ವೋಟಿನ ಬೇಟೆಗೆ ಎಲ್ಲವೂ ಅಸ್ತ್ರಗಳೇ


Team Udayavani, Dec 29, 2017, 12:30 AM IST

Vote-28-2017-800.jpg

ಜನಪರ ಯೋಜನೆ ಜಾರಿ, ಅನ್ಯಾಯದ ವಿರುದ್ಧ ಪ್ರತಿಭಟನೆ ಇವೆಲ್ಲ ಬೇಡವೆಂದಲ್ಲ. ಆದರೆ ರಾಜಕೀಯ ಮೂಗು ತೂರಿದಾಗ ಅವುಗಳ ಮೂಲ ಆಶಯ ಮರೆಯಾಗಿ ಬಿಡುತ್ತವೆ. ಎಲ್ಲೋ ಒಂದೆಡೆ ಮತದಾರರ ಓಲೈಕೆ, ತುಷ್ಟೀಕರಣವೇ ಮುಖ್ಯವಾಗುತ್ತದೆ. ಹೊರನೋಟಕ್ಕೆ ನ್ಯಾಯಕ್ಕಾಗಿ ಹೋರಾಟ ಅಂದುಕೊಂಡರೂ ಒಳಗೆ ವೋಟಿಗಾಗಿ ಒದ್ದಾಟವೆನಿಸಿಬಿಡುತ್ತದೆ.

ರಾಜ್ಯ ಸರಕಾರ ದಿನಕ್ಕೊಂದರಂತೆ ಹೊಸ ಹೊಸ ಯೋಜನೆಗಳನ್ನು ಘೋಷಿಸುತ್ತಿದೆ. ಅದೇನು ಮಹಾ ಅಂದರೂ ಸದ್ಯದಲ್ಲೇ ಚುನಾವಣೆ ನಡೆಯಲಿರುವುದರಿಂದ ಮಹತ್ವ ಪಡೆಯುತ್ತದೆ. ಯುದ್ಧಕ್ಕೆ ಮುನ್ನ ಶಸ್ತ್ರ ಸಂಚಯನ ಮಾಡಿಕೊಳ್ಳುವುದಿದೆ. ಮಹಾಭಾರತದಲ್ಲಿ ಅರ್ಜುನ ಇಂದ್ರಕೀಲ ಪರ್ವತದಲ್ಲಿ ಶಿವನನ್ನು ತಪಸ್ಸಿನಲ್ಲಿ ಒಲಿಸಿಕೊಂಡು ಪಾಶುಪತಾಸ್ತ್ರ  ಪಡೆದು ತನ್ನ ಬತ್ತಳಿಕೆಗೆ ಸೇರಿಸಿಕೊಂಡ ಕಥೆಯಿದೆ. ಪ್ರಸ್ತುತ ನಮ್ಮ ದೇಶದ ರಾಜಕೀಯ ದಲ್ಲೂ ಹಾಗೆಯೇ. ಸದ್ಯದಲ್ಲೇ ಚುನಾವಣೆಯಿರುವಾಗಗೆಲ್ಲ ಬೇಕಾದರೆ ಹೊಸ ಹೊಸ ಅಸ್ತ್ರಗಳಿಂದ ಬತ್ತಳಿಕೆಯನ್ನು ತುಂಬಿಸಿಕೊಂಡು ಸಂದಭೊìàಚಿತವಾಗಿ ಪ್ರಯೋಗಿಸಬೇಕಾಗುತ್ತದೆ. ಹೀಗಿರುವಾಗ ರಾಜಕೀಯದಲ್ಲಿ ಯಾವುದೂ ಸಣ್ಣ ಸಂಗತಿಯಲ್ಲ. ಹೊಸ ಯೊಜನೆಯಿರಲಿ, ಪ್ರತಿಭಟನೆಯಿರಲಿ ವೋಟಿನ ಬೇಟೆಗೆ ಎಲ್ಲವೂ ಅಸ್ತ್ರಗಳೇ.
ನೀಚ ರಾಜಕೀಯ ರಾಜಕೀಯದಲ್ಲಿ ಯಾವುದೂ ಸಣ್ಣ ಸಂಗತಿಯಲ್ಲ ಅಂದ ಮೇಲೆ ಬಾಯಿ ಚಪಲಕ್ಕೆ ಆಡಿದ ಒಂದು ಮಾತೂ ಸಾಕಾಗುತ್ತದೆ. ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಪ್ರಧಾನಿ ಮೋದಿಯನ್ನು “ನೀಚ’ ಅಂದುಬಿಟ್ಟರು. ಬಿಜೆಪಿ ಆ ಪದಪ್ರಯೋಗವನ್ನೇ ಒಂದು ಅಸ್ತ್ರವನ್ನಾಗಿಸಿಕೊಂಡಿತು. ಗುಜರಾತ್‌ ಚುನಾವಣಾ ಪ್ರಚಾರ ಭಾಷಣದುದ್ದಕ್ಕೂ ಮೋದಿ ಅದನ್ನೇ ಪ್ರಯೋಗಿಸಿದರು. ಗುಜರಾತ್‌ ಚುನಾವಣೆಯಲ್ಲಿ ಮಿಕ್ಕ ವಿಷಯಗಳಿಗಿಂತ “ನೀಚ’ ರಾಜಕೀಯವೇ ಅನುರಣಿಸಿ ಬಿಜೆಪಿ ಗೆಲುವು ಸಾಧಿಸಲು ನೆರವಾಯಿತು. ಅದರೊಂದಿಗೆ ರಾಹುಲ್ಗಾಂಧಿಯವರ ಜಾತಿ, ಜನಿವಾರಗಳೂ ಒಂದಿಷ್ಟು ಸದ್ದು ಮಾಡಿದವು. ಕಿಡಿನುಡಿಯಾದರೂ ಅದನ್ನೇ ಅಸ್ತ್ರ ಮಾಡಿಕೊಂಡು ಸಂದಭೊìà ಚಿತವಾಗಿ ಪ್ರಯೋಗಿಸುವುದು ರಾಜಕೀಯ ಜಾಣ್ಮೆ.

ಎಲ್ಲದರಲ್ಲೂ ರಾಜಕೀಯ  
ಈ ದಿನಗಳಲ್ಲಿ ನೆಲ, ಜಲ, ಧರ್ಮವೆನ್ನದೆ ಎಲ್ಲದರ ಹಿಂದೆಯೂ ರಾಜಕೀಯ ಲಾಭ ನಷ್ಟಗಳ ಲೆಕ್ಕಾಚಾರ ಇದ್ದೇ ಇರುತ್ತದೆ. ಸಣ್ಣ ಸಂಗತಿಯಾದರೂ ಅದು ರಾಜಕೀಯ ಸ್ವರೂಪ ಪಡೆದುಕೊಳ್ಳು ತ್ತದೆ. ಸರಕಾರ ಯಾವುದೇ ಕ್ರಮಕ್ಕೂ ಅದು ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೈಗೊಂಡದ್ದು ಎಂದೇ ಅರ್ಥೈಸಲಾಗುತ್ತದೆ. ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಇದೀಗ ಮಹದಾಯಿ ನದಿ ನೀರು ವಿವಾದ ಮುನ್ನೆಲೆಗೆ ಬಂದಿದೆ. ರಾಜಕೀಯ ಪಕ್ಷಗಳ ಮಧ್ಯೆ ಪ್ರತಿಷ್ಠೆಯ ವಿಷಯವೆನಿಸಿದೆ. ಇದುವರೆಗಿಲ್ಲದ ಕಾಳಜಿ ಇದೀಗ ಕಾಣಿಸಿಕೊಂಡಿದೆ. ಧರ್ಮದ ವಿಚಾರದಲ್ಲೂ ಹೀಗೆಯೇ, ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ಸರ್ಕಾರ ಆಸಕ್ತಿ ತೋರಿಸಿ ಧರ್ಮವನ್ನು ಒಡೆಯಲು ನೋಡಿತು. ಆದರೆ ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ. ಅವು ಒಂದೇ ನಾಣ್ಯದ ಎರಡು ಮುಖ ಎಂದು ಗದಗದಲ್ಲಿ ನಡೆದ ಧರ್ಮ ಜಾಗೃತಿ ಸಮಾವೇಶದಲ್ಲಿ ಒಕ್ಕೊರಲ ನಿರ್ಣಯ ಕೈಗೊಂಡು ಧರ್ಮ ವಿಭಜನೆ ಪ್ರಯತ್ನಕ್ಕೆ ತೆರೆ ಎಳೆಯಲಾಯಿತು.

ಹೊಗೆಯಾಡಿದ ಹೊನ್ನಾವರ
ಹೊನ್ನಾವರ ಕೆಲದಿನಗಳ ಹಿಂದೆ ಹೊತ್ತಿ ಹೊಗೆಯಾಡುತ್ತಿತ್ತು. ಡಿಸೆಂಬರ್‌ 6ರಂದು ಹೊನ್ನಾವರ ಪಟ್ಟಣದಲ್ಲಿ ಭಿನ್ನ ಕೋಮಿನವರ ಬೈಕ್‌ ಮತ್ತು ಅಟೋ ನಡುವೆ ಅಪಘಾತ ನಡೆಯಿತು. ಅಲ್ಲಿ ಮಾತಿಗೆ ಮಾತು ಬೆಳೆಯಿತು. ಆ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಪರೇಶ ಮೇಸ್ತ ಎಂಬ ಯುವಕ ಎರಡು ದಿನಗಳ ಬಳಿಕ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು ಜಿಲ್ಲೆಯಾದ್ಯಂತ ಪ್ರತಿಭಟನೆಗೆ ಕಾರಣವಾಯಿತು. ಘಟನೆ ರಾಜಕೀಯ ಬಣ್ಣ ಪಡೆದುಕೊಂಡಿತು. ಪ್ರತಿಭಟನೆ ಉಗ್ರ ಸ್ವರೂಪ ತಾಳಿತು. ಹೊನ್ನಾವರ ಹೊತ್ತಿ ಉರಿಯಿತು. ಕುಮಟಾ-ಬಾಡಾಗಳಿಗೂ ಕಿಡಿ ಹಬ್ಬಿತು. ಕೊನೆಗೆ ಮೃತರ ಕುಟುಂಬದ ಸದಸ್ಯರ ಒತ್ತಡಕ್ಕೆ ಮಣಿದು ರಾಜ್ಯ ಸರಕಾರ ಪರೇಶ ಮೇಸ್ತ ಪ್ರಕರಣವನ್ನು ಸಿಬಿಐಗೊಪ್ಪಿಸಲು ತೀರ್ಮಾನಿಸಿತು. ಇದೇ ತೀರ್ಮಾನವನ್ನು ಮೊದಲೇ ಕೈಗೊಂಡಿದ್ದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರಲಿಲ್ಲ. ಕಿಡಿ ಕಾಡ್ಗಿಚ್ಚಾಗಿ ಪರಿಣಮಿಸುತ್ತಿರಲಿಲ್ಲ.

ಸಾವಿನ ಹೆಸರಿನಲ್ಲೂ ರಾಜಕೀಯ
ಸಾವಿನ ಹೆಸರಿನಲ್ಲಿ ನಡೆದ ರಾಜಕೀಯದಲ್ಲಿ ಹೊನ್ನಾವರ ಹೊತ್ತಿ ಉರಿಯಿತು. ಕೆಲ ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಕೋಮುಗಲಭೆ ಕಾಣಿಸಿಕೊಂಡು ಬಂಟ್ವಾಳ ಬೇಗುದಿಗೆ ಎಡೆ ಮಾಡಿದ್ದೂ ಸಾವಿನ ರಾಜಕೀಯ. ಅನುಮಾನಾಸ್ಪದವಾಗಿ ಮೃತಪಟ್ಟ ವ್ಯಕ್ತಿ ಯಾವುದಾದರೊಂದು ರಾಜಕೀಯ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದಲ್ಲಿ ಅಥವಾ ಯಾವುದಾದರೊಂದು ಕೋಮಿಗೆ ಸೇರಿದವನಾಗಿದ್ದಲ್ಲಿ ಮುಗಿಯಿತು, ಪ್ರತಿಭಟನೆ ಪ್ರಾರಂಭ ಆಗುತ್ತದೆ. ರಾಜಕೀಯ ಸಂಘರ್ಷವಾಗಿ ಇಲ್ಲವೇ ಕೋಮು ಗಲಭೆ ಯಾಗಿ ಮಾರ್ಪಟ್ಟು ಸಮಾಜದ ಶಾಂತಿ ಕದಡಿಬಿಡುತ್ತದೆ. ಅಲ್ಲೂ ಮೃತ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದಕ್ಕಿಂತಲೂ ರಾಜಕೀಯ ಮೇಲಾಟವೇ ಮುಖ್ಯವಾಗಿ ಬಿಡುತ್ತದೆ. ತನಿಖೆಗೂ ತಡೆಯಾಗುತ್ತದೆ. ಡಿವೈಎಸ್‌ಪಿ ಗಣಪತಿ ಅಸಹಜ ಸಾವಿನ ಪ್ರಕರಣ ವಿನ್ನೂ ಕೊನೆ ಮುಟ್ಟದೆ ತನಿಖಾ ಹಂತದಲ್ಲೇ ಇದೆ. ಯಾವುದೇ ಪ್ರಕರಣದ ತನಿಖೆ ನಡೆದರೂ ಸಾûಾÂಧಾರದ ಕೊರತೆಯಿಂದಾಗಿ ಅಪರಾಧಿ ಖುಲಾಸೆಯಾಗುವುದು ನಮ್ಮ ನ್ಯಾಯ ವ್ಯವಸ್ಥೆಯ ಬಹು ದೊಡ್ಡ ದುರಂತ. ಯುಪಿಎ ಸರಕಾರ ದಲ್ಲಿ ಎ. ರಾಜಾ ದೂರಸಂಪರ್ಕ ಸಚಿವರಾಗಿದ್ದಾಗ ಸರ್ಕಾರದ ಬೊಕ್ಕಸಕ್ಕೆ ಮೂವತ್ತು ಸಾವಿರ ಕೋಟಿ ರೂ. ನಷ್ಟವುಂಟುಮಾಡಿದೆ ಎನ್ನಲಾದ 2ಜಿ ಸ್ಪೆಕ್ಟ್ರಂ ಹಗರಣವೂ ಸಾûಾÂಧಾರದ ಕೊರತೆಯಿಂದಾಗಿ ಠುಸ್ಸೆಂದುದು ಇದನ್ನೇ ಪುಷ್ಟೀಕರಿಸುವ ಇತ್ತೀಚಿನ ಸುದ್ದಿ. ಇನ್ನೂ ವಿಶೇಷವೆಂದರೆ ರಾಜಕೀಯ ಪಕ್ಷವೊಂದರ ಕಾರ್ಯಕರ್ತನೊಬ್ಬ ಹತ್ಯೆಯಾದರೆ ಹುಯಿಲೆಬ್ಬಿಸುವವರಿಗೆ ಖಾಸಗಿ ವೈದ್ಯರ ಮುಷ್ಕರದಿಂದಾಗಿ 67 ಅಮಾಯಕರು ಅಸುನೀಗಿದಾಗ ಏನೂ ಅನಿಸಿದಂತಿಲ್ಲ.

ಪ್ರತಿಭಟನೆಯಲ್ಲೂ ಮೇಲಾಟ
ಪ್ರತಿಭಟನೆ ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಪ್ರತಿಭಟನೆ ವಿಚಾರದಲ್ಲೂ ಅಷ್ಟೇ, ರಾಜಕೀಯ ಪಕ್ಷಗಳ ನಡುವೆ ಮೇಲಾಟ ನಡೆಯುವುದೂ ಇದೆ. ಏಕೆಂದರೆ ಇಲ್ಲಿ ಒಂದು ಪಕ್ಷಕ್ಕೆ ಇನ್ನೊಂದು ಪ್ರತಿಸ್ಪರ್ಧಿ. ಜಾತಿಗಳ ನಡುವಿದ್ದ ಅಸ್ಪೃಶ್ಯತೆ ಇದೀಗ ಪಕ್ಷಗಳ ನಡುವೆ ವಕ್ಕರಿಸಿಕೊಂಡುಬಿಟ್ಟಿದೆ. ರಾಜಕೀಯ ಪಕ್ಷಗಳೊಳಗಣ ಈ ಅಸ್ಪೃಶ್ಯತೆ, ಅಸಹಿಷ್ಣುತೆಗಳನ್ನು ನೀಗಿಸಿಕೊಳ್ಳದ ಹೊರತು ಸಾಮರಸ್ಯದ ನಡಿಗೆಯೆಂಬುದು ಬರೀ ನಾಟಕವೆನಿಸಿಕೊಳ್ಳದೆ?

ಗಡ್ಡಕ್ಕೆ ಬೆಂಕಿ ಬಿದ್ದಾಗ
ಜನಪರ ಯೋಜನೆ ಜಾರಿ, ಅನ್ಯಾಯದ ವಿರುದ್ಧ ಪ್ರತಿಭಟನೆ ಇವೆಲ್ಲ ಬೇಡವೆಂದಲ್ಲ. ಆದರೆ ರಾಜಕೀಯ ಮೂಗು ತೂರಿದಾಗ ಅವುಗಳ ಮೂಲ ಆಶಯ ಮರೆಯಾಗಿಬಿಡುತ್ತವೆ. ಎಲ್ಲೋ ಒಂದೆಡೆ ಮತದಾರರ ಓಲೈಕೆ, ತುಷ್ಟೀಕರಣವೇ ಮುಖ್ಯವಾಗುತ್ತದೆ. ಹೊರನೋಟಕ್ಕೆ ನ್ಯಾಯಕ್ಕಾಗಿ ಹೋರಾಟ ಅಂದುಕೊಂಡರೂ ಒಳಗೆ ವೋಟಿಗಾಗಿ ಒದ್ದಾಟವೆನಿಸಿಬಿಡುತ್ತದೆ. ವೋಟು ಬ್ಯಾಂಕ್‌ ರಾಜಕಾರಣದಲ್ಲಿ ಕಡ್ಡಿಯನ್ನೂ ಗುಡ್ಡಮಾಡಲಾಗುತ್ತದೆ. ಚಿಕ್ಕ ಕಿಡಿಯನ್ನೂ ಕಾಡ್ಗಿಚ್ಚಾಗಿಸಲಾಗುತ್ತದೆ. ಗುಡ್ಡಕ್ಕೆ ಬೆಂಕಿ ಬೀಳ ಬೇಕೆಂದಿಲ್ಲ, ಗಡ್ಡಕ್ಕೆ ಬೆಂಕಿಬಿದ್ದರೂ ಅದರಲ್ಲೇ ಮೈಕೈ ಬೆಚ್ಚಗೆ 
ಮಾಡಿ ಕೊಳ್ಳುವುದೇ ರಾಜಕೀಯ.

ಟಾಪ್ ನ್ಯೂಸ್

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು

ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Kerala: ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Lawrence Bishnoi’s brother Anmol Bishnoi arrested in America

Anmol Bishnoi: ಅಮೆರಿಕದಲ್ಲಿ ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಅನ್ಮೋಲ್‌ ಬಿಷ್ಣೋಯ್‌ ಬಂಧನ

Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ

Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ

ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Siddu–kanaka

Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು

Untitled-1

Kasaragod: ಅಪರಾಧ ಸುದ್ದಿಗಳು

Shirva1

Shirva: ಹಿಂದೂ ಜೂನಿಯರ್‌ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ

ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Kerala: ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.