ಇನ್ನು ಬಲು ಸುಲಭ ಕೋವಿಡ್ ಫಲಿತಾಂಶ!
Team Udayavani, May 21, 2021, 7:10 AM IST
ಮನೆಯಲ್ಲೇ ಕೋವಿಡ್ ಪರೀಕ್ಷೆ ನಡೆಸುವ ಕೊವಿಸೆಲ್ಫ್ ಎಂಬ ಟೆಸ್ಟಿಂಗ್ ಕಿಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಒಪ್ಪಿಗೆ ನೀಡಿದೆ. ಇದೊಂದು ರ್ಯಾಪಿಡ್ ಆ್ಯಂಟಿಜೆನ್ ಮಾದರಿಯ ಟೆಸ್ಟ್ ಆಗಿದ್ದು, ಈ ಕಿಟ್‌ನ ಬಳಕೆ ಬಗ್ಗೆ ಮಾಹಿತಿ ಇಲ್ಲಿದೆ.
ಏನಿರುತ್ತೆ ಕಿಟ್‌ನಲ್ಲಿ? :
- ಬಳಕೆದಾರರ ಮಾಹಿತಿ ಚೀಟಿ
- ಪ್ರೀ-ಫಿಲ್ಡ್ ಎಕ್ಸ್‌ಟ್ರಾಕ್ಷನ್ ಟ್ಯೂಬ್
- ಹೈಜೀನ್ ಸ್ವಾಬ್
- ಟೆಸ್ಟಿಂಗ್ ಸ್ಟ್ರಿಪ್
- ತ್ಯಾಜ್ಯ ಬಿಸಾಡಲು ಪುಟ್ಟ ಪ್ಲಾಸ್ಟಿಕ್
ಟೆಸ್ಟ್‌ಗೂ ಮೊದಲು :
- ಮೊಬೈಲ್‌ನಲ್ಲಿ ಮೈಲ್ಯಾಬ್ ಕೊವಿಸೆಲ್ಫ್ ಆ್ಯಪ್ ಡೌನ್‌ಲೋಡ್ ಮಾಡಬೇಕು.
- ಆ್ಯಪ್‌ನಲ್ಲಿ ಪರೀಕ್ಷೆಗೊಳಪಡುವವರ ಹೆಸರು, ವಯಸ್ಸು ಇತ್ಯಾದಿ ಮಾಹಿತಿ ತುಂಬಬೇಕು.
- ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.
- ಸ್ವತ್ಛವಾದ ಟೇಬಲ್ ಅಥವಾ ಇತರ ಮೇಲ್ಮೆ„ ಮೇಲೆ ಕಿಟ್‌ಗಳಲ್ಲಿನ ವಸ್ತುಗಳನ್ನು ಹೊರತಗೆಯಬೇಕು.
ಕಟ್ಟುನಿಟ್ಟಾದ ಸೂಚನೆಗಳು :
- ಕೋವಿಡ್ ಗುಣಲಕ್ಷಣಗಳಿರುವವರು ಮಾತ್ರ ಈ ಕಿಟ್ ಬಳಸತಕ್ಕದ್ದು. ವಿವೇಚನಾ ರಹಿತವಾಗಿ ಸುಮ್ಮಸುಮ್ಮನೇ ಬಳಸುವಂತಿಲ್ಲ.
- ಕೋವಿಡ್ ದೃಢಪಟ್ಟಿರುವವರ ಪ್ರಾಥಮಿಕ ಸಂಪರ್ಕ ದಲ್ಲಿರುವವರು ಕೂಡ ಇದನ್ನು ಬಳಸಬಹುದು.
- ಪರೀಕ್ಷೆ ಮುಗಿದ ಅನಂತರ ಕಿಟ್‌ನಲ್ಲಿರುವ ಸ್ಟ್ರಿಪ್‌ನಲ್ಲಿ ಕಾಣಿಸುವ ಫಲಿತಾಂಶದ ಫೋಟೋ ತೆಗೆಯಬೇಕು.
- ಯಾವ ಮೊಬೈಲ್ ಸಂಖ್ಯೆಯಿಂದ ಮೈಲ್ಯಾಬ್ ಕೊವಿಸೆಲ್ಫ್ ಆ್ಯಪ್ ಡೌನ್‌ಲೋಡ್ ಮಾಡಲಾ ಗಿದೆಯೋ ಅದೇ ಮೊಬೈಲ್ ಸಂಖ್ಯೆಯಿಂದ ಸ್ಟ್ರಿಪ್‌ಫೋಟೋ ಅಪ್‌ಲೋಡ್ ಮಾಡಬೇಕು.
- ಕೋವಿಡ್ ಗುಣಲಕ್ಷಣಗಳಿದ್ದರೂ ಈ ಪರೀಕ್ಷೆ ಯಲ್ಲಿ ನೆಗೆಟಿವ್ ಬಂದರೆ ಅಂಥವರು ತತ್‌ಕ್ಷಣವೇ ಆರ್‌ಟಿ-ಪಿಸಿಆರ್ ಟೆಸ್ಟ್‌ಗೆ ಒಳಗಾಗಬೇಕು.
- ಸೆಲ್ಫ್ ಟೆಸ್ಟ್‌ನಲ್ಲಿ ನೆಗೆಟಿವ್ ಬಂದವರನ್ನು ಶಂಕಿತ ಕೊರೊನಾ ಸೋಂಕಿತರೆಂದು ಪರಿಗಣಿಸಲಾ ಗುತ್ತದೆ. ಅಂಥವರು, ಐಸಿಎಂಆರ್ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು.
ಬಳಕೆ ಹೇಗೆ? :
ಈ ಟೆಸ್ಟ್‌ನ ವಿಧಾನ ಹೇಗೆ ಎಂಬುದನ್ನು ಈ ಕಿಟ್ ತಯಾರಕ ಮೈಲ್ಯಾಬ್ ಕಂಪೆನಿ, ಯುಟ್ಯೂಬ್ ವೀಡಿಯೋದಲ್ಲಿ ತಿಳಿ ಸಿದೆ. ಅದರ ಕ್ಯು.ಆರ್. ಕೋಡ್ ಅನ್ನು ಮೇಲೆ ನೀಡಲಾಗಿದ್ದು, ಆಸಕ್ತರು ಅದನ್ನು ಸ್ಕ್ಯಾನ್ ಮಾಡಿ, ಕಿಟ್ ಬಳಕೆಯ ಹಾಗೂ ಪರೀಕ್ಷಾ ವಿಧಾನವನ್ನು ತಿಳಿಯಬಹುದು.
ಪ್ರಮುಖ ಪ್ರಯೋಜನ :
- ಕೇವಲ 15 ನಿಮಿಷಗಳಲ್ಲಿ ಫಲಿತಾಂಶ ಪಡೆಯಬಹುದು.
- ಮನೆಯಲ್ಲೇ ಬಳಸಬಹುದಾದ್ದರಿಂದ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ.
- ವಯಸ್ಸಾದವರಿಗೆ, ಸುಸ್ತಾದವರಿಗೆ ಹೆಚ್ಚು ಅನುಕೂಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ
Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.