ಪರಿಸರ ಪ್ರಿಯ ಗಣಪತಿ ಎಲ್ಲರ ಕಾಳಜಿಯಾಗಿರಲಿ


Team Udayavani, Sep 10, 2021, 11:20 AM IST

ಪರಿಸರ ಪ್ರಿಯ ಗಣಪತಿ ಎಲ್ಲರ ಕಾಳಜಿಯಾಗಿರಲಿ

50 ವರ್ಷಗಳಿಂದ ಗಣಪತಿ ವಿಗ್ರಹ  ರಚಿಸುತ್ತಿರುವ ಶಿರೂರು ಮೇಸ್ತ ಕುಟುಂಬ :

ಬೈಂದೂರು: ಶಿರೂರಿನ ಮೇಸ್ತ ಕುಟುಂಬದವರು ಕಳೆದ 50 ವರ್ಷಗಳಿಂದ ಗಣಪತಿ ವಿಗ್ರಹ ರಚಿಸುತ್ತಿದ್ದಾರೆ.

ಪ್ರತೀ ವರ್ಷ ಸುಮಾರು 60 ಗಣಪತಿ ವಿಗ್ರಹ ನಿರ್ಮಿಸಲಾಗುತ್ತದೆ. ತಲೆತಲಾಂತರ ದಿಂದ ನಡೆಸಿಕೊಂಡು ಬರುತ್ತಿರುವ ಈ ಕಾಯಕವನ್ನು ಪ್ರಸ್ತುತ ನಾಗರಾಜ ಮೇಸ್ತ ಕಳೆದ 15 ವರ್ಷಗಳಿಂದ ಮುಂದುವರಿಸಿಕೊಂಡು ಬರು ತ್ತಿದ್ದಾರೆ. ಇಡಗುಂಜಿ ಗಣಪತಿ, ಗೌರಿ ಗಣೇಶ ಇವರ ವಿಶೇಷ ಮೂರ್ತಿಗಳಾಗಿವೆ. ಶಿರೂರು, ದೊಂಬೆ, ಅಳ್ವೆಗದ್ದೆ, ಆಲಂದೂರು, ಗೋರ್ಟೆ ಮುಂತಾದ ಊರುಗಳಿಗೆ ಇವರು ರಚಿಸಿದ ಗಣೇಶನನ್ನು ಕೊಂಡ್ಯೊಯ್ಯಲಾಗುತ್ತದೆ.

ಶಿರಸಿಯ ಆಮ್ನಹಳ್ಳಿಯಿಂದ ಜೇಡಿ ಮಣ್ಣನ್ನು ತರಲಾಗುತ್ತದೆ. ಎರಡು ತಿಂಗಳುಗಳಿಂದ ವಿಗ್ರಹ ರಚನೆ ಕಾರ್ಯ ದಲ್ಲಿ ತೊಡಗಿಸಿಕೊಳ್ಳುತ್ತೇವೆ.  ಸಹೋದರ ಆನಂದ ಮೇಸ್ತ ಸಹಕಾರ ನೀಡುತ್ತಿದ್ದಾರೆ. ಅತ್ಯಂತ ತಾಳ್ಮೆ ಮತ್ತು ಸಂಯಮ ಬೇಕಾಗುತ್ತದೆ ಎನ್ನುವುದು ನಾಗರಾಜ ಮೇಸ್ತ ಅವರ ಅಭಿಪ್ರಾಯವಾಗಿದೆ.

ಸಾಮಾನ್ಯವಾಗಿ ಹಿರಿಯ ತಲೆಮಾರುಗಳ ನಡುವೆ ಯುವ ಪೀಳಿಗೆ ಇದನ್ನು ಮೈಗೂಡಿಸಿ ಕೊಳ್ಳುವುದು ಕಡಿಮೆ. ಅಂತಹದರಲ್ಲಿ ಶಿರೂರಿನ ನಾಗರಾಜ ಮೇಸ್ತ ಅತ್ಯಂತ ಆಸಕ್ತಿಯಿಂದ ವಿಗ್ರಹ ರಚನೆ ಮಾಡುತ್ತಿರುವುದು ಯುವ ಸಮುದಾಯಕ್ಕೆ ಮಾದರಿಯಾಗಿದೆ.

ನೈಸರ್ಗಿಕ ವಸ್ತುಗಳಿಂದ ವಿಗ್ರಹ ರಚಿಸುವ  ಚಂದ್ರಶೇಖರ್‌ ನಾಯಕ್‌ :

ತೆಕ್ಕಟ್ಟೆ:  ಗ್ರಾಮೀಣ ಭಾಗದಲ್ಲಿ  ಕಳೆದ 25 ವರ್ಷಗಳಿಂದಲೂ ನೈಸರ್ಗಿಕವಾದ ವಸ್ತುಗಳನ್ನೇ ಬಳಸಿ ಗಣಪತಿ ವಿಗ್ರಹ ರಚನೆಯಲ್ಲಿ ಕುಂದಾಪುರ ತಾಲೂಕಿನ  ಹುಣ್ಸೆಮಕ್ಕಿ ಚಂದ್ರಶೇಖರ್‌ ನಾಯಕ್‌ ತೊಡಗಿಸಿಕೊಂಡಿದ್ದಾರೆ.

ಸಾಂಪ್ರದಾಯಿಕ ವಿಗ್ರಹ ರಚನೆಗೆ  ಆವೆ ಮಣ್ಣು, ರಾಸಾಯನಿಕ ಮುಕ್ತ ಬಣ್ಣಗಳ ಬಳಕೆಯೊಂದಿಗೆ ಈರುಳ್ಳಿ ಚೀಲಗಳಿಗೆ ಆವೆ ಮಣ್ಣು ಲೇಪಿಸಿ ಅತ್ಯಂತ ಹಗುರವಾದ ವಿಗ್ರಹ ರಚನೆ ವಿಗ್ರಹ ಸಿದ್ಧಗೊಂಡಿರು ವುದು ಕೂಡ ವಿಶೇಷ. ಸುಮಾರು ಎರಡುವರೆ ಕೆ.ಜಿ. ಭಾರ ಹೊಂದಿದ ವಿಗ್ರಹಗಳು ಅತ್ಯಂತ ಸುರಕ್ಷಿತವಾಗಿ ಕೊಂಡೊಯ್ಯಬಲ್ಲದ್ದಾಗಿದ್ದು, ಈ ವಿಗ್ರಹವನ್ನು ಕುಡಿಯುವ ನೀರಿನ ಬಾವಿಯಲ್ಲಿಯೂ ಕೂಡ ವಿಸರ್ಜನೆ ಮಾಡಬಹುದಾಗಿದೆ.

ಈ ಬಾರಿ ಆಚರಣೆಯ ಗೊಂದಲದಿಂದಾಗಿ ಗಣಪತಿ ಇರಿಸುವ ಮಂಚ ಬರಲು ವಿಳಂಬವಾದ ಪರಿಣಾಮ   ಹಗಲು ರಾತ್ರಿ ವಿಗ್ರಹ ರಚನೆಯಲ್ಲಿ ತೊಡಗಿಸಿ ಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಬಾರಿ 23 ಸಾರ್ವಜನಿಕ ಗಣೇಶೋತ್ಸವ ಸಮಿತಿ ವಿಗ್ರಹ ರಚನೆ ಸೇರಿದಂತೆ ಒಟ್ಟು 79 ವಿಗ್ರಹಗಳನ್ನು ರಚಿಸಲಾಗಿದ್ದು, ಮಂಗಳೂರು, ಉಡುಪಿ, ಕುಂದಾಪುರ, ಮೊದಲಾದೆಡೆಗೆ ವಿಗ್ರಹ ಕೊಂಡೊಯ್ಯುತ್ತಿದ್ದಾರೆ ಎಂದು ಚಂದ್ರಶೇಖರ್‌  ಹೇಳುತ್ತಾರೆ.

ಪರಿಸರ ಪ್ರೇಮಿ ಗಣಪತಿ  ತಯಾರಕ ಗಣೇಶ್‌ ನಾಯಕ್‌ :

ಅಜೆಕಾರು: ಕಳೆದ 41 ವರ್ಷಗಳಿಂದ ಪರಿಸರ ಪ್ರೇಮಿ ಗಣಪತಿ ತಯಾರಿಸುತ್ತಿರುವ ಎಣ್ಣೆಹೊಳೆ ಪ್ರೇಮಾನಂದ ನಾಯಕ್‌ ಅವರು ಜನರ ಬಾಯಲ್ಲಿ ಗಣೇಶ್‌ ನಾಯಕ್‌ ಎಂದು ಪ್ರಸಿದ್ಧಿ ಪಡೆದಿದ್ದಾರೆ.

ಕಾರ್ಕಳ, ಕುಂದಾಪುರ, ಬೆಳ್ತಂಗಡಿ ತಾಲೂಕಿನ ಹಲವಾರು ಗಣೇಶೋತ್ಸವಗಳಲ್ಲಿ ಇವರು ತಯಾರಿಸಿದ ಗಣಪತಿಯನ್ನೇ ಪೂಜಿಸಲಾಗುತ್ತಿದೆ.

ಕಳೆದ 41 ವರ್ಷಗಳಿಂದ ಪರಿಸರಸ್ನೇಹಿ ಗಣಪತಿ  ಪೂಜಿಸುವವರು  ಇವರನ್ನು ಪ್ರೀತಿಯಿಂದ ಗಣೇಶ್‌ ನಾಯಕ್‌ ಎಂದು ಕರೆಯಲಾಗುತ್ತದೆ.

ಪ್ರತೀ ವರ್ಷ ಸುಮಾರು 226  ಗಣಪತಿ ವಿಗ್ರಹ ತಯಾರಿಸುವ ಇವರು  ಇದರಲ್ಲಿ 62 ಸಾರ್ವಜನಿಕ ಗಣಪತಿಯನ್ನು ತಯಾರಿಸುತ್ತಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಗಣಪತಿ ವಿಗ್ರಹ ತಯಾರು ಮಾಡುವ ಹೆಗ್ಗಳಿಕೆ ಇವರದ್ದಾಗಿದೆ. ಪ್ರಸ್ತುತ ಎಣ್ಣೆಹೊಳೆ, ಕಾರ್ಕಳ ಎರಡು ಕಡೆ ಗಣಪತಿ ತಯಾರಿಸುತ್ತಾರೆ.

ಇವರ ಜತೆ ಸುದರ್ಶನ್‌ ಗುಡಿಗಾರ್‌, ಈರಣ್ಣ ಹಾಗೂ ಗಾಯತ್ರಿ ಅವರು ಸಹಕರಿಸುತ್ತಾರೆ. ಸಂಪೂರ್ಣ ಆವೆಮಣ್ಣಿನಿಂದ ತಯಾರಿಸಿ,  ನೀರಿನಲ್ಲಿ ಕರಗುವ ಬಣ್ಣವನ್ನಷ್ಟೆ ವಿಗ್ರಹಕ್ಕೆ ಹಾಕುವುದರಿಂದ ಇವರು ತಯಾರಿಸುವ ಗಣಪತಿ ವಿಗ್ರಹಕ್ಕೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗಿದೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.