ಈಶ್ವರಪ್ಪ-ಯಡ್ನೂರಪ್ಪ ಫೈಟಿಂಗ್, ಸಿದ್ರಾಮಣ್ಣ ಫುಲ್ ಮಿಂಚಿಂಗ್
Team Udayavani, Apr 30, 2017, 7:42 AM IST
ಈಶ್ವರಪ್ಪನೋರ್‍ನಾ ಸೈಡ್‌ಲೈನ್ ಮಾಡೋಕೆ ಅಂತ ಮೈಸೂರು ವಿಶ್ವಣ್ಣೋರ್‍ನಾ ಬಿಜೆಪಿಗೆ ತರೋದಾ ಅಂತ ಯಡ್ನೂರಪ್ಪ ರಾತ್ರೋರಾತ್ರಿ ಎಸ್.ಎಂ.ಕಿಸ¡ನ್ನ ಹತ್ರ ಹೋಗಿದ್ರಂತೆ, ಅಯ್ಯೋ ಹಳ್ಳಿ ಹಕ್ಕಿ ತೆನೆ ಹೊರೋಕೆ ರೆಡಿ ಆದಂಗಿದೆ, ಯಾವುªಕು ಒಂದ್ ದಪಾ ಮಾತಾಡೋವಾ ಆಂತ ಹೇಳಿ ಕಳಿÕದ್ರಂತೆ. ಇದೆಲ್ಲಾ ಗೊತ್ತಾಯ್ತಿದ್ದಂತೆ, ಈಶ್ವರಪ್‌ನೋರು, ನಾನ್ ಮಾತಾಡಿದ್ದಕ್ಕೆಲ್ಲಾ ಸೀರಿಯಸ್ ತಗೋಬಾರ್ಧು, ಯಡ್ನೂರಪ್ಪನೋರೇ ನಮ್ ಲೀಡ್ರು, ಅವ್ರು ಹೇಳªಂತೆ ಕೇಳ್‌ಕೊಂಡ್ ಇರಿ¤àವಿ ಅಂತಾನೂ ಹೇಳಿದ್ರಂತೆ.
ಅಮಾಸೆ: ನಮಸ್ಕಾರ ಸಾ…
ಚೇರ್ಮನ್ರು: ಏನಾÉ ಅಮಾಸೆ ಏನ್ ವಿಸ್ಯ?
ಅಮಾಸೆ: ಏನೂ ಇಲ್ಲಾ ಸಾ… ಬೆಳಗ್ಗೆ ಪೇಪ್ರು ನೋಡುದ್ರಾ?
ಚೇರ್ಮನ್ರು : ಇಲ್ಲಾ ಕಣಾÛ, ಯಾಕ್ ಏನಾತ್ಲಾ?
ಅಮಾಸೆ: ಅಯ್ಯೋ ಬಾಹುಬಲಿ ಸಿನಿಮಾಗಿಂತ ಬಿಜೆಪಿ ಬಲಿ ಸಿನಿಮಾದೇ ವಿಸ್ಯ ಕಣಣ್ಣೋ. ಬೈ ಎಲೆಕ್ಷನ್ಯಾಗೆ ಸೋತ್ರು ಬಿಜೆಪಿಯವರಿಗೆ ಬುದ್ಧಿ ಬಂದಂಗಿಲ್ಲ, ಅನ್ಸತದೆ. ಯಡಿಯೂರಪ್ಪ- ಈಶ್ವರಪ್ಪ ಬೀದಿಲಿ ನಿಂತು ನೀನಾ….ನಾನಾ…. ಅಂತ ಬೈಕೊಂಡು ತಿರYತಾವೆÅ. ದೇಶದಾಗೆ ಮೋದಿ ಗಾಳಿ ಐತೆ ಅಂತ ಜೋಶ್‌ನಾಗ್ ಇದ್ದ ಬಿಜೆಪಿಯೋರು ಮಂಕಾಗವೆÅ. ಮೊನ್ನೆ ಬ್ರಿಗೇಡ್ ಕ್ಯಾಪ್ಟನ್ ಈಶ್ವರಪ್ಪನೋರು ಬಿಜೆಪಿನ್ಯಾಗೆ ಬೇಜಾರಾಗಿರೋರ ಜತೆ ಮೀಟಿಂಗ್ ಮಾಡಿ ಮಾತ್ ವರೆÕಗೆ “ನಾವು ಅಪ್ಪ-ಅಮ್ಮಂಗೆ ಹುಟ್ಟಿರೋರು ಅಂತೇಳುಬಿಟ್ರಂತೆ. ಅಲ್ಲೇ ಇದ್ದ ಯಡಿಯೂರಪ್ಪನೋರ ಶಿಷ್ಯ ಏ ಏನ್ ಮಾತಾಡ್ತೀರಿ ಅಂತ ವರಾತ ತೆಗೆದಿದ್ದೇ ತಗಳಿ ಹೊಡೆªà ಬಿಟ್ರಂತೆ. ಯಡಿಯೂರಪ್ಪನೋರಗಂಟಾ ವಿಸ್ಯ ತಲುಪಿ ಆವರು ಸಿದ್ದರಾಮಯ್ಯನಿಗೆ ಆಲ್ಲಾ ಪಿತ್ತಾ ನೆತ್ತಿಗೇರಿರೋದು ಈಶ್ವರಪ್ಪಂಗೆ ಅಂತ ಬುಸುಗುಟ್ಟಿ ಎಲೆಕ್ಷನ್ಯಾಗೆ ನಾಲ್ಕನೇ ಪ್ಲೇಸ್‌ಗೊàಗಿಧ್ದೋರೆಲ್ಲಾ ಜತೆಗೂಡಿ ನನ್ ವಿರುದ್ಧ ಕತ್ತಿ ಮಸೀತಾವೆÅ, ಇದ್ಕೆಲ್ಲಾ ಬಗ್ಗೊàನಲ್ಲಾ ಈ ಯಡ್ನೂರಪ್ಪ ನೋಡ್ಕೊàತೀನಿ ಅಂದ್ರಂತೆ. ತಕ್ಸಣ ಡೆಲ್ಲಿ ಲೀಡರ್‌ಗಳ್ಗೆ ಫೋನ್ ತಗಂಡು, ಇಲ್ಲಾ ನಾ ಇರ್ಬೇಕು, ಇಲ್ಲಾ ಆವರಿರ್‌ಬೇಕು, ಪೈಸುÉ ಮಾಡ್‌ಬುಡಿ. ಇವೆಲ್ಲಾ ಸಹಿಸೋಕೆ ನನ್ ಕೈಲಿ ಆಗೋದು ಇಲ್ಲ, ನಾನ್ ಸುಮ್ನಿರೋದು ಇಲ್ಲ ಅಂದ್ರಂತೆ. ಡೆಲ್ಲಿ ಲೀಡರ್‌ಗಳು ಶ್ಯಾನೆ ತಲೆಬಿಸಿ ಮಾಡ್ಕೊಂಡವರಂತೆ. ಸ್ವಲ್ಪ ಸುಮ್ಕಿರಪ್ಪ ನಾವ್ ಬರೋಗಂಟ ಅಂತ ಈಶ್ವರಪ್ಪನೋರೆY ಹೇಳವ್ರಂತೆ. ಆಯ್ತು ಬುಡಿ ಅಂತ ಊರ್ ಕಡೆ ಹೊಂಟ ಈಶ್ವರಪ್ಪನೋರು ಮನೇಲಿ ತಣ್ಣೀರು ಸ್ನಾನಾ ಮಾಡಿ ನಾಗ ಪೂಜಾ ಹೋಮ-ಹವನ ಮಾಡಿÕದ್ರಂತೆ. ಊರೋರೆಲ್ಲಾ ಏನಾÉ ಇದು ಯಡ್ನೂರಪ್ಪೊನ್ನೋರ್ನ ಬೈಯ್ದು ಮನೇಗ್ ಬಂದು ಹೋಮ ಮಾಡ್ಸತಾವೆÅ, ಯಾಕಿರಬೋದು ಅಂತ ಯಡ್ನೂರಪ್ಪನೋರ ಶಿಷ್ಯಂದ್ರು ತಲೆಗೆ ಹುಳ ಬಿಟ್‌ಕೊಂಡು ತಿರುಗ್ತಾವ್ರಂತೆ. ಈಶ್ವರಪ್ಪನೋರ್‍ನಾ ಸೈಡ್‌ಲೈನ್ ಮಾಡೋಕೆ ಅಂತ ಮೈಸೂರು ವಿಶ್ವಣ್ಣೋರ್‍ನಾ ಬಿಜೆಪಿಗೆ ತರೋದಾ ಅಂತ ಯಡ್ನೂರಪ್ಪ ರಾತ್ರೋರಾತ್ರಿ ಎಸ್.ಎಂ.ಕಿಸ¡ನ್ನ ಹತ್ರ ಹೋಗಿದ್ರಂತೆ, ಅಯ್ಯೋ ಹಳ್ಳಿ ಹಕ್ಕಿ ತೆನೆ ಹೊರೋಕೆ ರೆಡಿ ಆದಂಗಿದೆ, ಯಾವುªಕು ಒಂದ್ ದಪಾ ಮಾತಾಡೋವಾ ಆಂತ ಹೇಳಿ ಕಳಿÕದ್ರಂತೆ. ಇದೆಲ್ಲಾ ಗೊತ್ತಾಯ್ತಿದ್ದಂತೆ, ಈಶ್ವರಪ್‌ನೋರು, ನಾನ್ ಮಾತಾಡಿದ್ದಕ್ಕೆಲ್ಲಾ ಸೀರಿಯಸ್ ತಗೋಬಾರ್ಧು, ಯಡ್ನೂರಪ್ಪನೋರೇ ನಮ್ ಲೀಡ್ರು, ಅವ್ರು ಹೇಳªಂತೆ ಕೇಳ್‌ಕೊಂಡ್ ಇರಿ¤àವಿ ಅಂತಾನೂ ಹೇಳಿದ್ರಂತೆ, ಇದ್ನ ಕೇಳಿ ಕೆಲವ್ರು ನಿಮ್ಹಾನ್ಸ್ ಕಡೆ ಹೊಂಟವರಂತೆ. ಚೆಂದಾಗೈತಲ್ಲಾ ಪೈಟಿಂಗು.
ಚೇರ್ಮನ್ರು: ಹೋಗ್ಲಿ ಬಿಡ್ಲಾ ಅಮಾಸೆ, ಆವ್ರ ಕತೆ ಹಂಗೇಯಾ, ನಮ್ ಸಿದ್ರಾಮಣ್ಣೋರು ಎಲ್‌ಗೋದ್ರು ಕಾಣಿ¤ಲ್‌ವಲ್ಲಾ
ಅಮಾಸೆ: ಅಯ್ಯೋ ನಿಮ್ಗೆ ಗೊತ್ತಿಲ್ವಾ, ಸಿದ್ದರಾಮಣ್ಣೋರು ದುಬೈಗೋಗವೆÅ ಸಾ….. ಸೇಕುಗಳ ಜತೆ ಮೀಟಿಂಗ್ ಅಂತೆ, ನಮ್ ಕಡೆ ಒಸಿ ದುಡ್ ತಗೊಂಡ್ ಬನ್ನಿ. ಬಂಡ್ವಾಳ ಹಾಕಿ ಯ್ನಾಪಾರ ಮಾಡಿ ಲಾಭ ಸಂದಾಗ್ ಬತ್ತದೆ ಅಂತ ಹೇಳವ್ರಂತೆ. ದುಬೈ ಸೇಕುಗಳು ಆಯ್ತು ಬುಡಿ ಬತ್ತೀವಿ ಅಂತ ಹೇಳವ್ರಂತೆ. ಸಿದ್ದರಾಮಣ್ಣೋರು ಆಲ್ಲಿ ಪಂಚೆ-ಗಿಂಚೆ ಬಿಟ್ಟು ಸೂಟು -ಬೂಟು ಹಾಕ್ಕೊಂಡ್ ಮಿಂಚತವ್ರಂತೆ. ಫುಲ್ ಅಪಿಷಿಯಲ್ಲು, ಇನ್‌ಸಲ್ಟಾ, ಬೆಲ್ಟಾ, ಕೂಲಿಂಗ್ ಗಿಲಾಸು ಹಾಕ್ಕೊಂಡು ಪಿಲ್ಮ್ ಹೀರೋ ತರಾ ಅವ್ರಂತೆ.
ಬೈ ಎಲೆಕ್ಷನ್ಯಾಗೆ ಎಲುx ಸೀಟ್ ಗೆದ್ ಮ್ಯಾಲೆ ಸಿದ್ದರಾಮಣ್ಣೋರ ಖದರ್ರೆ ಚೇಂಚ್ ಆಗಿದೆ ಸಾ…. ಮುಂದೆನೂ ನಾವೇಯಾ… ನೋಡ್ತಾ ಇರಿ ಅಂತ ಚಾಲೆಂಜ್ ಹಾಕವೆÅ. ಇದೇ ಟೈಮ್‌ನ್ಯಾಗೆ ಬಿಜೆಪಿಯೋರ ಮನೇಲಿ ಬೇರೆ ಬೆಂಕಿ ಹತ್‌ಕೊಂಡೈತಲ್ಲಾ, ಫುಲ್ ಮಜಾ ತಗೊಂತಾವೆÅ. ಕೆಪಿಸಿಸಿಗೆ ನಾ ಯೇಳೊªàರೆY ಅದ್ಯಕ್ಸ ಮಾಡಿದ್ರೆ ಪಕ್ಸನಾ ಪವರ್‌ಗೆ ತರಿ¤àನಿ ಅಂತಾನೂ ಹೈಕಮಾಂಡ್‌ಗೆ ಹೇಳವ್ರಂತೆ. ಇದ್ರಿಂದ ಶ್ಯಾನೆ ಬ್ಯಾಸರಾ ಮಾಡ್ಕೊಂಡ ಶಿವಕುಮಾರಣ್ಣೋರು ಆಮೆರಿಕಾಕ್ಕೋಗಿ ತಣ್ಣಗವ್ರಂತೆ.
ಅತ್ಲಾಗೆ ಉತ್ತರ್ ಕರ್ನಾಟಕದ್ಯಾಗೆ ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್ ಸಾಹೇಬ್ರು, ನಮY ಕೆಪಿಸಿಸಿ ಪ್ರಸಿಡೆಂಟ್ ಮಾಡ್ರಿ ಸರ್ರಾ..ನೀವ್ ಹೇಳªಂಗ್ ಕೇಳ್ತೀವ್ ಅಂತ ಹೇಳವ್ರಂತೆ. ಪರಮೇಶ್ವರಣ್ಣೋರು ಖರ್ಗೆ ಸಾಹೇಬ್ರಗಂಟಾ ಹೋಗಿ, ನನ್ನೇ ಮುಂದ್‌ವರಿÕ ಸಾರ್, ನನ್ ಪರ ಹೈಕಮಾಂಡ್‌ನಾÂಗೆ ಬ್ಯಾಟಿಂಗ್ ಮಾಡಿ ಅಂತ ಕೇಳ್‌ಕೊಂಡ್ರಂತೆ. ಅವಕಾಸ ಸಿಕ್ರೆ ಒಂದ್ ಕೈ ನೋಡೋವಾ ಅಂದೊRಂಡೀರೋ ಖರ್ಗೆ ಸಾಹೇಬ್ರು ಆಯ್ತು ನೋಡೋಣ್ ಬಿಡ್ರಿ ಆಂತ ಸಾಗಾಕಿದ್ರಂತೆ.
ಅಸೋಕ್ ಪಟ್ಟಣ್‌ಸಾಹೇಬ್ರು ಎಲ್ರೂಗೂ ಹಲ್ವಾ ಕೊಡೋರ್, ಡೆಲೀನಾಗ್ ಕೆ.ಎಚ್.ಮುನಿಯಪ್ಪನೋರು ಅವ್ರಿಗೆ ಹಲ್ವಾ ಕೊಟ್ರಂತೆ. ಮಿನಿಸ್ಟರ್ ಮಾಡಿ ಅಂತಾ ಕೇಳ್ಳೋಕೋದಾ ಆಸಾಮೀನಾ….ನನ್ ಪರ ಬ್ಯಾಟಿಂಗ್ ಬಂದ್ರು ಅಂತ ರಾಹುಲ್ ಗಾಂಧಿ ಪಕ್ಕ ನಿಲ್ಸಿ ಪಟ ತೆಗÕವ್ರಂತೆ. ಅದ್ನ ವಾಟ್ಯಾಪ್‌ನ್ಯಾಗೆ ಬಿಟ್ಟು ಎಲ್ರೂಗೂ ಹುಳ ಬಿಟ್ಟವ್ರಂತೆ, ಏನೋ ಮಾಡೋಕೋಗಿ ಏನೇನೋ ಆಯ್ತಲ್ಲಾ ಬ್ರದರುÅ ಅಂತಾ ಅಸೋಕಣ್ಣಾ ಗೋಳಾಡಾತವ್ರಂತೆ.
ಚೇರ್ಮನ್ರು: ಹೌದೇನಾÉ, ಹೋಗ್ಲಿ ಬುಡು. ದ್ಯಾವೇಗೌಡ್ರು ಯಾಕ್ಲಾ ಅದೆಂತದೋ ನೇಚರೋಪಥಿ ಟ್ರೀಟ್‌ಮೆಂಟ್ ತಗೋತಾವ್ರಂತೆ.
ಅಮಾಸೆ: ಹೌದು ಸಾ…… ತೂಕ ಇಳಿÕ ಹಗುರ ಆಗವೆÅ. ನಂಜನಗೂಡು, ಗುಂಡ್ಲುಪೇಟೆ ಎಲೆಕ್ಷನ್ಯಾಗೆ, ಸುಮ್ಕಿದ್ದು ಕಾಂಗ್ರೆಸ್‌ನೋರೆY ಸಪೋರ್ಟ್ ಮಾಡಿ ಈಗ ಕೈ ಕೈ ಹಿಸುಕೊಳ್‌ತಾವೆÅ. ಜೆಡಿಎಸ್-ಕಾಂಗ್ರೆಸ್ ಅಡೆjಸ್ಟ್‌ಮೆಂಟು ಅಂತ ಊರೆಲ್ಲಾ ಟಾಂ ಟಾಂ ಹಾಗೋಗೈತೆ. ರೇವಣ್ಣ -ಸಿದ್ದರಾಮಣ್ಣಾ ಮ್ಯಾಚ್ ಪಿಕ್ಸಿಂಗ್ ಅಂತ ಎಲ್ಲಾ ಕಡೆ ಪುಕಾರಬ್ಬೆ„ತೆ. ರೇವಣ್ಣೋರು -ಸಿದ್‌ರಾಮಣ್ಣೋರು ಗುಪ್ ಚುಪ್ ಮಾತಾಡಿದ್ದು ಜೆಡಿಎಸ್‌ನೋರೆY ಗೊತ್ತಾಗಿನೇ ಈ ಪುಕಾರ್ ಹಬ್ಬಿರೋದಂತೆ. ಕುಮಾರಣ್ಣೋರು ಹುಬ್ಬಳಾÂಗೆ ಕುಳು¤, ಹೀಂಗಾದ್ರೆ ಹೆಂಗೆ ಅಂತ ಗದರದ್ರಂತೆ. ಇದ್ರಿಂದ ದ್ಯಾವೇಗೌಡ್ರು ಫುಲ್ ಟೆನ್ಸನ್ ಆಗಿ, ಮ್ಯಾಚ್ ಪಿಕ್ಸಿಂಗ್ ಆಗಿಲ್ಲಾ, ರೇವಣ್ಣಾ ನಾನ್ ಹಾಕಿದ್ ಗೆರೆ ದಾಟಲ್ಲಾ, ಮನೆ ಯಜಮಾನ ನಾನೇ. ನನ್ ಮಾತು ಮೀರಂಗಿಲ್ಲ ಯಾರೂ ಸೈತ ಅಂತ ಕಡ್ಡಿ ಮುರªಂತೆ ಹೇಳವ್ರಂತೆ.
ರೇವಣ್ಣ-ಕುಮಾರಣ್ಣ ಇಬ್ರೇ ಎಲೆಕ್ಷನ್ ಕಂಟೆಸ್ಟ್ ಮಾಡೋದು, ಬೇರೆ ಯಾರೂ ಬ್ಯಾಡ ಅಂತಾನೂ ಹೇಳವ್ರಂತೆ. ಆದ್ರೆ, ರೇವಣ್ಣೋರ ಮಗ ಪ್ರಜ್ವಲ್ ಹುಣಸೂರ್‌ನ್ಯಾಗೆ ಹೋಗಿ ನಾನ್ ನಿಲ್ತಿàನಿ, ನಮ್ ತಾತಾ ಹೇಳವೆÅ, ಚಿಕ್ಕಪ್ಪಂನೂ ಒಪ್ಪಿತಾವೆÅ ಆಂತ ಹೇಳ್ಕೊಂಡ್ ಬತ್ತಾವ್ರಂತೆ. ಅದ್ಕೆ ರೇವಣ್ಣೋರು, ಏ ಮಗಾ ಸುಮ್ಕಿರು ತಾತಾ ಬ್ಯಾಸ್ರಾ ಮಾಡ್ಕೊàತಾದೆ, ನೀನ್ ಎಮ್ಮೆಲ್ಲೆ ಮೆಟೀರಿಯಲ್ಲಲ್ಲಾ, ಎಂಪಿ ಮೆಟೀರಿಯಲ್ಲು, ತಾತಾನೇ ನಿಂಗೆ ಸೀಟ್ ಬಿಟ್‌ಕೊಡ್ತಾರೆ, ಒಸಿ ತಾಳ್ಕೊà ಅಂದ್ರತೆ. ಅದ್ಕೆ ಪ್ರಜ್ವಲ್, ಹಂಗೆಲ್ಲಾ ಆಗೋಕಿಲ್ಲಾ, ಅಮ್ಮಾ ಹೇಳವೆÅ ನೀನ್ ನಿಂತ್ಕೊà ಕಂದಾ ಅಂತಾ, ನಿಲ್ಲೋದೆಯಾ..ನೀವ್ ಸುಮ್ಕಿರಿ ಆಂದ್ರತೆ. ಆಯ್ತು ಬುಡ್ಲಾ ಮಗಾ, ನೋಡೋಣಾ ಅಂತಾ ಪೇಪರ್‌ನವ್ರ ಹತ್ರಾ ಬಂದು ರೇವಣ್ಣೋರು, ನನ್ ಮಗಾನೂ ದುಡೀತಾವೆ° ಪಾರ್ಟಿಗೆ, ನಿಂತ್ರೆ ಏನ್ ತಪ್ಪೂ ಅಂತಾ ಕೇಳವೆÅ.
ಚೇರ್ಮನ್ರು: ಆಯ್ತು ಬುಡ್ಲಾ ಅವ್ರದೇ ಪಾರ್ಟಿ, ಅವ್ರೇ ಟಿಕೆಟ್ ಪ್ರಿಂಟ್ ಮಾಡೋರು, ಬೇಕಾದವ್ರಗೆ ಕೊಡ್ತಾರೆ. ಯಾವ್ ಹೈಕಮಾಂಡ್‌ಗೂ ಸಲಾಮು ಹೊಡೆಯಂಗಿಲ್ಲಾ, ಯಾವ್ ಲೀಡ್ರುಗೂ ಮುಲಾಮು ಹಚ್ಚಾಂಗಿಲ್ಲಾ, ಹಂಗಿರ್‌ಬೇಕ್ ನೋಡು, ದ್ಯಾವೇಗೌಡ್ರೆ ಫೈನಲ್ಲು.
ಅಮಾಸೆ: ಹೌದ್ಯೋಳಿ ಸಾ….ನಿಮ್ ಮಾತೂ ದಿಟ್‌ವೇ, ಮಕ್ಳು, ಮೊಮ್ಮಕ್ಳು, ಬೀಗ್ರು ಎಲ್ಲಾರುY
ಫೀಲ್ xಗಿಳಿಸ್ತಾರೆ. ಅಯ್ಯೋ ಬುಡಿ ರಾಜಿRàಯ ಕಟ್‌ಕೊಂಡ್ ನಮ್‌ಗೆàನ್ಯಾಬೇಕು. ಐತ್ವಾರಾ ಅಲ್ವಾ, ಊರ್‌ನ್ಯಾಗೆ ಗುಡ್ಡೆ ಬಾಡು ಹಾಕೌವ್ರಂತೆ, ಚೆನ್ನಾಗಿರೋ ಪೀಸ್Yಳ್ನ ಹಾರಸ್ಕೋಬಿಡ್ತಾವೆ ಬಡೈತಾವು, ಹೋಗ್ ಬತ್ತೀನಿ ಸಾ.. …
– ಎಸ್. ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.