ಎಂಟರೊಳಗಿನ ಚಿಣ್ಣರಿಗೆ ಪಂಚಕೋಶ ಪಠ್ಯ
Team Udayavani, Oct 28, 2022, 6:00 AM IST
ಏನಿದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು? :
ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರವಾಗಿ ಕೇಂದ್ರ ಶಿಕ್ಷಣ ಇಲಾಖೆ ಈ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಬಿಡು ಗಡೆ ಮಾಡಿದೆ. ಅಂದರೆ ಈ ಪಠ್ಯಕ್ರಮ ಚೌಕಟ್ಟಿನ ಮೂಲಕ ಶಾಲಾ ಸಿಲೆಬಸ್, ಪಠ್ಯಪುಸ್ತಕಗಳ ರಚನೆ ಮತ್ತು ಶಿಕ್ಷಣ ಬೋಧನೆ ಕುರಿತಂತೆ ತರಬೇತಿ ನೀಡಲಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಒಟ್ಟಾರೆಯಾಗಿ ನಾಲ್ಕು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಬಿಡುಗಡೆ ಮಾಡಲಾಗುತ್ತದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಗುರುವಾರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2022 ಅನ್ನು ಬಿಡುಗಡೆಗೊಳಿಸಿದ್ದಾರೆ. ಇದನ್ನು ಬುನಾದಿ ಹಂತ ಮತ್ತು ಬಾಲವಾಟಿಕಾ ಹಂತಕ್ಕಾಗಿ ಬಿಡು ಗಡೆ ಮಾಡಲಾಗಿದೆ. ಆರಂಭದಲ್ಲಿ ದೇಶದಲ್ಲಿ ರುವ 50 ಕೇಂದ್ರೀಯ ವಿದ್ಯಾಲಯಗಳ ಬಾಲವಾಡಿ ಗಳಲ್ಲಿ ಇದನ್ನು ಪ್ರಯೋಗಾತ್ಮಕವಾಗಿ ಜಾರಿ ಮಾಡ ಲಾಗುತ್ತಿದ್ದು, ಬಳಿಕ ಎಲ್ಲೆಡೆ ಜಾರಿ ಮಾಡಲಾಗುತ್ತದೆ.
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ನಾಲ್ಕು ವಿಭಾಗಗಳು :
- ಮಕ್ಕಳ ಆರಂಭಿಕ ಕಾಳಜಿ ಮತ್ತು ಶಿಕ್ಷಣ
(ಅರ್ಲಿ ಚೈಲ್ಡ್ ವುಡ್ ಕೇರ್ ಆ್ಯಂಡ್ ಎಜುಕೇಶನ್(ಎನ್‌ಸಿಎಫ್ಇಸಿಸಿಇ).
- ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು(ನ್ಯಾಶನಲ್ ಕ್ಯುರಿಕಲಮ್ ಫ್ರೇಮ್‌ವರ್ಕ್ ಫಾರ್ ಸ್ಕೂಲ್ ಎಜುಕೇಶನ್(ಎನ್‌ಸಿಎಫ್ಎಸ್‌ಇ)
- ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು(ನ್ಯಾಶನಲ್ ಕ್ಯುರಿಕಲಮ್ ಫ್ರೇಮ್ ವರ್ಕ್ ಫಾರ್ ಟೀಚರ್ ಎಜುಕೇಶನ್(ಎನ್‌ಸಿಎಫ್ಟಿಇ)
- ವಯಸ್ಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ನ್ಯಾಶನಲ್ ಕ್ಯುರಿಕಲಮ್ ಫ್ರೇಮ್‌ವರ್ಕ್ ಫಾರ್ ಅಡಲ್ಟ್ ಎಜುಕೇಶನ್(ಎನ್‌ಸಿಎಫ್ಎಇ)
ವಸಂತ ಪಂಚಮಿಗೆ ಪಠ್ಯಕ್ರಮ ಸಿದ್ಧ
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಬಿಡುಗಡೆ ಮಾಡಿ ದ ಅನಂತರ ಮಾಹಿತಿ ನೀಡಿದ ಸಚಿವ ಧರ್ಮೇಂದ್ರ ಪ್ರಧಾನ್, ಇಡೀ ರಾಷ್ಟ್ರೀಯ ಶಿಕ್ಷಣ ನೀತಿ ಯಲ್ಲಿ 3-8 ವರ್ಷದೊಳಗಿನ ಹಂತ ಬಹು ಮುಖ್ಯ ವಾದದ್ದು ಎಂದಿದ್ದಾರೆ. ಜತೆಗೆ ಶೇ.85ರಷ್ಟು ಮೆದುಳು ಇದೇ ಅವಧಿಯಲ್ಲಿ ಅಭಿವೃದ್ಧಿಯಾಗುತ್ತದೆ. ಹೀಗಾಗಿ ಈ ಕಡೆ ಹೆಚ್ಚು ಗಮನ ನೀಡಲಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಪಠ್ಯಕ್ರಮ ರೂಪಿಸುವ ಎನ್‌ಸಿಇಆರ್‌ಟಿಯು ವಸಂತ ಪಂಚಮಿ, ಅಂದರೆ ಮುಂದಿನ ಜ.26ರ ವೇಳೆಗೆ ಹೊಸ ಸಿಲೆಬಸ್, ಪಠ್ಯ ಪುಸ್ತಕಗಳು ಮತ್ತು ಇತರೆ ಅತ್ಯಗತ್ಯ ಮಾದರಿಗಳನ್ನು ರೂಪಿ ಸಲಿದೆ ಎಂಬ ಭರವಸೆ ಇದೆ ಎಂದಿದ್ದಾರೆ. ಅಲ್ಲದೆ ಎನ್‌ಸಿಇಆರ್‌ಟಿಯು, ರಾಜ್ಯಗಳ ಪಠ್ಯಪುಸ್ತಕ ರಚನೆ ಮಾಡುವವರ ಜತೆ ಚರ್ಚಿಸಲಿದೆ. ಹಾಗೆಯೇ ಎನ್ ಸಿ ಇಆರ್‌ಟಿಯ ಶಿಫಾರಸುಗಳ ಮೇಲೆ ರಾಜ್ಯಗಳೂ ಪಠ್ಯಕ್ರಮ ರೂಪಿಸಿಕೊಳ್ಳಲಿವೆ ಎಂದು ಹೇಳಿದ್ದಾರೆ.
ಮಕ್ಕಳಿಗಾಗಿ ಪಂಚಕೋಶ :
ಮಕ್ಕಳ ಕಲಿಕೆಗಾಗಿ ಪಂಚಕೋಶ ವಿಕಾಸ ಎಂಬ ಐದು ವಿಭಾಗಗಳನ್ನು ಮಾಡಿಕೊಳ್ಳಲಾಗಿದೆ. ಈ ಮೂಲಕವೇ ಪಠ್ಯಕ್ರಮ ರೂಪಿಸಿ ಕಲಿಸಲಾಗುತ್ತದೆ. ಇವುಗಳನ್ನು ಭಾರತದ ಪುರಾತನ ಶಿಕ್ಷಣ ಪದ್ಧತಿಯಲ್ಲಿ ಬಳಕೆ ಮಾಡಿ, ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಲಾಗುತ್ತಿತ್ತು. ಇವುಗಳನ್ನೇ ಆಧಾರವಾಗಿಟ್ಟುಕೊಂಡು ಈಗ ಪಂಚಕೋಶ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
1.ಅನ್ನಮಯ ಕೋಶ ಅಥವಾ ಶಾರೀರಿಕ ವಿಕಾಸ :
ಮಗುವಿನ ಬೆಳವಣಿಗೆಯಲ್ಲಿ ಈ ಹಂತ ಮುಖ್ಯ ವಾದದ್ದು. ಹೀಗಾಗಿ ಅವುಗಳ ದೈಹಿಕ ಬೆಳವಣಿಗೆ, ದೈಹಿಕ ಸದೃಢತೆ, ನಮ್ಯತೆ, ಸಾಮರ್ಥ್ಯ ಮತ್ತು ಸಹಿ ಷ್ಣುತೆಯನ್ನು ಬೆಳೆಸಲಾಗುತ್ತದೆ. ಹಾಗೆಯೇ ಇಂದ್ರಿ ಯ ಗಳ ಅಭಿವೃದ್ಧಿ, ಪೌಷ್ಟಿಕಾಂಶ, ಸ್ವತ್ಛತೆ, ವೈಯಕ್ತಿಕ ಆರೋಗ್ಯ, ದೈಹಿಕ ಸಾಮರ್ಥ್ಯದ ವಿಸ್ತರಣೆ ಹಾಗೂ ದೀರ್ಘಾವಧಿವರೆಗೆ ಬೆಳೆಯಲು ಬೇಕಾದ ಸಾಮರ್ಥ್ಯದ ಕಡೆ ಒತ್ತು ನೀಡಲಾಗುತ್ತದೆ.
- ಪ್ರಾಣಮಯ ಕೋಶ ಅಥವಾ ಪ್ರಾಣಿಕ್ ವಿಕಾಸ :
ಸಮತೋಲನ ಮತ್ತು ಶಕ್ತಿ ಧಾರಣೆ, ಧನಾತ್ಮಕ ಶಕ್ತಿ ಮತ್ತು ಉತ್ಸಾಹ, ದೇಹದ ಎಲ್ಲ ವ್ಯವಸ್ಥೆ (ಜೀರ್ಣವ್ಯವಸ್ಥೆ, ಉಸಿರಾಟ, ರಕ್ತ ಪರಿಚಲನ ಮತ್ತು ನರಮಂಡಲದ ವ್ಯವಸ್ಥೆ)ಗಳ ಉತ್ತಮವಾಗಿ ಕಾರ್ಯ ನಿರ್ವಹಣೆ, ನರಮಂಡಲದ ಸೂಕ್ಷ್ಮ ಕಾರ್ಯ ನಿರ್ವಹಣೆಯ ಬಗ್ಗೆ ಗಮನ ಹರಿಸುವುದು.
- ಮನೋಮಯ ಕೋಶ ಅಥವಾ ಮಾನಸಿಕ ವಿಕಾಸ :
ಏಕಾಗ್ರತೆ, ಶಾಂತಿ, ಆತ್ಮಶಕ್ತಿ, ಧೈರ್ಯ, ನಕಾರಾತ್ಮಕ ವಿಚಾರಗಳ ನಿರ್ವಹಣೆ, ಮೌಲ್ಯವರ್ಧನೆ, ಕೆಲಸ, ಜನ ಮತ್ತು ಪರಿಸ್ಥಿತಿಯ ಮೇಲೆ ಆಸಕ್ತಿ ಅಥವಾ ವಿಮುಕ್ತಿ, ಸಂತೋಷ, ದೃಶ್ಯ ಮತ್ತು ಪ್ರದರ್ಶನ ಕಲೆಗಳು, ಸಂಸ್ಕೃತಿ ಮತ್ತು ಸಾಹಿತ್ಯ.
- ವಿಜ್ಞಾನಮಯ ಕೋಶ ಅಥವಾ ಬೌದ್ಧಿಕ ವಿಕಾಸ:
ಅವಲೋಕನ, ಪ್ರಯೋಗ, ವಿಶ್ಲೇಷಣಾತ್ಮಕ ಸಾಮರ್ಥ್ಯ, ಅಮೂರ್ತ ಮತ್ತು ವಿಭಿನ್ನ ಚಿಂತನೆ, ಸಂಶ್ಲೇಷಣೆ, ತಾರ್ಕಿಕತೆ, ಭಾಷಾ ಕೌಶಲ, ಕಲ್ಪನೆ, ಸೃಜನಶೀಲತೆ, ತಾರತಮ್ಯದ ಶಕ್ತಿ, ಸಾಮಾನ್ಯಿàಕರಣ ಮತ್ತು ಆಮೂರ್ತತೆ.
- ಆನಂದಮಯ ಕೋಶ ಅಥವಾ ದೈವಿಕ ವಿಕಾಸ :
ಸಂತೋಷ, ಪ್ರೀತಿ ಮತ್ತು ಸಹಾನುಭೂತಿ, ಸ್ವಾಭಾವಿಕತೆ, ಸ್ವಾತಂತ್ರ್ಯ, ಸೌಂದರ್ಯ ಪ್ರಜ್ಞೆ, ಅರಿವನ್ನು ಆಂತರ್ಯಕ್ಕೆ ತಿರುಗಿಸುವ ಪ್ರಯಾಣ.
ಸ್ಮತಿಯ ಮಹತ್ವ :
ಮಾನವನ ಬೆಳವಣಿಗೆಗೆ ನೆನಪಿನ ಶಕ್ತಿ ಅತ್ಯಂತ ಪ್ರಮುಖದ್ದು ಎಂದು ಈ ರಾಷ್ಟ್ರೀಯ ಪಠ್ಯಕ್ರಮ ಫ್ರೆàಮ್‌ವರ್ಕ್‌ನಲ್ಲಿ ಉಲ್ಲೇಖೀಸಲಾಗಿದೆ. ಆದರೆ ಇದನ್ನು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಆದರೆ ಸಂಶೋಧನೆ ಮತ್ತು ದೀರ್ಘಕಾಲಿಕ ಕಲಿಕೆಗೆ ಇದು ಬೇಕು ಎಂದು ಅಭಿಪ್ರಾಯಪಡಲಾಗಿದೆ.
ಪ್ರಮುಖ ಸಂಗತಿಗಳು :
- ಮೂರರೊಳಗೆ ಮನೆಯೇ ಪಾಠಶಾಲೆ
- 3ರಿಂದ 6 ವರ್ಷಕ್ಕೆ ಪುಸ್ತಕ ರಹಿತ ಕಲಿಕೆ,
ವರ್ಕ್‌ಶೀಟ್‌ಗಳನ್ನು ಬಳಕೆ ಮಾಡಬಹುದು.
- 6ರಿಂದ 8 ವರ್ಷಕ್ಕೆ ಪಂಚತಂತ್ರ ಸೇರಿದಂತೆ ಭಾರತೀಯ ಜಾನಪದ, ಸಂಸ್ಕೃತಿಯ ಕಲೆಗಳ ಕುರಿತ ಕಥೆಗಳನ್ನು ಹೇಳುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.