ಇಂದು ಎಂಜಿನಿಯರ್ ದಿನ : ವಿಶ್ವದ ಶೇ.25ರಷ್ಟು ಎಂಜಿನಿಯರ್‌ಗಳು ಭಾರತೀಯರು


Team Udayavani, Sep 15, 2020, 7:16 AM IST

Visvesvaraya

ವಿಶ್ವೇಶ್ವರಯ್ಯನವರು ಜಾಗತಿಕ ಮಟ್ಟದಲ್ಲೇ ಸಾರ್ವಕಾಲಿಕ ಶ್ರೇಷ್ಠ ವ್ಯಕ್ತಿ.

ವಿಶ್ವೇಶ್ವರಯ್ಯನವರು ಜಾಗತಿಕ ಮಟ್ಟದಲ್ಲೇ ಸಾರ್ವಕಾಲಿಕ ಶ್ರೇಷ್ಠ ವ್ಯಕ್ತಿ. ತಮ್ಮ ತಾಂತ್ರಿಕ ಕೌಶಲವನ್ನು ಸಮುದಾಯ, ನಾಡು-ದೇಶದ ಹಿತಕ್ಕಾಗಿಯೇ ಮೀಸಲಿಟ್ಟ ಪ್ರಾತಃಸ್ಮರಣೀಯರು. ಅವರ ಉತ್ಕೃಷ್ಟ ಸಾಧನೆಯಾದ ಜಲ ಸಂಪನ್ಮೂಲದ ಸದ್ಬಳಕೆ ಇಂದಿಗೂ ಜೀವನದಿಯಾಗಿ ನೀರುಣಿಸುತ್ತಿದೆ.

ವಿಜ್ಞಾನ – ತಂತ್ರಜ್ಞಾನ-ನಿಸರ್ಗ-ಸಮುದಾಯಗಳನ್ನು ಜೋಡಿಸುವ ವಿಶಿಷ್ಟ ಮಾಧ್ಯಮದ ಕೊಂಡಿಯೇ ಎಂಜಿನಿಯರ್‌ ವೃತ್ತಿ. ದೇಶ ಕಟ್ಟುವ ಎಂಜಿನಿಯರ್‌ ವೃತ್ತಿಗೆ ಗೌರವ ಸೂಚಿಸಲು ಹಾಗೂ ಭಾರತದ ಹೆಮ್ಮೆಯ ಎಂಜಿನಿಯರ್‌ ಪಿತಾಮಹ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಸ್ಮರಣಾರ್ಥ ದಿನವೇ ಎಂಜಿನಿಯರ್‌ ದಿನ.

ಈ ಹಿನ್ನೆಲೆಯಲ್ಲಿಯೇ ಪ್ರತಿವರ್ಷ ಭಾರತದಲ್ಲಿ ಎಷ್ಟು ಜನ ವಿದ್ಯಾರ್ಥಿಗಳು ಎಂಜಿನಿಯರ್‌ ಪದವಿಯನ್ನು ಪಡೆಯುತ್ತಾರೆ? ದೇಶದಲ್ಲಿರುವ ತಾಂತ್ರಿಕ ಮಹಾವಿದ್ಯಾಲಯಗಳೆಷ್ಟು? ಈ ಕ್ಷೇತ್ರದಿಂದ ದೇಶದ ಬೊಕ್ಕಸಕ್ಕೆ ಸೇರುತ್ತಿರುವ ಆದಾಯವೆಷ್ಟು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಆರ್ಥಿಕ ಕ್ಷೇತ್ರಕ್ಕೆ ಕೊಡುಗೆ
ಮೂಲಸೌಕರ್ಯ ಮತ್ತು ಕೈಗಾರಿಕಾ ಉತ್ಪಾದನೆಯಲ್ಲಿ ಹೆಚ್ಚಿದ ಹೂಡಿಕೆಯಿಂದಾಗಿ ಭಾರತದ ಎಂಜಿನಿಯರಿಂಗ್‌ ಕ್ಷೇತ್ರವು ಕೆಲವು ವರ್ಷಗಳಿಂದ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಉತ್ಪಾದನಾ ಮತ್ತು ಮೂಲಸೌಕರ್ಯ ಕ್ಷೇತ್ರಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಈ ವಲಯವು ಭಾರತದ ಆರ್ಥಿಕ ಕ್ಷೇತ್ರಕ್ಕೂ ಕೊಡುಗೆ ನೀಡುತ್ತಿದೆ. ಜಾಗತಿಕ ಮಹಾಶಕ್ತಿಯಾಗಬೇಕೆಂಬ ಹಂಬಲದಲ್ಲಿ ಭಾರತ ತನ್ನ ಎಂಜಿನಿಯರಿಂಗ್‌ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವದ ದಾಪುಗಾಲು ಹಾಕುತ್ತಿದ್ದು, ಎಂಜಿನಿಯರಿಂಗ್‌ ಸರಕುಗಳು, ಉತ್ಪನ್ನಗಳ ಮತ್ತು ಸೇವೆಗಳ ರಫ್ತುನ್ನು ಉತ್ತೇಜಿಸುವ ಉಸ್ತುವಾರಿ ವಹಿಸಲು ಎಂಜಿನಿಯರಿಂಗ್‌ ರಫ್ತು ಉತ್ತೇಜನ ಮಂಡಳಿಯನ್ನು (ಇಇಪಿಸಿ) ಸರಕಾರ ರಚಿಸಿದೆ.

ಶೇ.60ರಷ್ಟು ರಫ್ತು
ದೇಶದಿಂದ ಹೆಚ್ಚಾಗಿ ಎಂಜಿನಿಯರಿಂಗ್‌ ವಸ್ತುಗಳು ಯುಎಸ್‌ ಮತ್ತು ಯುರೋಪಿಗೆ ರಫ್ತು ಆಗಲಿದ್ದು, ಇದರ ಒಟ್ಟು ರಫ್ತಿನ ಪ್ರಮಾಣ ಶೇ.60 ಕ್ಕಿಂತ ಹೆಚ್ಚಿದೆ. 2025ರ ವೇಳೆಗೆ ಭಾರತದಲ್ಲಿ ಎಂಜಿನಿಯರಿಂಗ್‌ ಸರಕು ಉತ್ಪನ್ನ ಕೈಗಾರಿಕಾ ಘಟಕ ಉದ್ಯಮದ ವಹಿವಾಟನ್ನು 8.05 ಲಕ್ಷ ಕೋಟಿ ರೂ.ಗಳಿಗೆ (115.17 ಬಿಲಿಯನ್‌ ಯುಎಸ್‌ ಡಾಲರ್‌) ಏರಿಸುವ ನಿರೀಕ್ಷೆಯಿದೆ.


ಭಾರತ ನಂ. ಒನ್‌

ಯುಎಸ್‌ ಮೂಲದ ನ್ಯಾಶನಲ್‌ ಸೈನ್ಸ್ಫೌಂ ಡೇಶನ್‌ ನಡೆಸಿದ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಸಮೀಕ್ಷೆ ವರದಿ – 2018ರ ಪ್ರಕಾರ ಎಂಜಿನಿಯರಿಂಗ್‌ ಮತ್ತು ವಿಜ್ಞಾನ ಪದವೀಧರರನ್ನು ವಿಶ್ವಕ್ಕೆ ಕೊಡುಗೆ ನೀಡುವ ದೇಶಗಳ ಪೈಕಿ ಭಾರತ ಇಡೀ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದ್ದು, ಪ್ರತಿ ವರ್ಷ ಶೇ.25ರಷ್ಟು ಎಂಜಿನಿಯರ್‌ಗಳನ್ನು ಭಾರತ ವಿಶ್ವಕ್ಕೆ ಕೊಡುಗೆ ನೀಡುತ್ತದೆ ಎಂದು ವರದಿ ಹೇಳಿದೆ.

38 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು
ಮಾನವ ಸಂಪನ್ಮೂಲ ಸಚಿವಾಲಯದ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (ಎಐಎಸ್‌ಎಚ್‌ಇ) 2019ರ ವರದಿಯ ಪ್ರಕಾರ ದೇಶಾದ್ಯಂತ ಸುಮಾರು 38.52 ಲಕ್ಷ ವಿದ್ಯಾರ್ಥಿಗಳು ಎಂಜಿನಿಯರ್‌ ಪದವಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜತೆಗೆ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದ ಇತರ ಪದವಿ ವಿಭಾಗಗಳ ಪೈಕಿ ಎಂಜಿನಿಯರಿಂಗ್‌ ಪದವಿ ವಿಭಾಗ ನಾಲ್ಕನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.

6,000: ಮಾನವ ಸಂಪನ್ಮೂಲ ಸಚಿವಾಲಯದ ಪ್ರಕಾರ, ಭಾರತದಲ್ಲಿ 6,214 ಎಂಜಿನಿಯ ರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆಗಳು ಇವೆ.

15,00,000: ಪ್ರತಿವರ್ಷ 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪೂರೈಸಿ ಉದ್ಯೋಗ ಕ್ಷೇತ್ರಕ್ಕೆ ಪಾದಾರ್ಪಣೆ.

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.