ಸುಲಭ ಪಾವತಿ, ಸಬ್ಸಿಡಿ ನೀಡಿಕೆಗೆ ಬಂದಿದೆ ಇ-ರುಪೀ
Team Udayavani, Aug 3, 2021, 7:20 AM IST
ದೇಶದಲ್ಲಿ ಡಿಜಿಟಲ್ ಪಾವತಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸೋಮವಾರ ಇ-ರುಪೀಗೆ ಚಾಲನೆ ನೀಡಿದೆ. ಸರಕಾರದ ಅಭಿವೃದ್ಧಿ ಕಾರ್ಯಕ್ರಮ ಗಳು, ಸಬ್ಸಿಡಿಗಳ ಫಲಾನು ಭವಿಗಳಿಗೆ ಇದರಿಂದ ಅನು ಕೂಲ ಆಗಲಿದೆ.
ಏನಿದು ಇ-ರುಪೀ? : ಇದು ಡಿಜಿಟಲ್ ಪಾವತಿಗಾಗಿ ಇರುವಂಥ ನಗದುರಹಿತ ಮತ್ತು ಸಂಪರ್ಕರಹಿತ ವ್ಯವಸ್ಥೆ. ಕ್ಯೂಆರ್ ಕೋಡ್, ಎಸ್ಸೆಮ್ಮೆಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಇದಾಗಿದ್ದು, ಇದನ್ನು ನೇರವಾಗಿ ಫಲಾನುಭವಿಗಳ ಮೊಬೈಲ್ ಫೋನ್‌ಗಳಿಗೆ ಕಳುಹಿಸಲಾಗುತ್ತದೆ.
ಪ್ರಮುಖ ಲಾಭಗಳು :
- ಡಿಜಿಟಲ್ ರೂಪದಲ್ಲೇ ಸೇವಾ ಪ್ರಾಯೋಜಕರು, ಫಲಾನುಭವಿಗಳ ನಡುವೆ ಸಂಪರ್ಕ
- ನಗದುರಹಿತ ಮತ್ತು ಸಂಪರ್ಕರಹಿತ ಡಿಜಿಟಲ್ ಪಾವತಿ
- ವಿವಿಧ ಸೇವೆಗಳ ಸೋರಿಕೆ ರಹಿತ ಪೂರೈಕೆ
ಹೇಗೆ ಕೆಲಸ ಮಾಡುತ್ತೆ? :
ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವ ಬದಲಿಗೆ ಸರಕಾರವು ಈ “ಇ-ವೋಚರ್’ ಅನ್ನು ನಿಮ್ಮ ಮೊಬೈಲ್‌ಗೆ ಕಳುಹಿಸುತ್ತದೆ. ಒಂದೋ ಎಸ್ಸೆಮ್ಮೆಸ್ ಮೂಲಕ ಅಥವಾ ಕ್ಯೂಆರ್ ಕೋಡ್ ಮೂಲಕ ವೋಚರ್ ಬರುತ್ತದೆ. ಯಾವ ಉದ್ದೇಶಕ್ಕೆ ವೋಚರ್ ಕಳುಹಿಸಲಾಗಿದೆಯೋ, ಆ ಉದ್ದೇಶಕ್ಕೆ ಮಾತ್ರ ಅದನ್ನು ಬಳಸಬೇಕು. ಉದಾಹರಣೆಗೆ: ಕೊರೊನಾ ಲಸಿಕೆ ಪಡೆಯಲು ಯಾರಾದರೂ ನಿಮ್ಮ ಮೊಬೈಲ್‌ಗೆ ಇ-ವೋಚರ್ ಕಳುಹಿಸಿದರೆ, ಲಸಿಕೆ ಪಡೆಯಲಷ್ಟೇ ಅದನ್ನು ಬಳಸಬಹುದು. ನೀವು ಖಾಸಗಿ ಆಸ್ಪತ್ರೆಗೆ ತೆರಳಿ ಮೊಬೈಲ್‌ಗೆ ಬಂದಿರುವ ಇ-ವೋಚರ್ ಸಂದೇಶವನ್ನು ತೋರಿಸಿದರೆ ಸಾಕು. ಅದನ್ನು ಅವರು ಸ್ಕ್ಯಾನ್ ಮಾಡಿದಾಗ ಅದರ ಮೊತ್ತ ಪಾವತಿಯಾಗುತ್ತದೆ. ನೀವು ಲಸಿಕೆ ಹಾಕಿಸಿಕೊಂಡು ಮನೆಗೆ ಮರಳಬಹುದು. ಇ-ವೋಚರ್ ನಗದೀಕರಣದ ವೇಳೆ ನೀವು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡಬೇಕಾದ ಅಗತ್ಯವೂ ಇರುವುದಿಲ್ಲ. ಇದೇ ರೀತಿ, ಸರಕಾರ ನೀಡುವ ಸಬ್ಸಿಡಿ ಮೊತ್ತವನ್ನೂ ಇ-ವೋಚರ್ ಮೂಲಕ ಕಳುಹಿಸಲಾಗುತ್ತದೆ.
ಕಾರ್ಡ್, ಆ್ಯಪ್ ಅಗತ್ಯವಿಲ್ಲ :
ಬಳಕೆದಾರರು ಕಾರ್ಡ್ ಇಲ್ಲದೇ, ಡಿಜಿಟಲ್ ಪಾವತಿ ಆ್ಯಪ್,ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದೆಯೂ ವೋಚರ್ ಅನ್ನು ನಗದೀಕರಿಸಬಹುದು.
ಯಾರಿಗೆ ಅನುಕೂಲ? :
ವಿವಿಧ ಕಲ್ಯಾಣ ಯೋಜನೆಗಳು, ಕ್ಷಯರೋಗ ನಿರ್ಮೂ ಲನೆ ಕಾರ್ಯಕ್ರಮ, ಆಯುಷ್ಮಾನ್ ಭಾರತ್‌ನಡಿ ಔಷಧಗಳ ಪೂರೈಕೆ, ರಸಗೊಬ್ಬರ ಸಬ್ಸಿಡಿ ಇತ್ಯಾದಿಗಳ ಫಲಾನುಭವಿಗಳಿಗೆ ಇದು ಅನುಕೂಲವಾಗಲಿದೆ. ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳ ಕ್ಷೇಮಾಭಿವೃದ್ಧಿ ಯೋಜನೆ, ಸಿಎಸ್‌ಆರ್ ಚಟುವಟಿಕೆಗಳಿಗೆ ಬಳಸಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.