Federal State; ಭಾರತದ ಬಯಕೆ -ಸಹಕಾರಿ ಸಂಯುಕ್ತ ತತ್ತ್ವ

Team Udayavani, Aug 2, 2024, 6:50 AM IST

1-fff

ನೀತಿ ಆಯೋಗದ 9ನೇ ಆಡಳಿತ ಸಮಿತಿ ಯು ಮೊನ್ನೆ ಮೊನ್ನೆ ಹೊಸದಿಲ್ಲಿಯಲ್ಲಿ ಪ್ರಧಾನ ಮಂತ್ರಿಯವರ ನೇತಾರಿಕೆಯಲ್ಲಿ ನಡೆಯಿತು. 2047ರ “ವಿಕಸಿತ ಭಾರತ’ದ ಸುಂದರ ರೇಖಾ ಚಿತ್ರದೆಡೆಗೆ ಭಾರತದ ನಡಿಗೆಯ ವೇಗ ಸಂವರ್ಧ ನೆಗೆ ಪೂರಕ ಹಾಗೂ ಪ್ರೇರಕ ಇಂಧನ ನೀಡುವ ಆಶಯವು ಇದರಲ್ಲಿ ತುಂಬಿ ನಿಂತಿತ್ತು. ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶದ ಉಪರಾಜ್ಯಪಾಲರು, ಕೇಂದ್ರದ ಸಚಿವರು ಇವರೆಲ್ಲರ ಸಹಭಾಗಿತ್ವದಲ್ಲಿ ರಾಷ್ಟ್ರದ ಮುನ್ನಡೆಯ ಪಥದರ್ಶಿತ್ವಕ್ಕಾಗಿ ಈ ಸಭೆ ಜರಗಿತು. ಸ್ವಾತಂತ್ರ್ಯೋತ್ಸವದ ಶತಮಾನದ ಹೊಸ್ತಿಲು ತುಳಿಯುವ ವೇಳೆ ಭಾರತ ವಿಶ್ವದ ಮೂರನೇ ಅತ್ಯಂತ ಆರ್ಥಿಕ ಬಲಾಡ್ಯ ರಾಷ್ಟ್ರವಾಗಿ ಮೂಡಿ ಬರಬೇಕು ಎಂಬು ದೇ ಈ ಸಭೆಯ ಮೂಲ ಚಿಂತನೆ. ರಾಷ್ಟ್ರೀಯ ವಾರ್ಷಿಕ ಉತ್ಪನ್ನ 5ಟ್ರಿಲಿಯನ್‌ ಗುರಿ ತಲುಪಬೇಕು ಹಾಗೂ ಆರ್ಥಿಕ ಒಟ್ಟು ವಹಿ ವಾಟಿನಲ್ಲಿ ನಮ್ಮ ಭಾರತ 30 ಟ್ರಿಲಿಯನ್‌ನ ಮಟ್ಟ ಮುಟ್ಟಬೇಕು ಎನ್ನುವ ಮೇರು ಚಿಂತನೆಯ ಮಾರ್ಗಸೂಚಿಗಾಗಿ ಈ ಮಹತ್ವಪೂರ್ಣ ಸಭೆ ಸಂಪನ್ನ ಹೊಂದಿತ್ತು ಇದು ಪ್ರತಿಯೋರ್ವ ಭಾರತೀಯನ ಹೆಮ್ಮೆಯ ವಿಚಾರ ಏಕೆಂದರೆ ಶೂನ್ಯ ಬಡತನದ ಬಯಕೆಯ ಬಳ್ಳಿ ಇಲ್ಲಿ ಟಿಸಿಲೊಡೆದಿತ್ತು.

ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಹಿತ ವಿಪಕ್ಷದ ಆಡಳಿತದ ರಾಜ್ಯಗಳ ಮುಖ್ಯ ಸಚಿವರು ಈ ಮಹತ್ತಮ ಚರ್ಚಾಗೋಷ್ಠಿಯನ್ನು ಬಹಿಷ್ಕರಿ ಸಿದರು ಎಂಬುದು ವಿಷಾದನೀಯ. ಪ್ರಚಲಿತ ಎನಿಸುವ ಗೌಣ ವರ್ತಮಾನ ಎನಿಸುವುದಿಲ್ಲ. ಬದಲಾಗಿ ಮುಂದಿನ ಇತಿಹಾಸಕ್ಕೆ ಅಡಿಗಲ್ಲು ಇರಿ ಸುವ ಮಹತ್ವಪೂರ್ಣ ತಿರುವು. ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಸಭೆಯಲ್ಲಿ ಭಾಗವಹಿಸಿ, ತಕರಾರು ಎಬ್ಬಿಸಿ ರಚನಾತ್ಮಕ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳದುದು ಒಂದು ಉಲ್ಲೇಖಿತ ಅಂಶ.

ಇದೊಂದು ಮೇಲ್ನೋಟಕ್ಕೆ ನೂರಾರು ರಾಜಕೀಯದ ಮೇಲಾಟದ ವರಸೆಗಳು ಎಂಬು ದಾಗಿ ಸುದ್ದಿ ಮಾಧ್ಯಮಗಳು ಬಿತ್ತರಿಸಿದರೂ, ರಾಷ್ಟ್ರೀಯ ಸಮಗ್ರತೆಯ ಮನೋಭೂಮಿಕೆ ಹಾಗೂ ಅಭಿವೃದ್ಧಿ ಪಥಕ್ಕೆ ಒಂದು ಬೃಹತ್‌ ಸವಾಲು. ಇದೀಗ 75ರ ಸಂವತ್ಸರದ ಭಾರತ ಸಂವಿಧಾನದ ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಇಂತಹ ಅನಪೇಕ್ಷಿತ ಘಟನೆಗಳು ದೂರಗಾಮಿ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ನಮ್ಮ ರಾಜ್ಯಾಂಗ ಘಟನೆಯ ವಿಧಿಗಳ ಮೇಲ್ನೋಟ, ಅರ್ಥ ವಿವರಣೆಗಳಿಗಿಂತ ಮಿಗಿಲಾಗಿದೆ. ನಮ್ಮ ಸಂವಿಧಾನ ಜನಕರು ಈ ವಿಶ್ವದ ಅತ್ಯಂತ ಸುದೀರ್ಘ‌ ಹೊತ್ತಗೆಯಲ್ಲಿ ಹುದುಗಿಸಿದ “ಭಾವಹೂರಣ’ವನ್ನು ನಾವಿಲ್ಲಿ ಜ್ಞಾಪಿಸಿಕೊಳ್ಳಬೇಕಾಗಿದೆ. ಅತ್ತ ವಿಶಾಲ ರಾಷ್ಟ್ರಗಳು ಅಂಗೀಕರಿಸಿಕೊಳ್ಳುವ ಸಂಯುಕ್ತ ರಾಜ್ಯ (Federal State) ಕೂಡ ಅಲ್ಲ. ಕೆ.ಸಿ.ವಿಯಾರ್‌ ಮುಂತಾದ ವಿಶ್ವದ ಸಂವಿಧಾನ ತಜ್ಞರೇ ಆಶ್ಚರ್ಯ ಪಡುವಂತೆ ಮೊತ್ತ ಮೊದಲ ವಿಧಿಯಲ್ಲಿಯೇ ನಮ್ಮ ಭಾರತ “ರಾಜ್ಯಗಳ ಒಕ್ಕೂಟ'(Union of States)ಎಂಬ ಪದ ಪ್ರಯೋಗಿಸಲ್ಪಟ್ಟಿದೆ.

ಇದರ ಹಿಂದೆ ಅತ್ಯಂತ ರೋಚಕ ಭಾವ ತುಂಬಿ ನಿಂತಿದೆ. ದೇಶ ವಿಭಜನೆ ದೇಶಿ ರಾಜರ ಸಂಸ್ಥಾನಗಳ ಬ್ರಿಟಿಷ್‌ ವಸಾಹತುಶಾಹಿತ್ವದ ಜತೆಗೇ ಫ್ರೆಂಚ್‌ ಹಾಗೂ ಪೋರ್ಚುಗೀಸರ ಸಂಕೋಲೆ ಕಳಚಿದ ಬಳಿಕ ಸಿಕ್ಕಿಂನಂತಹ ಪ್ರದೇಶಗಳು ನಮ್ಮ ದೇಶದ ಭೂಪಠದೊಳಗೆ ಸೇರಿದುದು ಈಗ ಇತಿಹಾಸ. ನಮ್ಮ ಸಂವಿಧಾನದ ಸುಂದರ ಚೌಕಟ್ಟಿನಲ್ಲಿ ಬಿಂಬಿತಗೊಂಡ ಸಮಗ್ರ ನೆಲ, ಜಲ, ಆಕಾಶ ಪರಸ್ಪರ ಸೌರ್ಹಾದದ ನೆಲೆಯಲ್ಲಿ ವಿಕಸಿತಗೊಳ್ಳಬೇಕು ಎಂಬುದೇ ಇಲ್ಲಿ ಜಿನುಗುವ ಸಾಂವಿಧಾನಿಕ ಅಮೃತ ವರ್ಷದ ಅಮೃತ ತತ್ತ್ವ, ಸತ್ವ, ಸರಳವಾಗಿ ನಿರೂಪಿಸುವುದಾದರೆ ನಮ್ಮ ಸಂವಿಧಾನದ ಪುಟ ಪುಟಗಳಲ್ಲಿ “ಸಹಕಾರಿ ಸಂಯುಕ್ತತೆ (Cooperative Federalism)ನ ಸುಂದರ ಪದರ ಹಮ್ಮಿದೆ.ಅದಲ್ಲ ಎನಿಸಿದರೆ ಸ್ಪರ್ಧಾತ್ಮಕ ಸಂಯುಕ್ತ ತತ್ತ್ವ (Compitative Federalism) ಅದೂ ಆರೋಗ್ಯಕರ ಸ್ಪರ್ಧೆಯ ಛಾಯೆ ತುಂಬಿ ನಿಂತಿದೆ, 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿದ ನಮ್ಮ ಪ್ರಪಂಚದ 7ನೇ ಅತೀ ದೊಡ್ಡ ರಾಷ್ಟ್ರ ಪರಸ್ಪರ “ಸಂಘರ್ಷದ ಸಂಯುಕ್ತತೆ’ (Conflicting Federalism) ಯನ್ನು ಸ್ವಾಗತಿಸುತ್ತಿಲ್ಲ. ಕೇಂದ್ರದಿಂದ ನಿಯುಕ್ತಿಗೊಂಡ ರಾಜ್ಯಪಾಲರ ಸಹಿತ ರಾಜ್ಯ ಸರಕಾರಗಳ ನಿರಂತರ ಸಂಘರ್ಷವನ್ನು ಕೇಂದ್ರ ಹೊದಲು ಸಂವಿಧಾನ ಅಪೇಕ್ಷಿಸುತ್ತಿಲ್ಲ.

ಇತಿಹಾಸದ ಬಗೆಗೊಂದು ವ್ಯಾಖ್ಯೆ ಇದೆ ಕಳೆದ ನಿನ್ನೆಗಳ ರಾಜಕೀಯ ಇಂದಿನ ಇತಿಹಾಸ; ಇಂದಿನ ರಾಜಕೀಯ ಮುಂದಿನ ಇತಿಹಾಸ. “ಈ ವರ್ಷದ ಬಜೆಟ್‌ನಲ್ಲಿ ನಮಗೆ ತೆಗೆದಿರಿಸಿದ ಹಣ ತೀರಾ ಗೌಣ’ ಎಂದು ರಾಜ್ಯಗಳಲ್ಲಿ ವಿಪಕ್ಷಗಳ ಆಡಳಿತದ ಚುಕ್ಕಾಣಿ ಹಿಡಿದವರು ತಕರಾರು ಎತ್ತಿದ್ದಾರೆ. ಇದನ್ನೆಲ್ಲ ಮಾತುಕತೆಯ ಮೂಲಕ ಬಗೆಹರಿಸಲು ಖಂಡಿತ ಸಾಧ್ಯ. ತನ್ಮೂಲಕ ಮುಂದಿನ ಪೀಳೀಗೆಯ ಬಗೆಗೂ ಆಲೋಚನಾ ಲಹರಿ ಹರಿಸುವುದನ್ನು ಭಾರತದ ಜನತೆ, ಅದೇ ರೀತಿ ಸಂವಿಧಾನ ಬಯಸುತ್ತದೆ. ಈ ಅಂಶವನ್ನು ಪ್ರಥಮ ವಿಧಿಯಿಂದ ಹಿಡಿದು ಕೇಂದ್ರ- ರಾಜ್ಯಗಳ ಪರಸ್ಪರ ರಾಜಕೀಯ, ಆಡಳಿತಾತ್ಮಕ, ಆರ್ಥಿಕ ಸಂಬಂಧಗಳ ವಿಸ್ತೃತ ವಿವರಣೆ ಸಮಗ್ರ ರಾಜ್ಯಾಂಗ ಘಟನೆಯ ಉದ್ದಕ್ಕೂ ಜಿನುಗುತ್ತದೆ. ಸಂವಿಧಾನ ಹಾಗೂ ಸುಪ್ರೀಂ ಕೋರ್ಟ್‌ ­ ಇವುಗಳನ್ನೇ ಹೊಸದಿಲ್ಲಿ ಹಾಗೂ ರಾಜ್ಯ ಸರಕಾರಗಳ “ಸಮತೋಲನದ ಸರದಾರರನ್ನಾಗಿಸಿದ ಕೀರ್ತಿ ನಮ್ಮ ಸಂವಿಧಾನ ಜನಕರದು.

“ಒಂದೊಂದು ತಲೆಮಾರು ಅದೊಂದು ಸ್ವತಂತ್ರ ರಾಷ್ಟ್ರ ( Every generation is a nation by itself) ಇದು- ಈ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಅತ್ಯಂತ ಅರ್ಥಗರ್ಭಿತ ವಿಚಾರ ­ ಲಹರಿ. ಸ್ವಾತಂತ್ರ್ಯ , ನ್ಯಾಯ, ಸಮಾನತೆ, ಏಕತೆ, ಅಭಿವೃದ್ಧಿ, ಸುರಕ್ಷೆ- ಈ ಎಲ್ಲ ಮಾನ ಸ್ಥಂಭಗಳ ಮೇಲೆ, ತ್ರಿವರ್ಣ ಧ್ವಜ ಸದಾ ಹಾರಲಿ ಎಂಬ ಸವಿಗನಸು ಸಂವಿಧಾನ ಜನಕರದು. ದೇಶದ ಪ್ರಗತಿಯ ಸಂಕೇತವಾಗಿ ಅಶೋಕ ಚಕ್ರ ಸದಾ ಚಲಿಸುವಲ್ಲಿ ಪ್ರಚಲಿತ 140 ಹಾಗೂ ಮುಂದೆ 2047ರ 160 ಕೋಟಿ ಜನಸ ಮುದಾಯದ ಭಾವ ಸಂಗಮ ಅತ್ಯಗತ್ಯ. ಅದೇ ರೀತಿ ಹೊಸದಿಲ್ಲಿ ಹಾಗೂ ರಾಜ್ಯಗಳ ನೇತಾರಿಕೆಯಲ್ಲಿ ರಾಜಕೀಯ ಪ್ರೌಢಿಮೆ ಹಾಗೂ ಮುತ್ಸದ್ಧಿತನ ಇಂದಿನ ಹಾಗೂ ಮುಂದಿನ ಆವಶ್ಯಕತೆ.

ಕೊನೆಯದಾಗಿ, ಇಲ್ಲಿ ಅನುಕರಿಸಬೇಕಾದ ಮೂಲ ಚಿಂತನೆ. ಮೊತ್ತಮೊದಲು ರಾಷ್ಟ್ರ, ಆ ಬಳಿಕ ರಾಜಕೀಯ ಪಕ್ಷ ಹಾಗೂ ತನ್ನತನ ಕೊನೆಯ ಪಂಕ್ತಿಯಲ್ಲಿ ಮೆರುಗು ತುಂಬು ವಂತಹದು ಒಂದು ವೇಳೆ ಈ ಚಿಂತನಾ ಬಿಂದು ಗಳು ತಲೆಕೆಳಗಾಗಿ ಪ್ರಥಮವಾಗಿ ತಾನು, ಬಳಿಕ ರಾಜಕೀಯ ಪಕ್ಷ ಹಾಗೂ ಕೊನೆಯದು ರಾಷ್ಟ್ರ ಎಂಬ ಭಾವತರಂಗ ಚಿಮ್ಮಿದರೆ ಆ ರಾಷ್ಟ್ರ ವಿಘಟನೆ, ವಿದ್ರೋಹ, ವಿಪ್ಲವ, ವಿದೇಶೀ ಆಕ್ರಮಣಕ್ಕೆ ತುತ್ತಾಗಬಹುದು. “ಇತಿಹಾಸ ಕಲಿಸುವ ಒಂದೇ ಒಂದು ಪಾಠವೆಂದರೆ ಇತಿ ಹಾಸದಿಂದ ನಾವೇನನ್ನೂ ಕಲಿತಿಲ್ಲ ಎಂಬುದು. ಒಂದು ಕಾಲದ ರಾಜ ಮಹಾರಾಜರ ಪರಸ್ಪರ ಆಂತರಿಕ ಕಚ್ಚಾಟದಿಂದಾಗಿ ರಾಬರ್ಟ್‌ ಕ್ಲೈವ್‌ನಿಂದ ಲಾರ್ಡ್‌ ಮೌಂಟ್‌ ಬ್ಯಾಟನ್‌ ವರೆಗಿನ ಇತಿಹಾಸ ಇದೀಗ ಸಂದು ಹೋಗಿದೆ. ಆದರೆ ವರ್ತಮಾನಗಳ ಸುಂದರ ಸುಮಧುರ ವರ್ತ ಮಾನಗಳ ಮಧ್ಯೆಯೇ ಭವಿಷ್ಯದ ನೂತನ ರಾಷ್ಟ್ರಪಥ ನಿರ್ಮಾಣಗೊಳಿಸಬೇಕಾಗಿದೆ.

ಡಾ| ಪಿ. ಅನಂತಕೃಷ್ಣ ಭಟ್‌, ಮಂಗಳೂರು

ಟಾಪ್ ನ್ಯೂಸ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ABV-Modi

A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಭದ್ರ ಬುನಾದಿ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.