ಔಪಚಾರಿಕ ಉದ್ಯೋಗದ ಬೆಳವಣಿಗೆ ಸಾಮಾಜಿಕ ನ್ಯಾಯಕ್ಕೆ ಪೂರಕ


Team Udayavani, Feb 20, 2022, 6:05 AM IST

ಔಪಚಾರಿಕ ಉದ್ಯೋಗದ ಬೆಳವಣಿಗೆ ಸಾಮಾಜಿಕ ನ್ಯಾಯಕ್ಕೆ ಪೂರಕ

ಜನತೆಯ ಶಾಂತಿಯುತ ಮತ್ತು ಸಮೃದ್ಧ ಸಹ ಬಾಳ್ವೆಗೆ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅವಶ್ಯ. ಸಾಮಾಜಿಕ ಅಸಮಾನತೆಯನ್ನು ತೊಡೆದುಹಾಕುವ ಪ್ರಯತ್ನಗಳಿಗೆ ಉತ್ತೇಜನ ನೀಡಿ, ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಆಶಯದಿಂದ ವಿಶ್ವಸಂಸ್ಥೆಯು 2009 ರಲ್ಲಿ ಪ್ರತೀ ವರ್ಷ ಫೆಬ್ರವರಿ 20ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸುವ ನಿರ್ಧಾರವನ್ನು ಕೈಗೊಂಡಿತು. ಉದ್ಯೋಗ, ಸಾಮಾಜಿಕ ರಕ್ಷಣೆ, ಸಾಮಾಜಿಕ ಸಂವಾದ ಮತ್ತು ಮೂಲಭೂತ ತಣ್ತೀಗಳು ಹಾಗೂ ಕೆಲಸದಲ್ಲಿ ಹಕ್ಕುಗಳ ಮೂಲಕ ಎಲ್ಲರಿಗೂ ನ್ಯಾಯಯುತ ಫ‌ಲಿತಾಂಶಗಳನ್ನು ಈ ಆಚರಣೆ ಖಾತರಿಪಡಿಸುತ್ತದೆ.

ಆರ್ಥಿಕ ಬಡತನ ಹಾಗೂ ಸಾಮಾಜಿಕ ಅಸಮಾನತೆ ಎಲ್ಲಿಯೇ ಇರಲಿ ಅದು ಅಭಿವೃದ್ದಿಗೆ ಮಾರಕ ಎಂಬ ಸತ್ಯದ ಅರಿವಿನ ಫ‌ಲವೇ ಈ ದಿನಾಚರಣೆ. ಪ್ರತೀ ಸಮಾಜದಲ್ಲಿಯೂ ಏಕತೆ, ಸಾಮರಸ್ಯ, ಸೌಹಾರ್ದತೆ, ಮಾನವ ಹಕ್ಕುಗಳ ನ್ಯಾಯವಿದ್ದರೆ ಅಭಿವೃದ್ಧಿ ಸುಲಭ ಸಾಧ್ಯ. ಇದರಿಂದ ದೇಶ ಮಾತ್ರವಲ್ಲದೆ ವಿಶ್ವವೇ ಪ್ರಗತಿಪಥದಲ್ಲಿರುತ್ತದೆ ಎಂಬುದು ವಿಶ್ವಸಂಸ್ಥೆಯ ಅಭಿಪ್ರಾಯ. ಈ ದಿನವು ಆದಾಯದ ಸಮಾನ ಹಂಚಿಕೆಯನ್ನು ಉತ್ತೇಜಿಸಲು ಮತ್ತು ಎಲ್ಲರಿಗೂ ಸಮಾನತೆ ಮತ್ತು ಈ ಮೂಲಕ ಸಂಪನ್ಮೂಲಗಳಿಗೆ ಹೆಚ್ಚಿನ ಪ್ರವೇಶವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ವಿಶ್ವ ಸಾಮಾಜಿಕ ನ್ಯಾಯ ದಿನವು ತಾರತಮ್ಯ, ಬಡತನ, ಲಿಂಗ ಸಮಾನತೆ ಮತ್ತು ಎಲ್ಲರಿಗೂ ನ್ಯಾಯ ಪ್ರವೇಶದಂತಹ ಸಮಸ್ಯೆಗಳನ್ನು ನಿಭಾಯಿಸುವ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಗುರುತಿಸುತ್ತದೆ. ಕುಟುಂಬದ ಆಸ್ತಿಯಂತೆ ಉದ್ಯೋಗ, ಶಿಕ್ಷಣ, ಆರ್ಥಿಕ, ರಾಜಕೀಯ ಅವಕಾಶಗಳು ಜಾತಿ-ಮತ ಭೇದಗಳಿಲ್ಲದೆ ದೇಶದ ಪ್ರಜೆಗಳಿಗೆ ಸಮಾನವಾಗಿ ಹಂಚಿಕೆಯಾಗಬೇಕು. ಅವಕಾಶವಂಚಿತರನ್ನು, ಅಂಚಿಗೆ ತಳ್ಳಲ್ಪಟ್ಟವರನ್ನು ಸಮಾನತೆ ಗಾಗಿ ಮೇಲೆ ತ್ತಲು ವ್ಯವಸ್ಥಿತ ಪ್ರಯತ್ನಗಳಾಗಬೇಕು. ಜಾಗತಿಕ ಒಗ್ಗಟ್ಟಿನ ಶಕ್ತಿ ಯನ್ನು ಎತ್ತಿ ಹಿಡಿಯುವುದೇ ಈ ದಿನದ ಮೂಲ ಧ್ಯೇಯವಾಗಿದೆ.

ಸಾಮಾಜಿಕ ಅನ್ಯಾಯದ ಕಲ್ಪನೆ: ಇತ್ತೀಚಿನ ವರ್ಷ ಗಳಲ್ಲಿ ಸಾಮಾಜಿಕ ಅನ್ಯಾಯದ ಕಲ್ಪನೆಯನ್ನು ಐದು ವಿಭಿನ್ನ ಘಟಕಗಳಾಗಿ ವರ್ಗೀಕರಿಸಲಾಗಿದೆ. ಮಾನ ವನ ಘನತೆ, ಸಾಮಾನ್ಯ ಒಳಿತಿನ ಪ್ರಾಮುಖ್ಯ, ಪರಸ್ಪರ ಹಕ್ಕುಗಳು ಮತ್ತು ಜವಾಬ್ದಾರಿಗಳು, ಕಾರ್ಮಿಕರ ಘನತೆ ಮತ್ತು ಕಾರ್ಮಿಕರ ಹಕ್ಕುಗಳು ಹಾಗೂ ಕೊನೆಯದಾಗಿ ಬಡವರು ಮತ್ತು ದುರ್ಬಲರಿಗೆ ಮೂಲಭೂತ ಆಯ್ಕೆಗಳು.

ನಾಲ್ಕು ತಣ್ತೀಗಳು: ಸಾಮಾಜಿಕ ನ್ಯಾಯ ಎಂಬ ಪದವನ್ನು ಮೊದಲು ಆರ್ಥಿಕ ಸಂಪನ್ಮೂಲಗಳಿಗೆ ಮಾತ್ರ ಅನ್ವಯಿಸಲಾಗಿತ್ತು. ಆದರೆ ಇಂದು ಇದು ಮಾನವ ಹಕ್ಕುಗಳೊಂದಿಗೆ ಹೊಂದಿ ಕೊಂಡಿದೆ. ಸಂಪನ್ಮೂಲಗಳ ವಿತರಣೆ, ಜನರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಹಾಗೂ ಸೇವೆಗಳು ಮತ್ತು ಅವಕಾಶಗಳಿಗೆ ಪ್ರವೇಶ ಇವೆಲ್ಲವೂ ಸಾಮಾಜಿಕ ನ್ಯಾಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನ್ಯಾಯ, ಪ್ರವೇಶಾಧಿಕಾರ, ಭಾಗವಹಿಸುವಿಕೆ ಮತ್ತು ಹಕ್ಕುಗಳು ಸಾಮಾಜಿಕ ನ್ಯಾಯದ ನಾಲ್ಕು ಪರಸ್ಪರ ಸಂಬಂಧಿತ ತಣ್ತೀಗಳಾಗಿವೆ.

1. ಪ್ರವೇಶಾಧಿಕಾರ: ಜನರ ಬದುಕನ್ನು ಸಹ್ಯವಾಗಲು ಸೇವೆಗಳು ಮತ್ತು ಸಂಪನ್ಮೂಲಗಳನ್ನು ನೀಡಬೇಕು. ಇವುಗಳಲ್ಲಿ ಶಿಕ್ಷಣ, ಆರೋಗ್ಯ ರಕ್ಷಣೆ, ವಸತಿ ಮತ್ತು ಆಹಾರ ಸೇರಿವೆ. ಆದಾಗ್ಯೂ ಅನೇಕ ಸಮಾಜಗಳಲ್ಲಿ ಅಸಮಾನ ಪ್ರವೇಶವಿದೆ. ಇದಕ್ಕೆ ಶಿಕ್ಷಣ ಒಂದು ಪ್ರಮುಖ ಉದಾಹರಣೆಯಾಗಿದೆ. ಒಂದು ನಿರ್ದಿಷ್ಟ ವರ್ಗದ ಮಕ್ಕಳಿಗೆ ಮಾತ್ರ ಉತ್ತಮ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾದರೆ ಕಡಿಮೆ-ವೇತನದ ಉದ್ಯೋಗದಲ್ಲಿರುವವರ ಮಕ್ಕಳು ಉತ್ತಮ ಶಿಕ್ಷಣ ಸೌಲಭ್ಯದಿಂದ ಸಹಜವಾಗಿ ವಂಚಿತರಾಗುತ್ತಾರೆ. ಇದರ ಪರಿಣಾಮ ಈ ಮಕ್ಕಳು ಬೆಳೆಯಲು ಮತ್ತು ಕೆಲವೊಂದು ಉದ್ಯೋಗ ವಲಯಗಳನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ಪ್ರತಿಯೊಬ್ಬರೂ ಸಮಾನ ಪ್ರವೇಶಾಧಿಕಾರ ವನ್ನು ಹೊಂದಿದಾಗ ಮಾತ್ರ ಸಮಾಜದ ಆರೋಗ್ಯ ಪೂರ್ಣ ಅಭಿವೃದ್ಧಿ ಸಾಧ್ಯ. 2. ನ್ಯಾಯ: ಸಾಮಾ ಜಿಕ ನ್ಯಾಯವು ಸಮಾನತೆಯ ಬಗ್ಗೆ ಮಾತ್ರ ಕಾಳಜಿ ವಹಿಸಿದಾಕ್ಷಣ ಅದು ನ್ಯಾಯಯುತ ಸಮಾಜಕ್ಕೆ ಕಾರಣವಾಗುವುದಿಲ್ಲ. ಹೆಚ್ಚು ಸಹಾಯದ ಅಗತ್ಯವಿ ರುವ ವ್ಯಕ್ತಿಗೆ ಅನುಕೂಲ ವಾಗುವಂತೆ ವ್ಯವಸ್ಥೆಯ ಒದಗಣೆ ಮುಖ್ಯವಾಗುತ್ತದೆ. 3. ಭಾಗವಹಿಸುವಿಕೆ: ಪ್ರತಿಯೊಬ್ಬರೂ ತಮ್ಮ ಕಾಳಜಿಯನ್ನು ವ್ಯಕ್ತಪಡಿ ಸಲು ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆ ಪ್ರಕ್ರಿ ಯೆಯಲ್ಲಿ ಪಾಲ್ಗೊಳ್ಳಲು ಸಮಾಜ ಅವಕಾಶ ನೀಡ ಬೇಕು. 4. ಮಾನವ ಹಕ್ಕುಗಳು: ಸಮಾಜವು ನ್ಯಾಯಯುತವಾಗಿರಲು, ಅದು ಪ್ರತಿಯೊಬ್ಬರ ನಾಗರಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು.

ಅನೌಪಚಾರಿಕ ಉದ್ಯೋಗದ ಸವಾಲು: ಇತ್ತೀಚಿನ ದಶಕಗಳಲ್ಲಿ ಜಾಗತೀಕರಣ, ಡಿಜಿಟಲ್‌ ಆರ್ಥಿಕತೆ, ಔದ್ಯೋಗೀಕರಣ, ಹೊಸದಾಗಿ ಅವತರಿಸುತ್ತಿರುವ ಉದ್ಯಮಗಳು ಸಹಜವಾಗಿ ಹೊಸ ಅವಕಾಶ ಹಾಗೂ ಆಯಾಮವನ್ನು ಸೃಷ್ಟಿಸಿ ಸಂಚಲನ ಮೂಡಿಸಿದೆಯಾದರೂ ಎಲ್ಲರನ್ನು ಒಳಗೊಳ್ಳುವಿಕೆ ಹಾಗೂ ಸಾಮಾಜಿಕ ನ್ಯಾಯ ಒದಗಿಸಿ ಸುಸ್ಥಿರ ಬೆಳವಣಿಗೆಯನ್ನು ಸಾಕ್ಷಾತ್ಕಾರ ಗೊಳಿಸುವಲ್ಲಿ ಮಂದಗತಿಯನ್ನು ಕಾಣಬಹು ದಾಗಿದೆ. ಔದ್ಯೋಗೀಕರಣದ ಬೆಳವಣಿಗೆಗೆ ತಂತ್ರ ಜ್ಞಾನ ಮತ್ತೂಂದು ಆಯಾಮವನ್ನೇ ನೀಡಿದೆ. ವಿಶ್ವದ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ. 60 ಕ್ಕಿಂತ ಹೆಚ್ಚು, ಅಂದರೆ 2 ಬಿಲಿಯನ್‌ ಮಂದಿ ಅನೌಪಚಾರಿಕ ಆರ್ಥಿಕತೆಯಲ್ಲಿ ತಮ್ಮ ಜೀವನೋ ಪಾಯವನ್ನು ಕಂಡುಕೊಳ್ಳುತ್ತಾರೆ. ಅನೌಪಚಾರಿಕ ಕೆಲಸಗಾರರು ಸಾಮಾನ್ಯವಾಗಿ ಯಾವುದೇ ರೀತಿಯ ಸಾಮಾಜಿಕ ರಕ್ಷಣೆ ಅಥವಾ ಉದ್ಯೋಗ ಸಂಬಂಧಿತ ಅನುಕೂಲತೆಗಳ ಕೊರತೆಯಿಂದಾಗಿ, ಔಪಚಾರಿಕ ಕೆಲಸಗಾರರಿಗೆ ಹೋಲಿಸಿದರೆ ಹೆಚ್ಚು ದುರ್ಬಲರಾಗಿರುತ್ತಾರೆ. ಔಪಚಾರಿಕ ಆರ್ಥಿಕತೆ ಯಲ್ಲಿ ಅವಕಾಶಗಳ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅನೌಪಚಾರಿಕ ಕ್ಷೇತ್ರವನ್ನು ಪ್ರವೇಶಿಸುತ್ತಾರೆ.

ಉದ್ಯಮ ಮತ್ತು ಮಾನವ ಅಭಿವೃದ್ಧಿ ಸ್ನೇಹಿ ಪರಿಸರ ನಮ್ಮದಾಗಲಿ: ಉದ್ಯಮದ ವಿಸ್ತರಣೆ ಮತ್ತು ಪ್ರಗತಿಗೆ ಪೂರಕವಾಗಬಲ್ಲ ಔಪಚಾರಿಕ ಉದ್ಯೋಗ ಉದ್ಯಮಸ್ನೇಹಿ ವಾತಾವರಣವನ್ನೂ ಸೃಷ್ಟಿಸಬಲ್ಲುದು. ಅಲ್ಪಾವಧಿಯಲ್ಲಿ ಅನೌಪಚಾರಿಕ ಉದ್ಯೋಗ, ಉದ್ಯಮವಲಯದಲ್ಲಿ ಬಹಳ ಸರಳ ಮತ್ತು ಲಾಭದಾಯಕ ಎಂದೆನಿಸಿದರೂ ದೀರ್ಘಾವಧಿಯ ಬೆಳವಣಿಗೆಗೆ ಮಾರಕ ಎಂಬ ಸತ್ಯವನ್ನು ಅರಿತುಕೊಳ್ಳಬೇಕಾಗಿದೆ.
ಸಾಮಾಜಿಕ ಸಮಾನತೆ, ಆರ್ಥಿಕತೆಯ ಸ್ಥಿರತೆ ಮತ್ತು ಸುಸ್ಥಿರ ಅಭಿವೃದ್ದಿಗೆ ಪೂರಕವಾದ ಔಪ ಚಾರಿಕ ಉದ್ಯೋಗದ ಪ್ರಮಾಣದ ಹೆಚ್ಚಳಕ್ಕೆ ಅನು ಕೂಲಕರವಾದ ಮಾನವ ಅಭಿವೃದ್ಧಿ ಸ್ನೇಹಿ ಪರಿಸರದ ನಿರ್ಮಾಣಕ್ಕೆ ಒತ್ತು ನೀಡಬೇಕಾಗಿದೆ.

ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಉದ್ಯೋಗ, ಸಾಮಾಜಿಕ ಭದ್ರತೆ, ಲಿಂಗ ಸಮಾನತೆ ಮತ್ತು ಸಾಮಾಜಿಕ ಸಮಾನತೆಯ ಎಲ್ಲ ಹಕ್ಕುಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸುವುದು ಒಂದು ಬಹುಮುಖ್ಯ ಸವಾಲಾಗಿ ಉಳಿದಿದೆ. ಔಪಚಾರಿಕ ಆರ್ಥಿಕತೆಗೆ ಪರಿವರ್ತನೆಯನ್ನು ಉತ್ತೇಜಿಸುವ ಮೂಲಕ ಬಡತನ ಮತ್ತು ಅಸಮಾನತೆಯನ್ನು ಕಡಿಮೆ ಮಾಡಲು ಸಾಧ್ಯ. ಅನೌಪಚಾರಿಕದಿಂದ ಔಪಚಾರಿಕ ಉದ್ಯೋಗಕ್ಕೆ ಪರಿವರ್ತನೆ ಹೊಂದಲು ಅನುಕೂಲವಾಗುವಂತೆ ಅಗತ್ಯ ವಾತಾವರಣವನ್ನು ಸೃಷ್ಟಿಸಬೇಕಾಗಿದೆ.

-ಡಾ| ಎ.ಜಯ ಕುಮಾರ ಶೆಟ್ಟಿ, ಉಜಿರೆ

ಟಾಪ್ ನ್ಯೂಸ್

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.