ಎಸ್ಸೆಮ್ಮೆಸ್ ಲಿಂಕ್‌ಗೆ ಮರುಳಾಗಬೇಡಿ!
Team Udayavani, Aug 14, 2021, 6:50 AM IST
ಗ್ರಾಹಕರನ್ನು ಮರುಳು ಮಾಡಿ, ವೈಯಕ್ತಿಕ ಮಾಹಿತಿ ಪಡೆದುಕೊಂಡು ಬ್ಯಾಂಕ್ ಖಾತೆ ವಿವರ, ಪಾಸ್‌ವರ್ಡ್ ಪಡೆದು ವಂಚಿಸುವವರ ಜಾಲ ಹೆಚ್ಚಾಗಿದೆ. ಈ ಕುರಿತು ದೇಶದ ಸೈಬರ್ ಭದ್ರತಾ ಸಂಸ್ಥೆ, ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಹೊಸ ಎಚ್ಚರಿಕೆ ನೀಡಿದೆ. “ಎನ್‌ಜಿಆರ್‌ಒಕೆ’ ಎಂಬ ಪ್ಲಾಟ್‌ಫಾರಂ ಬಗ್ಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಿದೆ.
ಹೇಗೆ ವಂಚಿಸುತ್ತಾರೆ?
- ನೀವು ಹೊಂದಿರುವ ಬ್ಯಾಂಕ್ ಖಾತೆಯಿಂದಲೇ ಕೆವೈಸಿ ಅಪ್‌ಡೇಟ್ ಮಾಡಲು ಸೂಚನೆ ಇರುವ ಎಸ್‌ಎಂಎಸ್ ಮತ್ತು ಅದಕ್ಕಾಗಿ ಲಿಂಕ್ ಕಳುಹಿಸಲಾಗುತ್ತದೆ. ಉದಾಹರಣೆ: ಆತ್ಮೀಯ ಗ್ರಾಹಕರೇ ನಿಮ್ಮ ಕೆವೈಸಿ ಅಪ್‌ಡೇಟ್ ಆಗಿಲ್ಲ. ಅದನ್ನು ಪೂರ್ತಿಗೊಳಿಸದಿದ್ದರೆ ಖಾತೆ ಬ್ಲಾಕ್ ಮಾಡಲಾಗುತ್ತದೆ. ಲಿಂಕ್ ಫಾಲೋ ಮಾಡಿ ಎಂದು ಇರುತ್ತದೆ.
- ಅದನ್ನು ನಂಬುವವರು ಲಿಂಕ್ ತೆರೆದು ಬ್ಯಾಂಕ್ ವಿವರ ನಮೂದಿಸಿ ಕಳುಹಿಸುತ್ತಾರೆ. ಕೂಡಲೇ ವಂಚಕರು ಒಟಿಪಿ ಸಂಖ್ಯೆ ಕಳುಹಿಸುತ್ತಾರೆ. ಅದನ್ನು ನಮೂದಿಸಿದಾಗ ನಮ್ಮ ಬ್ಯಾಂಕ್ ಖಾತೆಯ ವಿವರ ಅವರಿಗೆ ಲಭ್ಯವಾಗುತ್ತದೆ. ಜತೆಗೆ ಹಣವನ್ನೂ ಕಳೆದುಕೊಳ್ಳುತ್ತಾರೆ.
ಎಚ್ಚರಿಕೆ ವಹಿಸುವುದು ಹೇಗೆ? :
- ಸಿಇಆರ್‌ಟಿ ನೀಡಿದ ಮುನ್ನೆಚ್ಚರಿಕೆ ಪ್ರಕಾರ, ಅನಾಮಧೇಯ ಮೂಲಗಳಿಂದ ಬಂದ ಎಸ್‌ಎಂಎಸ್, ಇ-ಮೇಲ್‌ಗಳಲ್ಲಿರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
- ಎಸ್‌ಎಂಎಸ್ ಕಳುಹಿಸಿದ ನಂಬರ್ ಪರಿಚಿತವೇ ಅಥವಾ ನಕಲಿ ಮೊಬೈಲ್ ನಂಬರ್ ಆಗಿದೆಯೋ ಎಂದು ಪರಿಶೀಲಿಸಿ.
- ನಿಗದಿತ ಬ್ಯಾಂಕ್ ಹೆಸರಲ್ಲಿ ಎಸ್‌ಎಂಎಸ್, ಇ-ಮೇಲ್ ಬಂದಿದ್ದರೆ ನೀವು ಖಾತೆ ಹೊಂದಿರುವ ಬ್ಯಾಂಕ್ ಶಾಖೆಯಲ್ಲಿ ವಿಚಾರಿಸಿ.
- ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್‌ಗ್ಳಲ್ಲಿರುವ ಆ್ಯಂಟಿ ವೈರಸ್ ಸಾಫ್ಟ್ವೇರ್ ಅಪ್‌ಡೇಟ್ ಮಾಡಿ.
- ly, tinyurl ಎಂದು ಇರುವ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸಿ. ಅದರ ಪೂರ್ತಿ ವೆಬ್‌ಸೈಟ್ ಲಿಂಕ್ ಇದೆಯೋ ಎಂದು ಪರಿಶೀಲಿಸಿ. ಅದಕ್ಕಾಗಿ ಯುಆರ್‌ಎಲ್ ಪರೀಕ್ಷಿಸುವ ವ್ಯವಸ್ಥೆಯೂ ಇದೆ.
- ಆ್ಯಪ್‌ಸ್ಟೋರ್‌ನಿಂದ ಗೊತ್ತಿಲ್ಲದೇ ಇರುವ ಆ್ಯಪ್ ಡೌನ್ ಲೋಡ್ ಮಾಡಬೇಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.