ಈ ಯುಗದ ಫುಡ್‌ಮ್ಯಾನ್‌ಗಳು !
Team Udayavani, Jul 16, 2019, 5:00 AM IST
ಆಧುನಿಕ ಯುಗದಲ್ಲಿ ಹೀಮ್ಯಾನ್, ಸ್ಪೈಡರ್‌ಮ್ಯಾನ್‌ಗಳನ್ನು ಕಂಡಿದ್ದೆವು. ಪಿಜ್ಜಾಮ್ಯಾನ್‌ಗಳು ಬದಿಗೆ ಸರಿದು ಫುಡ್ ಮ್ಯಾನ್‌ಗಳಿಗೆ ದಾರಿ ಬಿಡುತ್ತಿದ್ದಾರೆ. ಸ್ಪೈಡರ್‌ಮ್ಯಾನ್‌ಗಳಂತೆಯೇ ಗ್ರಾಹಕರ ಬಾಯಿ ಒಣಗುವ ಮೊದಲು, ಆಹಾರದ ಬಿಸಿ ಆರುವ ಮೊದಲು ಮನೆಗಳಿಗೆ ಮುಟ್ಟಿಸುವ ಧಾವಂತದಲ್ಲಿದ್ದಾರೆ ಇವರು !
ಮಣಿಪಾಲ: ನಗರಗಳಲ್ಲಿನ ಹೊಟೇಲ್‌ಗಳ ದೃಶ್ಯವೊಂದನ್ನು ಮೆಲುಕು ಹಾಕಿಕೊಳ್ಳಿ.
2010ರ ಒಂದು ದಿನ: ನಾವು ಹೋಗಿ ಕುಳಿತ ಕೂಡಲೇ ಸಪ್ಲೆಯರ್ ಬರುತ್ತಾನೆ, ಉದ್ದನೆಯ ತಿಂಡಿ ಪಟ್ಟಿ ಹೇಳುತ್ತಾನೆ (ಮೆನು ಪುಸ್ತಕ ಕೊಡುತ್ತಾನೆ). ಬಳಿಕ ನಮಗೆ ಬೇಕಾದುದನ್ನು ಆರ್ಡರ್ ತೆಗೆದುಕೊಂಡು ಹೋಗಿ ಹದಿನೈದು ನಿಮಿಷಗಳಲ್ಲಿ ನಮ್ಮೆದುರು ತಂದಿಡುತ್ತಾನೆ.
2019ರ ಒಂದು ದಿನ: ಮೊಬೈಲ್‌ನ ಆ್ಯಪ್‌ವೊಂದರಲ್ಲಿ ಗ್ರಾಹಕನೊಬ್ಬ ಹೊಟೇಲ್ ಪಟ್ಟಿ ತೆಗೆದ, ಅದರಲ್ಲಿನ ತಿಂಡಿ ಪಟ್ಟಿಗೆ ಹೋಗಿ ಆಯ್ಕೆ ಮಾಡಿದ. ದುಡೂx ಪಾವತಿಸಿಯಾಯಿತು. 30 ನಿಮಿಷದೊಳಗೆ ಮನೆಯ ಕಾಲಿಂಗ್ ಬೆಲ್ ಸದ್ದಾಗುತ್ತದೆ. ಎದುರು ಫುಡ್‌ಮ್ಯಾನ್ (ಸಪ್ಲೆಯರ್) ಹೊಸ ರೂಪದಲ್ಲಿ ಕವರ್ ಹಿಡಿದು ನಿಂತಿರುತ್ತಾನೆ. ನಾವು ಅದನ್ನು ಪಡೆದು ಹೊಟೇಲ್‌ನ ದೋಸೆ ಸವಿಯುತ್ತೇವೆ.
ಇದೇ ಆನ್‌ಲೈನ್ ಆಹಾರ ಪೂರೈಕೆ ವ್ಯವಸ್ಥೆ. ಇದೀಗ ಒಂದು ಟ್ರೆಂಡ್. ಅದೂ ಹೆಚ್ಚಾಗಿ ನಗರ ಗಳಲ್ಲಿ. ಎತ್ತ ನೋಡಿದರೂ ಕೆಂಪು ಟೀ ಶರ್ಟ್ ಧರಿಸಿ ಪುಟ್ಟ ಬ್ಯಾಗ್ ಬೆನ್ನಿಗೆ ಹಾಕಿ ಕೊಂಡು ಓಡಾಡುವವರೇ ಕಾಣಸಿಗುತ್ತಾರೆ. ಅವರೇ 21ನೇ ಶತಮಾನದ ಫುಡ್‌ಮ್ಯಾನ್‌ಗಳು.
ಆಯ್ಕೆ ಹೇಗೆ?
ನಗರಗಳಲ್ಲಿ ಇಂತಹ ಸ್ಟಾರ್ಟಪ್‌ಗ್ಳ ಶಾಖೆಗಳಿವೆ. ಸಂಬಂಧ ಪಟ್ಟ ಸ್ಟಾರ್ಟಪ್‌ಗ್ಳ ಆ್ಯಪ್‌ಗ್ಳನ್ನು ಅಳವಡಿಸಿಕೊಂಡು, ಆಹಾರ ವನ್ನು ಇಚ್ಛಿತ ರೆಸ್ಟೋರೆಂಟ್‌ಗಳಿಂದ ಪಡೆಯಬಹುದು. ಪಾವತಿಯ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಿಲ್ಲ. ಆನ್‌ಲೈನ್‌ಮೂಲಕ-ಫುಡ್‌ಮ್ಯಾನ್ ಕೈಗೆ ಪಾವತಿ ವ್ಯವಸ್ಥೆ ಇದೆ. ಹಸಿರು ಮಾರ್ಕ್ ಇದ್ದರೆ ಸಸ್ಯಾಹಾರ ಎಂದೂ, ಕೆಂಪು ಮಾರ್ಕ್ ಇರುವ ಮೆನು ಮಾಂಸಾಹಾರ ಎಂದಾಗಿರುತ್ತದೆ. ಆರ್ಡರ್ ದಾಖಲಾದ ಬಳಿಕ ಡೆಲಿವರಿ ಬಾಯ್‌ಗೆ ಆಸೈನ್‌ಮೆಂಟ್ (ಕಾರ್ಯ)ವನ್ನು ಸಂಸ್ಥೆಯೇ ನೀಡುತ್ತದೆ. ಎಲ್ಲ ವಿವರವನ್ನು ಆ್ಯಪ್‌ನಿಂದ ಪಡೆಯ ಬಹುದಾಗಿದ್ದು, 30ರಿಂದ 35 ನಿಮಿಷಗಳಲ್ಲಿ ಆಹಾರ ಲಭ್ಯ.
ಪಿಜ್ಜಾ ಮಾದರಿಯೇ!
1994ರಲ್ಲಿ ಪಿಜ್ಜಾ ಆನ್‌ಲೈನ್‌ನಲ್ಲಿ ತನ್ನ ಆಹಾರಗಳನ್ನು ಮನೆ ಮನೆಗಳಿಗೆ ತಲುಪಿಸುತ್ತಿತ್ತು. ಕ್ಯಾಲಿಫೋರ್ನಿಯಾದಲ್ಲಿ 20ನೇ ಶತಮಾನ ಅಂತ್ಯದಲ್ಲೇ ಈ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲಾಗಿತ್ತು.
ಟಾಪ್ 5 ಆಹಾರ ಪೂರೈಕೆದಾರರು
1. ಸ್ವಿಗ್ಗಿ
2. ಝೋಮೆಟೋ
3. ಫಾಸೋಸ್/
ರೆಬೆಲ್ ಫೂಡ್
4. ಫ್ರೆಶ್ ಮೆನು
5. ಬಿರಿಯನಿ ಫಾರ್ ಕಿಲೋ
ಉಬರ್ ಈಟ್ಸ್ ಇದೇ ಮಾದರಿಯ ಆನ್‌ಲೈನ್ ಫುಡ್ ಡೆಲಿವರಿ ಪೋರ್ಟಲ್ ಆಗಿದ್ದು, ಕೆಲವು ನಗರಗಳಲ್ಲಿ ಅತ್ಯುನ್ನತ ಗ್ರಾಹರನ್ನು ಹೊಂದಿದೆ.
ಸಂಸ್ಥೆಗೆ ಹೇಗೆ ಲಾಭ
ರೆಸ್ಟೋರೆಂಟ್‌ನ ನೈಜ ಬೆಲೆ ಸೇರಿಸಿ ಆಹಾರದ ಬೆಲೆ ನಿರ್ಧರಿಸುತ್ತದೆ ಸಂಸ್ಥೆ ತನ್ನ ಲಾಭ ಇಟ್ಟುಕೊಂಡು ಡೆಲಿವರಿ ಬಾಯ್‌ಗೆ ಪ್ರತಿ ಆರ್ಡರ್‌ಗೆ ನಿರ್ಧಿಷ್ಟ ಮೊತ್ತವನ್ನು ನಿಗದಿ ಮಾಡಿ ನೀಡ ಲಾಗುತ್ತದೆ. ಇಷ್ಟಲ್ಲದೇ ತಿಂಗಳಿಗೆ ನಿರ್ದಿಷ್ಟ ಭತ್ತೆಯನ್ನೂ ಡೆಲಿವರಿ ಬಾಯ್‌ಗಳಿಗೆ ನೀಡುತ್ತದೆ. ವಿಶೇಷ ವೆಂದರೆ, ಗ್ರಾಮಾಂತರ ಭಾಗದ ಹಲವು ಮಕ್ಕಳು ಈ ನಗರಗಳಲ್ಲಿ ನಡೆಯುವ ವ್ಯಾಪಾರಗಳಲ್ಲಿ ಪರಿಚಾರಕರಾಗಿ ಸೇವೆ ಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇನ್ನೂ ಚೆಂದವಾಗಿ ಹೇಳುವುದಾದರೆ ಅನ್ನವನ್ನು ಉಳಿದವರಿಗೆ ವಿತರಿಸಿ ತಮ್ಮ ಅನ್ನದ ದಾರಿ ಕಂಡುಕೊಂಡಿದ್ದಾರೆ !
-ಕಾರ್ತಿಕ್ ಅಮೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್
Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು
Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್.ರಾಜಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.