ಧಾವಂತದ ಬದುಕಿನಲಿ ಭಾವನೆಗಳು ಬತ್ತದಿರಲಿ


Team Udayavani, Jul 9, 2022, 6:05 AM IST

ಧಾವಂತದ ಬದುಕಿನಲಿ ಭಾವನೆಗಳು ಬತ್ತದಿರಲಿ

ಪ್ರಚಲಿತ ದಿನಮಾನಗಳು ಆಧುನಿಕ ಯುಕ್ತವಾಗಿದ್ದು ತತ್ಪರಿಣಾಮ ಮಾನವ ಬದುಕು ಯಂತ್ರಸದೃಶ- ಧಾವಂತ- ಒತ್ತಡ ಮಯ ವಾಗಿದೆ. ಇಡೀ ಜಗತ್ತೇ ಇಂದು ಅಂಗೈಯಲ್ಲಿ ಬಂದು ಕುಳಿತಿರುವುದರಿಂದ ಜನಜೀವನದ ಶೈಲಿ ಅಪಾರ ವ್ಯತ್ಯಾಸ ಕಂಡುಕೊಂಡಿದೆ. ಇದರಿಂದ ವ್ಯಕ್ತಿ- ವ್ಯಕ್ತಿಗಳ ನಡುವಣ ಸಂಬಂಧಗಳ ಸ್ವರೂಪವೇ ಬದಲಾಗಿದ್ದು ಭಾವ- (ಸತ್‌)ಭಾವನೆಗಳ ನ್ಯೂನತೆ- ಕೊರತೆಯ ಪರಿಣಾಮ ಸಮಾಜದಲ್ಲಿ ಸಂಬಂಧಗಳು ಶಿಥಿಲವಾಗುತ್ತಿವೆ, ಸಮಷ್ಟಿ ಭಾವನೆಯ ಪ್ರಜ್ಞೆ ನೇಪಥ್ಯಕ್ಕೆ ಸರಿಯುತ್ತಿದೆ. ಸಮಾಜ ಸಂವೇದನಾಶೀಲತೆ ರಹಿತ ಮಾರ್ಗದತ್ತ ಮುಖ ಮಾಡಿದೆಯೋ ಎಂಬ ಆತಂಕ ಆವರಿಸಿದೆ, ಮನೆ ಮಾಡಿದೆ.

ಮಾನವ ಮೂಲತಃ ಸಂಘಜೀವಿ- ಸ್ನೇಹ ಜೀವಿ. ಸಂಬಂಧಗಳೇ ಮಾನವನ ಬದು ಕಿನ ಜೀವಾಳ-ಬಂಡವಾಳ. ನಾಗರಿ ಕತೆಯ ಬೆಳವಣಿಗೆಯಲ್ಲಿ, ಸಂಬಂಧಗಳ ಸಂಧಿಸು ವಿಕೆಯಲ್ಲಿ ಪ್ರಮುಖ ಕಾರುಬಾರು ಭಾವ – (ಸತ್‌) ಭಾವನೆಗಳದ್ದೇ. ಹೀಗೆ ಸತ್‌ ಭಾವನೆ ಗಳು ಜನ ಜೀವನದ ಜೀವಧಾತು. ಹೀಗಿದ್ದ ಮೇಲೆ ಭಾವನಾರಹಿತ ಜೀವನ ಅನರ್ಥಕಾರಿ, ಅಪಾಯಕಾರಿ ಹಿನ್ನೆಲೆಯದ್ದು ಎಂದು ಸಾರಬೇಕು. ನಯನ ಮನೋಹರ ಬದುಕಿನ ಸೌಧದ ನಿರ್ಮಾಣದಲ್ಲಿ ಭಾವನೆಗಳೇ ಪಂಚಾಂಗ ಮತ್ತು ಇವುಗಳ ಪಾತ್ರ ಅನಿರ್ವಚನೀಯ. ಪರೋಪಕಾರ, ಔದಾರ್ಯ, ನಂಬಿಕೆ, ವಿಶ್ವಾಸ, ಅನುಕಂಪ, ದಯೆ, ಗೌರವ, ಸ್ವಾಭಿಮಾನ, ಕ್ಷಮಾಪಣೆ, ಪ್ರೀತಿ, ಧೈರ್ಯ, ಸಾತ್ವಿಕ ಸಿಟ್ಟು, ನಿಷ್ಠುರತೆ, ಕಠೊರತೆ, ಮುತ್ತಿನಂತಹ ಮಾತು, ಮೃದುತ್ವ, ಹಾಸ್ಯ, ವಿನೋದ ಸುಪ್ರಸನ್ನ ವದನ… ಈ ಪದಪುಂಜಗಳು ಭಾವನೆಯ ಬುಟ್ಟಿಯಲ್ಲಿರುವಂಥವುಗಳು. ಇವುಗಳನ್ನು ಸಂದಭೋìಚಿತವಾಗಿ ಹೆಕ್ಕಿ ಸಂಬೋಧಿ ಸುವುದಾಗಲಿ, ಅಭಿವ್ಯಕ್ತಿಗೊಳಿಸುವುದಾಗಲಿ ಆದಲ್ಲಿ ಭಾವನೆಗಳ ಜತೆಗೆ ಸಂಸ್ಕಾರಗಳ ಪ್ರಯೋ ಗವಾಗುವುದು ಮತ್ತು ಈ ಮುಖೇನ ವ್ಯಕ್ತಿತ್ವದ ಮೆರುಗಿಗೂ ಬಣ್ಣಗಳೂ ತುಂಬುವವು.

ಆಧುನಿಕ ಬದುಕಿನಿಂದ ಸಂಬಂಧಗಳು ಸಂಕೀರ್ಣವಾಗುತ್ತಿವೆ. ಆಧುನಿಕ ತಂತ್ರಜ್ಞಾನದ ಪರಿಕರಗಳಿಂದ ಸಮಾಜ ಶಿಥಿಲವಾಗುತ್ತಿವೆ, ಭಾವನೆಗಳು ಸಾಯುತ್ತಿವೆ ಎನ್ನುವ ಕೂಗು, ಅಪವಾದಗಳಿವೆ. ಇದನ್ನು ನಾವು ಸಾರಾಸಗಟಾಗಿ ಅಲ್ಲಗಳೆಯುವಂತಿಲ್ಲ. ಹಾಗೆಂದು ಆಧುನಿಕ ಪರಿಕರಗಳಿಂದ ಸಮಾ ಜವು ಹಲವಾರು ದೃಷ್ಟಿಕೋನಗಳಿಂದ ಉಪಕೃತ- ಫ‌ಲಭರಿತವಾಗುತ್ತಿವೆ. ಈ ಪರಿಕರಗಳು ನಿತ್ಯದ ಆಗುಹೋಗಿನ ಅವಿಭಾಜ್ಯ ಅಂಗಗಳಾಗಿ ಪರಿಣಮಿಸಿವೆ. ಈ ಪರಿಕರಗಳ ಬಳಕೆ ಮಾತ್ರ ಅವರವರ ವಿವೇಕ, ಆವಶ್ಯಕತೆಗಳ ಮೇಲೆ ಅವಲಂಬಿತವಾಗಿವೆ. “ಅತಿಯಾದರೆ ವಿಷವೂ ಅಮೃತ ಎಂಬಂತೆ’ ಇಂದು ನಮ್ಮ ಸಂಬಂಧಗಳ ಮಹಲು ಕುಸಿದು ಬೀಳುವ ಸಂಕ್ರಮಣ ಘಟ್ಟದಲ್ಲಿ ನಾವಿದ್ದೇವೆ. ಈ ಸಂದಿಗ್ಧಮಯ ಸನ್ನಿವೇಶವನ್ನು ನಾವು ನಾಜೂಕಾಗಿ ಎದುರಿಸಬೇಕಿದೆ. ಆಧುನಿಕ ಪರಿಕರಗಳು ಸದ್ಯಕ್ಕಂತೂ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ ಏನೋ ಹೌದು. ಹಾಗೆಂದು ನಾವು ಈ ಪರಿಕರಗಳಿಗೇ ಜೋತು ಬಿದ್ದಿದ್ದೇವೆ ಎಂದು ಹೇಳಲಾಗದು. ಭಾವನೆ ಮತ್ತು ಈ ಪರಿಕರಗಳ ಬಳಕೆಯಲ್ಲಿ ಸಮ ತೋಲನ ಸಾಧಿಸುವಲ್ಲಿ ನಾವು ಈ ಸವಾಲನ್ನು ದಿಟ್ಟವಾಗಿ ಎದುರಿಸಬಹುದಾಗಿದೆ.

ಭಾವನೆಗಳಿಂದ ಸಂಬಂಧಗಳನ್ನು ಉಳಿಸಿ, ಮುಂದಿನ ತಲೆಮಾರಿಗೆ ವರ್ಗಾಯಿಸುವ ಮಹತ್ತರ ಉತ್ತರದಾಯಿತ್ವ ನಿಭಾಯಿಸಲು ಕಟಿಬದ್ಧರಾಗಬೇಕಾಗಿದೆ. ಭಾವನೆಗಳ ಜೀವಂತ ವಿರಿಸುವಿಕೆಯ, ಪೋಷಿಸುವಿಕೆಯ ದೀಕ್ಷೆ ತೊಡಬೇಕಾಗಿದೆ. ಇಲ್ಲವಾದಲ್ಲಿ ಕರಾಳತೆಯ ಕೂಪದತ್ತ ಸಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ನಮ್ಮ ಜೀವಕ್ಕೆ ಹೇಗೆ ಆತ್ಮ ಭೂಷಿತವೊ ಹಾಗೆಯೇ ನಮ್ಮ ಬದುಕಿಗೆ ಭಾವನೆಗಳು ಭೂಷಣ. ಆದ್ದರಿಂದ ದೇವರ ಉಪಾ ಸನೆಯಿಂದ ಹಿಡಿದು, ಸಮಾಜ ಸೇವೆ, ರಾಷ್ಟ್ರ ಸೇವೆ ಬಾಲ್ಯದಿಂದ ಬಾಳಿನ ಅಂತ್ಯದವರೆಗೂ ಭಾವನೆಗಳು ಬಾಳಿನಲ್ಲಿ ಸಂಗಮಿಸಬೇಕು. ಈ ಥರ ಭಾವನೆಗಳು ಬಾಳಿನಲ್ಲಿ ಅನವರತ ಮಿಳಿತಗೊಂಡರೆ, ಭಾವಗಳ ತೋರಣ ಗಳಿಂದ ಸಿಂಗಾರಗೊಂಡರೆ ನಮ್ಮ ಸಮ ಷ್ಠಿಯ ಸ್ವರೂಪವೇ ವಿಭಿನ್ನ ರೂಪ ತಾಳಿ, ಅಲಂಕಾರಗೊಂಡು ಸುಂದರಮ ಯವಾಗುವುದು. ಪರಿಪೂರ್ಣತೆಯತ್ತ,ಸುಸಂಸ್ಕೃತದತ್ತ, ಸದೃಢ ಆರೋಗ್ಯದತ್ತ, ಸಮಾ ಜದ ಪುರಸ್ಕಾರದತ್ತ ಸಾಗಲು ಭಾವಗಳು ಒಳ್ಳೆಯ ಆಯ್ಕೆಗಳು. ಹೀಗೆ ಸಮಾಜ ಸದಾ ಭಾವನೆಗಳ ಮೆರವಣಿಗೆಯಲ್ಲಿ ಸಾಗುತ್ತಿರಲಿ.

- ಸಂದೀಪ್‌ ನಾಯಕ್‌ ಸುಜೀರ್‌, ಮಂಗಳೂರು

ಟಾಪ್ ನ್ಯೂಸ್

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

Astronamy-moon

Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.