ಭಾರತದ ಹೈ ಟ್ಯಾರಿಫ್ ನೀತಿ ವರವೋ? ಶಾಪವೋ?
Team Udayavani, Jan 20, 2022, 1:30 PM IST
ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ದೇಶೀಯವಾಗಿಯೇ ಹೆಚ್ಚಾಗಿ ಉತ್ಪಾದಿಸಿ ಇಲ್ಲೇ ಬಳಕೆ ಮಾಡುವಂತಾಗಬೇಕು ಎಂಬ ಕಾರಣದಿಂದ ಭಾರತದಲ್ಲಿ ಹೆಚ್ಚಿನ ಟ್ಯಾರಿಫ್ ನೀತಿ ಅನುಸರಿಸಲಾಗುತ್ತಿದೆ. ಅಂದರೆ, ಭಾರತಕ್ಕೆ ಆಮದಾಗುವ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ. ಇದು ಭಾರತದ ಕಂಪನಿಗಳಿಗೆ ಲಾಭವಾಗುವ ಬದಲು, ನಷ್ಟ ತರುತ್ತಿದೆ ಎಂದು ಭಾರತೀಯ ಸೆಲ್ಲುಲರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್‌ನ ವರದಿ ತಿಳಿಸಿದೆ.
ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆ
ಚೀನ, ವಿಯೆಟ್ನಾಂ, ಮೆಕ್ಸಿಕೋ ಮತ್ತು ಥಾಯ್ಲೆಂಡ್‌ಗೆ ಹೋಲಿಸಿದರೆ, ಭಾರತದ ಸಾಧನೆ ಅತ್ಯಂತ ಕಡಿಮೆ. ಇವೆಲ್ಲವೂ ಕಡಿಮೆ ದರದಲ್ಲಿ ಕಾರ್ಮಿಕರು ಸಿಗುವ ದೇಶಗಳಾಗಿವೆ. ಅಂದರೆ, 1980ರ ಸಾಲಿಗೆ ಹೋಲಿಕೆ ಮಾಡಿದರೆ, ಆಗ 35ನೇ ಸ್ಥಾನದಲ್ಲಿದ್ದ ಚೀನಾ ಈಗ ನಂ.1 ಸ್ಥಾನಕ್ಕೇರಿದೆ. 1990ರಲ್ಲಿ ಒಂದೇ ಒಂದು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ರಫ್ತು ಮಾಡದಿದ್ದ ವಿಯೆಟ್ನಾಂ ಇಂದು 8ನೇ ಸ್ಥಾನ ಪಡೆದಿದೆ. ಹಾಗೆಯೇ ಮೆಕ್ಸಿಕೋ 1980ರಲ್ಲಿ 37ನೇ ಸ್ಥಾನದಲ್ಲಿದ್ದು, ಈಗ 11ನೇ ಸ್ಥಾನಕ್ಕೇರಿದೆ. ಇನ್ನು ಥಾಯ್ಲೆಂಡ್ ದೇಶ 1980ರಲ್ಲಿ 45ನೇ ಸ್ಥಾನದಲ್ಲಿದ್ದು, ಈಗ 15ನೇ ಸ್ಥಾನಕ್ಕೇರಿದೆ. ಆದರೆ, 1980ರಲ್ಲಿ ಭಾರತ 40ನೇ ಸ್ಥಾನದಲ್ಲಿತ್ತು. ಈಗ ಇದು 28ನೇ ಸ್ಥಾನಕ್ಕೆ ಏರುವಲ್ಲಿ ಮಾತ್ರ ಸಫಲವಾಗಿದೆ.
ಟ್ಯಾರಿಫ್ ಹೆಚ್ಚಳದಿಂದ ಲಾಭವಾಗಿಲ್ಲವೇ?
ಚೀನಾವಾಗಲಿ, ವಿಯೆಟ್ನಾಂ ಆಗಲಿ ಅಥವಾ ಉಳಿದ ದೇಶಗಳು ಟ್ಯಾರಿಫ್ ಹೆಚ್ಚಳದ ನೀತಿಗೆ ಹೋಗಿಲ್ಲ. ಆದರೆ, ಭಾರತ ಮಾತ್ರ ಅಮೆರಿಕದ ರೀತಿಯಲ್ಲಿ ಟ್ಯಾರಿಫ್ ಹೆಚ್ಚಳದ ನೀತಿಗೆ ಹೋಗಿದೆ. ಭಾರತದಲ್ಲಿನ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಟ್ಯಾರಿಫ್ ಹೆಚ್ಚಳದ ನೀತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿರುವ ಹೂಡಿಕೆದಾರರು ಮತ್ತು ಸಲಕರಣೆಗಳ ಉತ್ಪಾದಕರು ಭಾರತದಿಂದ ದೂರ ಸರಿಯುತ್ತಿದ್ದಾರೆ. ಹೀಗಾಗಿಯೇ ನಮ್ಮದು ಅತಿದೊಡ್ಡ ಆರ್ಥಿಕತೆಯಾಗಿದ್ದರೂ, ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ ಎಂದು ವರದಿ ತಿಳಿಸಿದೆ. ಅಲ್ಲದೆ, ಇಲ್ಲಿಗೆ ಬಂದು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸಬೇಕಾದರೂ, ಬೇರೆ ದೇಶದಿಂದ ಇದಕ್ಕೆ ಬೇಕಾದ ವಸ್ತುಗಳನ್ನು ತರಿಸಿಕೊಳ್ಳುವುದು ದುಬಾರಿಯಾಗುತ್ತದೆ. ಹೀಗಾಗಿಯೇ ಅವರು ಹಿಂದೆ ಸರಿಯುತ್ತಿದ್ದಾರೆ.
ಇಂಡಸ್ಟ್ರಿ ಹೇಳುವುದೇನು?
ಟ್ಯಾರಿಫ್ ಹೆಚ್ಚಳ ನೀತಿಗಿಂತ ಹೊರತಾಗಿ ನಾವು ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಸ್ಪರ್ಧೆ ನೀಡಬೇಕು. ಟ್ಯಾರಿಫ್ ಹೆಚ್ಚಳದ ನೀತಿ ಕೇವಲ ಅಮೆರಿಕದಂಥ ದೇಶಗಳಿಗೆ ಅನ್ವಯವಾಗುತ್ತದೆ. ನಮ್ಮಲ್ಲಿ ಮಾರುಕಟ್ಟೆ ಸುಧಾರಿಸಿಕೊಳ್ಳಬೇಕಾದರೆ, ಪೈಪೋಟಿ ನೀಡಿಯೇ ಗೆಲ್ಲಬೇಕು ಎಂದು ಇಂಡಸ್ಟ್ರಿ ತಜ್ಞರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.