ಹೆಚ್ಚುವರಿ ಬೆಡ್‌, ಐಸಿಯುಗಳ ಸೌಲಭ್ಯ


Team Udayavani, Aug 26, 2021, 6:40 AM IST

ಹೆಚ್ಚುವರಿ ಬೆಡ್‌, ಐಸಿಯುಗಳ ಸೌಲಭ್ಯ

ರಾಜ್ಯದ ವಿವಿಧ ಜಿಲ್ಲೆಗಳಿಗೆ “ಕೊರೊನಾ ಅವಧಿ’ಯಲ್ಲಿ ಆರೋಗ್ಯ ವ್ಯವಸ್ಥೆಯಲ್ಲಾದ ಸುಧಾರಣ ಕ್ರಮಗಳು ಏನು? ಕುರಿತಂತೆ ಉದಯವಾಣಿ ನಡೆಸಿದ ಜಿಲ್ಲಾವಾರು ಅವಲೋಕನ…

ಗದಗ : ಮಕ್ಕಳಿಗೆ ಪ್ರತ್ಯೇಕ ವಾರ್ಡ್‌ ;

ಶೇ.25 ಬೆಡ್‌ಗಳಿಗೆ ವೆಂಟಿಲೇಟರ್‌ ಹೊಂದಿರುವ ಉತ್ತರ ಕರ್ನಾಟಕದ ಏಕೈಕ ಆಸ್ಪತ್ರೆ ಎಂಬ ಖ್ಯಾತಿಗೆ ಜಿಮ್ಸ್‌ ಪಾತ್ರವಾಗಿದೆ. ಮುಂಡರಗಿ, ರೋಣ, ನರಗುಂದ ಸೇರಿದಂತೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 50 ಆಕ್ಸಿಜನೈಸ್ಡ್ ಬೆಡ್‌ ಒದಗಿಸಲಾಗಿದ್ದು, ಮಕ್ಕಳ ಪ್ರತ್ಯೇಕ ವಾರ್ಡ್‌ ಆರಂಭಿಸಲಾಗಿದೆ. ಜಿಲ್ಲಾಸ್ಪತ್ರೆಗೆ 12 ಮಕ್ಕಳ  ವೆಂಟಿಲೇಟರ್‌ಗಳು ಬಂದಿವೆ. ಸರಕಾರ ಮತ್ತು ವಿವಿಧ ದಾನಿಗಳು ಸುಮಾರು 100ಕ್ಕೂ ಹೆಚ್ಚು ಆಕ್ಸಿಜನ್‌ ಕಾನ್ಸಂ ಟ್ರೇಟರ್‌, ನೂರಾರು ಜಂಬೋ ಸಿಲಿಂಡರ್‌ಗಳು ದೇಣಿಗೆ ರೂಪದಲ್ಲಿ ಬಂದಿವೆ.

ಹಾವೇರಿ : ಸರಕಾರಿ ಆಸ್ಪತ್ರೆಗಳಿಗೆ ಹೈಟೆಕ್‌ ಸ್ಪರ್ಶ ;

ಜಿಲ್ಲಾಸ್ಪತ್ರೆಗಳಲ್ಲಿ ಆಕ್ಸಿಜನ್‌ ಬೆಡ್‌ಗಳ ಸಂಖ್ಯೆ 30 ರಿಂದ 240ಕ್ಕೆ ಏರಿಕೆಯಾಗಿದೆ. ಕೇವಲ 2 ವೆಂಟಿಲೇಟರ್‌ನಿಂದ 40 ವೆಂಟಿಲೇಟರ್‌ ಸೌಲಭ್ಯ ಕಲ್ಪಿಸಲಾಗಿದೆ, ಐಸಿಯು ಹಾಸಿಗೆಗಳು 10 ರಿಂದ 66ಕ್ಕೆ ಹೆಚ್ಚಳವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಹೊಸದಾಗಿ ಒಂದು ಸಾವಿರ ಲೀಟರ್‌ ಸಾಮರ್ಥ್ಯ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ತಲಾ 500 ಲೀಟರ್‌ ಸಾಮರ್ಥ್ಯದ ಆಕ್ಸಿಜನ್‌ ಉತ್ಪಾದನ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿ 100 ವೆಂಟಿಲೇಟರ್‌ ಸೌಲಭ್ಯ ಕಲ್ಪಿಸಲಾಗಿದೆ.

ಹಾಸನ  :ಆಕ್ಸಿಜನ್‌ ಪ್ಲಾಂಟ್‌ಗಳ ನಿರ್ಮಾಣ ;

ಜಿಲ್ಲೆಯಲ್ಲಿ 7 ತಾಲೂಕು ಕೇಂದ್ರ ಆಸ್ಪತ್ರೆಗಳಿದ್ದು, 100ರಿಂದ 300 ಹಾಸಿಗೆಗಳ ಸೌಲಭ್ಯವನ್ನು ಹೊಂದಿವೆ. ಈ ಎಲ್ಲ ತಾಲೂಕು ಆಸ್ಪತ್ರೆಗಳ ಆವರಣದಲ್ಲಿ 3 ತಿಂಗಳನಿಂದೀಚೆಗೆ ಆಕ್ಸಿಜನ್‌ ಪ್ಲಾಂಟ್‌ಗಳು ನಿರ್ಮಾಣವಾಗಿವೆ. ಜತೆಗೆ ವಿದ್ಯುತ್‌ ಕಡಿತದ ಸಂದರ್ಭದಲ್ಲಿ ಆಕ್ಸಿಜನ್‌ ಪೂರೈಕೆ ವ್ಯತ್ಯಯವಾಗಬಾರದೆಂದು 125 ಕೆವಿ ಜನರೇಟರ್‌ಗಳನ್ನೂ ಅಳವಡಿಸಲಾಗಿದೆ.

ಕೊಪ್ಪಳ :ಆಮೂಲಾಗ್ರ ಬದಲಾವಣೆ ;

ಕೊರೊನಾ ಪೂರ್ವದಲ್ಲಿ ಸರಕಾರಿ ಆಸ್ಪತ್ರೆಗಳು ಅವ್ಯವಸ್ಥೆಯ ತಾಣಗಳು ಎನ್ನುವ ಹಣಪಟ್ಟಿ ಹೊತ್ತಿದ್ದವು. ರೋಗಿಗಳ ಚಿಕಿತ್ಸೆಗೆ ಬೇಕಾದ ಅಗತ್ಯ ಸಾಮಗ್ರಿಗಳೇ ಇಲ್ಲದಂಥ ಸ್ಥಿತಿಯೂ ಹಿಂದೆ ಕಾಣುತ್ತಿತ್ತು. ಆದರೆ ಕೊರೊನಾ ತರುವಾಯ ಈಗ ಪಿಎಚ್‌ಸಿ, ಸಿಎಚ್‌ಸಿ, ನಗರ ಆಸ್ಪತ್ರೆ, ಜನರಲ್‌ ಆಸ್ಪತ್ರೆ, ಜಿಲ್ಲಾಸ್ಪತ್ರೆಗಳ  ಅಭಿವೃದ್ಧಿ ವಿಚಾರದಲ್ಲಿ ಆಮೂಲಾಗ್ರ ಬದಲಾವಣೆ ಕಂಡಿದೆ.

ದಕ್ಷಿಣ ಕನ್ನಡ : 16 ಆಕ್ಸಿಜನ್‌ ಘಟಕಗಳು ;

ಜಿಲ್ಲೆಯಲ್ಲಿ 16 ಆಕ್ಸಿಜನ್‌ ಘಟಕಗಳಿವೆ. ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಅಳವಡಿಸಲಾಗಿದೆ. ಜಿಲ್ಲಾ, ತಾಲೂಕು, ಮತ್ತು ಮಕ್ಕಳ ಆಸ್ಪತ್ರೆ ಗಳಲ್ಲಿ ಮಕ್ಕಳಿಗೆಂದು ಹೆಚ್ಚುವರಿ ಬೆಡ್‌, ಐಸಿಯು ವ್ಯವಸ್ಥೆ ಕಲ್ಪಿಸ ಲಾಗಿದೆ. ನಗರ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೆ ಸಿಬಂದಿ, ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಆರ್‌ಟಿಪಿಸಿಆರ್‌ ಲ್ಯಾಬ್‌ ಇದ್ದು, ತಾಲೂಕು ಮಟ್ಟದಲ್ಲಿ ಪ್ರಯೋಗಾಲಯ ತೆರೆಯಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಉನ್ನತೀಕರಣಗೊಂಡ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಲಾಗಿದೆ.

ಬೀದರ್‌ :  490 ವೆಂಟಿಲೇಟರ್‌ ;

ಬ್ರಿಮ್ಸ್‌ನಲ್ಲಿ 90 ಬೆಡ್‌ಗಳಿಗೆ ಮಾತ್ರ ಇದ್ದ ಆಕ್ಸಿಜನ್‌ ವ್ಯವಸ್ಥೆಯನ್ನು 490ಕ್ಕೆ ಹಾಗೂ ವೆಂಟಿಲೇಟರ್‌ಗಳನ್ನು 10ರಿಂದ 82ಕ್ಕೆ ಹೆಚ್ಚಿಸಲಾಗಿದೆ. ಮುಖ್ಯವಾಗಿ ಕೋವಿಡ್‌ 2ನೇ ಅಲೆ ವೇಳೆ ಆಕ್ಸಿಜನ್‌ ಕೊರತೆ ಆಗಿದ್ದ ಬ್ರಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಡಿಆರ್‌ಡಿಒ ಸಹಭಾಗಿತ್ವದಲ್ಲಿ 1 ಸಾವಿರ ಎಲ್‌ಪಿಎಂ ಮತ್ತು ಕೆಎಸ್‌ಎಸ್‌ಐಡಿಸಿ ವತಿಯಿಂದ 660 ಎಲ್‌ಪಿಎಂ ಸಾಮರ್ಥ್ಯದ ಆಕ್ಸಿಜನ್‌ ಘಟಕ ನಿರ್ಮಿಸುವ ಕಾರ್ಯ ಸಾಗಿದೆ.

ಚಾಮರಾಜನಗರ : 155 ಆಕ್ಸಿಜನ್‌ ಬೆಡ್‌ ;

ಜಿಲ್ಲಾಸ್ಪತ್ರೆಯಲ್ಲಿ ಐಸಿಯು ಸೌಕರ್ಯವೇ ಇರಲಿಲ್ಲ. ಕೋವಿಡ್‌ ಬಳಿಕ ಇಲ್ಲಿ 50 ಹಾಸಿಗೆಗಳ ಐಸಿಯು ವ್ಯವಸ್ಥೆ ಕಲ್ಪಿಸಲಾಗಿದೆ. 25 ವೆಂಟಿಲೇಟರ್‌ ಅಳವಡಿಸಲಾ ಗಿದೆ. ಮೊದಲು 55 ಆಕ್ಸಿಜನ್‌ ಬೆಡ್‌ಗಳಿದ್ದವು. ಈಗ 155 ಆಕ್ಸಿಜನ್‌ ಬೆಡ್‌ಗಳಿವೆ. ಜಿಲ್ಲೆಗೆ ಪ್ರತ್ಯೇಕ ಆರ್‌ಟಿಪಿಸಿಆರ್‌ ಪ್ರಯೋಗಾಲಯ, ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಯಲ್ಲಿ ಪ್ರಮುಖವಾಗಿ ಐಸಿಯು ಹಾಸಿಗೆ, ವೆಂಟಿಲೇಟರ್‌ ಸ್ಥಾಪನೆಯಾಗಿವೆ. ತಜ್ಞ ವೈದ್ಯರು, ವೈದ್ಯರು, ಸಿಬಂದಿಯೂ ಹೆಚ್ಚಳವಾಗಿದೆ.

ಉ.ಕನ್ನಡ  : 250 ಆಕ್ಸಿಜನ್‌ ಹಾಸಿಗೆ ;

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಸಮಯದಲ್ಲಿ ಮೈಕೊಡವಿಕೊಂಡು ಮೇಲೆದ್ದಿದ್ದು ಆರೋಗ್ಯ ಕ್ಷೇತ್ರ. ಕಾರವಾರ ಮೆಡಿಕಲ್‌ ಕಾಲೇಜಿನಲ್ಲಿ ಮೊದಲು ಕೋವಿಡ್‌ ಚಿಕಿತ್ಸಾ ಘಟಕ ಸ್ಥಾಪನೆಯಾಯಿತು. ರೋಗಿಗಳು ಶಿರಸಿ, ಯಲ್ಲಾಪುರ, ದಾಂಡೇಲಿಯಿಂದ ಕಾರ ವಾರ ತಲುಪುವುದು ಕಷ್ಟ ಎನಿಸಿದಾಗ ಎಚ್ಚೆತ್ತು ಕೊಂಡ ಸರಕಾರ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸಾ ಘಟಕಕ್ಕೆ ಬೇಕಾದ ಸೌಲಭ್ಯಗಳನ್ನು ಹೆಚ್ಚಿಸತೊಡಗಿತು. ಕಾರವಾರದಲ್ಲಿ 2, ಕುಮಟಾ ದಲ್ಲಿ 1 ಆಕ್ಸಿಜನ್‌ ಪ್ಲಾಂಟ್‌ ನಿರ್ಮಾಣವಾಗಿದ್ದು, ಶಿರಸಿ, ಯಲ್ಲಾಪುರ, ದಾಂಡೇಲಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. 37 ವೆಂಟಿಲೇಟರ್‌, 250 ಆಕ್ಸಿಜನ್‌ ಹಾಸಿಗೆ, 5 ಆಂಬ್ಯುಲೆನ್ಸ್‌, ಕೋವಿಡ್‌ ಟೆಸ್ಟ್‌ ಲ್ಯಾಬ್‌ಗಳ ವ್ಯವಸ್ಥೆಯಾಗಿದೆ.

ಮಂಡ್ಯ : ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಪ್ಲಾಂಟ್‌ ;

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಪ್ಲಾಂಟ್‌ ಹೊಂದಿದ ಜಿಲ್ಲೆಯಾಗಿದೆ. ಬೆಡ್‌, ಐಸಿಯು, ವೆಂಟಿಲೇಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ತಾಲೂಕಿನ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಮೊದಲು 3 ಐಸಿಯು ಬೆಡ್‌ಗಳಿದ್ದವು. ಈಗ ಅದನ್ನು 10ಕ್ಕೇರಿಸಲು ಕ್ರಮ ವಹಿಸಲಾಗುತ್ತಿದೆ. ಅಲ್ಲದೆ, ವೆಂಟಿಲೇಟರ್‌ಗಳನ್ನು ಅಳವಡಿಸಲು ಕ್ರಮ ವಹಿಸಲಾಗುತ್ತಿದೆ. ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ 40 ವೆಂಟಿಲೇಟರ್‌ಗಳಿಂದ 100 ವೆಂಟಿಲೇಟರ್‌ಗಳಿಗೆ ಏರಿಕೆ ಮಾಡಲಾಗಿದೆ.

ಮೈಸೂರು :ತಾಲೂಕುಗಳಲ್ಲೇ ಎಲ್ಲ ವ್ಯವಸ್ಥೆ ;

ಗ್ರಾಮೀಣ ಭಾಗದ ತಾಲೂಕು ಆಸ್ಪತ್ರೆ ಸೇರಿ ನಗರದಲ್ಲಿದ್ದ ಪ್ರಮುಖ ಆಸ್ಪತ್ರೆಗಳಲ್ಲಿ ಇದ್ದ ಬೆರಳೆಣಿಕೆ ಆಕ್ಸಿಜನ್‌ ಹಾಗೂ ವೆಂಟಿಲೇಟರ್‌ ಬೆಡ್‌ ಕೋವಿಡ್‌ ಅನಂತರ ಎರಡಂಕಿ ದಾಟಿದೆ. ಜತೆಗೆ ಆಸ್ಪತ್ರೆ ಆವರಣಗಳಲ್ಲಿ ಆಕ್ಸಿಜನ್‌ ಪ್ಲಾಂಟ್‌ ಅಳವಡಿಸಲಾಗಿದೆ. ಕೊರೊನಾ ಸೋಂಕು ಬರುವುದಕ್ಕೂ ಮುನ್ನ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳು ನಗರ ಆಸ್ಪತ್ರೆಗಳನ್ನೇ ಅವಲಂಬಿಸಿದ್ದವು. ವೆಂಟಿಲೇಟರ್‌, ಆಕ್ಸಿಜನ್‌ ಸೌಲಭ್ಯಕ್ಕಾಗಿ ದೂರದ ಮೈಸೂರಿಗೆ ಗುಂಡಿಬಿದ್ದ ರಸ್ತೆಯಲ್ಲಿ ರೋಗಿಗಳು ಸಾಗುವ ನಿದರ್ಶನಗಳಿದ್ದವು. ಆದರೆ ಕೊರೊನಾ ಸೋಂಕು ಕಾಲಿಟ್ಟ ಅನಂತರ ತಾಲೂಕು ಆಸ್ಪತ್ರೆಗಳ ಸ್ಥಿತಿ ಬದಲಾಗಿದ್ದು, ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ತಲಾ 5 ವೆಂಟಿಲೇಟರ್‌, ಆಕ್ಸಿಜನ್‌ ಹಾಸಿಗೆ ಸೌಲಭ್ಯ ಕಲ್ಪಿಸಲಾಗಿದೆ.

ಉಡುಪಿ  : ಆಕ್ಸಿಜನ್‌ ಬೆಡ್‌ಗಳ ಸಂಖ್ಯೆ ಹೆಚ್ಚಳ ;

ಜಿಲ್ಲೆಯಲ್ಲಿನ ಸರಕಾರಿ ಆಸ್ಪತ್ರೆ ಕೊರೊನಾ ಬಳಿಕ ಸಾಕಷ್ಟು ಅಭಿವೃದ್ಧಿ ಆಗಿದೆ. ವೈದ್ಯರು, ನರ್ಸ್‌ ಸೇರಿದಂತೆ ಡಿ ದರ್ಜೆ ಹುದ್ದೆ ಗುತ್ತಿಗೆ ಆಧಾರದ ಮೇಲೆ ಭರ್ತಿಯಾಗಿದೆ. ಹೆಬ್ರಿ, ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಉತ್ಪಾದನ ಘಟಕ ಕಾರ್ಯಾರಂಭವಾಗಿದೆ. ಉಡುಪಿ ಜಿಲ್ಲಾಸ್ಪತ್ರೆ, ಕುಂದಾಪುರ, ಕಾರ್ಕಳದಲ್ಲಿ ಆಕ್ಸಿಜನ್‌ ಉತ್ಪಾದನ ಘಟಕ ಅಂತಿಮ ಹಂತದಲ್ಲಿದೆ. ಜತೆಗೆ ಆಸ್ಪತೆಯಲ್ಲಿನ ವೆಂಟಿಲೇಟರ್‌, ಆಕ್ಸಿಜನ್‌ ಬೆಡ್‌ಗಳ ಸಂಖ್ಯೆ ಹೆಚ್ಚಾಗಿದೆ.

ಧಾರವಾಡ : ವೈದ್ಯಕೀಯ ಸಿಬಂದಿ ಹುದ್ದೆ ಭರ್ತಿ  

ಸರಕಾರಿ ಆಸ್ಪತ್ರೆಗಳ ಪೈಕಿ ಜಿಲ್ಲೆಯಲ್ಲಿ ಒಟ್ಟು 50 ಆಕ್ಸಿಜನ್‌ ಬೆಡ್‌ಗಳು ರೂಪುಗೊಂಡವು. ಮೊದಲನೇ ಅಲೆಯಲ್ಲಿ 150ರಷ್ಟಿದ್ದ ಆಕ್ಸಿಜನ್‌ ಬೆಡ್‌ಗಳ ಸಂಖ್ಯೆ ಎರಡನೇ ಅಲೆ ಹೊತ್ತಿಗೆ ದ್ವಿಗುಣಗೊಂಡಿತ್ತು. ಆದರೂ ಎರಡನೇ ಅಲೆಯಲ್ಲಿ ಸಾಕಷ್ಟು ತೊಂದರೆಗಳು ಆಗಿದ್ದರಿಂದ ಮತ್ತಷ್ಟು ವೆಂಟಿಲೇಟರ್‌ಗೂ ಹೊಸ್‌ ಬೆಡ್‌ಗಳು ಬಂದವು. ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇದ್ದ 150ಕ್ಕೂ ಹೆಚ್ಚು ವೈದ್ಯಕೀಯ ಸಿಬಂದಿ ಹುದ್ದೆಗಳು ಭರ್ತಿಯಾಗಿವೆ. ಐಸಿಯುಗಾಗಿಯೇ ಎಂಬಿಬಿಎಸ್‌ ಮುಗಿಸಿದ ಆಗಲೇ ತರಬೇತಿ ಪಡೆದುಕೊಂಡ ಯುವ ವೈದ್ಯರನ್ನು ಪ್ರತಿ ತಾಲೂಕಿಗೆ ಮೂವರಂತೆ ನೇಮಕ ಮಾಡಲಾಗಿದೆ. ಕಿಮ್ಸ್‌ನಲ್ಲಿ ಎರಡು ಮತ್ತು ಜಿಲ್ಲಾಸ್ಪತ್ರೆಯಲ್ಲಿ ಎರಡು ಹೊಸ ಆಕ್ಸಿಜನ್‌ ಉತ್ಪಾದಕ ಘಟಕಗಳು ಸ್ಥಾಪನೆ ಯಾದವು. ಕಲಘಟಗಿ ಮತ್ತು ಕುಂದಗೋಳ ತಾಲೂಕು  ಆಸ್ಪತ್ರೆಗಳಲ್ಲಿ ತಲಾ ಒಂದೊಂದು (500 ಲೀಟರ್‌ ಪ್ರತೀ ನಿಮಿಷ)ಆಕ್ಸಿಜನ್‌ ಘಟಕಗಳು ಸ್ಥಾಪನೆಯಾಗಿವೆ. ನವಲ ಗುಂದದಲ್ಲಿ ಕೂಡ ಒಂದು ಆಕ್ಸಿಜನ್‌ ಘಟಕ ಸಿದ್ಧಗೊಂಡಿದೆ.

ಟಾಪ್ ನ್ಯೂಸ್

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

2(1

Sullia: ಜಾಕ್‌ವೆಲ್‌ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್‌

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

1(1

Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.