ಮೂದಲಿಕೆಗಳಿಗೆ ಮುಖ ತಿರುಗಿಸಿ ಬೆರಗಾಗುವಂತೆ ಬೆಳೆದ ಮಸ್ಕ್!


Team Udayavani, Nov 25, 2020, 6:25 AM IST

ಮೂದಲಿಕೆಗಳಿಗೆ ಮುಖ ತಿರುಗಿಸಿ ಬೆರಗಾಗುವಂತೆ ಬೆಳೆದ ಮಸ್ಕ್!

ಎಲೆಕ್ಟ್ರಿಕ್‌ ಕಾರುಗಳ ಉತ್ಪಾದಕ ಸಂಸ್ಥೆ ಟೆಸ್ಲಾ ಮೋಟಾರ್ ಹಾಗೂ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಸ್ಪೇಸ್‌ ಎಕ್ಸ್‌ ಸ್ಥಾಪಕ 49 ವರ್ಷದ ಎಲಾನ್‌ ಮಸ್ಕ್ ಈಗ ಬಿಲ್‌ಗೇಟ್ಸ್‌ರನ್ನು ಹಿಂದಿಕ್ಕಿ ಜಗತ್ತಿನ ಎರಡನೇ ಅತೀದೊಡ್ಡ ಶ್ರೀಮಂತ ಎಂಬ ಗರಿಮೆ ಪಡೆದಿದ್ದಾರೆ. ಬಹುಶಃ 21ನೇ ಶತಮಾನದಲ್ಲಿ ಜಗತ್ತಿನಾದ್ಯಂತ ಅತೀ ದೊಡ್ಡ ಫ್ಯಾನ್‌ ಫಾಲೋವಿಂಗ್‌ ಹೊಂದಿರುವ ಏಕೈಕ ಉದ್ಯಮಿ ಮಸ್ಕ್ ಇರಬಹುದು. ಮಸ್ಕ್ ನ ಅಭಿಮಾನಿಗಳು ಅವರನ್ನು ಸೂಪರ್‌ ಹೀರೋ ಎಂದೇ ಭಾವಿಸಿದರೆ, ಅವರ ಹೊಸ ಪ್ರಯತ್ನಗಳನ್ನೆಲ್ಲ ಅನುಮಾನದಿಂದಲೇ ನೋಡುವ ದೊಡ್ಡ ವರ್ಗವೂ ಇದೆ…

ಮುಂದಿನ ದಿನಗಳಲ್ಲಿ ಮಂಗಳ ಗ್ರಹದ ಮೇಲೆ ಮನುಷ್ಯರ ಕಾಲನಿ ಸೃಷ್ಟಿಸುತ್ತೇನೆ ಎಂಬ ಕನಸಿನೊಂದಿಗೆ ಮುನ್ನಡೆಯುತ್ತಿರುವ ಎಲಾನ್‌ ಮಸ್ಕ್ ರನ್ನು ಹುಚ್ಚ ಎನ್ನುವವರೂ ಇದ್ದಾರೆ. ಆದರೆ ಅವರು ಸಾಗಿ ಬಂದ ದಾರಿಯನ್ನು, ಸಾಧಿಸಿದ ಅಸಾಮಾನ್ಯ ಗುರಿಗಳನ್ನು ನೋಡಿದರೆ ಎಲಾನ್‌ ಮಸ್ಕ್ ಎಲ್ಲ ಉದ್ಯಮಿಗಳಂತಲ್ಲ, ಹಣ ಮಾಡುವುದೇ ಅವರ ಉದ್ದೇಶವಲ್ಲ ಹಾಗೂ ಅವರದ್ದು ಹುಚ್ಚು ಕನಸುಗಳು ಖಂಡಿತ ಅಲ್ಲ ಎನ್ನುವುದು ಅರ್ಥವಾಗುತ್ತದೆ.

ಮಸ್ಕ್ ರಲ್ಲಿ ಒಬ್ಬ ವಿಜ್ಞಾನಿಯಿದ್ದಾನೆ, ಕನಸುಗಾರನಿದ್ದಾನೆ, ಎಲ್ಲಕ್ಕಿಂತಲೂ ಹೆಚ್ಚಾಗಿ ಎಂಥ ರಿಸ್ಕ್ ಅನ್ನೂ ತೆಗೆದುಕೊಳ್ಳಬಲ್ಲ ಗಟ್ಟಿಗನಿದ್ದಾನೆ ಎನ್ನುವುದು ಅವರು ಸಾಗಿಬಂದ ಹಾದಿಯನ್ನು ನೋಡಿದವರಿಗೆ ತಿಳಿಯುತ್ತದೆ. ಜಿಪ್‌2, ಎಕ್ಸ್‌.ಕಾಂ, ಟೆಸ್ಲಾ ಮೋಟಾರ್ , ಸೋಲಾರ್‌ ಸಿಟಿ, ಸ್ಪೇಸ್‌-ಎಕ್ಸ್‌…ಹೀಗೆ ಮಸ್ಕ್ ಸ್ಥಾಪಿಸುತ್ತಾ ಬಂದ ಕಂಪೆನಿಗಳೆಲ್ಲವೂ ಇಂದು ಜಗತ್ತಿಗೆ ಚಿರಪರಿಚಿತ. ವೈಚಿತ್ರ್ಯವೆಂದರೆ, ಈ ಕಂಪೆನಿಗಳ ಸ್ಥಾಪನೆಗೂ ಮುನ್ನ “ಮಸ್ಕ್ ಅಸಾಧ್ಯ ಗುರಿಯನ್ನು ಬೆನ್ನತ್ತುತ್ತಿದ್ದಾನೆ, ಮುಗ್ಗರಿಸಿ ಬೀಳುತ್ತಾನೆ’ ಎಂದು ನಕ್ಕವರೇ ಹೆಚ್ಚು! ಏಕೆ ಹೊಸ ಸಾಹಸಗಳಿಗೆ ಕೈ ಹಾಕುತ್ತೀಯ ಎಂದು ಪ್ರಶ್ನೆ ಎದುರಾದಾಗಲೆಲ್ಲ ಮಸ್ಕ್ ಹೇಳುತ್ತಾರೆ: “”ಏಕೆಂದರೆ ಒಂದೇ ಕೆಲಸ ಮಾಡಿದರೆ ನನಗೆ ಬೇಗನೇ ಬೋರ್‌ ಹೊಡೆಯುತ್ತೆ!”

12ನೇ ವಯಸ್ಸಿಗೇ ವೀಡಿಯೋ ಗೇಮ್‌
1971ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದರು ಮಸ್ಕ್. ಮಸ್ಕ್ ರ ತಾಯಿ ಬಹುದೊಡ್ಡ ಮಾಡೆಲ್‌ ಆಗಿದ್ದವರು. ಮಕ್ಕಳಿಗೆ ಅವರು ನೀಡಿದ ಪ್ರೋತ್ಸಾಹ, ಸ್ವಾತಂತ್ರ್ಯ ಅಷ್ಟಿಷ್ಟಲ್ಲ. ಬಾಲ್ಯದಿಂದಲೇ ಮಸ್ಕ್ ಕೈಗೆ ಸಿಕ್ಕ ವಿಜ್ಞಾನ, ತಂತ್ರಜ್ಞಾನದ ಪುಸ್ತಕಗಳನ್ನೆಲ್ಲ ಹಗಲುರಾತ್ರಿ ಓದುತ್ತಿದ್ದರಂತೆ, ತಂದೆ ಎಲೆಕ್ಟ್ರೋ ಮೆಕ್ಯಾನಿಕಲ್‌ ಎಂಜಿನಿಯರ್‌ ಮತ್ತು ಪೈಲಟ್‌ ಆಗಿದ್ದವರು. ತಂದೆಯ ಜತೆಗಿನ ಅಲ್ಪ ಅವಧಿಯ ಒಡನಾಟದಲ್ಲಿ(ಮುಂದೆ ಪೋಷಕರು ವಿಚ್ಛೇದನ ಪಡೆದರು) ಮಸ್ಕ್ ಮಶೀನುಗಳ ಒಲವು ಬೆಳೆಸಿಕೊಂಡರು. ಇನ್ನು ತಮ್ಮ ಹತ್ತನೇ ವಯಸ್ಸಿನಲ್ಲೇ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ನಲ್ಲಿ ಆಸಕ್ತಿ ತಳೆದು ಕೆಲವೇ ಸಮಯದಲ್ಲಿ ಪ್ರೋಗ್ರಾಮಿಂಗ್‌ ಕಲಿತು, 12ನೇ ವಯಸ್ಸಿಗೇ ಒಂದು ವೀಡಿಯೋ ಗೇಮ್‌ಗೆ ಕೋಡ್‌ ಬರೆದು, ತಮ್ಮೂರಿನ ಕಂಪ್ಯೂಟರ್‌ ನಿಯತಕಾಲಿಕಕ್ಕೆ ಅದನ್ನು 500 ಡಾಲರ್‌ಗೆ ಮಾರಿದ್ದರು! ಅದು ಅವರ ಮೊದಲ ಗಳಿಕೆ.

ಕನಸ ಬೆಂಬತ್ತಿ ದೇಶ ತೊರೆದರು
ದ.ಆಫ್ರಿಕಾದಲ್ಲೇ ಇದ್ದರೆ ತಮಗೆ ಭವಿಷ್ಯವಿಲ್ಲ ಎಂದು ಭಾವಿಸಿದ ಮಸ್ಕ್, ತಮ್ಮ 17ನೇ ವಯಸ್ಸಿಗೆ ಕೆನಡಾಗೆ ಹೋಗಿ, ಅನಂತರ ಅಲ್ಲಿಂದ ಅಮೆರಿಕಕ್ಕೆ ತೆರಳಿ, ಭೌತಶಾಸ್ತ್ರ ಮತ್ತು ಬ್ಯುಸಿನೆಸ್‌ನಲ್ಲಿ ಪದವಿ ಪಡೆದರು. ತದನಂತರ ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾನಿಲಯಕ್ಕೆ ಸೇರಿದರಾದರೂ, ತರಗತಿಗಳು ಆರಂಭವಾಗುವ ಮುನ್ನವೇ ಕಾಲೇಜಿಂದ ಡ್ರಾಪ್‌ಔಟ್‌ ಆದರು. ಅದು ಅಂತರ್ಜಾಲದ ಯುಗಾರಂಭವಾಗಿತ್ತು, ತಮ್ಮ ಬದುಕನ್ನು ಅಂತರ್ಜಾಲದಿಂದಲೇ ಕಟ್ಟಿಕೊಳ್ಳಬೇಕೆಂದು ನಿರ್ಧರಿಸಿದ ಮಸ್ಕ್, ಒಂದು ಚಿಕ್ಕ ಕೊಠಡಿಯಲ್ಲಿ ಸಹೋದರನ ಜತೆಗೂಡಿ ನಾಲ್ಕು ವರ್ಷದ ಪರಿಶ್ರಮದಿಂದ ಜಿಪ್‌2 ಎನ್ನುವ ಕಂಪೆನಿ ಆರಂಭಿಸಿದರು. ಅಂತರ್ಜಾಲದಲ್ಲಿ ನಕ್ಷೆಗಳನ್ನು, ಡೈರೆಕ್ಟರಿಗಳನ್ನು ಹಾಕಲು ಜಿಪ್‌2 ಅನುವು ಮಾಡಿಕೊಡುತ್ತಿತ್ತು.

ಜಿಪ್‌2 ಎಷ್ಟು ಸದ್ದು ಮಾಡಿತೆಂದರೆ, ಆ ಕಾಲದ ಇಂಟರ್ನೆಟ್‌ ದೈತ್ಯ ಕಾಂಪ್ಯಾಕ್‌ ಕಂಪೆನಿ 2000 ಕೋಟಿ ರೂಪಾಯಿ ಪಾವತಿಸಿ ಜಿಪ್‌2 ಕಂಪೆನಿಯನ್ನು ಖರೀದಿಸಿಬಿಟ್ಟಿತು. ಹೂಡಿಕೆದಾರರಿಗೆಲ್ಲ ಹಣ ಹಂಚಿದ ಮೇಲೆ 28ರ ಹರೆಯದ ಮಸ್ಕ್ ಖಾತೆಯಲ್ಲಿ 22 ಮಿಲಿಯನ್‌ ಡಾಲರ್‌(ಈಗಿನ ಮೊತ್ತ 162 ಕೋಟಿ ರೂಪಾಯಿ) ಬಂದುಬಿದ್ದಿತ್ತು!

ಅಷ್ಟಕ್ಕೇ ನಿಲ್ಲಲಿಲ್ಲ ಕನಸು: ಅಂತರ್ಜಾಲದ ಶಕ್ತಿಯ ಅರಿವಿದ್ದ ಮಸ್ಕ್, ಅನಂತರ ಎಕ್ಸ್‌.ಕಾಂ ಎನ್ನುವ ಕಂಪೆನಿಯನ್ನು ಸ್ಥಾಪಿಸಿದರು. ಈ ಕಂಪೆನಿ, ಆನ್‌ಲೈನ್‌ನಲ್ಲಿ ವಿತ್ತ ಸೇವೆಗಳನ್ನು ನೀಡುತ್ತಿತ್ತು. ಕೆಲವೇ ವರ್ಷಗಳಲ್ಲಿ ಎಕ್ಸ್‌.ಕಾಂ ಕಾನ್ಫಿನಿಟಿ ಕಂಪೆನಿಯಲ್ಲಿ ಮಿಳಿತವಾಯಿತು. ಕಾನ್ಫಿನಿಟಿ ಈಗ ಜನಪ್ರಿಯವಾಗಿರುವ ಪೇಪಾಲ್‌ ಎನ್ನುವ ಅಂತರ್ಜಾಲ ಪೇಮೆಂಟ್‌ ಸೇವೆಯನ್ನು ಆರಂಭಿಸಿತ್ತು(ಪೇಟಿಎಂ, ಗೂಗಲ್‌ ಪೇ ಮಾದರಿಯಲ್ಲಿ). 2002ರಲ್ಲಿ ಇ-ಬೇ ಕಂಪೆನಿ ಪೇಪಾಲ್‌ ಅನ್ನು ಖರೀದಿಸಿತು. ಆಗ ಮಸ್ಕ್ ಗೆ ಪಾವತಿಯಾದದ್ದು ಬರೋಬ್ಬರಿ 1.5 ಶತಕೋಟಿ ಡಾಲರ್‌!

ಎಲೆಕ್ಟ್ರಿಕ್‌ ಕಾರುಗಳ ಜಗತ್ತು ಬದಲಿಸಿದ
ಪೇಪಾಲ್‌ ಮಾರಾಟದ ಅನಂತರ ಮುಂದೇನು ಮಾಡಬೇಕು ಎನ್ನುವ ಪ್ರಶ್ನೆ ಎದುರಾದಾಗ ಮಸ್ಕ್ ಅಂತರ್ಜಾಲ ಲೋಕವನ್ನು ತೊರೆದು ತಮ್ಮ ಬಹುದಿನಗಳ ಕನಸಾದ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆ ಹಾಗೂ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ ಸ್ಥಾಪನೆಯ ಕನಸು ಕಂಡರು! ಅವರ ಈ ಎರಡೂ ಐಡಿಯಾಗಳೂ ವಿಪರೀತ ಮೂದಲಿಕೆಗೆ ಗುರಿಯಾದವು. ಅಲ್ಲಿಯವರೆಗೂ ಎಲೆಕ್ಟ್ರಿಕ್‌ ಕಾರುಗಳೆಂದರೆ ಚಿಕ್ಕ ಆಟೋ ಮಾದರಿಯ, ನಿಧಾನಕ್ಕೆ ಚಲಿಸುವ ವಾಹನಗಳೇ ಆಗಿದ್ದವು. ಈ ಕಾರಣಕ್ಕಾಗಿಯೇ, ಜನರಿಗೂ ಅವುಗಳ ಬಗ್ಗೆ ಆಸಕ್ತಿ ಇರಲಿಲ್ಲ. ಎಲೆಕ್ಟ್ರಿಕ್‌ ಕಾರುಗಳನ್ನು ಅತ್ಯಂತ ವೇಗವಾಗಿ ಸಾಗುವ ಐಷಾರಾಮಿ ಸೂಪರ್‌ಕಾರ್‌ಗಳಂತೆ ಬದಲಿಸಿದರೆ, ಖಂಡಿತ ಜನ ಖರೀದಿಸುತ್ತಾರೆ ಎನ್ನುವ ನಂಬಿಕೆ ಮಸ್ಕ್ ಗೆ ಇತ್ತು. ಆಗಲೇ ಜನ್ಮ ತಾಳಿದ್ದು ಟೆಸ್ಲಾ. 2008ರಲ್ಲಿ ಎದುರಾದ ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಟೆಸ್ಲಾ ನೆಲ ಕಚ್ಚುವ ಹಂತ ತಲುಪಿತ್ತು. ಆಗ ಮಸ್ಕ್ ತಮ್ಮ ಬಹುತೇಕ ಹಣವನ್ನೆಲ್ಲ ಈ ಕಂಪೆನಿಗೆ ಸುರಿದು ಅದನ್ನು ಉಳಿಸಿದರು. 2008ರಲ್ಲಿ ಬಂದ ಟೆಸ್ಲಾದ ಮೊದಲ ಕಾರು ರೋಡ್‌ಸ್ಟರ್‌ ಒಂದು ಬಾರಿ ಚಾರ್ಜ್‌ ಮಾಡಿದರೆ 394 ಕಿಲೋಮೀಟರ್‌ ಸಾಗುವ ಐಷಾರಾಮಿ ಎಲೆಕ್ಟ್ರಿಕ್‌ ಕಾರಾಗಿತ್ತು. ಅಮೆರಿಕದಾದ್ಯಂತ ಟೆಸ್ಲಾ ಕಂಪೆನಿಯು ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಿದ್ದು, ಉಚಿತವಾಗಿ ಚಾರ್ಜಿಂಗ್‌ ಮಾಡಿಸಿಕೊಳ್ಳಬಹುದಾಗಿದೆ!

ಬಾಹ್ಯಾಕಾಶದಲ್ಲಿ ಸ್ಪೇಸ್‌ ಎಕ್ಸ್‌ ಗುರುತು
2002ರಲ್ಲಿ ಸ್ಪೇಸ್‌ ಎಕ್ಸ್‌ ಸ್ಥಾಪನೆ ಮಾಡಿದರು ಮಸ್ಕ್. ನಾವೇ ಯಾಕೆ ರಾಕೆಟ್‌ ಉತ್ಪಾದಿಸಬಾರದೆಂಬ ಯೋಚನೆ ಮೊಳೆತು, ಅಮೆರಿಕ ಸೇರಿದಂತೆ ಜಗತ್ತಿನ ಮೇಧಾವಿ ವಿಜ್ಞಾನಿಗಳನ್ನೆಲ್ಲ ಕರೆತಂದರು. ಈಗ ನಾಸಾ ಸಂಸ್ಥೆಯ ಸಹಭಾಗಿತ್ವ ಹಾಗೂ ಬೃಹತ್‌ ಅನುದಾನದಿಂದಾಗಿ ಸ್ಪೇಸ್‌ ಎಕ್ಸ್‌ ರಾಕೆಟ್‌ಗಳು ತಮ್ಮ ಅಪೂರ್ವ ತಂತ್ರಜ್ಞಾನದಿಂದ ಹೆಸರುವಾಸಿಯಾಗಿವೆ. ಜಗತ್ತಿನಾದ್ಯಂತ ಸಂಶೋಧನ ಸಂಸ್ಥೆಗಳ ರಾಕೆಟ್‌ಗಳೆಲ್ಲ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಅನಂತರ ಬೇರ್ಪಟ್ಟು ನಾಶವಾಗಿಬಿಡುತ್ತವೆ. ಆದರೆ ಸ್ಪೇಸ್‌ ಎಕ್ಸ್‌ನ ರಾಕೆಟ್‌ ಉಪಗ್ರಹವನ್ನು ಕಕ್ಷೆಗೆ ಸೇರಿಸಿ, ವಾಪಸ್‌ ಬಂದು ನೇರವಾಗಿಯೇ ನಿಲುತ್ತದೆ (ಅದೂ ಸಾಗರದಲ್ಲಿನ ನೌಕೆಯ ಮೇಲೆ). ಕೆಲವೇ ದಿನಗಳ ಹಿಂದಷ್ಟೇ, ಸ್ಪೇಸ್‌ ಎಕ್ಸ್‌ ಮೊದಲ ಮಾನವ ಸಹಿತ ಉಡಾವಣೆ ಕೈಗೊಂಡು, ಅಮೆರಿಕದ ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿಸಿದೆ. ಮುಂದಿನ ವರ್ಷಗಳಲ್ಲಿ ಮಂಗಳ ಮೇಲೆ ಮನುಷ್ಯನನ್ನು ಕೊಂಡೊಯ್ಯುವ ಗುರಿ ಇದೆ.

ಸೋಲಾರ್‌ ಸಿಟಿ
ಮಸ್ಕ್ ರ ಮತ್ತೂಂದು ಅತಿದೊಡ್ಡ ಯೋಜನೆಯೆಂದರೆ, ಸೋಲಾರ್‌ಸಿಟಿ ಪ್ರಾಜೆಕ್ಟ್. ಹಲವಾರು ಸೋಲಾರ್‌ ಪವರ್‌ ಕಂಪೆನಿಗಳನ್ನು ಒಟ್ಟುಗೂಡಿಸಿ ಅವರು ಸೋಲಾರ್‌ ಸಿಟಿ ಸ್ಥಾಪಿಸಿದ್ದಾರೆ. ಅತೀ ಕಡಿಮೆ ದರದಲ್ಲೇ ಜನರಿಗೆ ಸೋಲಾರ್‌ ಪ್ಯಾನಲ್‌ಗಳನ್ನು ಈ ಕಂಪೆನಿ ಒದಗಿಸುತ್ತದೆ. ಅಲ್ಲದೇ, ಎಲಾನ್‌ ಮಸ್ಕ್ ರ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಸ್ಪೇಸ್‌ಎಕ್ಸ್‌ನ ಘಟಕಗಳಿಗೂ, ಟೆಸ್ಲಾ ಸೂಪರ್‌ಚಾರ್ಜಿಂಗ್‌ ಸ್ಟೇಷನ್‌ಗಳಿಗೂ ಸೋಲಾರ್‌ಸಿಟಿಯ ಸೌರ ವಿದ್ಯುತ್‌ನಿಂದಲೇ ಶಕ್ತಿ ಪೂರೈಕೆಯಾಗುತ್ತಿದೆ.

ಆಚಾರ್ಯ

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.