಶಕದಲ್ಲಿ ಭಾರತದ ಒಂಟೆಗಳ ಸಂಖ್ಯೆಯಲ್ಲಿ ಶೇ.80ರಷ್ಟು ಕುಸಿತ

Maha Kumbh Mela 2025: ಛತ್ತೀಸ್‌ ಗಢ ಟು ಪ್ರಯಾಗ್‌ ರಾಜ್;‌ ಸ್ಕೇಟಿಂಗ್‌ ಮೂಲಕ ಕುಂಭಮೇಳಕ್ಕೆ ಆಗಮಿಸಿದ ಯುವಕ

Maha Kumbh: ಛತ್ತೀಸ್‌ ಗಢ ಟು ಪ್ರಯಾಗ್‌;‌ ಸ್ಕೇಟಿಂಗ್‌ ಮೂಲಕ ಕುಂಭಮೇಳಕ್ಕೆ ಆಗಮಿಸಿದ ಯುವಕ

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

3-koratagere

Tumkur: ತುಮುಲ್‌ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು

Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?

Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?

Shiva Rajkumar returns on January 26th: Grand preparations for the welcome

Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್‌: ಸ್ವಾಗತಕ್ಕೆ ಅದ್ಧೂರಿ ತಯಾರಿ

2-mudhol

Mudhol: ಸಾಲಬಾದೆಗೆ ಹೆದರಿ ದಂಪತಿ ಆತ್ಮಹತ್ಯೆ

Belagavi: Finance loan fraud

Belagavi: ಫೈನಾನ್ಸ್ ಸಾಲದ ವಂಚನೆ; ಜಿಲ್ಲೆಯಲ್ಲಿ ಮೊದಲ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.