ಫೇಸ್‌ಬುಕ್ ನಮ್ಮನ್ನು ಆಳದಿರಲಿ
Team Udayavani, Jul 28, 2018, 12:30 AM IST
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತಂತ್ರಜ್ಞಾನದ ಪ್ರಭಾವದಿಂದಾಗಿ ಇಂದು ಪ್ರಪಂಚದ ಯಾವುದೇ ಮೂಲೆಯಲ್ಲಿ ರುವ ವ್ಯಕ್ತಿಗಳನ್ನು ಅಥವಾ ಸ್ಥಳಗಳನ್ನು ಸಂಪರ್ಕಿಸುವುದು ಸುಲಭ ಸಾಧ್ಯವೆನಿಸಿದೆ. ಸಂಪರ್ಕ ಸಾಧನಗಳಲ್ಲಿ ಇಂದು ಅತ್ಯಂತ ಜನಪ್ರಿಯವಾಗಿರುವುದು ಸಾಮಾಜಿಕ ಜಾಲತಾಣಗಳು. ಇದು ಚಿಕ್ಕವರಿಂದ ಆರಂಭಿಸಿ ಎಲ್ಲಾ ವಯೋಮಾನದವರಿಂದಲೂ ಗ್ರಾಮೀಣ ಪ್ರದೇಶ-ನಗರ ಪ್ರದೇಶಗಳೆಂಬ ಬೇಧವಿಲ್ಲದೆ ಎಲ್ಲೆಡೆಯೂ ಬಳಸಲ್ಪಡುತ್ತಿರುವ ಅತ್ಯಂತ ಪ್ರಭಾವಶಾಲಿ ಮಾಧ್ಯಮ. ಎಲ್ಲಾ ಆರ್ಥಿಕ ವರ್ಗದವರೂ ಬಳಸುವಷ್ಟು ಸರ್ವೇಸಾಮಾನ್ಯ ಸಂಗತಿಯೂ ಹೌದು. ಎಲ್ಲಾ ಮೊಬೈಲುಗಳಲ್ಲೂ ಅಂತರ್ಜಾಲದ ಸಂಪರ್ಕದ ವ್ಯವಸ್ಥೆ ಇದ್ದೇ ಇರುತ್ತದೆ. ಹಾಗಾಗಿಯೇ ಸಾಮಾಜಿಕ ಜಾಲತಾಣಗಳು ಎಲ್ಲರ ಬೆರಳ ತುದಿಯಲ್ಲಿ ಇವೆ. ಜನಸಾಮಾನ್ಯರ ಕೈಗೆಟ ಕುವ ಬೆಲೆಯಲ್ಲಿ ದೊರೆಯುವ ಸ್ಮಾರ್ಟ್‌ಫೋನುಗಳು ಎಲ್ಲಾ ಬಗೆಯ ಜಾಲತಾಣಗಳನ್ನು ಸಂಪರ್ಕಿಸುವ ಆಯ್ಕೆಗಳನ್ನು ಹೊಂದಿರುತ್ತವೆ ಮತ್ತು ಪೈಪೋಟಿಯಂತೆ ಆಕರ್ಷಕ ಕೊಡುಗೆ ಗಳನ್ನು ನೀಡುವ ಸೇವಾದಾರ ಕಂಪನಿಗಳಿಗಂತೂ ಲೆಕ್ಕವೇ ಇಲ್ಲ. ತಂತ್ರಜ್ಞಾನದ ಕ್ಷೇತ್ರದಲ್ಲಿ ನಡೆಯುವ ಆವಿಷ್ಕಾರಗಳು ಜನರ ಅನುಕೂಲತೆಗೋಸ್ಕರ ಇರುವಂಥದ್ದಾದರೂ ಎಲ್ಲಾ ಆವಿಷ್ಕಾರ ಗಳೂ ತನ್ನದೇ ಆದ ಒಳಿತುಗಳನ್ನು ಮತ್ತು ಕೆಡುಕುಗಳನ್ನೂ ಹೊಂದಿರುತ್ತವೆ. ನಾವು ಯಾವುದನ್ನು ಆಯ್ಕೆಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ನೈತಿಕ ಉನ್ನತಿ ಅಥವಾ ಅವನತಿ ನಿರ್ಧಾರಿತವಾಗುತ್ತದೆ.
ಸಾಮಾಜಿಕ ಜಾಲತಾಣಗಳ ಹಾವಳಿ ಎಷ್ಟರ ಮಟ್ಟಿಗೆಂದರೆ ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳ ಬಳಿ ಕೂಡ ಅವರದೇ ಆದ ಸ್ವಂತ ಮೊಬೈಲ್ ಮತ್ತು ಫೇಸ್‌ಬುಕ್, ವಾಟ್ಸಪ್, ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಮ್‌ಗಳು ಇರುತ್ತವೆ. ಈ ಮಾಧ್ಯಮಗಳ ಬಳಕೆಗೆ ವಯಸ್ಸಿನ ಮಿತಿಯಿಲ್ಲದೆ ಇರುವುದರಿಂದ ಸುಲಭವಾಗಿ ದೊರೆಯುವಂತಾಗಿದೆ. ವಿವಿಧ ಬಗೆಯ ವ್ಯವಹಾರಗಳಿಗೆ ಈ ಫೇಸ್‌ಬುಕ್‌ನಂತಹ ಮಾಧ್ಯಮಗಳು ಪ್ರಯೋಜನಕ್ಕೆ ಬರುತ್ತವೆ. ವಿವಿಧ ಬಗೆಯ ವ್ಯವಹಾರಗಳಿಗೆ ಅಗತ್ಯವೆನಿಸಿದ ಗ್ರೂಪುಗಳನ್ನು ಮಾಡಿಕೊಂಡು ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ವಿಪುಲ ಅವಕಾಶವಿದೆ. ನಮ್ಮವರೊಂದಿಗೆ ಯಾವಾಗಲೂ ಸಂಪರ್ಕ ದಲ್ಲಿರುವಂತೆ ಸಹಾಯವನ್ನೂ ಮಾಡಬಲ್ಲ ಉತ್ತಮ ಸಂಪರ್ಕ ಸಾಧನವೂ ಇದಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವವರಿಗೂ ಉಚಿತ ಸಂದೇಶಗಳನ್ನು ಮತ್ತು ಕರೆಗಳನ್ನು ಮಾಡಲೂ ಕೂಡ ಸಹಾಯಕ ಫೇಸ್‌ಬುಕ್.
ಕೇವಲ ಮಾತಿನ ಸಂವಹನಕ್ಕೆ ಸೀಮಿತವಾಗಿದ್ದ ಮೊಬೈಲುಗಳು ಸ್ಮಾರ್ಟ್‌ಫೋನಿನ ಕಾಲದಲ್ಲಿ ವೀಡಿಯೋ ಸಂವಹನಕ್ಕೂ ಮಾರ್ಗವನ್ನು ಕಂಡುಕೊಂಡಿವೆ. ಜ್ಞಾನಾರ್ಜನೆಗೂ ಕೂಡ ಅನುಕೂಲವನ್ನು ಮಾಡಿಕೊಡುವ ಮಾಧ್ಯಮ ಇದಾಗಿದೆ. ವಿವಿಧ ಕ್ಷೇತ್ರಗಳಲ್ಲಿನ ಸದ್ಯದ ಪ್ರಗತಿಗಳು, ಸಾಧನೆಗಳು, ಹೊಸ ಬಗೆಯ ಆವಿಷ್ಕಾರಗಳು, ಕರಕುಶಲ ವಸ್ತುಗಳ ತಯಾರಿಕೆಯ ಬಗೆಗಿನ ದೃಶ್ಯಾವಳಿಗಳು ಹೀಗೆ ನಮ್ಮ ಜೀವನ ಕೌಶಲವನ್ನೂ ಕೂಡ ಹೆಚ್ಚಿಸಬಲ್ಲ ಅತ್ಯಂತ ಉತ್ತಮವಾದ ಮಾಧ್ಯಮವು ಇದಾಗಿದೆ. ಅದೆಷ್ಟೋ ವರುಷಗಳ ಹಿಂದಿನ ಸ್ನೇಹಿತರನ್ನು ಮತ್ತೆ ಸಂಪರ್ಕಿಸುವ ಮತ್ತು ಹೊಸ ಬಗೆಯ ಜನರೊಂದಿಗೆ ಸಂಪರ್ಕ ಹೊಂದುವ ಅತ್ಯಂತ ಅಪರೂಪದ ಅವಕಾಶ ವನ್ನೊದಗಿಸಬಲ್ಲ ಏಕೈಕ ಮಾಧ್ಯಮವಾಗಿದೆ.
ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಫೇಸ್‌ಬುಕ್ ಎಂಬ ಮಾಯಾಜಾಲವು ಸಮಾಜದ ಮೇಲೆ ತನ್ನದೇ ಆದ ದುಷ್ಪರಿಣಾಮಗಳನ್ನೂ ಕೂಡ ಬೀರುತ್ತದೆ. ವೈಯಕ್ತಿಕ ಮಾಹಿತಿಗಳ ಸೋರಿಕೆಯಾಗುವುದು ಫೇಸ್‌ಬುಕ್‌ನ ಅತ್ಯಂತ ಋಣಾತ್ಮವಾದ ಪರಿಣಾಮವೆನಿಸಿದೆ. ಅದೆಷ್ಟೋ ಬಾರಿ ಸೂಕ್ತವಾದ ಸುರಕ್ಷಾ ಆಯ್ಕೆಗಳನ್ನು ಬಳಸದೆ ಇದ್ದಾಗ ಅಕೌಂಟ್ ಇರುವವರ ಮತ್ತು ಅವರ ಸ್ನೇಹಿತರ ಮಾಹಿತಿಗಳೂ ಕೂಡ ಪೋಲಾಗುವ ಸಂಭವವಿರುತ್ತದೆ.
ಅನಿಯಮಿತವಾಗಿ ಇವು ಗಳನ್ನು ಬಳಸುವುದರಿಂದ ನಮ್ಮ ಅಮೂಲ್ಯವಾದ ಸಮಯವೂ ವ್ಯರ್ಥವಾಗುತ್ತದೆ. ಫೇಸ್ ಬುಕ್ ಪೇಜುಗಳಲ್ಲಿ ಚಿತ್ರಗಳನ್ನು ಅಥವಾ ವೀಡಿಯೋಗಳನ್ನು ಹಾಕಲು ಯಾವುದೇ ಬಗೆಯ ಕಠಿಣ ನಿರ್ಬಂಧಗಳು ಅಥವಾ ನಿಯಮಾವಳಿಗಳಿ ಲ್ಲದಿರುವುದರಿಂದ ಅಸಭ್ಯವಾದ ವೀಡಿಯೋ ಮತ್ತು ದೃಶ್ಯಗಳು ಕಾಣಸಿಗುತ್ತವೆ. ಇವುಗಳು ಸಮಾಜದ ನೈತಿಕ ಸ್ವಾಸ್ಥ್ಯವನ್ನು ಹಾಳುಗೆಡವುವಲ್ಲಿ ಪ್ರಭಾವಶಾಲಿ ಯಾದ ಪಾತ್ರವನ್ನು ನಿರ್ವಹಿಸುತ್ತಿವೆ. ಅದೆಷ್ಟೊ ಬಾರಿ ತಪ್ಪು ಮಾಹಿತಿಗಳು ಪ್ರಸರಣೆ ಗೊಂಡು ಗೊಂದಲವನ್ನು ಸೃಷ್ಟಿಮಾಡು ತ್ತವೆ. ಅನಗತ್ಯವಾದ ರಾಜಕೀಯ ಕಿಚ್ಚನ್ನು ಮತ್ತು ಕೋಮು ಗಲಭೆಗಳನ್ನು ಹುಟ್ಟುವಂತೆ ಮಾಡಬಲ್ಲ ಸಂದೇಶಗಳು ರವಾನೆಯಾಗುವುದರ ಮೂಲಕ ಸಮಾಜವನ್ನು ಹಾಳು ಮಾಡುತ್ತವೆ. ಕುಟುಂಬಕ್ಕೇ ಸಮಯವನ್ನು ನೀಡಲಾರದಂತಹ ಪರಿಸ್ಥಿತಿಯನ್ನು ಫೇಸ್‌ಬುಕ್ ಗೀಳು ತಂದೊಡ್ಡಬಲ್ಲದು.
ಅತಿಯಾದರೆ ಅಮೃತವೂ ವಿಷ ಎಂಬಂತೆ ಎಲ್ಲವೂ ಹಿತಮಿತವಾಗಿದ್ದು ನಮ್ಮ ಜೀವನದ ಒಳ್ಳೆಯದಕ್ಕಷ್ಟೆ ಬಳಕೆ ಯಾಗಬೇಕು. ಫೇಸ್‌ಬುಕ್‌ನಲ್ಲಿ ದೂರದವರು ಹತ್ತಿರವಾಗುತ್ತ ಪಕ್ಕದಲ್ಲೇ ಇದ್ದವರೂ ದೂರವಾಗಿ ಬಿಡುವ ಅಪಾಯಕ್ಕೆಡೆ ಯಾಗಬಾರದು. ಎಂದಿಗೂ ಫೇಸ್‌ಬುಕ್ ನಿಮ್ಮನ್ನು ಆಳದಿರಲಿ.
ಪ್ರಭಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.