ಮುಂಬಯಿಯ ಮುಂಜಾನೆಯ ಸಂಗಾತಿ
Team Udayavani, Feb 29, 2020, 4:41 AM IST
ನಾನು ಪ್ರಾಯೋಗಿಕ ಸಂಚಿಕೆ ಪ್ರಕಟವಾಗುತ್ತಿದ್ದ ಕಾಲದಿಂದಲೂ ಉದಯವಾಣಿಯನ್ನು ಓದುತ್ತಾ ಬಂದವನು. ಊರಿನಲ್ಲಿರುವಾಗ ಪ್ರತಿದಿನ ತಾಜಾ ಸಮಾಚಾರವನ್ನು ಹೊತ್ತು ತರುತ್ತಿದ್ದ ಉದಯವಾಣಿಯನ್ನು ಓದುವುದೇ ಅವಿಸ್ಮರಣೀಯ ಅನುಭವವಾಗಿತ್ತು.ಉದ್ಯೋಗ ನಿಮಿತ್ತ ಮುಂಬಯಿಗೆ ಕಾಲಿರಿಸಿದಾಗ, ಇಲ್ಲೂ ಉದಯವಾಣಿಯನ್ನು ಓದುವ ಅವಕಾಶ ಸಿಗುವ ಖಾತ್ರಿ ನನಗಿರಲಿಲ್ಲ .ಆಗಿನ ಕಾಲದಲ್ಲಿ ಮಣಿಪಾಲದಿಂದ ಮಾತ್ರ ಪ್ರಕಟವಾಗುತ್ತಿದ್ದ ಉದಯವಾಣಿ ಮರುದಿನ ಮುಂಜಾನೆ ಮುಂಬಯಿಗೆ ಬರುತ್ತಿತ್ತು . ಹಾಗಾಗಿ ನನ್ನ ಮತ್ತು ಉದಯವಾಣಿಯ ನಂಟು ಮೊದಲಿನಂತೆಯೇ ಮುಂದುವರಿಯಿತು.ಅನಂತರ ಮುಂಬಯಿ ಕನ್ನಡಿಗರ ಬೇಡಿಕೆಗೆ ಸ್ಪಂದಿಸಿ ಉದಯವಾಣಿಯ ಮುಂಬಯಿ ಆವೃತ್ತಿಯನ್ನು ಆರಂಭಿಸಿದಂದಿನಿಂದ ಬೆಳಗ್ಗಿನ ಚಹಾದೊಂದಿಗೆ ಪತ್ರಿಕೆಯನ್ನು ಓದುವ ಅವಕಾಶ ಒದಗಿಬಂತು. ಈಗ ಮುಂಬಯಿಯಲ್ಲಿರುವ ಕನ್ನಡ ಸಂಘಸಂಸ್ಥೆಗಳ ಚಟುವಟಿಕೆಯ ಸಮಗ್ರ ವರದಿಯು ಉದಯವಾಣಿಯ ಮುಂಬಯಿ ಆವೃತ್ತಿಯ ಮೂಲಕ ದೊರಕುತ್ತದೆ.
ಉದಯವಾಣಿಯ ಸಂಪಾದಕೀಯ, ಸಂಪಾದಕೀಯ ಪುಟದಲ್ಲಿ ತಜ್ಞರು ಬರೆಯುವ ಮಾಹಿತಿಪೂರ್ಣ ಲೇಖನಗಳು, ಜನತಾವಾಣಿ, ಶೇರು ಮಾರುಕಟ್ಟೆ ಮಾಹಿತಿ , ಸಾಪ್ತಾಹಿಕ ಸಂಪದ ಇವೆಲ್ಲಾ ನನಗೆ ಅಚ್ಚುಮೆಚ್ಚು . ಇವು ನನ್ನ ಜ್ಞಾನವರ್ಧನೆಗೆ ದಾರಿದೀಪವಾಗಿವೆ. ಅಲ್ಲದೆ ಇಲ್ಲಿ ಬಳಸಲಾಗುತ್ತಿರುವ ಭಾಷೆಯಿಂದ ನನ್ನ ಬರವಣಿಗೆಗೂ ಸಹಾಯವಾಗುತ್ತಿದೆ. ಪ್ರತಿದಿನ ಮುಂಬಯಿಯ ಲೋಕಲ್ ಟ್ರೈನ್‌ನಲ್ಲಿ ಒಂದು ತಾಸಿನ ಪ್ರಮಾಣದ ಕಾಲಾವಧಿಯಲ್ಲಿ ಇಡೀ ಪತ್ರಿಕೆಯನ್ನು ಓದಿ ಮುಗಿಸುತ್ತೇನೆ. “ಐವತ್ತರ ತಾರುಣ್ಯ’ದಲ್ಲಿರುವ ನನ್ನ ಮೆಚ್ಚಿನ ಉದಯವಾಣಿ ನೂರ್ಕಾಲ ಬಾಳಲಿ ಎಂದು ಹಾರೈಸುತ್ತೇನೆ.
ಸೋಮನಾಥ ಎಸ್. ಕರ್ಕೇರ, ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.