ದತ್ತ ಜಯಂತಿ: ಅಗಣಿತ ಗುಣ ಮಹಿಮ ಶ್ರೀ ಗುರುದೇವದತ್ತ


Team Udayavani, Dec 29, 2020, 5:32 AM IST

ದತ್ತ ಜಯಂತಿ: ಅಗಣಿತ ಗುಣ ಮಹಿಮ ಶ್ರೀ ಗುರುದೇವದತ್ತ

ಮಹಾಸತಿ ಅನುಸೂಯಾದೇವಿಯ ಪಾತಿವ್ರತ್ಯ ಮತ್ತು ಅತ್ರಿ ಮುನಿಯ ತಪಸ್ಸಿನ ಪ್ರಭಾವದಿಂದ ಚಿತ್ರಕೂಟ ಪರ್ವ ತದಲ್ಲಿರುವ ಅತ್ರಿ ಮುನಿಗಳ ಆಶ್ರಮದಲ್ಲಿ ತ್ರೇತಾಯುಗದ ಮಾರ್ಗಶೀರ್ಷ ಹುಣ್ಣಿಮೆಯಂದು ಶ್ರೀ ದತ್ತಾವತಾರವು ಪ್ರಕಟವಾಯಿತು. ಅಂದು ಜನಿಸಿದ ಸಕಲ ದೇವತಾ ಸ್ವರೂಪಿಯಾದ ಶ್ರೀ ದತ್ತಾವತಾರವು ಇಂದಿಗೂ ಪ್ರತ್ಯಕ್ಷವಾಗಿ ಇರುವುದು. ಈ ಅವತಾರವು ಕಲ್ಪಾಂತದವರೆಗೂ ಇರುತ್ತದೆ. ಪರಮ ಪವಿತ್ರವಾದ ಈ ದಿನವನ್ನು ಶ್ರೀ ದತ್ತಗುರು ಜಯಂತಿಯಾಗಿ ಆಚರಿಸಲಾಗುತ್ತದೆ. ಈ ಉತ್ಸವವನ್ನು ದತ್ತಭಕ್ತರು ಬಹು ವಿಜೃಂಭಣೆಯಿಂದ ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ ಮತ್ತು ವಿಶೇಷ ಭಕ್ತಿ- ಶ್ರದ್ಧೆಗಳಿಂದ ಶ್ರೀ ದತ್ತಗುರುಗಳ ಆರಾಧನೆಯನ್ನು ಮಾಡುತ್ತಾರೆ. ಶ್ರೀ ಮಹಾವಿಷ್ಣುವಿನ ಇಪ್ಪತ್ನಾಲ್ಕು ಅವತಾರಗಳಲ್ಲಿ ಶ್ರೀ ದತ್ತಾವತಾರವು ಆರನೆಯದು. ಅದಕ್ಕೆ ವಿನಾಶವಿಲ್ಲ. ಈ ಅವತಾರದಲ್ಲಿ ಭಗವದ್‌ ಶಕ್ತಿಯೇ ಗುರುರೂಪದಲ್ಲಿ ಕಾರ್ಯರತವಾಗಿರುತ್ತದೆ.

ಸರ್ವ ವಿಷ್ಣುಮಯನಾದ ಶ್ರೀ ದತ್ತನು ಬ್ರಹ್ಮ-ಮಹೇಶ್ವರರ ಆಂಶೀ ಭೂತನಾಗಿರು ವನು. ತ್ರಿಮೂ ರ್ತಿಗಳ ಏಕತೆಯಿಂದೊಡ ಗೂಡಿದ ಅವತಾರವೇ ಶ್ರೀ ದತ್ತಗುರು. ಶ್ರೀ ದತ್ತಾವತಾರವು ನಿತ್ಯನೂತನವೂ ಸತ್ಯವೂ ಶುದ್ಧವೂ ಶಾಶ್ವತವೂ ಮತ್ತು ನಿರಾಮಯವೂ ಆಗಿರುತ್ತದೆ. ಶ್ರೀದತ್ತ ಪ್ರಭುವು ಗುರು ಸ್ವರೂಪದಿಂದಲೇ ಪ್ರಕಟನಾದವನು. ಯಾವ ಪುಣ್ಯಾತ್ಮನು ಆತನನ್ನು ಭಕ್ತಿಯಿಂದ ಸೇವಿಸುವನೋ ಅಂತಹವನಿಗೆ ತನ್ನನ್ನೇ ಅರ್ಪಣೆ ಮಾಡಿಕೊಳ್ಳುವ ಸ್ವಭಾವವುಳ್ಳವನಾದುದರಿಂದ ಆತನಿಗೆ ದತ್ತನಾಮದ ಅಭಿದಾನವಾಯಿತು. ಶ್ರೀ ದತ್ತನು ಗುರುವೂ ಹೌದು, ದೇವನೂ ಹೌದು. ಆದುದರಿಂದಲೇ ಆತನನ್ನು ಶ್ರೀ ಗುರುದೇವದತ್ತನೆಂದು ಸಂಭೋಧಿಸುತ್ತೇವೆ. ಶ್ರೀದತ್ತನು ಏಕತೆಯ ರಹಸ್ಯ, ಏಕತ್ವದ ಪ್ರತಿನಿಧಿ, ಸರ್ವದೇವತಾ ಸ್ವರೂಪಿ. ಸರ್ವಶಕ್ತಿಸಂಪನ್ನನಾದ ಶ್ರೀದತ್ತನ ಆರಾಧನೆ ಮಾಡಿದರೆ ಸಕಲ ದೇವತೆಗಳ ಆರಾಧನೆ ಮಾಡಿದ ಫ‌ಲ ಲಭಿಸುತ್ತದೆ. ಶ್ರೀ ದತ್ತಾತ್ರೇಯನು ಗುರುವಿನ ಗುರು. ವಿಶ್ವಗುರುವಾದ ಆತನಿಗೆ ಗುರುವಿಲ್ಲ. ಆತನು ಆತ್ಮ ತಣ್ತೀದ, ಗುರು ತಣ್ತೀದ ಪ್ರತೀಕನು. ಬ್ರಹ್ಮವಿದ್ಯೆಯ ಮೇರು ಪರ್ವತವಾದ ಶ್ರೀದತ್ತನು ಸರ್ವ ಸಿದ್ಧಾಂತಗಳನ್ನು ಪ್ರತಿಪಾದಿಸುವ ಮಹಾಗುರು.

ನಾಮಸ್ಮರಣೆ, ಭಜನೆ ಅರಿವಿಗೆ ಸೋಪಾನ
ಶ್ರೀ ದತ್ತ ನಾಮಸ್ಮರಣೆ, ಭಜನೆಯು ಬ್ರಹ್ಮತತ್ವದ ಅರಿವಿಗೆ ಸೋಪಾನ. ಶ್ರೀ ದತ್ತನು ಗುರುದೇವನಾದುದರಿಂದ ಆತನ ಉಪಾಸನೆ, ಆರಾಧನೆಯನ್ನು ಗುರುರೂಪದಲ್ಲಿಯೇ ಮಾಡಿ ದರೆ ಅಧಿಕ ಶ್ರೇಯಸ್ಕರ. ಗುರುಭಕ್ತಿಯೇ ಪರಮಾರ್ಥದ ಉಗಮಸ್ಥಾನ. ಶ್ರೀ ದತ್ತಗುರುಗಳು ಅತುಲ್ಯರಾದ ಸಾರ್ವಕಾಲಿಕ ಗುರುಗಳು. ಶ್ರೀ ದತ್ತಗುರುಗಳ ಶಿಷ್ಯ ಪರಂಪರೆ ಅಸಂಖ್ಯವಾದುದು. ಇಂದಿಗೂ ಅದು ಮುಂದುವರಿಯುತ್ತಿದೆ. ವರ್ತಮಾನದಲ್ಲಿಯೂ ಶ್ರೀ ದತ್ತಗುರುಗಳು ಅನೇಕ ರೀತಿಯ ಅನುಗ್ರಹ ಮಾಡುತ್ತಿದ್ದಾರೆ. ಯಜು, ಸಹಸ್ರರ್ಜುನ, ಪರಶು ರಾಮ ಈ ಎಲ್ಲ ಮಹಾತ್ಮರು ಆತನ ನಾಮಾಂಕಿತ ಶಿಷ್ಯರು. ಶ್ರೀ ದತ್ತ ಪ್ರಭುವಿನ ಅನೇಕ ಅವತಾರಗಳಿವೆ. ಅವುಗಳೆಲ್ಲ ಆತನ ಸಗುಣ ಸಾಕ್ಷಾತ್ಕಾರದ ಪ್ರತೀಕಗಳು. ಭಕ್ತರಲ್ಲಿ ಸಾಧ ನೆಯ ಮನೋವೃತ್ತಿಯು ಶ್ರೀ ದತ್ತಾತ್ರೇಯ ಭಗವಂತನ ಕೃಪೆಯಿಂದಲೇ ಉದಯಿಸುತ್ತದೆ. ಗುರು ತಣ್ತೀವನ್ನು ಅರಿಯದೆ ಮಾಡಿದ ಆರಾಧನೆಯು ವ್ಯರ್ಥ ವಾಗುತ್ತದೆ. ಗುರುಕೃಪೆ ಯಿಂದಲೇ ಭಕ್ತನಿಗೆ ದೇವರ ಕೃಪೆಯಾಗುತ್ತದೆ.

ಶ್ರೀ ಗುರು ಚರಿತ್ರೆ
ಅಗಾಧವಾದ ಮಹಿಮೆಯ ನ್ನೊಳಗೊಂಡ ಶ್ರೀ ಗುರು ಚರಿತ್ರೆಯು ಗುರು-ಶಿಷ್ಯ ಪರಂಪರೆಯ ಮಹಾನ್‌ ಗ್ರಂಥ. ಅದು ಗುರುಭಕ್ತರಿಗಾಗಿರುವ ಜ್ಞಾನಕೋಶ, ಭಕ್ತರ ಜೀವನದ ಕೈಪಿಡಿ. ಗುರುಭಕ್ತಿ ಶಾಸ್ತ್ರವೆಂದೇ ಪರಿಗಣಿಸಲ್ಪಟ್ಟ ಪವಿತ್ರ ಗ್ರಂಥವಿದು. ಶ್ರೀ ದತ್ತಗುರುಗಳ ಅವತಾರ ಲೀಲೆಗಳನ್ನು ಪ್ರಚುರಪಡಿಸುವ ದಿವ್ಯಗ್ರಂಥವದು. ನರರೂಪದಿಂದ ಅವತರಿ ಸಿದ ಶ್ರೀಪಾದ ಶ್ರೀ ವಲ್ಲಭರ, ತ್ರಿಮೂರ್ತಿ ದತ್ತಾತ್ರೇಯ ಸ್ವರೂಪಿ ಶ್ರೀ ನರಸಿಂಹ ಸರಸ್ವತೀ ಯತಿಗಳ ಪಾವನಕರವಾದ ಚರಿತ್ರೆಯೇ ಶ್ರೀ ಗುರುಚರಿತ್ರೆ. ಅದರ ಪಠಣದ ಮೂಲಕ ಶ್ರೀ ದತ್ತನ ಕೃಪಾಪ್ರಸಾದಕ್ಕೆ ಭಕ್ತರು ಪಾತ್ರರಾಗಬಹುದು. ಅಮೃತ ಸ್ವರೂಪವಾದ ಶ್ರೀ ಗುರುಚರಿತ್ರೆಯ ಅನುಸಂಧಾನದಿಂದ ಪರಮಾ ತ್ಮನಿಗೆ ಸಂಬಂಧಿಸಿದ ಪವಿತ್ರ ಜ್ಞಾನಯೋಗ ಕೂಡ ಲಭಿಸುತ್ತದೆ. ಗುರುಭಕ್ತಿಯನ್ನು ವೃದ್ಧಿಸುವ ಶ್ರೀ ಗುರುಚರಿತ್ರೆಯು ಶ್ರೀ ದತ್ತಗುರುವಿನ ಪ್ರಸನ್ನತೆಗೆ ಕಾರಣವಾಗುತ್ತದೆ. ಶ್ರೀ ಗುರು ಚರಿತ್ರೆಯ ಅನು ಸಂಧಾನದಿಂದ ಸಾಧಕನು ಗುರುವಿಗೆ, ದೇವರಿಗೆ ಸಮೀಪದವನಾಗುತ್ತಾನೆ. ಗುರುಭಕ್ತಿಯೊಳಗೆಯೇ ಭಗವತ್‌ ಪ್ರಾಪ್ತಿಯ ರಹಸ್ಯವಿರುತ್ತದೆ. ದತ್ತ ಜಯಂತಿಯ ಪ್ರಯುಕ್ತ ಶ್ರೀ ದತ್ತ ಭಕ್ತರು ಮೊದಲೇ ಶ್ರೀ ಗುರುಚರಿತ್ರೆಯ ಪಾರಾಯಣವನ್ನು ಆರಂಭಿಸಿ ದತ್ತ ಜಯಂತಿಯಂದು ಮುಗಿಸುತ್ತಾರೆ.

ವಿಧಿ ವಿಧಾನ
ಶ್ರೀ ದತ್ತ ಜಯಂತಿ ಯಂದು ಗುರುವಿನ ಆರಾಧನೆಯ ವಿಧಿ ವಿಧಾನ ಎಂದರೆ, ಶ್ರೀ ಗುರು ಚರಿತ್ರೆ ಪಾರಾಯಣ, ಶ್ರೀ ದತ್ತ ಜಪ ಪಠಣ, ಶ್ರೀ ದತ್ತಯಾಗ, ರುದ್ರಾಭಿಷೇಕ, ಜನ್ಮೋತ್ಸವ ಆಚರಣೆ, ಪಲ್ಲಕಿ ಉತ್ಸವ, ದಿಂಡಿ, ಭಜನೆ ಇತ್ಯಾದಿ.

ಸುರೇಶ ಜ ಪೈ, ಹರಿಖಂಡಿಗೆ

ಟಾಪ್ ನ್ಯೂಸ್

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.