ಶಾಂತಿಪಾಲನೆಗೆ ಕಲ್ಯಾಣಿ ಬಲ; ಭಾರತ-ಚೀನ ಗಡಿಯಲ್ಲಿ ಕೂಡ ನಿಯೋಜನೆ
Team Udayavani, Oct 13, 2022, 7:35 AM IST
ವಿಶ್ವಸಂಸ್ಥೆಯ ಶಾಂತಿಪಾಲನೆಯ ಕರ್ತವ್ಯದಲ್ಲಿ ನಿರತವಾಗಿರುವ ದೇಶದ ಪಡೆಗಳಿಗೆ ಗ್ರೆನೇಡ್ ಮತ್ತು ಬಾಂಬ್ ನಿರೋಧಕ ಸಾಮರ್ಥ್ಯ ಇರುವ 16 ವಾಹನಗಳನ್ನು ಹಸ್ತಾಂತರಿಸಲಾಗಿದೆ. “ಕಲ್ಯಾಣಿ ಎಂ4′ ಎಂಬ ಹೆಸರಿನ ಅವುಗಳನ್ನು ಪುಣೆ ಮೂಲದ ಭಾರತ್ ಪೋರ್ಜ್ ಲಿಮಿಟೆಡ್ ಕಂಪನಿ ದೇಶೀಯ ತಂತ್ರಜ್ಞಾನ ಬಳಕೆ ಮಾಡಿ ಉತ್ಪಾದಿಸಿದೆ.
ಏನು ವಿಶೇಷ?
ಕಲ್ಯಾಣಿ ಎಂ4 ಒಂದು ಅತ್ಯಾಧುನಿಕ ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕ
ಗ್ರೆನೇಡ್, ಬಾಂಬ್ ಸೇರಿದಂತೆ ವಿವಿಧ ರೀತಿಯ ಸ್ಫೋಟಕಗಳಿಂದ ಯೋಧರಿಗೆ ರಕ್ಷಣೆ
ಒಂದು ಪ್ಲಟೂನ್ ಯೋಧರು (20ರಿಂದ 50 ಮಂದಿ) ಕೊಂಡೊಯ್ಯುವ ಸಾಮರ್ಥ್ಯ
ಎಲ್ಲಾ ಭೂಪ್ರದೇಶಗಳಲ್ಲಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ದೂರವನ್ನು ಕ್ರಮಿಸುವ ಕ್ಷಮತೆ
50 ಕೆಜಿ – ಐಇಡಿ ಸ್ಫೋಟ ತಡೆಯುವ ಸಾಮರ್ಥ್ಯ
ಚಕ್ರಗಳ ಅಡಿಯಲ್ಲಿ ಮೂರು 10 ಕೆಜಿ ಟಿಎನ್‌ಟಿ , ವಾಹನದ ಒಂದು ಬದಿಯಲ್ಲಿ 50 ಕೆಜಿ ಐಇಡಿ ಸ್ಫೋಟ ತಡೆದುಕೊಳ್ಳುವ ಸಾಮರ್ಥಯ ಹೊಂದಿದೆ.
ಎಲ್ಲ ರೀತಿಯ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಕ್ಷಮತೆ:
ಎಲ್ಲ ರೀತಿಯ ಪ್ರದೇಶಗಳಲ್ಲಿ ಮತ್ತು ಹವಾಮಾನಗಳಲ್ಲಿ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ. ಲೆಹ್, ಲಡಾಖ್, ಕಛ… ಮರುಭೂಮಿಯಲ್ಲಿ ಇದರ ಪ್ರಯೋಗಗಳನ್ನು ನಡೆಸಲಾಗಿದೆ.
ಭಾರತ-ಚೀನ ಗಡಿಯಲ್ಲಿ ಕೂಡ ನಿಯೋಜನೆ:
ಈ ಹಿಂದೆ ಕೂಡ ಕಲ್ಯಾಣಿ ಎಂ4 ಸರಣಿಯ ಆ್ಯಂಬುಲೆನ್ಸ್ ಮತ್ತು ಯುದ್ಧ ವಾಹಕಗಳನ್ನು ಭಾರತೀಯ ಸೇನೆಗೆ ಹಸ್ತಾಂತರಿಸಲಾಗಿದೆ. ಇತ್ತೀಚೆಗೆ ಭಾರತೀಯ ಸೇನೆಯ ಉತ್ತರ ಕಮಾಂಡ್‌ಗೆ ಕಲ್ಯಾಣಿ ಎಂ4 ಪೂರೈಸಲಾಗಿದ್ದು, ಇದನ್ನು ಭಾರತ-ಚೀನ ಗಡಿಯಲ್ಲಿ ನಿಯೋಜಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.