3 states ಚುನಾವಣೆ ಜಯ: ಬಂಡವಾಳ ಹೂಡಿಕೆದಾರರಿಗೆ ಈ ಗೆಲುವು ಅನುಕೂಲ: ಪ್ರಧಾನಿ
ತಿದ್ದಿಕೊಳ್ಳಿ, ಇಲ್ಲದಿದ್ದರೆ...ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಬಗ್ಗೆ ನೇರವಾಗಿ ತರಾಟೆ
Team Udayavani, Dec 4, 2023, 12:25 AM IST
ಹೊಸದಿಲ್ಲಿ: “ಮೂರು ರಾಜ್ಯಗಳಲ್ಲಿ ಬಿಜೆಪಿ ಜಯ ಗಳಿಸಿ ಹ್ಯಾಟ್ರಿಕ್ ಸಾಧನೆ, 2024ರ ಲೋಕಸಭೆ ಚುನಾವಣೆಯಲ್ಲಿ ನಾವು ಮೂರನೇ ಬಾರಿಗೆ ಜಯ ಗಳಿಸಲು ಮುನ್ನುಡಿ’ ಹೀಗೆಂದು ಘೋಷಣೆ ಮಾಡಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ. ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ ಗಳಲ್ಲಿ ಅಭೂತಪೂರ್ವ ಜಯಗಳಿಸಿದ ಬಳಿಕ ಹೊಸದಿಲ್ಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ರವಿವಾರ ಕಾರ್ಯಕರ್ತರನ್ನು ಉದ್ದೇಶಿಸಿ ಸುದೀರ್ಘವಾಗಿ ಮಾತನಾಡಿದ್ದಾರೆ.
ಮೂರು ರಾಜ್ಯಗಳಲ್ಲಿ ಬಿಜೆಪಿಯ ವಿಜಯ ಗಾಥೆ ದೇಶಾದ್ಯಂತ ಮಾತ್ರವಲ್ಲ, ಜಗತ್ತಿನಾದ್ಯಂತ ಈ ಅಂಶ ಪ್ರಚಾರ ಪಡೆಯಲಿದೆ ಎಂದರು. ಈ ಫಲಿ ತಾಂಶ ದಿಂದಾಗಿ ಜಗತ್ತಿನಲ್ಲಿ ಇರುವ ಬಂಡ ವಾಳ ಹೂಡಿಕೆದಾರರಿಗೆ ಭಾರತದಲ್ಲಿನ ಸದೃಢ ಸರಕಾರ ಇದೆ. ಹೀಗಾಗಿ ಹೆಚ್ಚಿನ ಬಂಡವಾಳ ಹೂಡಿಕೆಮಾಡಲು ಅವಕಾಶ ಮಾಡಿಕೊಡಲಿದೆ ಎಂದರು. ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧಿಸಿದೆ. ಇದರಿಂದಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿಯೂ ಕೂಡ ಬಿಜೆಪಿಯೇ ಅಧಿಕಾರ ಉಳಿಸಿಕೊಂಡು ದಾಖಲೆ ಸ್ಥಾಪಿಸಲಿದೆ ಎಂದರು ಪ್ರಧಾನಿ ನರೇಂದ್ರ ಮೋದಿ.
ಬಿಜೆಪಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿ, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ. ಪಂಚ ರಾಜ್ಯಗಳಲ್ಲಿನ ಮತದಾರರು ಅದರಲ್ಲಿಯೂ ವಿಶೇಷವಾಗಿ ಮಹಿಳೆಯರು ಬಿಜೆಪಿ ಅಭ್ಯರ್ಥಿಗಳಿಗೇ ಮತ ಹಾಕಿ ಗೆಲ್ಲಿಸಿದ್ದಾರೆ. ಅವರ ಬೆಂಬಲ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಮಹಿಳೆಯರಿಗೆ ನೀಡಿದ ಭರವಸೆಯನ್ನು ಬಿಜೆಪಿ ಈಡೇರಿಸಲಿದೆ. ಅದರಲ್ಲಿ ಯಾವುದೇ ಸಂದೇಹ ಬೇಡ ಮತ್ತು ಶೇ.100 ಅದನ್ನು ಜಾರಿ ಮಾಡುತ್ತೇವೆ. ಅದಕ್ಕೆ ನರೇಂದ್ರ ಮೋದಿಯೇ ಗ್ಯಾರಂಟಿ ಎಂದು ಸಾವಿರಾರು ಮಂದಿ ಕಾರ್ಯ ಕರ್ತರ ಹರ್ಷೋದ್ಗಾರದ ನಡುವೆ ಪ್ರಧಾನಿ ಸಾರಿ ದ್ದಾರೆ. ತಮ್ಮ ಗೌರವ, ಸುರಕ್ಷೆ ಮತ್ತು ಭದ್ರತೆ ಯನ್ನು ಕಾಪಾಡಲು ಬಿಜೆಪಿಯಿಂದ ಮಾತ್ರ ಸಾಧ್ಯವೆಂದು ಮಹಿಳೆಯರು ನಂಬಿದ್ದ ರಿಂದಲೇ ನಮ್ಮ ಪಕ್ಷವನ್ನು ಆಯ್ಕೆ ಮಾಡಿದ್ದಾರೆ ಎಂದರು.
ಈ ಮೂರು ರಾಜ್ಯಗಳಲ್ಲಿನ ಚುನಾವಣೆ ಯಲ್ಲಿನ ಜಯ ಐತಿಹಾಸಿಕ ಮತ್ತು ಅಭೂತ ಪೂರ್ವ ವಾದದ್ದು. ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಎಂಬ ತಣ್ತೀಕ್ಕೆ ಜಯ ಸಿಕ್ಕಿದೆ ಎಂದರು. ಸ್ವಾವಲಂಬಿ ಭಾರತ, ಪ್ರಾಮಾಣಿಕ, ಪಾರದರ್ಶಕ, ಉತ್ತಮ ಆಡಳಿತಕ್ಕೆ ಪ್ರಾಪ್ತಿಯಾಗಿರುವ ಗೆಲುವು ಕೂಡ ಆಗಿದೆ ಎಂದು ಪ್ರಧಾನಿ ಬಣ್ಣಿಸಿದರು.
ರಾಜಕೀಯ ಬೇಡ: ದೇಶ ವಿರೋಧಿ ಶಕ್ತಿಗಳು ಹೆಚ್ಚು ಬಲಗೊಳ್ಳಲು ಅವಕಾಶ ಕೊಡುವುದು ಬೇಡ ಎಂದು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳಿಗೆ ಪ್ರಧಾನಿ ಕಿವಿಮಾತು ಹೇಳಿ ದ್ದಾರೆ. ಅದರ ಮೂಲಕ ದೇಶವನ್ನು ದುರ್ಬಲ ಗೊಳಿ ಸುವ ಪ್ರಯತ್ನ ಬೇಡ ಎಂದರು. ವೇದಿಕೆಯ ಮೇಲೆ ಒಟ್ಟಾಗಿ ಕೈಜೋಡಿಸಿಕೊಂಡು ನಿಲ್ಲುವುದ ರಿಂದ ಮಾಧ್ಯಮಗಳಲ್ಲಿ ಉತ್ತಮ ರೀತಿಯಲ್ಲಿ ಫೋಟೋ ಮತ್ತು ಸುದ್ದಿಗಳಿಗೆ ಕಾರಣವಾಗಲಿದೆ. ಈ ಅಂಶದಿಂದ ಜನರ ಮನಸ್ಸು ಗೆಲ್ಲಲು ಯಾವುದೇ ರೀತಿಯ ನೆರವು ನೀಡಲಾರದು ಎಂದು ವಿಪಕ್ಷಗಳ ಒಕ್ಕೂಟಕ್ಕೆ ಟಾಂಗ್ ನೀಡಿದ್ದಾರೆ.
ಅನುಷ್ಠಾನಕ್ಕಾಗಿ ನೀತಿ: ಬಿಜೆಪಿ ನೇತೃತ್ವದ ಸರಕಾರ ಗಳು ದೇಶದ ಅಭಿವೃದ್ಧಿಗಾಗಿ ನೀತಿ ನಿರೂಪಣೆ ಮಾಡಿ, ಅದನ್ನು ಕ್ರಮ ಬದ್ಧವಾಗಿ ಅನುಷ್ಠಾನ ಮಾಡು ತ್ತಿವೆ ಎಂದರು. ಜತೆಗೆ ಅರ್ಹ ಫಲಾನುಭವಿಗಳಿಗೆ ತಲಪು ವಂತೆ ಮಾಡುತ್ತದೆ ಎಂದರು. ಈ ಫಲಿ ತಾಂಶ ದಿಂದ ಮತದಾರರು ಸುಮ್ಮನೇ ಮಾತ ನಾಡುವವರ ಬಗ್ಗೆ ಒಲವು ಹೊಂದಿಲ್ಲ. ಅವರ ಪರ ನಿಲುವು ಹೊಂದಿ ರುವವರನ್ನೇ ಆಯ್ಕೆ ಮಾಡು ತ್ತಾರೆ ಎನ್ನುವ ಅಂಶವೂ ಈ ಫಲಿ ತಾಂಶದಿಂದ ಸಾಬೀತಾಗಿದೆ ಎಂದು ಮೋದಿ ಹೇಳಿದರು.
ಕೃತಜ್ಞತೆ: ಹಾಲಿ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾ ಣ ದಲ್ಲಿ ಬಿಜೆಪಿ 8 ಸ್ಥಾನಗಳಲ್ಲಿ ಜಯ ಗಳಿಸಿ ರುವು ದನ್ನು ವಿಶೇಷವಾಗಿ ಪ್ರಸ್ತಾವ ಮಾಡಿದ ಪ್ರಧಾನಿ, ಬಿಜೆಪಿ ಆ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡ ಲಿದೆ. ಅದಕ್ಕಾಗಿ ಸಿಗುವ ಪ್ರತಿ ಅವಕಾಶವನ್ನೂ ಬಳಸಿಕೊಳ್ಳಲಿದೆ ಎಂದರು.
ದೇಶದಲ್ಲಿ ನಾಲ್ಕೇ ವರ್ಗ
ಬಿಹಾರದಲ್ಲಿ ಜಾತಿ ಗಣತಿ ನಡೆಸಿ, ಅದರಿಂದ ಪ್ರೇರಣೆಗೊಂಡು ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆಗ್ರಹಿಸುತ್ತಿದ್ದವು. ಆ ಹೇಳಿಕೆಯನ್ನು ಪ್ರಬಲ ವಾಗಿ ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ “ದೇಶವನ್ನು ಜಾತಿಯ ಆಧಾರದಲ್ಲಿ ವಿಭಜನೆ ಮಾಡಲು ಹೊರಟವರಿಗೆ ಹಿನ್ನಡೆಯಾಗಿದೆ’ ಎಂದರು. ದೇಶದಲ್ಲಿ ಮಹಿಳೆಯರು, ಯುವ ಸಮುದಾಯ, ರೈತರು ಮತ್ತು ಬಡವರು ಎಂಬ ನಾಲ್ಕೇ ವರ್ಗಗಳು ಇವೆ ಎಂದರು. ಈ ನಾಲ್ಕು ವರ್ಗಗಳು ಅಭಿವೃದ್ಧಿಗೊಂಡಾಗ ಮಾತ್ರ ದೇಶದಲ್ಲಿ ಸುಭದ್ರಗೊಳ್ಳಲಿದೆ. ಬಿಜೆಪಿ ನೇತೃತ್ವದ ಸರಕಾರಗಳು ಜಾರಿಗೊಳಿಸಿದ ಯೋಜನೆಯ ಬಗ್ಗೆ ಮಹಿಳೆಯರು, ಯುವ ಸಮುದಾಯ, ರೈತರು ಮತ್ತು ಬಡವರು ಹೆಚ್ಚು ಆಸಕ್ತಿ ವಹಿಸಿ, ನಮ್ಮ ಪಕ್ಷಕ್ಕೆ ಮತ ಹಾಕಿದ್ದಾರೆ. ಹೀಗಾಗಿ ಈ ಫಲಿತಾಂಶದಿಂದ ಪ್ರತೀ ವರ್ಗದ ಜನರಿಗೂ ಜಯ ಸಾಧಿಸಿದಂತೆ ಆಗಿದೆ ಎಂದರು.
ಮೂರು ರಾಜ್ಯಗಳ ಜತೆ ನಿರಂತರ ಸಂಪರ್ಕ
“ಮಿಚಾಂಗ್’ ಚಂಡಮಾರುತದ ಭೀತಿಯಲ್ಲಿರುವ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ಒಡಿಶಾ ಸರಕಾರಗಳ ಜತೆಗೆ ನಿರಂತರ ಸಂಪರ್ಕ ಇರಿಸಿಕೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಅಷ್ಟೂ ರಾಜ್ಯಗಳಲ್ಲಿ ಇರುವ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಸರಕಾರಗಳಿಗೆ ನೆರವು ನೀಡುವಂತೆ ಮೋದಿ ಸೂಚನೆ ನೀಡಿದ್ದಾರೆ. ಇದರ ಜತೆಗೆ ಅಧಿಕಾರಿಗಳು ಕೂಡ ಜನರ ನೆರವಿಗೆ ಸದಾ ಸನ್ನದ್ಧರಾಗಿ ಇರುವಂತೆ ಆದೇಶ ನೀಡಿದ್ದಾರೆ.
ತಿದ್ದಿಕೊಳ್ಳಿ, ಇಲ್ಲದಿದ್ದರೆ…
ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಹೊಂದಿರುವ ನಿಲುವುಗಳ ಬಗ್ಗೆ ನೇರವಾಗಿ ತರಾಟೆಗೆ ತೆಗೆದುಕೊಂಡ ಪ್ರಧಾನಿ “ನಿಮ್ಮ ವರ್ತನೆಯನ್ನು ತಿದ್ದಿಕೊಳ್ಳಿ. ಇಲ್ಲದಿದ್ದರೆ, ಜನರು ನಿಮ್ಮನ್ನು ತಿರಸ್ಕರಿಸುತ್ತಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಫಲಿತಾಂಶ ದುರಹಂಕಾರದ ನಿಲುವು ಹಾಗೂ ವರ್ತನೆ ಹೊಂದಿರುವ ವಿಪಕ್ಷಗಳ ಒಕ್ಕೂಟ ಐ.ಎನ್.ಡಿ.ಐ.ಎ.ಗೆ ಎಚ್ಚರಿಕೆಯ ಗಂಟೆ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಭ್ರಷ್ಟಾಚಾರ ನಡೆಸಿದವರ ಜತೆಗೆ ಬೆಂಬಲವಾಗಿ ನಿಲ್ಲುವವರಿಗೆ ನಾಚಿಕೆಯಾಗಬೇಕು. ಅವರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ರವಿವಾರ ಪ್ರಕಟಗೊಂಡಿರುವ ಫಲಿತಾಂಶ ಅಭಿವೃದ್ಧಿ ವಿರೋಧಿಗಳಿಗೆ ಒಂದು ಪಾಠವಾಗಿದೆ. ಹೀಗಾಗಿ ವಿಪಕ್ಷಗಳು ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ಜನರಿಂದ ತಿರಸ್ಕೃತರಾಗುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.