Mysore- Film City: ಮೈಸೂರಿಗೆ ಚಿತ್ರನಗರಿ ಕಿರೀಟ

ಕನ್ನಡ ಚಲನಚಿತ್ರರಂಗಕ್ಕೆ ಚಿತ್ರನಗರಿ (ಫಿಲಂ ಸಿಟಿ) ಸ್ಥಾಪನೆಯೂ ಒಂದು ಅತ್ಯುನ್ನತ ಉಡುಗೊರೆ

Team Udayavani, Oct 12, 2024, 9:30 AM IST

9-mysore-film-city-2

ಪಾರಂಪರಿಕ ನಗರಿ, ಅರಮನೆ ನಗರಿ, ಸಾಂಸ್ಕೃತಿಕ ನಗರಿ ಎನ್ನುವ ಚಂದದ ಅಲಂಕಾರವನ್ನು ಹೊದ್ದಿರುವ ಮೈಸೂರು ನಗರದಲ್ಲಿ “ಚಿತ್ರ ನಗರಿ’ ಸ್ಥಾಪನೆಯಾಗಲಿದ್ದೂ ರಾಜರೂರಿನ ಕಿರೀಟಕ್ಕೆ ಮತ್ತೂಂದು ನವಿಲು ಗರಿ ಸಿಕ್ಕಂತೆ ಆಗಿದೆ.

ಶತಮಾನದ ಮೈಲಿಗಲ್ಲಿನ ಸಮೀಪವಿರುವ ಕನ್ನಡ ಚಲನ ಚಿತ್ರರಂಗಕ್ಕೆ ಚಿತ್ರನಗರಿ(ಫಿಲಂ ಸಿಟಿ) ಸ್ಥಾಪನೆಯೂ ಒಂದು ಅತ್ಯುನ್ನತ ಉಡುಗೊರೆ ಎನ್ನಬಹುದಾಗಿದೆ. ಪಕ್ಕದ ಸೋದರ ಭಾಷೆಯ ನಾಡುಗಳಲ್ಲಿ ಕೆಲ ದಶಕಗಳ ಹಿಂದಯೇ ಚಿತ್ರನಗರಿ ಸ್ಥಾಪನೆಯಾಗಿ, ಅಲ್ಲಿನ ಫಿಲಂಗಳೆಲ್ಲ ಸಂಪೂರ್ಣವಾಗಿ ಅಲ್ಲೇ ತಯಾರಾಗಿ ಬೆಳ್ಳಿತೆರೆಗೆ ಬರುತ್ತಿವೆ. ಅವರಷ್ಟೇ ಶಕ್ತಿ-ಸಾಮರ್ಥಯವಿದ್ದರೂ ಕನ್ನಡ ಸಿನಿಮಾ ಮಂದಿಯೂ ಚಲನಚಿತ್ರದ ಪ್ರತಿಯೊಂದು ವಿಭಾಗದಲ್ಲೂ “ಗುಣಮಟ್ಟ’ವನ್ನು ನೀಡಲು ಚೆನ್ನೈ, ಹೈದರಾಬಾದ್‌, ಮುಂಬೈ ಮತ್ತಿತರರ ಕಡೆಗೆ ಮುಖಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಚಿತ್ರನಗರಿಯ ಸ್ಥಾಪನೆಯೂ ಸ್ಯಾಂಡಲ್‌ವುಡ್‌ಗೆ “ಕನ್ನಂಬಾಡಿ’ಕಟ್ಟೆಯಾಗಲಿದೆ.

ಮೈಸೂರು ನಗರವು ಈ ಹೊತ್ತಿನಲ್ಲಿ ರಾಜಧಾನಿ ಬೆಂಗಳೂರಿಗೆ ಅವಳಿನಗರದ ರೀತಿ ಆಗಿದೆ. ಎರಡು ನಗರಗಳ ನಡುವೆ ಇರುವುದು ಕೇವಲ ಒಂದೂವರೆ ತಾಸಿನ ಹಾದಿ ಮಾತ್ರ. ಈಗಾಗಿ ದಶದಿಕ್ಕುಗಳಿಂದಲೂ ಆಲೋಚನೆ ಮಾಡಿದರೂ ಚಿತ್ರನಗರಿ ಸ್ಥಾಪನೆಯೂ ಸಮರ್ಪಕವಾಗಿದೆ ಎನ್ನಬಹುದಾಗಿದೆ.

ಸಿನಿಮಾ ಎಂದರೆ ಅದೊಂದು ದೃಶ್ಯಕಾವ್ಯ. ಪ್ರಕೃತಿ ಹಾಗೂ ಮಾನವರ ಸೌಂದರ್ಯವನ್ನು ಒಂದೇ ಫ್ರೆàಮಿನಲ್ಲಿ ತೋರಿಸುವ ಸಿನಿಮಾಕ್ಕೆ ಪ್ರಾಕೃತಿಕ ತಾಣಗಳು ಎಷ್ಟಿದ್ದರೂ ಸಾಲದು. ಆದರೆ ಒಂದು ಊರಿನಿಂದ ಮತ್ತೂಂದು ಊರಿಗೆ ನೂರಾರು ಮೈಲಿ ಇದ್ದರೆ ಚಿತ್ರೀಕರಣ ಅಸಾಧ್ಯ ಹಾಗೂ ಖರ್ಚು ಗಗನ ಮುಟ್ಟಿಬಿಡುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಮೈಸೂರಿನ ಸುತ್ತಮುತ್ತ ಸಹಜ ಸೌಂದರ್ಯದ ಸುಮಾರು 200ಕ್ಕೂ ಹೆಚ್ಚು ಲೊಕೇಶನ್‌ಗಳು ಕೈ ಬೀಸಿ ಕರೆಯುತ್ತಿವೆ.

ನಗರದಿಂದ ಕಾಲು ಚಾಚುವ ದೂರದಲ್ಲೇ ಬಲಮುರಿ, ಎಡಮುರಿ, ಕೆಆರ್‌ ಎಸ್‌, ಶ್ರೀರಂಗಪಟ್ಟಣ, ಮಹದೇವಪುರ, ಸೋಮನಾಥಪುರ, ತಲಕಾಡು, ಗಗನಚುಕ್ಕಿ-ಭರಚುಕ್ಕಿ, ಕಾವೇರಿ, ಕಪಿಲೆ, ನಾಗರಹೊಳೆ ಅಭಯಾರಣ್ಯ, ಎಚ್‌.ಡಿ.ಕೋಟೆಯ ಕಾಡಿನ ಸಿರಿ, ಹಿನ್ನಿರಿನಲ್ಲಿ ಇರುವ ದ್ವೀಪಗಳು, ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ಇನ್ನೂ ಸ್ವಲ್ಪ ಮುಂದೆ ಸಾಗಿದರೆ ಗುಂಡ್ಲುಪೇಟೆಯ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಇತ್ತ ಚಾಮರಾಜನಗರದ ಬಿಳಿಗಿರಿರಂಗಪ್ಪನ ಹಸಿರು ಕಾನನ, ಮುಂದೆ ಹೋದರೆ ಮಾದಪ್ಪನ ಬೆಟ್ಟ, ಹೊಗೇನಕಲ್‌ ಫಾಲ್ಸ್‌ ಇವು ಪ್ರಾಕೃತಿಕ ಸಂಪತ್ತಾದರೇ ಇವುಗಳೊಂದಿಗೆ ಇತ್ತೀಚಿನ ಆಧುನಿಕ ನಿರ್ಮಾಣಗಳು ಕೂಡಾ ಚಿತ್ರಗಳಿಗೆ ಒಂದು ಪಾತ್ರವಾಗಲಿವೆ.

ಅವುಗಳೆಂದರೆ ದಶಪಥ ರಸ್ತೆ, ಹೆದ್ದಾರಿ ಬದಿಯಲ್ಲಿ ನಿರ್ಮಾಣವಾಗಿರುವ ವಾಣಿಜ್ಯೋದ್ದೇಶ ಸ್ಥಾವರಗಳು, ಕೈಗಾರಿಕಾ ಪ್ರದೇಶದಲ್ಲಿ ಇರುವ ಬಹುರಾಷ್ಟ್ರೀಯ ಕಂಪೆನಿಗಳು, ಕಾರ್ಖಾನೆಗಳು, ನೂರಾರು ವರ್ಷ ಕಂಡಿರುವ ರೈಲ್ವೆ ನಿಲ್ದಾಣಗಳು. ಇವು ಕೂಡಾ ಸಿನಿಮಾಕ್ಕೆ ಪೂರಕವಾಗಿ ಇರುವುದರಿಂದ ಮೈಸೂರು “ಫಿಲಂಸಿಟಿ’ ಸ್ಥಾಪನೆಗೆ ಸೂಕ್ತವಾಗಿದೆ ಎನ್ನುವುದಕ್ಕೆ ಒಂದು ಗುಲಗಂಜಿಯಷ್ಟು ದೋಷವಿಲ್ಲ ಎನ್ನಬಹುದು.

ಸಿನಿಮಾ ಪರಿಕಲ್ಪನೆಯೂ ಇನ್ನೂ ಶ್ರೀಮಂತವಾಗಿ ಮೂಡಿಬರಲು ಸಾಧ್ಯ

ಒಂದು ಸಿನಿಮಾ ತಯಾರಾಗಿ ಪ್ರೇಕ್ಷಕರನ್ನು ತಲುಪುವ ಹೊತ್ತಿಗೆ ಅನೇಕ ಹಂತಗಳನ್ನು ದಾಟಿ ಬರಬೇಕು. ದೃಶ್ಯಗಳ ಚಿತ್ರೀಕರಣ, ಡೈಲಾಗ್‌, ಹಾಡುಗಳ ಧ್ವನಿ ಮುದ್ರಣ, ಸಂಗೀತದ ಮರು ಸಂಯೋಜನೆ, ಸಂಕಲನ ಕಾರ್ಯಗಳು ಆಗಬೇಕು. ಆಧುನಿಕ ತಂತ್ರಜ್ಞಾನ ಬಳಕೆಗೆ ಬಂದ ಬಳಿಕ ಡಿಟಿಎಸ್‌, ಡಾಲ್ಬಿ ಸೌಂಡ್ಸ್‌ ಎಫೆಕ್ಟ್, ಆ್ಯನಿಮೇಷನ್‌, ಗ್ರಾಫಿಕ್ಸ್‌, ಗ್ರೀನ್‌ ಮ್ಯಾಟ್ಸ್ ಮುಂತಾದವು ಸಿನಿಮಾಗಳಿಗೆ ಕಡ್ಡಾಯವಾಗಿ ಬೇಕೇಬೇಕು ಎನ್ನುವ ವಾತಾವರಣ ನಿರ್ಮಾಣವಾಗಿ ಬಿಟ್ಟಿದೆ. ಇವು ಎಲ್ಲವೂ ಒಂದೇ ಕಡೆ ದೊರಕಲು ಚಿತ್ರನಗರಿ ಅವಶ್ಯಕವಾಗಿದೆ. ಐಟಿ ಹಬ್‌ ಆಗಿರುವ ಬೆಂಗಳೂರಿನಲ್ಲಿ ಈಗಾಗಲೇ ಹಲವು ಅಂತಾರಾಷ್ಟ್ರೀಯ ಸಿನಿಮಾಗಳ ಸಿಜೆ ಕೆಲಸ,ಆ್ಯನಿಮಿಷನ್‌ ಕಾರ್ಯ ಸೇರಿದಂತೆ ಅನೇಕ ತಾಂತ್ರಿಕ ಕೆಲಸಗಳು ನಡೆಯುತ್ತಿವೆ. ಆದರೆ ಇದು ಒಂದು ಸೂರಿನಡಿಯಲ್ಲಿ ಆಗುತ್ತಿಲ್ಲ. ಒಬ್ಬಬ್ಬ ನುರಿತ ತಂತ್ರಜ್ಞ ಒಂದೊಂದು ಕಡೆ ಕುಳಿತು ಖಾಸಗಿಯಾಗಿ ಕೆಲಸ ಮಾಡಿಕೊಡುತ್ತಿದ್ದಾರೆ. ಚಿತ್ರನಗರಿಯಾದರೆ ಇಂತಹ ತಂತ್ರಜ್ಞರು ಸಂತೆಯಂತೆ ಒಂದೇ ಕಡೆ ಸಿಗುತ್ತಾರೆ. ಆಗ ಸಿನಿಮಾ ಪರಿಕಲ್ಪನೆಯೂ ಇನ್ನೂ ಶ್ರೀಮಂತವಾಗಿ ಮೂಡಿಬರಲು ಸಾಧ್ಯವಾಗುತ್ತದೆ.

ಸ್ಥಳೀಯ ಪ್ರವಾಸೋದ್ಯಮ ಬೆಳವಣಿಗೆ

ಮೈಸೂರು ನೈಸರ್ಗಿಕವಾಗಿಯೇ ಒಂದು ಫಿಲಂ ಸಿಟಿ. ಅಲ್ಲಿ ಚಿತ್ರನಗರಿ ಸ್ಥಾಪನೆಯಾದರೆ ಎಲ್ಲ ದೃಷ್ಟಿಯಿಂದಲೂ ಬಹಳ ಅನುಕೂಲ. ಈಗಂತೂ ಸಾರಿಗೆ ಸಂಪರ್ಕ ಉತ್ತಮವಾಗಿರುವುದರಿಂದ ಬೆಂಗಳೂರಿನಿಂದ ಕೇವಲ ಒಂದೂವರೆ ತಾಸಿನಲ್ಲಿ ಮೈಸೂರನ್ನು ತಲುಪಬಹುದು. ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಯಾವುದೇ ಅಡತಡೆಗಳು ಇಲ್ಲದೇ ಏಕಾಗ್ರತೆಯಿಂದ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು ಚಿತ್ರನಗರಿ ಬಹಳ ಅವಶ್ಯಕ. ಜನಜಂಗುಳಿ ಪ್ರದೇಶ, ಒತ್ತಡದ ಜಾಗದಲ್ಲಿ ಬರುವ ಔಟ್‌ಫ‌ುಟ್‌ಗೂ ಚಿತ್ರನಗರಿ, ಸ್ಟೂಡಿಯೋನಲ್ಲಿ ಬರುವ ಔಟ್‌ಫ‌ುಟ್‌ಗೂ ಬಹಳ ವ್ಯತ್ಯಾಸವಿರುತ್ತದೆ. ಆದ್ದರಿಂದ ಚಿತ್ರನಗರಿ ಬೇಕಾಗಿದೆ ಎಂದು ನಾಯಕ ನಟ ರಮೇಶ್‌ ಅರವಿಂದ್‌ ಫಿಲಂಸಿಟಿಯ ಮಹತ್ವವನ್ನು ಮಾತಿನಲ್ಲಿ ತೋರ್ಪಡಿಸಿದ್ದಾರೆ.

ಇನ್ನೂ ಮೈಸೂರಿನಲ್ಲೇ ಆಡಿ ಬೆಳೆದು ಈಗ ಪ್ರವರ್ಧಮಾನಕ್ಕೆ ಬರುತ್ತಿರುವ ನಾಯಕ ನಟ- ನಿರ್ದೇಶಕ ಡಾರ್ಲಿಂಗ್‌ ಕೃಷ್ಣ ಹೇಳುವಂತೆ, ಮೈಸೂರಿನಲ್ಲಿ ಯಾವುದೇ ಕಥೆಗೂ ಹೊಂದುವಂತಹ ಲೊಕೇಶನ್‌ಗಳು ಬೇಕಾದಷ್ಟು ಇವೆ. ಹಳೆಯ ಕಾಲದ ಮನೆಗಳು, ಅರಮನೆ, ಹೊಸ ಮಾದರಿಯ, ಆಧುನಿಕ ಜೀವನ ಶೈಲಿಯ ಚಿತ್ರಣಗಳು ಎಲ್ಲವೂ ಮೈಸೂರಿನಲ್ಲಿ ಸಿಗುತ್ತದೆ.

ಚಿತ್ರನಗರಿ ಸ್ಥಾಪನೆಯಾದರೆ ಔಟ್‌ಡೋರ್‌ ಚಿತ್ರೀಕರಣವನ್ನು ಮೈಸೂರು ಸುತ್ತಮುತ್ತ ಮಾಡಿ,ಪ್ರೊಡಕ್ಷನ್‌ ಕೆಲಸಗಳನ್ನು ಸಂಪೂರ್ಣವಾಗಿ ಚಿತ್ರನಗರಿಯಲ್ಲಿ ಮಾಡಿಕೊಳ್ಳಬಹುದು. ಇದರಿಂದ ಒಂದು ಸಿನಿಮಾವನ್ನು ಪೂರ್ಣವಾಗಿ ಸಿದ್ಧಮಾಡಿಕೊಳ್ಳುವ ಅವಕಾಶವಿರುತ್ತದೆ. ಇದಲ್ಲದೇ ಸ್ಥಳೀಯವಾಗಿ ಪ್ರವಾಸೋದ್ಯಮ ಬೆಳವಣಿಗೆಯಾಗುತ್ತದೆ. ಟ್ಯಾಕ್ಸಿ, ಇನ್ನಿತರೆ ಸಂಪರ್ಕ ಸಾರಿಗೆಗಳಿಗೂ ಡಿಮ್ಯಾಂಡ್‌ ಹೆಚ್ಚುತ್ತದೆ. ಫಿಲಂಸಿಟಿಯನ್ನು ನೋಡಲು ಜನರು ಬರುವುದರಿಂದ ಬೇರೆ-ಬೇರೆ ಉದ್ಯಮಗಳು ಅಭಿವೃದ್ಧಿಯಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಜಗತ್ತಿನ ಚಿತ್ರರಂಗದ ಎಲ್ಲರ ಕಣ್ಣು ಇತ್ತ ಇರುತ್ತದೆ.

ನಗರದಲ್ಲಿ ಇವೆ 16 ಅರಮನೆ

ಕನ್ನಡ ಚಿತ್ರರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಮಹಾತ್ಮ ಪಿಕ್ಚರ್‌ ಸಂಸ್ಥೆಯ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಅವರು ಅಭಿಪ್ರಾಯಪಡುವಂತೆ, ಮೈಸೂರು ನಗರದಲ್ಲಿ 16 ಅರಮನೆಗಳು ಇವೆ. ಸೆಟ್‌ ಹಾಕು ಅವಶ್ಯಕತೆ ಇಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಹಾಲಿವುಡ್‌ ಬಾಲಿವುಡ್‌ ಚಿತ್ರಗಳು ಇಲ್ಲಿ ಚಿತ್ರೀಕರಣವಾಗಿವೆ.

ಹಿಂದಿಯ ಮೇರುನಟರಾದ ರಾಜಕಪೂರ್‌, ಶಾಂತರಾಂ ಅವರಿಗೂ ಮೈಸೂರು ಎಂದರೆ ಬಹಳ ಇಷ್ಟವಾಗಿತ್ತು. ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಸಿನಿಮಾಗಳಲ್ಲಿ ಬಹುತೇಕ ಚಿತ್ರಗಳು ಮೇಲುಕೋಟೆ, ಚಾಮುಂಡಿಬೆಟ್ಟದ ಆಸುಪಾಸು ತಯಾರಾಗಿವೆ. ಇನ್ನೂ ಫಿಲಂ ಸಿಟಿಯಾದರೆ ಅವರುಗಳು ಶೂಟಿಂಗ್‌ ಅಲ್ಲದೇ, ತಾಂತ್ರಿಕ ಕೆಲಸಗಳನ್ನು ಇಲ್ಲೇ ಮಾಡಿ ಮುಗಿಸಿಕೊಳ್ಳುತ್ತಾರೆ. ಇದರಿಂದ ಆದಾಯ ನಿರೀಕ್ಷೆ ಮಾಡಬಹುದು ಎನ್ನುತ್ತಾರೆ.

ಇಮ್ಮಾವು ಬಳಿ ಫಿಲಂ ಸಿಟಿ

ಮೈಸೂರು ತಾಲೂಕು ಕಡಕೊಳ ಸಮೀಪವಿರುವ ಇಮ್ಮಾವು ಬಳಿ ಫಿಲಂ ಸಿಟಿಗೆ 160 ಎಕರೆ ಪ್ರದೇಶ ಮಂಜೂರಾಗಿದೆ. ಈಗೀನ ಕಾಂಗ್ರೆಸ್‌ ಸರ್ಕಾರದ ಸಿಎಂ ಸಿದ್ದರಾಮಯ್ಯ ಇತ್ತೀಚಿಗಷ್ಟೇ ಆದೇಶವನ್ನು ನೀಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಲಿದೆ. ಎಲ್ಲವೂ ಅಂದುಕೊಂಡತೆ ಸಾಗಿದರೆ ಇನ್ನೂ ಮೂರು ವರ್ಷದಲ್ಲಿ ಚಲನಚಿತ್ರಗಳ ಕಾರ್ಯಚಟುವಟಿಕೆಗಳು ಶುರುವಾಗಲಿವೆ.

ಕನ್ನಡ ಚಿತ್ರರಂಗಕ್ಕೆ ಚಿತ್ರನಗರಿ ಅವಶ್ಯಕತೆ ಇದೆ ಎನ್ನುವ ವಿಷಯವು ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಯಾಗಿದ್ದಾಗ 1980ರಲ್ಲೇ ಮುನ್ನೆಲೆಗೆ ಬಂದಿತ್ತು. ಬಂದಷ್ಟೇ ವೇಗವಾಗಿ ಕಣ್ಮರೆಯಾಯಿತು. 2004ರಲ್ಲಿ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಮತ್ತೆ ಫಿಲಂ ಸಿಟಿ ವಿಷಯಕ್ಕೆ ರೆಕ್ಕೆ ಮೂಡಿ ಕೆಲ ದಿನ ಎಲ್ಲ ಕಡೆ ಓಡಾಡಿತು. ಕೊನೆಗೆ ಮೂಲೆ ಸೇರಿತು. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ 2017ರಲ್ಲಿ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಗೆ ಜಾಗ ಗುರುತಿಸಿತು.

2018ರಲ್ಲಿ ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದ ಎಚ್‌.ಡಿ.ಕುಮಾರಸ್ವಾಮಿ ಅದನ್ನು ರಾಮ ನಗರಕ್ಕೆ ಸ್ಥಳಾಂತರ ಮಾಡಿದರು. 2019ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಚಿತ್ರನಗರಿ ಯನ್ನು ಹೆಸರಘಟ್ಟದಲ್ಲಿ ಇರುವ ದೇವಿಕಾ ರಾಣಿ ರೋರಿಕ್‌ ಎಸ್ಟೇಟ್‌ನಲ್ಲಿ ಸ್ಥಾಪನೆ ಮಾಡಬೇಕು ಎನ್ನುವ ಆಶಯದೊಂ ದಿಗೆ 500 ಕೋಟಿ ರೂ. ಗಳನ್ನು ಘೋಷಣೆ ಮಾಡಿತು. ಈ ಯೋಜನೆ ಸುತ್ತಿಬಳಿಸಿ ಮೈಸೂರಿನ ಹಿಮ್ಮಾವಿಗೆ ಮತ್ತೆ ವಾಪಸ್‌ ಆಯಿತು.

■ ಆರ್‌.ವೀರೇಂದ್ರ ಪ್ರಸಾದ್‌

ಟಾಪ್ ನ್ಯೂಸ್

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

Forest

2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

19

Team India: ಎಂಸಿಜಿಯಲ್ಲಿ ಟೀಮ್‌ ಇಂಡಿಯಾ ಅಭ್ಯಾಸ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!

suicide

Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು

hk-patil

C.T. Ravi ಗೈರು; ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು: ಎಚ್‌.ಕೆ.ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.