ತಿನ್ನುವ ಆಹಾರದಿಂದ ಆರೋಗ್ಯ, ಆಯಸ್ಸಿನ ನಿರ್ಧಾರ


Team Udayavani, Jun 11, 2021, 6:40 AM IST

Untitled-1

ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಹೊಟ್ಟೆ ಅತ್ಯಂತ ಪ್ರಮುಖವಾಗಿದ್ದು, ನಾವು ತಿನ್ನುವ ಪ್ರತಿಯೊಂದು ಆಹಾರವೂ ಇಲ್ಲಿ ಶೇಖರಣೆಯಾಗಿ, ಅದನ್ನು ಸಂಪೂರ್ಣವಾಗಿ ಜೀರ್ಣವಾಗುವಂತೆ ಮಾಡಿ ದೇಹಕ್ಕೆ ಶಕ್ತಿ ಸಂಚಾರ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಸಿವಿನ ಸಮಯ ಬೇಗ ಅಥವಾ ವಿಳಂಬ, ತಿನ್ನುವ ಆಹಾರ ಕಡಿಮೆ ಅಥವಾ ಹೆಚ್ಚು ಎಲ್ಲವೂ ದೇಹದ ಮೇಲೆ ಸಂಪೂರ್ಣ ಪರಿಣಾಮ ಬೀರುತ್ತದೆ. ಹೀಗಾಗಿಯೇ ಸಮಯಕ್ಕೆ ಸರಿಯಾಗಿ ಹಿತಮಿತವಾದ ಆಹಾರ ಸೇವನೆ ಆರೋಗ್ಯಕರ ಬದುಕಿನ ಆಧಾರ ಎನ್ನಲಾಗುತ್ತದೆ.

ತಿನ್ನುವ ಆಹಾರದಲ್ಲಿ ವ್ಯತ್ಯಾಸಗಳಾದಾಗ ಸಾಮಾನ್ಯ ವಾಗಿ ಮಲಬದ್ಧತೆ, ಅಜೀರ್ಣ, ಎದೆಯುರಿ, ಗ್ಯಾಸ್ಟ್ರಿಕ್‌, ಹೊಟ್ಟೆಯ ಸೋಂಕು ಮತ್ತಿತರ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ. ಹೀಗಾಗಿ ಆರೋಗ್ಯಕರ ಆಹಾರ ಸೇವನೆ ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಸಮಯದ ಅಭಾವ, ಕೆಲಸದ ಒತ್ತಡ ಎಂದುಕೊಂಡು ಅತೀ ಶೀಘ್ರವಾಗಿ ಯಾವಾಗ ಬೇಕೋ ಆವಾಗ ಏನು ಸಿಗುತ್ತದೋ ಅದನ್ನು ತಿಂದುಬಿಡುತ್ತೇವೆ. ಇದರ ಪರಿಣಾಮವೇ ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಅಹಮನ್ನಮ್‌ (ಆಹಾರವೇ ನಾನು) ಎನ್ನುವ ತೈತ್ತಿರೀಯ ಉಪನಿಷತ್ತಿನ ಮಹಣ್ತೀಪೂರ್ಣ ವಾಕ್ಯ. ನಮ್ಮ ಎಲ್ಲ ಚಟುವಟಿಕೆಗಳಿಗೆ ಬೇಕಾಗುವ ಶಕ್ತಿಯ ಮೂಲ ಆಹಾರ. ಹಾಗಾಗಿಯೇ ಬದುಕಲಿಕ್ಕಾಗಿ ತಿನ್ನಬೇಕು ತಿನ್ನಲಿಕ್ಕಾಗಿ ಬದುಕಲ್ಲ ಎನ್ನುವ ನಾಣ್ಣುಡಿ.  ಆದರೆ ನಮ್ಮ ಬದುಕು ತಿನ್ನುವ ಆಹಾರದ ಪ್ರತಿಬಿಂಬ. ಕೇವಲ ದೈಹಿಕಶಕ್ತಿಯಲ್ಲದೆ ನಮ್ಮ ಸ್ವಭಾವ ಯೋಚನಾ ಕ್ರಮಗಳೂ ಆಹಾರದಿಂದ ನಿರ್ಧರಿಸಲ್ಪಡುತ್ತವೆ ಎಂಬ ನಮ್ಮ ಪೂರ್ವಜರು ಕಂಡುಕೊಂಡ ಹಳೆಯ ಸತ್ಯವೇ ಕರುಳು-ಮಿದುಳಿನ ಸಂವಹನ (Gut brain Axis) ಎಂಬ ನವೀನ ಸಿದ್ಧಾಂತ.  ನಿಮ್ಮ ಆಹಾರವು ವ್ಯಕ್ತಿತ್ವ ವನ್ನು ನಿರ್ಧರಿಸುತ್ತದೆ ಎಂದಾಗ ವಂಗ್ಯ ನಗೆ ಬೀರಿದ ಆಧುನಿಕರು ಬೆನ್ನು ತಟ್ಟಿಕೊಳ್ಳುತ್ತಾ ಪ್ರಕಟಿಸಿರುವ ಅತ್ಯಾಧುನಿಕ ಆವಿಷ್ಕಾರ!

ಜೀರ್ಣಕ್ರಿಯೆ ಎಂದರೇನು?

ಆಹಾರದಲ್ಲಡಗಿರುವ ಶಕ್ತಿಯನ್ನು ಕ್ರಿಯಾರೂಪಕ್ಕೆ ತರುವ ಎಂಜಿನ್‌ ನಮ್ಮ ದೇಹ. ಶಕ್ತಿ ಉತ್ಪಾದಿಸುವ ಕ್ರಿಯೆಯೇ ಜೀರ್ಣ ಕ್ರಿಯೆ. ಎಲ್ಲ ಕೆಲಸಕ್ಕೂ ಶಕ್ತಿ ಬೇಕು. ಆದರೆ ಅತ್ಯಂತ ಹೆಚ್ಚು ಶಕ್ತಿಯ ಅಗತ್ಯವಿರು ವುದು ತಿಂದ ಆಹಾರವನ್ನು ಜೀರ್ಣಿಸುವುದಕ್ಕಾಗಿ ಎನ್ನುವುದು ವಿಡಂಬನೆ.  ಜೀವನದುದ್ದಕ್ಕೂ ಉತ್ಪಾದಿಸಿದ ಮೂರನೇ ಎರಡರಷ್ಟು ಶಕ್ತಿ ತಿಂದದನ್ನು ಜೀರ್ಣಿಸಲು ಉಪಯೋಗವಾಗುತ್ತದೆ. ಜೀವನದ ಅತ್ಯಂತ ಮಹತ್ಕಾರ್ಯವೆಂದರೆ ತಿನ್ನುವುದು ಮತ್ತು ತಿಂದದ್ದನ್ನು ಹೊರಹಾಕುವುದು ಎನ್ನುವ ಗೇಲಿಮಾತು ವೈಜ್ಞಾನಿಕವಾಗಿಯೂ ಸತ್ಯ.

ಬೇರಾವ ಶ್ರಮಕ್ಕೂ ಅಷ್ಟು ಶಕ್ತಿ ಬೇಕಾಗುವುದಿಲ್ಲ ಎನ್ನುವುದು ಆಶ್ಚರ್ಯವಾದರೂ ನಿಜ. ದೇಹದ ಎಂಜಿನ್‌ ಸುಸ್ಥಿತಿಯಲ್ಲಿದ್ದು ಹೆಚ್ಚು ಕಾಲ ಬಾಳಬೇಕಿದ್ದರೆ ಈಶಕ್ತಿವ್ಯಯವನ್ನು ಕಡಿಮೆಗೊಳಿಸಬೇಕು. ಗ್ಯಾರೇಜ್‌ಭಾಷೆಯಲ್ಲಿ ಐಡ್ಲಿಂಗ್‌ (Idling) ಕಡಿಮೆ ಮಾಡಬೇಕು. ಎಂಜಿನ್‌ಗೆ ತುಂಬಿಸುವ ಇಂಧನದ  ಗುಣ ಮಟ್ಟ ಇದಕ್ಕೆ ನಿರ್ಣಾಯಕವಾಗು ವಂತೆ ನೀವು ತಿನ್ನುವ ಆಹಾರವೇ ನಿಮ್ಮ ಎಂಜಿನ್‌ನ ಬಾಳಿಕೆಯನ್ನು ನಿರ್ಧರಿಸುತ್ತದೆ. ಹೆಚ್ಚು ತಿಂದರೆ ಹೆಚ್ಚು ಸವೆತ; ಅದ ಕ್ಕಾಗಿಯೇ ತಿನ್ನುವುದಕ್ಕಾಗಿ ಬದುಕಬೇಡ ಎನ್ನುವುದು

ಸುಲಭವಾಗಿ ಜೀರ್ಣವಾಗುವ ಆಹಾರ :

 ಆಹಾರದಲ್ಲಡಗಿರುವ ಶಕ್ತಿಯನ್ನು ಅಳೆಯಲು ಉಪಯೋಗಿಸುವ ಮಾಪಕ ಅದರ ಶಾಖೋತ್ಪನ್ನ ಸಾಮರ್ಥ್ಯ (Calorigenecity) ಹೆಚ್ಚು ಶಕ್ತಿ ತುಂಬಿದ ಗುರು ಮತ್ತು ಕಡಿಮೆ ಶಕ್ತಿ ತುಂಬಿದ ಆಹಾರ ಲಘು  (High and low calorie diet ) ಎನ್ನುವ ಶಬ್ದಗಳು ಕೆಲವೊಮ್ಮೆ ದಾರಿ ತಪ್ಪಿಸುವ ಸಂಕೇತ ಗಳಾಗುತ್ತವೆ. ಹೆಚ್ಚು ಕ್ಯಾಲೋರಿಯಿರುವ ಆಹಾರ ದಿಂದ ಶಕ್ತಿಯ ಬಿಡುಗಡೆಯಾಗಬೇಕಿದ್ದರೆ ಹೆಚ್ಚು ಶಕ್ತಿ ಖರ್ಚಾಗುತ್ತದೆ ಮತ್ತು ಎಂಜಿನ್‌ನ ಸವಕಳಿ ಹೆಚ್ಚುತ್ತದೆ. ಹಾಗಾಗಿ ಗುಣ ಮತ್ತು ಪ್ರಮಾಣ ಇವೆರಡರಲ್ಲೂ ಲಘು ಆಹಾರ ಉತ್ತಮ. ಅದನ್ನೇ ಪಥ್ಯ ಎನ್ನುತ್ತಾರೆ.

ಸೇವಿಸಿದ ಎರಡು ಗಂಟೆಯೊಳಗೆ ಜೀರ್ಣವಾಗುವ ಮತ್ತು ಸುಲಭವಾಗಿ ಮಲವನ್ನು ತಳ್ಳುವ ಆಹಾರ ಲಘು ಎನ್ನುವುದು ಆಯುರ್ವೇದದಲ್ಲಿ ಹೇಳಿರುವ ಸೂತ್ರ. ತೇಗುಬಂದಾಗ ಅದರೊಡನೆ ತಿಂದ ಆಹಾರದ ವಾಸನೆಯಿಲ್ಲದಿರುವುದು ಮತ್ತು ಹೊಟ್ಟೆಯಲ್ಲಿ ಹಗುರತನದ ಅನುಭವ ಜೀರ್ಣವಾಗಿರುವ ಲಕ್ಷಣ. ಒಮ್ಮೆ ತಿಂದ ಆಹಾರವು ಜೀರ್ಣ ವಾಗದೆ ಇನ್ನೊಮ್ಮೆ ತಿನ್ನುವಂತಿಲ್ಲ ಎನ್ನುವುದು ಸಾಮಾನ್ಯ ಜ್ಞಾನ.

ಯಾವುದೇ ಆಹಾರವನ್ನು ಹೊಟ್ಟೆ ತುಂಬಾ ತಿನ್ನಬಾರದು. ಹೊಟ್ಟೆಯ ಮೂರನೇ ಒಂದ ರಷ್ಟು ಭಾಗ ಯಾವಾಗಲೂ ಖಾಲಿ ಬಿಡಬೇಕು ಎನ್ನುವುದು ನಿರಂತರ ಪಾಲಿಸಬೇಕಾದ ಸೂತ್ರ. ಗುರು ಆಹಾರ ಅರ್ಧಕ್ಕಿಂತ ಹೆಚ್ಚಾಗಲೇ ಬಾರದು. ತಿನ್ನುವ ಆಹಾರವು ಸ್ವತ್ಛ ಮತ್ತು ಹೊಸದಾಗಿ ತಯಾರಿಸಿದ್ದಿರಬೇಕು.

ಅನ್ನಕಾಲ ಎನ್ನುವ ಕಲ್ಪನೆ ಆಯುರ್ವೇದದ ವಿಶಿಷ್ಟ ಆರೋಗ್ಯ ಸೂತ್ರ. ಮಲ ಪ್ರವೃತ್ತಿಯ ಬಳಿಕ ದೇಹದಲ್ಲಿ ಹಗುರತನದ ಅನುಭವ ಮತ್ತು ಹಸಿವೆ ಆದಾಗ ಇಷ್ಟವಾದುದನ್ನು ಮತ್ತು ಹಿತವಾದುದನ್ನು ಹಿತಜನರೊಂದಿಗೆ ಮನವಿರಿಸಿ ತಿನ್ನಬೇಕು ಎನ್ನುವುದು ಸಾರ್ವ ಕಾಲಿಕ ಹಿತೋಪದೇಶ. ನಿಯಮ ಮೀರಿ ಹಿತವಲ್ಲದ್ದನ್ನು ತಿಂದಾಗ ಉಂಟಾಗುವ ವಿಷೋತ್ಪನ್ನವೇ ಆಮ (Oxidants) ಮತ್ತು ಇದು ಎಲ್ಲ ರೋಗ ಗಳಿಗೂ ಮೂಲಕಾರಣ. ಮಲದ ಪರೀಕ್ಷೆಯಿಂದ ಜೀರ್ಣಕ್ರಿಯೆಯ ಗುಣಮಟ್ಟ ಪರೀಕ್ಷಿಸಬಹುದು.

ಈ ಎಲ್ಲ ಸೂತ್ರಗಳೂ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಅಳವಡಿಕೆಯಾಗಿದ್ದುವು. “ನಮ್ಮ ಆರೋಗ್ಯ ನಮ್ಮ ಅಡುಗೆ ಮನೆಯಲ್ಲಿದೆ’ ಎನ್ನುವ ಎಚ್ಚರ ಇಂದಿನ ಸಮಾಜಕ್ಕೆ ಸಂದೇಶವಾಗಬೇಕಾಗಿದೆ.

ಅಜೀರ್ಣಕ್ಕೆ  ಪರಿಹಾರವೇನು? :

ತಿಂದ ಆಹಾರ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ ಎನ್ನುವವರು ಆಹಾರ ತಿಂದ ಕೂಡಲೇ ಬಿಸಿ ನೀರನ್ನು ಕುಡಿಯಬೇಕು. ಪ್ರತೀ ದಿನ ಬೆಳಗ್ಗೆ ಅಥವಾ ಊಟಕ್ಕೆ ಅರ್ಧಗಂಟೆ ಮೊದಲು ಬಿಸಿ ನೀರನ್ನು ಸೇವಿಸು ವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಅಲ್ಲದೇ ಅಜೀರ್ಣ ಸಮಸ್ಯೆಯನ್ನು ತಪ್ಪಿಸಲು ಸಮಯಕ್ಕೆ ಸರಿ ಯಾಗಿ ಆಹಾರ ಸೇವನೆ ಮಾಡುವುದು ಅತ್ಯಗತ್ಯ. ನಾವು ಯಾವ ರೀತಿಯ ಆಹಾರ ಸೇವನೆ ಮಾಡುತ್ತೇವೆ ಎನ್ನುವುದು ಕೂಡ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕುಳಿತು, ಆರಾಮ ವಾಗಿ ಆಹಾರ ಸೇವನೆಯನ್ನು ಆನಂದಿಸಬೇಕು ಸಾಕಷ್ಟು ನೀರು ಕುಡಿಯುವುದರಿಂದ ದೇಹ ಸ್ವತ್ಛವಾ ಗುವುದಲ್ಲದೆ ಅಜೀರ್ಣವಾಗದಂತೆ ತಡೆಯುತ್ತದೆ.

ಪ್ರತೀ ನಿತ್ಯ ಆಹಾರದಲ್ಲಿ ತರಕಾರಿ, ಹಣ್ಣು ಬಳಕೆ ಮಾಡುವುದರಿಂದ ಜೀರ್ಣಕ್ರಿಯೆ ಸುಲಭವಾಗು ವುದು. ಆಹಾರ ಸೇವನೆಯ ಕೂಡಲೇ ಕುಳಿತು ಕೊಳ್ಳುವುದು, ಮಲಗುವುದು ಆಹಾರ ಅಜೀರ್ಣತೆಗೆ ಕಾರಣವಾಗುತ್ತದೆ. ಹೆಚ್ಚು ಬೆಣ್ಣೆ, ತುಪ್ಪ, ಎಣ್ಣೆಯ ಅಂಶವುಳ್ಳ ಆಹಾರದಿಂದ ದೂರವಿದ್ದು ಪ್ರೊಟೀನ್‌ಯುಕ್ತ ಆಹಾರ ಸೇವನೆ ಮಾಡುವುದರಿಂದ ಆರೋಗ್ಯವಾಗಿರಬಹುದು.

 

-ಡಾ| ಮುರಳೀಧರ ಶರ್ಮಾ,

ಆಯುರ್ವೇದ ತಜ್ಞರು,ಉಡುಪಿ

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.