ಸಾಂಪ್ರದಾಯಿಕ ಪ್ರಯೋಗಾಲಯ ಮೀರಿ ಬಹು-ಶಿಸ್ತಿನ ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ರಾಂತಿ
Team Udayavani, Jun 28, 2024, 2:26 PM IST
ನಿರಂತರವಾಗಿ ವಿಕಸನಗೊಳ್ಳುತ್ತಿರುವ ಶೈಕ್ಷಣಿಕ ವಾತಾವರಣದಲ್ಲಿ, ವೇಗವಾಗಿ ಬದಲಾಗುತ್ತಿರುವ ಜಗತ್ತಿನ ಬೇಡಿಕೆಗಳನ್ನು ಪೂರೈಸುವ ಸಲುವಾಗಿ ಸಾಂಪ್ರದಾಯಿಕ ಕಲಿಕಾ ಪರಿಸರವನ್ನು ಮರು ರೂಪಿಸಲಾಗುತ್ತಿದೆ. ಬಹು-ಶಿಸ್ತಿನ ವಿದ್ಯಾ ಸಂಸ್ಥೆಗಳ ಉದಯವು, ಸಾಂಪ್ರದಾಯಿಕ ಪ್ರಯೋಗಾಲಯಗಳ ವ್ಯಾಪ್ತಿಯನ್ನು ಮೀರಿದ, ಸೃಜನಶೀಲತೆ, ಸಹಯೋಗ ಮತ್ತು ನಾವೀನ್ಯಕ್ಕೆ ಪ್ರೋತ್ಸಾಹ ನೀಡುವ ಕ್ರಾಂತಿಕಾರಿ ವಿಧಾನವನ್ನು ಪ್ರತಿನಿಧಿಸುತ್ತದೆ. ಕಲಿಕೆಯ ಈ ಕ್ರಿಯಾತ್ಮಕ ಕೇಂದ್ರಗಳು ಪರಿವರ್ತನೆಯ ಅನುಭವವನ್ನು ನೀಡುತ್ತವೆ, ಅಲ್ಲಿ ವಿದ್ಯಾರ್ಥಿಗಳು ಸಂಕೀರ್ಣ ಸವಾಲುಗಳನ್ನು ಎದುರಿಸಲು ಅಂತರಶಿಸ್ತೀಯ ಅಧ್ಯಯನಗಳ ಅನ್ವೇಷಣೆ, ತಂತ್ರಜ್ಞಾನದ ಪ್ರಯೋಜನಗಳು ಮತ್ತು ವಾಸ್ತವಿಕ-ಪ್ರಪಂಚದ ಅನ್ವಯಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಈಗ ನಾವು ಸಾಂಪ್ರದಾಯಿಕ ಪ್ರಯೋಗಾಲಯಗಳು ಮತ್ತು ಬಹು-ಶಿಸ್ತಿನ ಕಲಿಕಾ ಸ್ಥಳಗಳ ನವೀನ ನೀತಿಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಅನ್ವೇಷಿಸುವ ಪಯಣವನ್ನು ಪ್ರಾರಂಭಿಸೋಣ, ಶಿಕ್ಷಣದ ಭವಿಷ್ಯವನ್ನು ರೂಪಿಸುವಲ್ಲಿ ಅವುಗಳು ಹೊಂದಿರುವ ಅಗಾಧವಾದ ಪ್ರಭಾವಗಳ ಮೇಲೆ ಬೆಳಕು ಚೆಲ್ಲೋಣ.
ಕಲಿಕಾ ಪರಿಸರ
ಸಾಂಪ್ರದಾಯಿಕ ಪ್ರಯೋಗಾಲಯಗಳು ಸಾಮಾನ್ಯವಾಗಿ ನಿರ್ದಿಷ್ಟ ಚೌಕಟ್ಟಿನಲ್ಲೇ ಅಧ್ಯಯನ ಮಾಡುವಂತಹ ವಾತಾವರಣವನ್ನು ಒದಗಿಸುತ್ತವೆ, ಇದರಿಂದಾಗಿ ನಿರ್ದಿಷ್ಟ ವಿಷಯಗಳ ಕಲಿಕೆಯಲ್ಲಿ ಸಂವಹನವು ಸೀಮಿತವಾಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಬಹು-ಶಿಸ್ತಿನ ವಿದ್ಯಾ ಸಂಸ್ಥೆಗಳು ಮುಕ್ತವಾದ ಮತ್ತು ಹೊಂದಿಕೊಳ್ಳುವ ವಾತಾವರಣವನ್ನು ಸೃಷ್ಟಿಸಿ, ವಿವಿಧ ವಿಭಾಗಗಳಲ್ಲಿನ ಕಲ್ಪನೆಗಳನ್ನು ಉತ್ತೇಜಿಸಿ ಹೊಸ ವಿಷಯಗಳ ಹುಟ್ಟಿಗೆ ಇಂಬು ನೀಡುತ್ತವೆ.
ಶಿಕ್ಷಣದ ಗಮನ
ಸಾಂಪ್ರದಾಯಿಕ ಪ್ರಯೋಗಾಲಯಗಳು ವಿಷಯ-ನಿರ್ದಿಷ್ಟ ಕಲಿಕೆಗೆ ಒತ್ತು ನೀಡಿದರೆ, ಬಹು-ಶಿಸ್ತಿನ ಸ್ಥಳಗಳು ವಾಸ್ತವಿಕ-ಜಗತ್ತಿನ ಸವಾಲುಗಳನ್ನು ವ್ಯಾಪಕವಾಗಿ ಪರಿಹರಿಸಲು ವಿವಿಧ ಕ್ಷೇತ್ರಗಳಿಂದ ಜ್ಞಾನವನ್ನು ಸಂಯೋಜಿಸಿ, ಸಮಗ್ರ ಶಿಕ್ಷಣಕ್ಕೆ ಆದ್ಯತೆ ನೀಡುತ್ತವೆ.
ತಂತ್ರಜ್ಞಾನ ಸಂಯೋಜನೆ
ಕಲಿಕಾ ಅನುಭವಗಳನ್ನು ವರ್ಧಿಸಲು ಬಹು-ಶಿಸ್ತಿನ ವಿದ್ಯಾ ಸಂಸ್ಥೆಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತವೆ. ಇಂಟರ್‌ಆ್ಯಕ್ಟಿವ್ ಡಿಸ್‌ಪ್ಲೇಗಳಿಂದ ಹಿಡಿದು ವರ್ಚುವಲ್ ರಿಯಾಲಿಟಿ ಸಿಮ್ಯುಲೇಶನ್ ಗಳವರೆಗೆ, ತಂತ್ರಜ್ಞಾನವನ್ನು ಶಿಕ್ಷಣದ ಪ್ರತಿಯೊಂದು ಅಂಶಗಳಲ್ಲೂ ಸುಸಂಬದ್ಧವಾಗಿ ಸಂಯೋಜಿಸಲಾಗಿದ್ದು, ಇದು ನಾವೀನ್ಯ ಮತ್ತು ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುತ್ತದೆ.
ವಿದ್ಯಾರ್ಥಿ ಪಾಲುದಾರಿಕೆ
ಬಹು-ಶಿಸ್ತಿನ ಸ್ಥಳಗಳಲ್ಲಿ, ವಿದ್ಯಾರ್ಥಿಗಳು ತಮ್ಮ ಕಲಿಕಾ ಪ್ರಯಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಸಹಭಾಗಿತ್ವದ ಯೋಜನೆಗಳು ಮತ್ತು ಗುಂಪು ಚರ್ಚೆಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಆಧುನಿಕ ಕಾರ್ಯಪಡೆಯ ಯಶಸ್ಸಿಗೆ ಅವಶ್ಯಕವಾದ ಟೀಮ್‌ವರ್ಕ್ (ಒಗ್ಗೂಡಿ ಕೆಲಸ ಮಾಡುವುದು), ಸಂವಹನ ಮತ್ತು ನಾಯಕತ್ವದ ಕೌಶಲ್ಯಗಳನ್ನು ಉತ್ತೇಜಿಸಲಾಗುತ್ತದೆ.
ಬೋಧನಾ ವಿಧಾನ
ಸಾಂಪ್ರದಾಯಿಕವಾದ ಉಪನ್ಯಾಸ-ಆಧಾರಿತ ವಿಧಾನಕ್ಕಿಂತ ಭಿನ್ನವಾಗಿ, ಬಹು-ಶಿಸ್ತಿನ ವಿದ್ಯಾ ಸಂಸ್ಥೆಗಳು ವಿಚಾರಣಾ-ಆಧಾರಿತ ಮತ್ತು ಯೋಜನಾ-ಆಧಾರಿತ ಕಲಿಕಾ ವಿಧಾನಗಳನ್ನು ಒಳಗೊಂಡಿರುತ್ತವೆ. ವಿದ್ಯಾರ್ಥಿಗಳು ಪ್ರಾಯೋಗಿಕ ಚಟುವಟಿಕೆಗಳು, ಪ್ರಯೋಗಗಳು ಮತ್ತು ವಾಸ್ತವಿಕ-ಜಗತ್ತಿನ ಯೋಜನೆಗಳಲ್ಲಿ ತೊಡಗಿಕೊಳ್ಳುತ್ತಾರೆ, ಇದರಿಂದ ಅವರಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳು ಬೆಳೆಯುತ್ತವೆ.
ವಿನ್ಯಾಸದಲ್ಲಿ ನಮ್ಯತೆ
ಸಾಂಪ್ರದಾಯಿಕ ಪ್ರಯೋಗಾಲಯಗಳು ಸಾಮಾನ್ಯವಾಗಿ ನಿಗದಿತ ವಿನ್ಯಾಸಗಳು ಮತ್ತು ಉಪಕರಣಗಳ ಪರಿಮಿತಿಯಿಂದ ಪ್ರತಿಬಂಧಿಸಲ್ಪಟ್ಟಿರುತ್ತವೆ. ಸ್ಥಳಾಂತರಿಸಬಹುದಾದ ಪೀಠೋಪಕರಣಗಳು, ಮಾಡ್ಯುಲರ್ ಸೆಟಪ್‌ಗಳು ಮತ್ತು ಅಗತ್ಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮೂಲಸೌಕರ್ಯಗಳೊಂದಿಗೆ, ಬಹು-ಶಿಸ್ತಿನ ವಿದ್ಯಾ ಸಂಸ್ಥೆಗಳು ವಿನ್ಯಾಸದಲ್ಲಿ ನಮ್ಯತೆಗೆ ಆದ್ಯತೆ ನೀಡುತ್ತವೆ. ಇದು ವೈವಿಧ್ಯಮಯ ಕಲಿಕಾ ಅಗತ್ಯಗಳು ಮತ್ತು ಚಟುವಟಿಕೆಗೆ ಆವಶ್ಯಕ ವಾತಾವರಣವನ್ನು ಒದಗಿಸುತ್ತದೆ.
ವಾಸ್ತವಿಕ ಜಗತ್ತಿನ ಅನ್ವಯ
ವಾಸ್ತವಿಕ ಜಗತ್ತಿನಲ್ಲಿ ಜ್ಞಾನದ ಅನ್ವಯಕ್ಕೆ ಒತ್ತು ನೀಡುವ ಮೂಲಕ ಬಹು-ಶಿಸ್ತಿನ ವಿದ್ಯಾ ಸಂಸ್ಥೆಗಳು ಸಿದ್ಧಾಂತ ಮತ್ತು ಪ್ರಾಯೋಗಿಕತೆಯ ನಡುವಿನ ಅಂತರವನ್ನು ನಿವಾರಿಸುತ್ತವೆ. ವಿದ್ಯಾರ್ಥಿಗಳು ನೈಜ ಸವಾಲುಗಳನ್ನು ನಿಭಾಯಿಸುತ್ತಾರೆ, ಪ್ರಾಯೋಗಿಕತೆ ಮತ್ತು ಪ್ರಸ್ತುತತೆಯ ಆಧಾರದ ಮೇಲೆ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಹಭಾಗಿತ್ವದಿಂದ ಕೆಲಸ ಮಾಡುತ್ತಾರೆ.
ಶೈಕ್ಷಣಿಕ ಫಲಿತಾಂಶಗಳು
ಬಹು-ಶಿಸ್ತಿನ ವಿದ್ಯಾ ಸಂಸ್ಥೆಗಳು ಶೈಕ್ಷಣಿಕ ಕಾರ್ಯನಿರ್ವಹಣೆಯ ಮೇಲೆ ಮತ್ತು ವಿದ್ಯಾರ್ಥಿಗಳ ತೊಡಗಿಕೊಳ್ಳುವಿಕೆಯ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ ಎಂದು ಸಂಶೋಧನೆ ಸೂಚಿಸುತ್ತದೆ. ಕ್ರಿಯಾತ್ಮಕ ಮತ್ತು ಅಂತರ್ಗತ ಕಲಿಕಾ ವಾತಾವರಣವನ್ನು ಸೃಷ್ಟಿಸುವ ಮೂಲಕ, ಈ ಸ್ಥಳಗಳು ಕಲಿಯುವ ಉತ್ಸಾಹವನ್ನು ಮತ್ತು ಜ್ಞಾನದಾಹವನ್ನು ಹೆಚ್ಚಿಸುತ್ತವೆ, ಇದು ಸುಧಾರಿತ ಶೈಕ್ಷಣಿಕ ಫಲಿತಾಂಶಗಳಿಗೆ ಕಾರಣವಾಗುತ್ತದೆ.
ಶಿಕ್ಷಕ/ಸಹಾಯಕರ ಪಾತ್ರ
ಬಹು-ಶಿಸ್ತಿನ ಕಲಿಕಾ ಸ್ಥಳಗಳಲ್ಲಿ, ಶಿಕ್ಷಕರು ಸಾಂಪ್ರದಾಯಿಕ ಉಪನ್ಯಾಸಕರ ಪಾತ್ರದ ಬದಲಿಗೆ ಸಹಾಯಕರ ಪಾತ್ರವನ್ನು ನಿಭಾಯಿಸುತ್ತಾರೆ. ಅವರು ವಿದ್ಯಾರ್ಥಿಗಳಿಗೆ ಅನ್ವೇಷಣೆ, ಪ್ರಯೋಗ ಮತ್ತು ಸ್ವತಂತ್ರ ವಿಚಾರಣೆ ಮಾಡಲು ಪ್ರೋತ್ಸಾಹಿಸಿ ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಾರೆ. ಕಲಿಯುವವರಿಗೆ ತಮ್ಮ ಶಿಕ್ಷಣದ ಮಾಲೀಕತ್ವವನ್ನು ತಾವೇ ತೆಗೆದುಕೊಳ್ಳಲು ಅಧಿಕಾರ ನೀಡುತ್ತಾರೆ.
ಶೈಕ್ಷಣಿಕ ಮಾದರಿಗಳ ವಿಕಾಸವನ್ನು ನಾವು ಗಮನಿಸಿದಾಗ, 21ನೇ ಶತಮಾನದಲ್ಲಿ ಮತ್ತು ತದನಂತರ ಕಲಿಯುವವರ ಸಂಪೂರ್ಣ ಸಾಮರ್ಥ್ಯವನ್ನು ಹೊರತರಲು ಬಹು-ಶಿಸ್ತಿನ ವಿದ್ಯಾ ಸಂಸ್ಥೆಗಳು ಬಹುಮುಖ್ಯ ಪಾತ್ರವಹಿಸುತ್ತವೆ ಎಂಬುದು ಸ್ಪಷ್ಟವಾಗುತ್ತದೆ. ಸಾಂಪ್ರದಾಯಿಕ ಪ್ರಯೋಗಾಲಯಗಳ ಪರಿಮಿತಿಗಳನ್ನು ಮೀರುವ ಮೂಲಕ ಮತ್ತು ಶಿಕ್ಷಣಕ್ಕೆ ಸಮಗ್ರವಾದ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ, ಈ ಪರಿವರ್ತಕ ವಾತಾವರಣಗಳು ವಿದ್ಯಾರ್ಥಿಗಳನ್ನು ವಿಮರ್ಶಾತ್ಮಕ ಚಿಂತಕರಾಗಲು, ಸಮಸ್ಯೆ ಪರಿಹರಿಸುವವರಾಗಲು ಮತ್ತು ಸಂಶೋಧಕರಾಗಲು ಸಶಕ್ತಗೊಳಿಸುತ್ತವೆ. ಶಿಕ್ಷಣ ತಜ್ಞರು, ನೀತಿ ನಿರೂಪಕರು ಮತ್ತು ಮಧ್ಯಸ್ಥಗಾರರಾಗಿ, ನಾವು ಬಹು-ಶಿಸ್ತಿನ ಕಲಿಕಾ ಸ್ಥಳಗಳ ನೀತಿಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಅನ್ವೇಷಣೆ, ಸಹಭಾಗಿತ್ವ ಮತ್ತು ಜೀವಮಾನದುದ್ದಕ್ಕೂ ಕಲಿಕೆಯ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು.
ಸಕೀನಾ ಕಾಸೀಮ್ ಝೈದಿ
ಉಪಾಧ್ಯಕ್ಷರು, ಶೈಕ್ಷಣಿಕ ವಿಭಾಗ
ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.