Festival; “ಮಕರ ಸಂಕ್ರಮಣ’ವೆಂಬ ಮಹಾ ಪರ್ವಕಾಲ


Team Udayavani, Jan 14, 2024, 6:30 AM IST

Festival; “ಮಕರ ಸಂಕ್ರಮಣ’ವೆಂಬ ಮಹಾ ಪರ್ವಕಾಲ

ಮಕರ ಸಂಕ್ರಾಂತಿಯೆಂದರೆ ಬಹುವಿಶೇಷ. ಮಕರ ಸಂಕ್ರಮಣದಿಂದ ಉತ್ತರಾಯಣ ಪುಣ್ಯಕಾಲ ಆರಂಭ. ಈ ಬಾರಿ ಕೆಲವೆಡೆ ಜ.14 ಹಾಗೂ ಜ. 15 ರಂದು ಆಚರಿಸಲಾಗುತ್ತಿದೆ.

ಭಾರತೀಯ ಖಗೋಲ ಶಾಸ್ತ್ರವು ಪ್ರಪಂಚದಲ್ಲೇ ಅತೀ ಪುರಾತನ ಮತ್ತು ವೈಶಿಷ್ಟ್ಯ ಪೂರ್ಣವೆನಿಸಿದ್ದು “ವಿಶ್ವ ಮಾರ್ಗದರ್ಶಿ’ ಎಂದು ಉಲ್ಲೇಖಿಸಲ್ಪಟ್ಟಿದೆ. ಖಗೋಲ ಶಾಸ್ತ್ರದಲ್ಲಿ ವಿಶ್ವಚಕ್ಷುವಾದ ಸೂರ್ಯನ ಪಥವನ್ನು ಕ್ರಾಂತಿ ವೃತ್ತ ಎಂದು ಸ್ಪಷ್ಟಗೊಳಿಸಿ ಈ ಕ್ರಾಂತಿ ವೃತ್ತವನ್ನು ಹನ್ನೆರಡು ಸಮಭಾಗಗಳಾಗಿ ವಿಭಜಿಸಿ ದ್ವಾದಶ ರಾಶಿ ನಾಮದಿಂದ ಕರೆಯುತ್ತಾರೆ. ಒಂದೊಂದು ರಾಶಿಗೂ 30 ಡಿಗ್ರಿಯ ಪ್ರಮಾಣ ವನ್ನೂ ನಿಗದಿಗೊಳಿಸಿ 12 ರಾಶಿಗಳಿಗೆ ಒಟ್ಟು 360 ಡಿಗ್ರಿ ಪ್ರಮಾಣವನ್ನು ನಿರೂಪಿಸಲಾಗಿದೆ.

ಭೂಮಿಯು ತನ್ನ ಕಕ್ಷೆಯಲ್ಲಿ ಒಂದಾವರ್ತಿ ಸುತ್ತುವಾಗ ಈ ರಾಶಿಚಕ್ರಗಳನ್ನು ಹಾದು ಹೋಗು ತ್ತದೆ. ಅದೇ ರೀತಿ ಸೂರ್ಯನು ದಿನಕ್ಕೆ ಒಂದು ಡಿಗ್ರಿಯಷ್ಟು ಚಲಿಸಿ ಕ್ರಾಂತಿವೃತ್ತವನ್ನು 365 ಕಾಲು ದಿನಗಳಲ್ಲಿ ಪೂರ್ತಿಗೊಳಿಸುವನು. ಅಂದರೆ ಒಂದು ರಾಶಿಯನ್ನು ಪೂರ್ತಿ ದಾಟಲು ತಗಲುವ ಸಮಯ 1 ತಿಂಗಳು. ಈ ರೀತಿ ಸೂರ್ಯನು ಒಂದರಿಂದ ಮತ್ತೊಂದಕ್ಕೆ ಪ್ರವೇಶಿಸುವ ಸಂದ ರ್ಭವನ್ನು ಸಂಕ್ರಮಣ ಅಥವಾ ಸಂಕ್ರಾಂತಿ ಎನ್ನು ತ್ತಾರೆ. ಇದಕ್ಕನುಗುಣವಾಗಿ ವರ್ಷದಲ್ಲಿ 12 ಸಂಕ್ರಮಣಗಳು ರಾಶಿನಾಮದಿಂದ ಉಲ್ಲೇಖಿಸಲ್ಪಡುತ್ತವೆ.

ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವು ಕ್ಯಾಲೆಂಡರ್‌ ಪ್ರಕಾರ ಜನವರಿ 14 ಅಥವಾ 15 ಎಂದು ನಿಗದಿಗೊಳ್ಳುತ್ತದೆ. ಆ ದಿನವೇ “ಮಕರ ಸಂಕ್ರಮಣ’. ಇದಕ್ಕೆ ಪೌರಾಣಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ನಮ್ಮ ಪ್ರಾಚೀನ ಶಾಸ್ತ್ರಜ್ಞರು ನೀಡಿದ್ದಾರೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದ ಬಳಿಕ 6 ತಿಂಗಳ ಕಾಲ ಅಂದರೆ ಜುಲೈ 15ರ ವರೆಗಿನ ಅವಧಿಯನ್ನು “ಉತ್ತರಾಯಣ ‘ವೆಂದೂ ತದನಂತರದ 6 ತಿಂಗಳನ್ನು ಅಂದರೆ ಪುನಃ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವವರೆಗಿನ ಅವಧಿಯನ್ನು ದಕ್ಷಿಣಾಯಣ ಎನ್ನಲಾಗುತ್ತದೆ. ಉತ್ತರಾಯಣ ಕಾಲವನ್ನು ಶ್ರೇಷ್ಠ ಕಾಲವೆಂದು ಪರಿಗಣಿಸಿ, ಸತ್ಕರ್ಮಗಳನ್ನು ನೆರವೇರಿಸುವಂತಹ ಶುಭ ಮುಹೂರ್ತಗಳು ಲಭಿಸುವ ಸಂದರ್ಭವೆಂದು ತಿಳಿಯಲಾಗಿದೆ. ಮಕರ ಸಂಕ್ರಮಣಕ್ಕೆ ವಿಶೇಷ ಮಹತ್ವ ಬರಲು ಉತ್ತರಾಯಣ ಪುಣ್ಯ ಕಾಲದ ಮೊದಲ ತೇದಿ ಎನ್ನುವುದೇ ಮೂಲ ಕಾರಣ.

ಈ ದಿನದಂದು ರಾಷ್ಟ್ರದ ಹಲವು ದೇವಾಲ ಯಗಳಲ್ಲಿ ವಿಶೇಷ ಆರಾಧನೆಗಳು ನಡೆಯುತ್ತವೆ. ಸೂರ್ಯನ ದೇಗುಲಗಳಲ್ಲಂತೂ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಕೋನಾರ್ಕದ ಸೂರ್ಯ ದೇವಾಲಯದಲ್ಲಂತೂ ಒಂದು ತಿಂಗಳ ಉತ್ಸವವಿದೆ. ಕೇರಳ ರಾಜ್ಯದ ಪ್ರಸಿದ್ಧ ಶಬರಿ ಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಮಣದ ದಿನ “ಮಕರ ವಿಳಕ್‌R’ (ಮಕರ ಜ್ಯೋತಿ) ದರ್ಶನವಾಗುವುದು. ಪಂದಳ ಅರಮನೆಯಿಂದ ತಂದ ತಿರುವಾಭರಣಗಳನ್ನು ಸ್ವಾಮಿಗೆ ತೊಡಿಸಿ, ಆರತಿ ಬೆಳಗುವಾಗ ಪೊನ್ನಂಬಲ ಕಾಡಿನಲ್ಲಿ ಗೋಚರಿಸುವ “ಮಕರ ಜ್ಯೋತಿ’ಯನ್ನು ಕಂಡು ಭಕ್ತರು ಪುನೀತರಾಗುತ್ತಾರೆ.

ಇನ್ನು ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆಯಲ್ಪಡುತ್ತದೆ. ಈ ಕಾಲದಲ್ಲಿ ತೀರಿಕೊಂಡರೆ ಮೋಕ್ಷ ಪ್ರಾಪ್ತಿ, ಸ್ವರ್ಗ ಪ್ರಾಪ್ತಿ ಎಂಬ ನಂಬಿಕೆಇದೆ.

ಉತ್ತರ ಕರ್ನಾಟಕದ ಕೆಲವೆಡೆ ಗೋವು ಮತ್ತು ರಾಸುಗಳನ್ನು ವಿಶೇಷ ವಸ್ತ್ರಾಭರಣಗಳಿಂದ ಶೃಂಗರಿಸಿ ಮೃಷ್ಟಾನ್ನಗಳನ್ನು ನೀಡಿ ಪೂಜಿಸಲಾ ಗುತ್ತದೆ. ರಾಸುಗಳ ಒಂದೊಂದು ಕೊಂಬನ್ನು ಒಂದೊಂದು ಆಯನಗಳೆಂದು ಪರಿಗಣಿಸಿ ಪೂಜಿ ಸುವ ಪದ್ಧತಿಯೂ ಇದೆ. ಕೆಂಡದ ರಾಶಿಯ ಮೇಲೆ ಜಾನುವಾರುಗಳನ್ನು ಹಾಯಿಸುವ ಪದ್ಧತಿ ಯೂ ಇದೆ. ಕೆಲವೆಡೆ ಗೂಳಿ ಕಾಳಗವೂ ಇದೆ.

ಹಲವೆಡೆ ಸುಗ್ಗಿಯ ಹಬ್ಬ. ಆಂಧ್ರಪ್ರದೇಶದಲ್ಲಿ ಶ್ರೀರಾಮನು ರಾವಣನನ್ನು ಕೊಂದು ಸೀತೆಯನ್ನು ಸ್ವೀಕರಿಸಿ ಕರೆತಂದ ದಿನವೆಂದು ಮನೆಯ ಮುಂದೆ ಬೆಂಕಿಯನ್ನು ಹಾಕಿ “ರಾವಣದಹನ’ವನ್ನು ಆಚರಿಸುತ್ತಾರೆ. ತಮಿಳುನಾಡಿನಲ್ಲಿ “ಪೊಂಗಲ್‌’ ಎಂದೇ ಪ್ರಸಿದ್ಧಿ. ಉತ್ತರ ಭಾರತದಲ್ಲಿ ಗಾಳಿಪಟ ಉತ್ಸವಗಳಿರುತ್ತವೆ. ಪ್ರಯಾಗದಲ್ಲಿ ಈ ವೇಳೆಗೆ ಸುಪ್ರಸಿದ್ಧ ಕುಂಭಮೇಳ ಸಂಪನ್ನಗೊಳ್ಳುತ್ತದೆ.

ತುಳುನಾಡಿನ ದೈವಾರಾಧನೆ ಪದ್ಧತಿಯಲ್ಲೂ ಅಗೆಲು ಸೇವೆ, ಆಯನ ಬಲಿ, ದರ್ಶನ ಸೇವೆಗಳು ನಡೆಯುತ್ತವೆ. ಮನೆ-ಮನೆಗಳಿಗೆ ಹೋಗಿ ಎಳ್ಳು- ಬೆಲ್ಲ ನೀಡುವ ಸಂಪ್ರದಾಯವಿದೆ. ಹಬ್ಬ ಸುಖ, ಸಮೃದ್ಧಿಯ ಜತೆ ನಮ್ಮ ನಕಾರಾತ್ಮಕ ಭಾವ ದೂರವಾಗಿ ಧನಾತ್ಮಕ ಭಾವ ಉದ್ದೀಪನಗೊಳ್ಳಲಿ ಎಂಬುದೇ ಈ ಎಳ್ಳು- ಬೆಲ್ಲ ವಿನಿಮಯದ ಸಂದೇಶ. ಶ್ರೀ ಸೂರ್ಯನಾರಾಯಣ ಸಮಸ್ತ ಜೀವಿಗಳ ಬದುಕಿಗೆ ಆಧಾರ. ಶ್ರೀ ಸೂರ್ಯ ದೇವ ರನ್ನು ಭಕ್ತಿ ಶ್ರದ್ಧೆಯಿಂದ ಪೂಜಿ ಸಿ, ಅವನ ಆನುಗ್ರಹಕ್ಕೆ ಎಲ್ಲರೂ ಪಾತ್ರರಾಗೋಣ.

-ಮೋಹನದಾಸ, ಸುರತ್ಕಲ್‌

ಟಾಪ್ ನ್ಯೂಸ್

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.