ಸಾಧನಾ ಯಾತ್ರೆಯಲ್ಲಿ ಮಾತೃಹೃದಯಿ!


Team Udayavani, Mar 31, 2017, 8:04 PM IST

Shivakumara-Swamiji-600.jpg

ಲೋಕ ಕಲ್ಯಾಣ ಮಾಡುವ ಸಲುವಾಗಿಯೇ ಹುಟ್ಟಿ ಬಂದವರು ನಿಜ ಶರಣರು. ಶರಣರನ್ನು ಮೆಚ್ಚಿಸಲು ಅವರನ್ನು ನಾವು ಕೊಂಡಾಡಬೇಕಿಲ್ಲ. ಅವರ ಗುಣಗಾನ  ಮಾಡಿ ಆರಾಧಿಸಬೇಕಿಲ್ಲ. ಅವರು ಯಾವುದೇ ರೀತಿಯ ವಿಷಯ ಬಂಧನಕ್ಕೆ ಸಿಲುಕಿಕೊಂಡವರಲ್ಲ. ಅವರ ಆದ್ಯತೆ ಬೇಡುವುದಲ್ಲ, ಕೇವಲ ನೀಡುವುದು, ಜಗತ್ತಿಗೆ ನಿರಂತರವಾಗಿ ನೀಡುತ್ತಾ ಸಾಗುವುದು.

‘ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ/ ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ/ ಮಾಡುವ ನೀಡುವ ನಿಜಗುಣವುಳ್ಳಡೆ ಕೂಡಿಕೊಂಬ ನಮ್ಮ ಕೂಡಲಸಂಗಮದೇವಾ||’ ಎನ್ನುವ ಬಸವಣ್ಣನವರ ವಾಣಿಯಂತೆ ಯಾವುದೇ ಪ್ರಶಸ್ತಿ ಮನ್ನಣೆಗಳ ನಿರೀಕ್ಷೆಯಿಲ್ಲದೆ ಸುಮಾರು ಒಂಬತ್ತು ದಶಕಗಳಿಂದ ಒಂದೇ ಸಮನೆ ನಿರ್ಲಿಪ್ತ ಭಾವದಿಂದ ವಿಶ್ರಾಂತಿ, ವಿರಾಮಗಳನ್ನು ಬಯಸದೆ ಸಮಾಜದ ಸರ್ವಾಂಗೀಣ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವವರು ಮಹಾನ್‌ ಆಧ್ಯಾತ್ಮ ಚೇತನ ತ್ರಿವಿದ ದಾಸೋಹಿಗಳಾದ ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶಿವಕುಮಾರ ಮಹಾಸ್ವಾಮಿಗಳು. ಅವರ ಅನನ್ಯವಾದ ಸಮಾಜ ಸೇವೆಯ ಹಿನ್ನೆಲೆಯಲ್ಲಿ ಪರಿಶುದ್ಧವಾದ ಮನಸ್ಸಿದೆ. ನೊಂದವರ ಬಗ್ಗೆ ಸಹಜವಾಗಿ ಸ್ಪಂದಿಸುವ ನಿಜವಾದ ಆಶಯವಿದೆ. ಅದಕ್ಕಾಗಿಯೇ ಅವರನ್ನು ಮನುಕುಲದ ಮುಕುಟಮಣಿ ಎಂದು ಭಕ್ತಿಪೂರ್ವಕವಾಗಿ ಗೌರವಿಸುತ್ತೇವೆ.

ಸಿದ್ದಗಂಗಾ ಎಂಬ ಕನ್ನಡನಾಡಿನ ಪುಣ್ಯಕ್ಷೇತ್ರದಲ್ಲಿ ದಿನ ನಿತ್ಯದ ಆಡಂಬರದ ಪೂಜೆಯಿಲ್ಲ. ಅಲಂಕಾರಗಳ ಪ್ರದರ್ಶನವಿಲ್ಲ. ಗಂಟೆ – ಜಾಗಟೆಗಳ ಸದ್ದಿಲ್ಲ. ಮಾಡಿದೆನೆಂಬ ಅಹಂಕಾರದ ದರ್ಪವಿಲ್ಲ. ಇಲ್ಲಿರುವುದು ನಿಷ್ಕಾಮ ಮಾನವ ಸೇವೆಯ ಭಕ್ತಿಯ ದರ್ಶನ. ಹಸಿದ ಹೊಟ್ಟೆಗಳಿಗೆ ಅನ್ನ, ಮನಸ್ಸು- ಹೃದಯಗಳಿಗೆ ಪ್ರೀತಿಯ ಸಿಂಚನ, ಮಿದುಳಿಗೆ ಅಕ್ಷರದ ದೀಕ್ಷೆ, ಪ್ರಶಾಂತವಾಗಿ ನೆಲೆಸಲು ನೆರಳು ನೀಡುವ ಒಂದು ಪವಿತ್ರವಾದ ಧಾರ್ಮಿಕ ಪರಿಸರ. ಈ ಮಠ ಒಂದು ಜಾತಿಗೆ ವರ್ಗಕ್ಕೆ ಸೇರಿದ ಪೀಠವಲ್ಲ, ಸೀಮಿತ  ಸಂಕುಚಿತ ಭಾವನೆಗಳ ತಾಣವಲ್ಲ. ‘ದಯೆಯೇ ಧರ್ಮದ ಮೂಲವಯ್ಯ’ ಎಂಬ ಜಗಜ್ಯೋತಿ ಬಸವಣ್ಣನವರ ಸಂದೇಶವು ಸಾಕ್ಷಾತ್ಕಾರಗೊಂಡಂತಹ ದಯೆ, ಪ್ರೀತಿ, ಮಾನವ ಪ್ರೇಮದ ಒಂದು ದಾಸೋಹ ಕ್ಷೇತ್ರ. ಶ್ರೀ ಅಟವಿ ಸ್ವಾಮಿಗಳು ಉದ್ಧಾನ ಶಿವ ಯೋಗಿಗಳ ಕಾಲದಿಂದ ಪ್ರಾರಂಭವಾದ ತ್ರಿವಿಧ ದಾಸೋಹಕ್ಕೆ ಒಂದು ವಿಸ್ತೃತವಾದ, ನಿರಂತರವಾದ ದಿವ್ಯ ಸ್ಪರ್ಶ ನೀಡಿದ ಹಿರಿಮೆ ಸಲ್ಲಬೇಕಾದುದು ಇಂದಿನ ಮಹಾನ್‌ ತಪಸ್ವಿಗಳೂ ಶತಾಯುಷಿಗಳೂ ಅಭಿನವ ಬಸವಣ್ಣನವರಾಗಿರುವ ಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಗೆ. ಗೋಸಲ ಸಿದ್ದೇಶ್ವರದಿಂದ ‘ಸಿದ್ದಗಂಗೆ’ ಎಂಬ ನಾಮಾಂಕಿತ ಪಡೆದ ಸಿದ್ದಗಂಗಾ ಕ್ಷೇತ್ರದ ಹಿಂದಿನ ಮಹಾನ್‌ ತಪಸ್ವಿ ಪೀಠಾಧಿಪತಿಗಳ ಸಂಪೂರ್ಣ ಒಲುಮೆಗೆ – ಕೃಪೆಗೆ ಪಾತ್ರರಾದ ಡಾ. ಶಿವಕುಮಾರ ಮಹಾಸ್ವಾಮಿಗಳ ಪೂರ್ವಾಶ್ರಮದ ಹೆಸರು ಶಿವಣ್ಣನವರು. ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಶರಣರ ಕುಟುಂಬದಲ್ಲಿ ಅವರ ಜನನ. 01-04-1908ರಲ್ಲಿ ಬುವಿಯ ಭಾಗ್ಯದ ಬೆಳಕು ಧರೆಗಿಳಿದು ಬಂದ ಪವಿತ್ರ ದಿನ. ಉದ್ಧಾನ ಶಿವಯೋಗಿಗಳ ಅಣತಿಯಂತೆ 03-03-1930ರಲ್ಲಿ ನಿರಂಜನ ಆಶ್ರಮ ಸ್ವೀಕಾರ. ಸಿದ್ದಗಂಗೆಗೆ ಶಿವಕುಮಾರ ಮಹಾಸ್ವಾಮಿಗಳೆಂಬ ಹೊಸ ಅಭಿನಾಮದಿಂದ ನಿರಂಜನ ಜಂಗಮ ಮೂರ್ತಿಗಳಾಗಿ ಆಗಮನ.

ಶ್ರೀಮಠದ ಉತ್ತರಾಧಿಕಾರಿಗಳಾಗಿ 11-01-1941ರಲ್ಲಿ ಸೇವಾ ದೀಕ್ಷೆ ಪಡೆದ ನಂತರ ಸಿದ್ದಗಂಗಾ ಕ್ಷೇತ್ರಕ್ಕೆ ವಿನೂತನವಾದ ಕಾಯಕ-ದಾಸೋಹ ಸಿದ್ಧಾಂತಗಳ ಭಾವಸ್ಪರ್ಶ. ಅಂದಿನಿಂದ ಇಂದಿನವರೆಗೆ ಲೋಕ ಕಲ್ಯಾಣ, ಮಾನವ ಕಲ್ಯಾಣದ ಅದ್ಭುತ ಸಾಧನಾ ಯಾತ್ರೆಯಲ್ಲಿ ಸರ್ವ ಸಮರ್ಪಣಾ ಭಾವದಿಂದ ತಮ್ಮನ್ನು ತೊಡಗಿಸಿಕೊಂಡಂತಹ ಮಹಾನ್‌ ದಾರ್ಶನಿಕರು ಶಿವಕುಮಾರ ಮಹಾಸ್ವಾಮಿಗಳು.  ಶ್ರೀಗಳವರು ಎಂದೂ ಸಹ ತಾವೊಬ್ಬ ಬಹು ದೊಡ್ಡ ಮಠಾಧಿಪತಿ ಎಂದು ಬೀಗಿದವರಲ್ಲ. ಎಲ್ಲೋ ಏಕಾಂತದಲ್ಲಿ ಕುಳಿತು ಮೋಕ್ಷಕ್ಕಾಗಿ ಸ್ವಾರ್ಥದಿಂದ ತಪಸ್ಸನ್ನು ಮಾಡುತ್ತಾ ಸಮಯ ಕಳೆದವರಲ್ಲ. ತಮ್ಮ ಇಡೀ ದೇಹ ಮನಸ್ಸು ಹೃದಯಗಳನ್ನು ನೊಂದ ಅನಾಥ ಮಕ್ಕಳ ಸೇವೆಗಾಗಿ ಸಮರ್ಪಿಸಿಕೊಂಡ ದಯಾನಿಧಿಗಳು. 


ಶ್ರೀಗಳದ್ದು ಶ್ರಮ ಸಂಸ್ಕೃತಿಯ ಬದುಕು. ಅವರ ಶಿಸ್ತು ಬದ್ಧವಾದ ಜೀವನ ಎಲ್ಲಾ ಮಠಾಧಿಪತಿಗಳಿಗೂ ಆದರ್ಶವಾದುದು. ‘ಶರಣ ನಿದ್ರೆಗೈದಡೆ ಜಪಕಾಣಿರೋ’ ಎಂಬ ಶರಣರ ಮಾತಿನಂತೆ ನಿದ್ರೆಯಲ್ಲಿಯೂ ಸೇವೆಯ ಜಪ ಮಾಡುತ್ತಿರುವ ಸಂಯಮ ಮೂರ್ತಿಗಳು.  ಬೆಳಗಿನ ಜಾವ ಬಹಳ ಬೇಗನೇ ಎದ್ದು ಅವರು ಶಿವಪೂಜೆ ಮಾಡುವ ದೃಶ್ಯ ಸಾಕ್ಷಾತ್‌ ಕೈಲಾಸವನ್ನೇ ಹೋಲುತ್ತದೆ. ಇಷ್ಟಲಿಂಗ ಪೂಜೆಯೆಂದರೆ ಶ್ರೀಗಳಿಗೆ ಶಿವನನ್ನು ನೇರವಾಗಿ ದರ್ಶಿಸುವ ಒಂದು ದಿವ್ಯ ಸಾಧನ. ಈ ಇಳಿ ವಯಸ್ಸಿನಲ್ಲಿಯೂ ಅವರ ಇಷ್ಟಲಿಂಗ ಪೂಜಾ ನಿಷ್ಠೆ ಅನನ್ಯವಾದುದು. ಪೂಜೆಯ ನಂತರ ಅತ್ಯಂತ ನಿಯಮ ಬದ್ಧವಾದ ಅಲ್ಪ ಆಹಾರ ಸೇವನೆ. ಅದರಲ್ಲಿಯೂ ಬಹಳ ಹಿತಮಿತ ಶಿಸ್ತು. ಆನಂತರ ಮಠದ ಕಾರ್ಯಾಲಯದಲ್ಲಿ ಭಕ್ತರಿಗೆ ದಿವ್ಯ ದರ್ಶನ ಭಾಗ್ಯ. ಅಸಂಖ್ಯಾತ ಭಕ್ತರ ನೋವು ಸಂಕಷ್ಟಗಳ ಪರಿಹಾರಗಳ ಬಗ್ಗೆ ಸಾಂತ್ವನ.

ಬಹುಶಃ ಶರಣ ತಣ್ತೀ ಪ್ರಚಾರಕ್ಕಾಗಿ ನಾಡಿನಾದ್ಯಂತ -ದೇಶದಾದ್ಯಂತ ಪ್ರವಾಸ ಮಾಡಿದ ಗುರುವರೇಣ್ಯರುಗಳಲ್ಲಿ ಅಗ್ರಗಣ್ಯರೆಂದರೆ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು. ಬಡವ ಶ್ರೀಮಂತ ಎಂಬ ಬೇಧವಿಲ್ಲದೆ ಭಕ್ತಿಯಿಂದ ಕರೆದವರ ಮನೆಗಳಲ್ಲಿ ಶಿವಪೂಜೆಗೆ ಅವಕಾಶ. ಕರ್ನಾಟಕದ ಹಳ್ಳಿ ಹಳ್ಳಿಗಳನ್ನು ಸುತ್ತಿ ಲಕ್ಷಾಂತರ ಭಕ್ತ ಸಮೂಹವನ್ನು ಆಶೀರ್ವದಿಸಿರುವ ಮಾತೃ ಹೃದಯಿಗಳಾದ ಪೂಜ್ಯರು ಶ್ರೀಮಠದ ಆಶ್ರಯದಲ್ಲಿ ಶಿಕ್ಷಕ ವೃಂದವ‌ನ್ನು ತೊಡಗಿಸಿಕೊಂಡು ಏರ್ಪಡಿಸಿರುವ ‘ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕಗಳ ಪ್ರದರ್ಶನ’ ಒಂದು ಐತಿಹಾಸಿಕ ದಾಖಲೆ. ಸಹಸ್ರಾರು ಬಾರಿ ಪ್ರದರ್ಶಿಸಿರುವ ಬಸವೇಶ್ವರ ನಾಟಕಗಳನ್ನು ನಿದ್ದೆಗೆಟ್ಟು ನೋಡಿ ಸಂಭಾಷಣೆ, ಅಭಿನಯಗಳ ಬಗ್ಗೆ ಸ್ವತಃ ಮಾರ್ಗದರ್ಶನ ನೀಡುವ ಜೀವನೋತ್ಸಾಹ ಪೂಜ್ಯ ಶ್ರೀಗಳವರದು.

ಪೂಜ್ಯರ ಅಕ್ಷರ ಪ್ರೇಮ ಆದರ್ಶನೀಯ. ಸದಾ ಅಧ್ಯಯನದಲ್ಲಿ ನಿರತರಾಗಿರುವ ಅವರ ನೆನಪಿನ ಶಕ್ತಿ ಅಗಾಧ. ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧಿ, ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್‌, ಡಾ. ರಾಧಾಕೃಷ್ಣನ್‌ ಅವರ ಬಗ್ಗೆ ಅವರಿಗೆ ಅಪ್ರತಿಮ ಅಭಿಮಾನ. ಮಹಾನ್‌ ಲೇಖಕರ, ಸಂತರ, ದಾರ್ಶನಿಕರ ಗ್ರಂಥಗಳಲ್ಲಿನ ಆಯ್ದ ಭಾಗಗಳನ್ನು ತಮ್ಮ ನೆನೆಪಿನ ಬುತ್ತಿಯಿಂದ ತೆಗೆದು ದರ್ಶನಕ್ಕೆ ಬಂದ ಭಕ್ತರ ಮುಂದೆ ಅದನ್ನು ಅತ್ಯಂತ ಸಮರ್ಪಕವಾಗಿ ಅಭಿವ್ಯಕ್ತಿಗೊಳಿಸುವ ಅವರ ಜ್ಞಾನದ ಪಿಪಾಸೆ ಎಂತಹವರನ್ನೂ ಚಕಿತಗೊಳಿಸುವಂತಹುದು. ಸರ್ಕಾರದ ಆಶ್ರಯದಲ್ಲಿ ವಿದ್ಯಾಕೇಂದ್ರಗಳು ಇಲ್ಲದೆ ಇದ್ದಂತಹ ನೂರಾರು ಗ್ರಾಮಗಳಲ್ಲಿ ಮಠದ ವತಿಯಿಂದ ಯಾವ ನೆರವೂ ಇಲ್ಲದೆ ಪ್ರಾರಂಭಿಸಿದ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಗ್ರಾಮಾಂತರ ಪ್ರದೇಶಗಳಲ್ಲಿ ಅವರು ಮಾಡಿರುವ ಅಕ್ಷರ ಕ್ರಾಂತಿ ಪವಾಡ ಸದೃಶವಾದುದು. ಅಂತೆಯೇ ಅಧುನಿಕ ಶಿಕ್ಷಣದ ಆವಿಷ್ಕಾರದ ಹಲವಾರು ಉನ್ನತ ವಿದ್ಯಾಸಂಸ್ಥೆಗಳನ್ನು ನಿರ್ವಹಿಸುತ್ತಿರುವ ಶ್ರೀಮಠದ ಜ್ಞಾನ ಯಜ್ಞ ನಿರಂತರವಾಗಿ ನಡೆಯುತ್ತಿದೆ.

ಪೂಜ್ಯ ಶ್ರೀಗಳು ಕೃಷಿ ಕಾಯಕದಲ್ಲಿ, ಪಶು ಸಂಗೋಪನೆಯಲ್ಲಿಯೂ ಆಸಕ್ತಿ ಹೊಂದಿದವರು. ಸ್ವತಃ ತಾವೇ ಮಠದ ಕೃಷಿ ಭೂಮಿಯಲ್ಲಿ ಭೂತಾಯಿಯ ಜೊತೆಯಲ್ಲಿ ಅನುಸಂಧಾನ ನಡೆಸಿದವರು. ಮಠದ ಗೋವುಗಳು ಹಾಗೂ ಸಾಕು ಪ್ರಾಣಿಗಳ ಬಗ್ಗೆ ಅವರಿಗೆ ಎಲ್ಲಿಲ್ಲದ ಪ್ರೇಮ. ಶಿವಕುಮಾರ ಮಹಾಸ್ವಾಮಿಗಳು ಸಹಸ್ರಾರು ಮಕ್ಕಳ ಪಾಲಿಗೆ ಹೆತ್ತ ತಾಯಿಯಂತೆ ಮಮತೆ ತೋರಿದವರು. ಅವರಿಗೆ ಪಾಠ ಹೇಳಿದವರು. ವಿದ್ಯಾರ್ಥಿನಿಲಯಗಳಿಗೆ ತೆರಳಿ ಮಕ್ಕಳನ್ನು ಸ್ವತಃ ತಾವೇ ದಿನನಿತ್ಯದ ಚಟುವಟಿಕೆಗಳಿಗೆ ಅಣಿಗೊಳಿಸಿದವರು. ಅವರೆಲ್ಲರಿಗೆ ದಿವ್ಯ ಸ್ಫೂರ್ತಿಯ ಸೆಲೆಯಾದವರು.

ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಕಾಯಕ, ದಾಸೋಹ, ಜಾತ್ಯತೀತ ಪ್ರಜ್ಞೆ, ಸ್ತ್ರೀ ಸಮಾನತೆ, ಪರಿಸರ ಪ್ರೇಮ, ವೈಚಾರಿಕ ವಿವೇಕ, ಮಾನವ ಪ್ರೇಮ, ಮುಂತಾದ ಉನ್ನತ ಮಾನವೀಯ ಮೌಲ್ಯಗಳನ್ನು ಅನುಷ್ಠಾನಕ್ಕೆ ತಂದಿರುವ ಒಂದು ಆಧ್ಯಾತ್ಮ ಪ್ರಯೋಗ ಶಾಲೆಯೇ ಶ್ರೀ ಸಿದ್ದಗಂಗಾ ಕ್ಷೇತ್ರ. ಮಹಾ ದಾಸೋಹದ ಮಣಿಹ ಹೊತ್ತು ದಾಸೋಹ ಭಾವವನ್ನು ಸಾಕ್ಷಾತ್ಕಾರಗೊಳಿಸಿದ ಅಪರೂಪದ ಮಹಾನ್‌ ಚೇತನ ಅವರು. 12ನೆಯ ಶತಮಾನದಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ಉನ್ನತ‌ ಆದರ್ಶಗಳು, ಶರಣರು ಪ್ರತಿಪಾದಿಸಿದ ಸತ್ಯಶುದ್ಧ ಕಾಯಕ ಪ್ರಜ್ಞೆ – ನಿಷ್ಕಾಮ ಭಾವದಿಂದ ನಡೆಯುತ್ತಿರುವ ದಾಸೋಹವೇ ಶಿವಕುಮಾರ ಸ್ವಾಮಿಗಳವರ ದೀರ್ಘ‌ ಬದುಕಿನ ರಹಸ್ಯ. ಬಸವಾದಿ ಶರಣರ ಮಾನವೀಯ ಮೌಲ್ಯಗಳೇ ಅವರ ಜೀವನ ಸಿದ್ಧಾಂತ.

12ನೆಯ ಶತಮಾನದ ಕಲ್ಯಾಣವನ್ನು ನಾವು ಕಂಡಿಲ್ಲ. ಆದರೆ ಇಂದಿನ ಸಿದ್ದಗಂಗಾ ಕ್ಷೇತ್ರವೇ ನಮಗೆ ಪವಿತ್ರ ಕಲ್ಯಾಣ. ನಾವು ಮಹಾನ್‌ ಮಾನವತಾವಾದಿ ಬಸವಣ್ಣನವರನ್ನು ಕಂಡಿಲ್ಲ. ಇಂದಿನ ಶತಾಯುಷಿ, ಪದ್ಮಭೂಷಣ, ಕರ್ನಾಟಕ ರತ್ನ ಶಿವಕುಮಾರ ಮಹಾಸ್ವಾಮಿಗಳವರೇ ನಾವು ಕಾಣುತ್ತಿರುವ ಅಂದಿನ ಇಂದಿನ ಬಸವಣ್ಣನವರು. ಆದುದರಿಂದಲೇ ಅಭಿನವ ಬಸವಣ್ಣನವರೆಂದು ಅಸಂಖ್ಯಾತ ಭಕ್ತರು ಅವರನ್ನು ಆರಾಧಿಸುತ್ತಾರೆ.  ಶ್ರೀಗಳು ಪ್ರಶಸ್ತಿ ಮನ್ನಣೆಗಳ‌ನ್ನು ಎಂದೂ ನಿರೀಕ್ಷಿಸಿದವರಲ್ಲ, ಬಯಸಿದವರಲ್ಲ. ಅವರ ಸೇವಾತತ್ಪರತೆಯನ್ನು ಗುರುತಿಸಿ ಅರಸಿಕೊಂಡು ಬಂದಿರುವ ಮನ್ನಣೆಗಳಿಗೆ ಲೆಕ್ಕವಿಲ್ಲ. 2015ರಲ್ಲಿ ಭಾರತ ಸರ್ಕಾರ ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ನು, ಕೇಂದ್ರ ಸರ್ಕಾರ ಶ್ರೀಗಳಿಗೆ ‘ಭಾರತ ರತ್ನ’ ಗೌರವ ಪ್ರಶಸ್ತಿ ನೀಡಬೇಕೆಂಬುದು ಅವರ ಅಸಂಖ್ಯಾತ ಭಕ್ತರ ಒಕ್ಕೊರಲಿನ ಆಶಯವಾಗಿದೆ. ಅಭಿನವ ಬಸವಣ್ಣನವರಾದ ಪರಮಪೂಜ್ಯ ಡಾ. ಶಿವಕುಮಾರ ಮಹಾಸ್ವಾಮಿಗಳವರಿಗೆ 110ನೆಯ ಜನ್ಮ ದಿನೋತ್ಸವದ ಕೃತಜ್ಞತಾಪೂರ್ವಕ ಪ್ರೀತಿಯ ನುಡಿ ನಮನ. ಭಕ್ತಿಯ ಶುಭ ಹಾರೈಕೆ.

– ಡಾ. ಸಿ. ಸೋಮಶೇಖರ, ಐ.ಎ.ಎಸ್‌ (ನಿ)

ಟಾಪ್ ನ್ಯೂಸ್

1-busss

ನಾಡಿದ್ದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಭೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MM-Singh1

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-busss

ನಾಡಿದ್ದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಭೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.