ಏಕೀಕರಣದ ರೂವಾರಿಗೆ, ಆಧುನಿಕ ಭಾರತದ ಶಿಲ್ಪಿಗೆ ನಮನ


Team Udayavani, Oct 31, 2018, 12:30 AM IST

z-14.jpg

130 ಕೋಟಿ ಭಾರತೀಯರ ಆಶೀರ್ವಾದದ ಫ‌ಲವಾಗಿ “ಏಕತೆಯ ಪ್ರತಿಮೆ’ ಇಂದು ಅನಾವರಣಗೊಳ್ಳುತ್ತಿದೆ. ನರ್ಮದಾ ನದಿಯ ದಂಡೆಯಲ್ಲಿರುವ ಈ ಏಕತೆಯ ಪ್ರತಿಮೆ ವಿಶ್ವದಲ್ಲಿಯೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. “ಮಣ್ಣಿನ ಮಗ’ ಸರ್ದಾರ್‌ ಪಟೇಲ್‌ ಅವರು ಬಾನೆತ್ತರಕ್ಕೆ ನಿಂತು ನಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಮತ್ತು ಸ್ಫೂರ್ತಿ ನೀಡುತ್ತಿದ್ದಾರೆ. ಸರ್ದಾರ್‌ ಪಟೇಲ್‌ ಅವರ ಶ್ರೇಷ್ಠತೆ ಮತ್ತು ಗೌರವಾದರಗಳ ಸಂಕೇತವಾದ ಈ ಬೃಹತ್‌ ಪ್ರತಿಮೆಯ ಸಾಕಾರಕ್ಕೆ ಹಗಲಿರುಳು ಶ್ರಮಿಸಿದ ಎಲ್ಲರಿಗೂ ನನ್ನ ಅಭಿನಂದನೆ.

1947ರ ಮೊದಲಾರ್ಧ ಭಾರತದ ಇತಿಹಾಸದಲ್ಲಿ ನಿರ್ಣಾಯಕವಾದ ಕಾಲಘಟ್ಟ. ಆಗ ವಸಾಹತುಶಾಹಿ ಆಡಳಿತ ಕೊನೆ ಗಾಣು ವುದು ನಿಶ್ಚಿತವಾಗಿತ್ತು, ಅಂತೆಯೇ ಭಾರತ ವಿಭಜನೆ ಕೂಡ ನಿಶ್ಚಿತವಾಗಿತ್ತು, ಆದರೆ ಅದು ಒಂದಕ್ಕಿಂತ ಹೆಚ್ಚು ಭಾಗವಾಗುತ್ತದೆಯೇ ಎಂಬುದು ಅನಿಶ್ಚಿತವಾಗಿತ್ತು. ಬೆಲೆಗಳು ಏರುತ್ತಿದ್ದವು, ಆಹಾರದ ಕೊರತೆ ಸಾಮಾನ್ಯವಾಗಿತ್ತು. ಆದರೆ ಇದೆಲ್ಲಕ್ಕಿಂತಲೂ ಮಿಗಿಲಾಗಿ, ಭಾರತದ ಏಕತೆ ಬೃಹತ್‌ ಸಮಸ್ಯೆಯಾಗಿ ಬದಲಾಗಿತ್ತು. 

ಇಂಥ ಸನ್ನಿವೇಶದಲ್ಲಿ 1947ರ ಮಧ್ಯಭಾಗದಲ್ಲಿ ರಾಜ್ಯಗಳ ಇಲಾಖೆ ಅಸ್ತಿತ್ವಕ್ಕೆ ಬಂದಿತು. ಈ ಇಲಾಖೆಯ ಮುಖ್ಯ ಉದ್ದೇಶವು ಗಾತ್ರ, ಜನಸಂಖ್ಯೆ, ಗಡಿರೇಖೆಗಳಲ್ಲಿ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಪರಸ್ಪರ ಭಿನ್ನವಾಗಿದ್ದ 550 ರಾಜಾಳ್ವಿಕೆಯ ಸಂಸ್ಥಾನಗಳೊಂದಿಗೆ ಮಾತುಕತೆ ನಡೆಸಿ ಭಾರತದ ಬಾಂಧವ್ಯವನ್ನು ರೂಪಿಸುವುದಾಗಿತ್ತು. ಆಗ ಮಹತ್ಮಾ ಗಾಂಧಿ “”ರಾಜ್ಯಗಳ ಸಮಸ್ಯೆ ಎಷ್ಟು ಕ್ಲಿಷ್ಟಕರವಾಗಿದೆ ಎಂದರೆ ಇದನ್ನು “ನೀವು’ ಮಾತ್ರ ಪರಿಹರಿಸಬಲ್ಲಿರಿ” ಎಂದು ಒಬ್ಬ ಮೇರು ವ್ಯಕ್ತಿಗೆ ಹೇಳಿದ್ದರು. 

“ನೀವು’ ಎನ್ನುವ ಆ ಮೇರು ವ್ಯಕ್ತಿ ಮತ್ತಾರೂ ಅಲ್ಲ, ಅದು ಸರ್ದಾರ್‌ ವಲ್ಲಭಭಾಯಿ ಪಟೇಲ್‌. ಅವರ ಜಯಂತಿಯನ್ನು ನಾವು ಇಂದು ಆಚರಿಸುತ್ತಿದ್ದೇವೆ. ನಿರ್ದಿಷ್ಟ ಕಾಲಘಟ್ಟದಲ್ಲಿ ಸರ್ದಾರ್‌ ಪಟೇಲ್‌ ತಮ್ಮದೇ ಶೈಲಿಯಲ್ಲಿ, ನಿಖರ, ದೃಢ ಮತ್ತು ಆಡಳಿತಾತ್ಮಕ ಸಾಮರ್ಥ್ಯದೊಂದಿಗೆ ತಮ್ಮ ಕಾರ್ಯವನ್ನು ಮಾಡಿದರು. ಹೆಚ್ಚು ಸಮಯವಿರಲಿಲ್ಲ ಮತ್ತು ಮಾಡಬೇಕಾದ ಕೆಲಸ ಬಹಳಷ್ಟಿತ್ತು. ಆದರೆ, ಅವರು ಸಾಧಾರಣ ವ್ಯಕ್ತಿಯಾಗಿರಲಿಲ್ಲವಲ್ಲ, ಅವರು ಸರ್ದಾರ್‌ ಪಟೇಲರಾಗಿದ್ದರು. ಅವರು ದೇಶಕ್ಕೆ ನಿರಾಶೆಯುಂಟು ಮಾಡಲಿಲ್ಲ. ಪಟೇಲರು ಮತ್ತು ಅವರ ತಂಡ ಒಂದೊಂದೇ ಸಂಸ್ಥಾನಗಳೊಂದಿಗೆ ಮಾತುಕತೆ ನಡೆಸಿತು. ಅವರೆಲ್ಲರಿಗೂ ನೀವು ಸ್ವತಂತ್ರ ಭಾರತದ ಭಾಗವಾಗುತ್ತೀರಿ ಎಂಬ ಖಾತ್ರಿ ನೀಡಿತು. ಇಂದು ನಾವು ನೋಡುತ್ತಿರುವ ದೇಶದ ಈ ಭೂಪಟವಿದೆಯಲ್ಲ, ಇದು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಶ್ರಮದ ಫ‌ಲ. 

ವಿ.ಪಿ.ಮೆನನ್‌ ಅವರು ಸ್ವಾತಂತ್ರ್ಯ ಬಂದ ನಂತರ ತಾವು ಸರಕಾರಿ ಸೇವೆಯಿಂದ ನಿವೃತ್ತಿ ಪಡೆಯುವುದಾಗಿ ಹೇಳಿದ್ದರು. ಆಗ ಸರ್ದಾರ್‌ ಪಟೇಲ್‌ “ಇದು ವಿಶ್ರಾಂತಿ ಪಡೆಯುವ ಹೊತ್ತೂ ಅಲ್ಲ ಮತ್ತು ನಿವೃತ್ತಿಯ ಸಮಯವೂ ಅಲ್ಲ’ ಎಂದು ಹೇಳಿ ಮೆನನ್‌ರ ನಿರ್ಧಾರವನ್ನು ಬದಲಾಯಿಸಿದರು. ಇದು ಸರ್ದಾರ್‌ ಪಟೇಲ್‌ ಅವರ ದೃಢ ಸಂಕಲ್ಪಕ್ಕೊಂದು ದೃಷ್ಟಾಂತ. ವಿ.ಪಿ. ಮೆನನ್‌ ಅವರನ್ನು ರಾಜ್ಯಗಳ ಇಲಾಖೆಯ ಕಾರ್ಯದರ್ಶಿಯನ್ನಾಗಿ ಮಾಡಲಾ ಯಿತು. “ಭಾರತದ ರಾಜ್ಯಗಳ ಏಕೀಕರಣದ ಗಾಥೆ’ (The Story of the Integration of Indian States’) ಎಂಬ ಪುಸ್ತಕದಲ್ಲಿ ಮೆನನ್‌, ಹೇಗೆ ಸರ್ದಾರ್‌ ಪಟೇಲ್‌ ಮುಂದಾಳತ್ವ ವಹಿಸಿ, ಇಡೀ ತಂಡಕ್ಕೆ ಅವಿಶ್ರಾಂತವಾಗಿ ದುಡಿಯಲು ಪ್ರೇರಣೆ ನೀಡಿದರು ಎನ್ನುವುದರ ಬಗ್ಗೆ ಬರೆದಿದ್ದಾರೆೆ. “ದೇಶದ ಜನತೆಯ ಹಿತ ರಕ್ಷಣೆಯೇ ಮೊದಲ ಮತ್ತು ಪರಮೋಚ್ಚ ಆದ್ಯತೆ, ಅದರಲ್ಲಿ ಯಾವುದೇ ರಾಜಿ ಇಲ್ಲ’ ಎಂಬುದು ಸರ್ದಾರ್‌ ಪಟೇಲ್‌ ಅವರ ಸ್ಪಷ್ಟ ನಿಲುವಾಗಿತ್ತು ಎಂದು ಮೆನನ್‌ ಬರೆಯುತ್ತಾರೆ. 

1947ರ ಆಗಸ್ಟ್‌ 15ರಂದು ನಾವು ಹೊಸ ರಾಷ್ಟ್ರೋದಯವನ್ನು ಸಂಭ್ರಮದಿಂದ ಆಚರಿಸಿದೆವು, ಆದರೆ ರಾಷ್ಟ್ರ ನಿರ್ಮಾಣದ ಕೆಲಸ ಇನ್ನೂ ಪೂರ್ಣವಾಗಿರಲಿಲ್ಲ. ಸ್ವತಂತ್ರ ಭಾರತದ ಪ್ರಥಮ ಗೃಹ ಸಚಿವ ರಾದ ಪಟೇಲರು ದೈನಂದಿನ ಆಡಳಿತದಲ್ಲಿ ಜನರ ಹಿತವನ್ನು, ಅದರಲ್ಲೂ ನಿರ್ದಿಷ್ಟವಾಗಿ ಬಡವರು ಮತ್ತು ಶೋಷಿತರ ಹಿತವನ್ನು ರಕ್ಷಿಸುವ ಸಲುವಾಗಿ ಆಡಳಿತಾತ್ಮಕ ಚೌಕಟ್ಟಿನ ವೇದಿಕೆಯನ್ನು ರೂಪಿಸಿದರು. 

ಸರ್ದಾರ್‌ ಪಟೇಲ್‌ ಅವರು ನುರಿತ ಆಡಳಿತಗಾರರಾಗಿದ್ದರು. 1920ರ ದಶಕದಲ್ಲಿ ಅಹ್ಮದಾಬಾದ್‌ ಪುರಸಭೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೇ ಸ್ವತಂತ್ರ ಭಾರತದ ಆಡಳಿತಾತ್ಮಕ ಚೌಕಟ್ಟನ್ನು ಬಲಪಡಿಸುವ ಸಲುವಾಗಿ ಅವರು ಕೆಲಸ ಮಾಡುತ್ತಿದ್ದರು. ಅಹಮದಾಬಾದ್‌ನಲ್ಲಿದ್ದಾಗ ಅವರು ನಗರದ ಸ್ವಚ್ಛತೆಗಾಗಿ ಗಣನೀಯ ಸೇವೆ ಸಲ್ಲಿಸಿದ್ದರು. ನಗರದಾದ್ಯಂತ ಚರಂಡಿ ವ್ಯವಸ್ಥೆ ಮಾಡಿದ್ದರು, ಸ್ವತ್ಛತೆಗೆ ಆದ್ಯತೆ ನೀಡಿದ್ದರು. ಅಲ್ಲದೇ ಅವರು ನಗರಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳಾದ ರಸ್ತೆ, ವಿದ್ಯುತ್‌ ಮತ್ತು ಶಿಕ್ಷಣದಂಥ ಅಂಶಗಳ ಬಗ್ಗೆಯೂ ಗಮನ ಹರಿಸಿದ್ದರು.

ಇಂದು ಭಾರತ ಚೈತನ್ಯದಾಯಿ ಸಹಕಾರ ವಲಯಕ್ಕೆ ಹೆಸರಾಗಿದೆ. ಈ ಶ್ರೇಯದ ಅತಿ ದೊಡ್ಡ ಪಾಲು ಸರ್ದಾರ್‌ ಪಟೇಲ್‌ ಅವರಿಗೆ ಸಲ್ಲಬೇಕು. ಪಟೇಲರ ಸ್ಥಳೀಯ ಸಮುದಾಯದ ಅಭಿವೃದ್ಧಿ ಕಲ್ಪನೆಗಳಲ್ಲಿ, ಅದರಲ್ಲೂ ಮಹಿಳೆಯರ ಸಬಲೀಕರಣದ ಚಿಂತನೆಗಳಲ್ಲಿ ಅಮೂಲ್‌ನ ಬೇರುಗಳು ಕಾಣುತ್ತವೆ. ಹಲವರಿಗೆ ಆಸರೆ ಮತ್ತು ಘನತೆಯ ನೆಲೆ ನೀಡಿರುವ ವಸತಿ ಸಹಕಾರ ಸಂಘಗಳ ಕಲ್ಪನೆಯನ್ನು ಜನಪ್ರಿಯಗೊಳಿಸಿದ್ದೇ ಸರ್ದಾರ್‌ ಪಟೇಲ್‌. ನಂಬಿಕೆ ಮತ್ತು ಸಮಗ್ರತೆ ಎಂಬ ಎರಡು ಗುಣಗಳು ಸರ್ದಾರ್‌ ಪಟೇಲ್‌ ಅವರಿಗೆ ಸಮಾನಾರ್ಥಕವಾಗಿವೆ. ಭಾರತದ ರೈತರು ಅವರ ಬಗ್ಗೆ ಅನುಪಮ ವಿಶ್ವಾಸ ಹೊಂದಿದ್ದರು. ರೈತನ ಮಗನಾಗಿದ್ದ ಪಟೇಲರು, ಬರ್ದೋಲಿ ಸತ್ಯಾಗ್ರಹವನ್ನು ಮುನ್ನಡೆಸಿದ್ದರು. ಕಾರ್ಮಿಕ ವರ್ಗ ತಮ್ಮ ಕಷ್ಟಗಳಿಗೆ ಧ್ವನಿಯಾಗಿದ್ದ ಪಟೇಲರನ್ನು ಆಶಾಕಿರಣವೆಂದೇ ಕಾಣುತ್ತಿತ್ತು. ವರ್ತಕರು ಮತ್ತು ಕೈಗಾರಿಕೋದ್ಯಮಿಗಳು ಸರ್ದಾರ್‌ ಪಟೇಲ್‌ ಅವರೊಂದಿಗೆ ಕೆಲಸ ಮಾಡಲು ಇಚ್ಛಿಸುತ್ತಿದ್ದರು, ಕಾರಣ ಅವರಲ್ಲಿ ಭಾರತದ ಆರ್ಥಿಕತೆ ಮತ್ತು ಕೈಗಾರಿಕಾ ಪ್ರಗತಿಯ ಚಿಂತನೆಯನ್ನು ಅವರು ಗುರುತಿಸಿದ್ದರು. 

ಪಟೇಲರ ರಾಜಕೀಯ ಸಹವರ್ತಿಗಳು ಸಹ ಅವರಲ್ಲಿ ವಿಶ್ವಾಸವಿಟ್ಟಿದ್ದರು. ಆಚಾರ್ಯ ಕೃಪಲಾನಿ ಅವರು ತಮಗೆ ಬಾಪೂ ಅವರ ಮಾರ್ಗದರ್ಶನ ಲಭ್ಯವಾಗದಿದ್ದಾಗ ಮತ್ತು ತಾವು ಸಮಸ್ಯೆ ಎದುರಿಸಿದಾಗಲೆಲ್ಲಾ ಸರ್ದಾರ್‌ ಪಟೇಲ್‌ ಅವರ ಬಳಿ ಹೋಗುತ್ತಿದ್ದುದಾಗಿ ಉಲ್ಲೇಖೀಸಿದ್ದಾರೆ. 1947ರಲ್ಲಿ ರಾಜಕೀಯ ಚಟುವಟಿಕೆಗಳು ಉತ್ತುಂಗದಲ್ಲಿದ್ದಾಗ ಸರೋಜಿನಿ ನಾಯ್ಡು ಅವರು ಪಟೇಲರನ್ನು “ದೃಢ ಸಂಕಲ್ಪದ ಕ್ರಿಯಾಶೀಲ ವ್ಯಕ್ತಿ’ ಎಂದು ಕರೆದಿದ್ದರು. ಪ್ರತಿಯೊಬ್ಬರೂ ಪಟೇಲರಲ್ಲಿ, ಪಟೇಲರ ಮಾತಿನಲ್ಲಿ ಮತ್ತು ಕೃತಿಗಳಲ್ಲಿ ನಂಬಿಕೆ ಇಟ್ಟಿದ್ದರು. ಸರ್ದಾರ್‌ ಪಟೇಲ್‌ ಜಾತಿ, ಮತ, ಧರ್ಮ, ನಂಬಿಕೆ, ವಯಸ್ಸನ್ನು ಮೀರಿ ಗೌರವಿಸಲ್ಪಡುತ್ತಿದ್ದರು. 

ಈ ವರ್ಷ ಸರ್ದಾರ್‌ ಜಯಂತಿ ಮತ್ತಷ್ಟು ವಿಶೇಷತೆಗಳಿಂದ ಕೂಡಿದೆ. 130 ಕೋಟಿ ಭಾರತೀಯರ ಆಶೀರ್ವಾದದ ಫ‌ಲವಾಗಿ “ಏಕತೆಯ ಪ್ರತಿಮೆ’ ಇಂದು ಅನಾವರಣಗೊಳ್ಳುತ್ತಿದೆ. ನರ್ಮದಾ ನದಿಯ ದಂಡೆಯಲ್ಲಿರುವ ಈ ಏಕತೆಯ ಪ್ರತಿಮೆ ವಿಶ್ವದಲ್ಲಿಯೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. “ಮಣ್ಣಿನ ಮಗ’ ಸರ್ದಾರ್‌ ಪಟೇಲ್‌ ಅವರು ಬಾನೆತ್ತರಕ್ಕೆ ನಿಂತು ನಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಮತ್ತು ಸ್ಫೂರ್ತಿ ನೀಡುತ್ತಿದ್ದಾರೆ. 

ಸರ್ದಾರ್‌ ಪಟೇಲ್‌ ಅವರ ಶ್ರೇಷ್ಠತೆ ಮತ್ತು ಗೌರವಾದರಗಳ ಸಂಕೇತವಾದ ಈ ಬೃಹತ್‌ ಪ್ರತಿಮೆಯ ಸಾಕಾರಕ್ಕೆ ಹಗಲಿರುಳು ಶ್ರಮಿಸಿದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ. ನನ್ನ ಮನಸ್ಸು 2013ರ ಅಕ್ಟೋಬರ್‌ 31ಕ್ಕೆ ಸಾಗುತ್ತದೆ. ನಾವು ಅಂದು ಈ ಮಹತ್ವಾಕಾಂಕ್ಷೆಯ ಯೋಜನೆಗೆ ಶಿಲಾನ್ಯಾಸ ನೆರವೇರಿಸಿ¨ªೆವು. ದಾಖಲೆಯ ಅವಧಿಯಲ್ಲಿ ಇಷ್ಟು ಬೃಹತ್‌ ಯೋಜನೆ ಸಾಕಾರಗೊಂಡಿದ್ದು ಪ್ರತಿಯೊಬ್ಬ ಭಾರತೀಯರೂ ಹೆಮ್ಮೆ ಪಡುವಂತೆ ಮಾಡಿದೆ. ನಾನು ನಿಮ್ಮಲ್ಲರಿಗೂ ಮುಂಬರುವ ದಿನಗಳಲ್ಲಿ ಏಕತೆಯ ಪ್ರತಿಮೆಗೆ ಭೇಟಿ ನೀಡುವಂತೆ ಮನವಿ ಮಾಡುತ್ತೇನೆ. 

ಏಕತೆಯ ಪ್ರತಿಮೆಯು ನಮ್ಮ ಹೃದಯಗಳ ಒಗ್ಗೂಡುವಿಕೆ ಮತ್ತು ನಮ್ಮ ಮಾತೃಭೂಮಿಯ ಭೌಗೋಳಿಕ ಏಕೀಕರಣದ ಸಂಕೇತವಾಗಿದೆ. ನಾವು ಒಡೆದು ಹೋದರೆ, ನಮ್ಮನ್ನು ನಾವೇ ಎದುರಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಇದು ನೆನಪಿಸುತ್ತದೆ. ನಾವು ಒಗ್ಗಟ್ಟಿನಿಂದಿದ್ದರೆ ಜಗತ್ತನ್ನೇ ಎದುರಿಸಬಹುದು ಮತ್ತು ಅಭಿವೃದ್ಧಿ ಮತ್ತು ವೈಭವದಲ್ಲಿ ಹೊಸ ಎತ್ತರಕ್ಕೆ ಏರಬಹುದು. 

ಸರ್ದಾರ್‌ ಪಟೇಲ್‌ ಸಾಮ್ರಾಜ್ಯಶಾಹಿ ಧೋರಣೆಯನ್ನು ಕೆಡವಲು ಮತ್ತು ರಾಷ್ಟ್ರೀಯತೆಯ ಸ್ಫೂರ್ತಿಯೊಂದಿಗೆ ಭೌಗೋಳಿಕ ಏಕೀಕರಣಕ್ಕಾಗಿ ಅದ್ಭುತ ವೇಗದಲ್ಲಿ ಶ್ರಮಿಸಿದರು. ದೇಶ ಒಡೆದು ಹೋಳಾಗುವುದರಿಂದ ರಕ್ಷಿಸಿದರು ಮತ್ತು ರಾಷ್ಟ್ರೀಯ ಚೌಕಟ್ಟಿನೊಳಗೆ ಅತ್ಯಂತ ದುರ್ಬಲವಾದ ಪ್ರದೇಶಗಳನ್ನೂ ಸಂಯೋಜಿಸಿದರು. ನಾವು ಇಂದು 130 ಕೋಟಿ ಭಾರತೀಯರು ಬಲಿಷ್ಠ, ಪ್ರಗತಿದಾಯಕ ಮತ್ತು ಸಮಗ್ರ ನವಭಾರತದ ನಿರ್ಮಾಣಕ್ಕೆ ಹೆಗಲಿಗೆ ಹೆಗಲುಕೊಟ್ಟು ದುಡಿಯುತ್ತಿದ್ದೇವೆ. ಸರ್ದಾರ್‌ ಪಟೇಲ್‌ ಅವರು ಬಯಸಿದ್ದಂತೆ ಯಾವುದೇ ರೀತಿಯ ಭ್ರಷ್ಟಾಚಾರ ಅಥವಾ ಪಕ್ಷಪಾತಕ್ಕೆ ಆಸ್ಪದವಿಲ್ಲದಂತೆ ಅಭಿವೃದ್ಧಿಯ ಫ‌ಲವನ್ನು ಅತ್ಯಂತ ದುರ್ಬಲರಿಗೂ ತಲುಪಿಸುವ ನಿಟ್ಟಿನಲ್ಲಿ ನಾವು ಪ್ರತಿಯೊಂದು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದೇವೆ. 

ನರೇಂದ್ರ ಮೋದಿ, ಪ್ರಧಾನಮಂತ್ರಿ

ಟಾಪ್ ನ್ಯೂಸ್

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.