ಭಾರತೀಯ ಆಕಾಶದಲ್ಲಿ ಧೀರ ಅಭಿಮನ್ಯುಗಳು


Team Udayavani, Mar 17, 2019, 12:30 AM IST

q-17.jpg

ಪಾಕಿಸ್ತಾನಿ ಯುದ್ಧವಿಮಾನಗಳನ್ನು ಹೊಡೆದುರುಳಿಸಿ ವಿಜಯೋತ್ಸಾಹದಿಂದ ಕಲ್ಕತ್ತಾ ಏರ್ಪೋರ್ಟಿಗೆ ಮರಳಿದ ಈ ನಾಲ್ಕು ವಿಮಾನಗಳು ಮುಂದೆ ಮಾಡಿದ್ದೇನು ಗೊತ್ತೇ? “ವಿಮಾನಗಳಲ್ಲಿ ಇನ್ನೂ ಸಾಕಷ್ಟು ಇಂಧನವಿದೆ. ಇಷ್ಟು ಬೇಗ ಏಕೆ ಲ್ಯಾಂಡ್‌ ಮಾಡಬೇಕು’ ಎಂದು ಕಲ್ಕತ್ತಾದ ಬಾನಿನಲ್ಲಿ ಏರೋಬ್ಯಾಟಿಕ್‌ ಪ್ರದರ್ಶನಕ್ಕೆ ಅನುಮತಿ ಪಡೆದು ಆಕಾಶದಲ್ಲಿ ತಮ್ಮ ಕಲಾಪ್ರದರ್ಶನ ಮಾಡಿ ತಮ್ಮ ಸಾಹಸವನ್ನು ಬಿತ್ತರಿಸಿದರು ಭಾರತದ ಧೀರ ಪೈಲಟ್‌ಗಳು!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಇಷ್ಟು ಕೆಟ್ಟ ಹೆಸರು ಏಕೆ ಬಂದಿದೆ? ಪಾಕಿಸ್ತಾನದಲ್ಲಿರುವವರೆಲ್ಲಾ ಕೆಟ್ಟವರೇ? ಕ್ರೂರಿಗಳೇ?
ಖಂಡಿತ ಇಲ್ಲ. ಆದರೆ ಪಾಕಿಸ್ತಾನದ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಡಲು ಮುಖ್ಯ ಕಾರಣ ಅಲ್ಲಿಯ ಪಂಜಾಬಿ ಮುಸ್ಲಿಮರು. ಇವರಿಗೆ ಬಲೂಚಿಗಳು, ಸಿಂಧಿಯರು ಎಂದರೆ ಎಲ್ಲಿಲ್ಲದ ಅಸಡ್ಡೆ. ಸುಮಾರು ಎಪ್ಪತ್ತರ ದಶಕದಲ್ಲಿ, ಅಂದಿನ ಪೂರ್ವ ಪಾಕಿಸ್ತಾನದಲ್ಲಿ ಆದದ್ದೂ ಅದೇ. 
 ಪೂರ್ವ ಪಾಕಿಸ್ತಾನದಲ್ಲಿ ಬೆಂಗಾಳಿಗಳು, “ನಾವು ಬೆಂಗಾಳಿಗಳು ಬಹುಸಂಖ್ಯೆಯಲ್ಲಿದ್ದೇವೆ’ ಎಂದರೆ, “ಸರಿ ಹಾಗಾದರೆ, ನಿಮ್ಮನ್ನು ಮೈನಾರಿಟಿ ಮಾಡಿ ಬಿಡುತ್ತೇವೆ’ ಎಂದು ವ್ಯವಸ್ಥಿತವಾಗಿ ಸಾಮೂಹಿಕ ನರಹತ್ಯೆ ಮಾಡತೊಡಗಿದರು. 

1971ರ ಹೊತ್ತಿಗೆ ಅವರ ಪಾಪದ ಕೊಡ ತುಂಬಿತು. ಲಕ್ಷಗಟ್ಟಲೆ ಬೆಂಗಾಲಿ ನಿರಾಶ್ರಿತರು ಭಾರತಕ್ಕೆ ಹರಿದು ಬಂದರು. ಇನ್ನು ಕೈಕಟ್ಟಿ ಕೂರಲು ಸಾಧ್ಯವೇ ಇಲ್ಲ ಎನಿಸಿತು ಭಾರತ ಸರ್ಕಾರಕ್ಕೆ.”ಮುಕ್ತಿವಾಹಿನಿ’….ಸಿಡಿದೆದ್ದ  ಗೆರಿಲ್ಲಾ ಪಡೆ ಪೂರ್ವ ಪಾಕಿಸ್ತಾನ(ಇಂದಿನ ಬಾಂಗ್ಲಾದೇಶ)ದಲ್ಲಿನ ದಬ್ಟಾಳಿಕೆ ಯಿಂದ ತಪ್ಪಿಸಿಕೊಂಡು ಬಂದ ಬೆಂಗಾಲಿಗಳಿಗೆ ಸಹಾಯಮಾಡಲು, ತರಬೇತಿ ಕೊಡಲು ಭಾರತದ “ಮಿತ್ರವಾಹಿನಿ’ ಹೆಗಲು ಕೊಟ್ಟಿತು.

 ಮುಕ್ತಿ ವಾಹಿನಿ ಮತ್ತು ಮಿತ್ರವಾಹಿನಿಗಳ ಮುಖ್ಯ ಕೇಂದ್ರ ಭಾರತದ ಗಡಿಪ್ರದೇಶದ “ಬೊಯಿರ’ ಎನ್ನುವ ಪ್ರದೇಶದಲ್ಲಿತ್ತು. ಪಾಕಿಸ್ತಾನಿ ಸೇನೆ ಇವರನ್ನು ಹೆದರಿಸಲು ಯುದ್ಧ ಟ್ಯಾಂಕುಗಳನ್ನು ಕಳುಹಿಸಿತು! ಟ್ಯಾಂಕುಗಳು ಭಾರತದ ಗಡಿ ಪ್ರವೇಶಿಸಿದರೂ ಭಾರತದ ಸೇನೆ ಪ್ರತಿಕ್ರಿಯಿಸುತ್ತಿಲ್ಲವಲ್ಲ ಎಂದು ಇನ್ನೊಂದು ಹುಚ್ಚು ಸಾಹಸಕ್ಕೆ ಕೈಹಾಕಿತು ಪಾಕ್‌ ಸೇನೆ….        

ಅದು 22 ನವೆಂಬರ್‌ 1971. ಪಾಕಿಸ್ತಾನದ ವಾಯುಪಡೆಯ ಮೂರು ಸೇಬರ್‌ ಜೆಟ್‌ ಯುದ್ಧ ವಿಮಾನಗಳಿಂದ  ಭಾರತದ ಬೊಯಿರಾದ ಮೇಲೆ ಬಾಂಬುಗಳ ದಾಳಿ ಶುರುವಾಯಿತು. ಪಾಕಿಸ್ತಾನಿ ವಿಮಾನಗಳು ನಮ್ಮ ಭಾರತದ ಆಕಾಶದಲ್ಲಿ! ಆಗ ಕೆರಳಿತು ನೋಡಿ ಭಾರತೀಯ ವಾಯುಪಡೆ. ಸಮಯ ಮಧ್ಯಾಹ್ನ 2.48. ನಮ್ಮ ರಡಾರಿನಲ್ಲಿ ಎರಡನೇ ಬಾರಿಗೆ ಸೇಬರ್‌ ಜೆಟ್ಟುಗಳು ಭಾರತದ ಗಡಿಯ ಕಡೆ ಬರುತ್ತಿರುವುದು ಕಾಣಿಸಿತು, ಕಲ್ಕತ್ತಾದ ಏರ್ಪೋರ್ಟಿನಲ್ಲಾಗಲೇ ಸಜ್ಜಾಗಿ ನಿಂತಿದ್ದ ಭಾರತೀಯ ವಾಯುಸೇನೆಯ ನಾಲ್ಕು Gnat ವಿಮಾನಗಳು ಕೇವಲ ಮೂರು ನಿಮಿಷದಲ್ಲಿ ಆಕಾಶ ಸೇರಿ ಗಡಿಯ ಕಡೆ ಶರವೇಗದಲ್ಲಿ ಹಾರಿದವು. ಒಂದು ವಿಮಾನದಲ್ಲಿ ನಮ್ಮ ಕರ್ನಾಟಕದ ಫ್ಲೈಟ್‌   ಲೆಫ್ಟಿನೆಂಟ್‌ ಗಣಪತಿಯವರಿದ್ದರು. 

ಸಮಯ 2.56. ಭಾರತದ ಈ ನಾಲ್ಕು Gnat  ವಿಮಾನಗಳನ್ನು ಗಡಿಯೆಡೆಗೆ ಬರುತ್ತಿದ್ದ ಪಾಕಿಸ್ತಾನಿ ವಿಮಾನಗಳಿಗೆ ಗೊತ್ತಾಗದಂತೆ ಮಾರ್ಗ ನಿರ್ದೇಶನ ಮಾಡಿದರು ರಡಾರ್‌ ಕಂಟ್ರೋಲ್‌ ಕಾರ್ಯ ನಿರ್ವಹಿಸುತ್ತಿದ್ದ  ಕೆ.ಬಿ. ಬಾಗಿcಯವರು.  ಇದ್ದಕ್ಕಿದ್ದಂತೆ ಗಣಪತಿಯವರ ವಿಮಾನದ ಮುಂದೇ ಸ್ವಲ್ಪ ಬಲಕ್ಕೆ ಕಾಣಿಸಿಕೊಂಡವು ಪಾಕ್‌ನ ಸೇಬರ್‌ ಯುದ್ಧ ವಿಮಾನಗಳು! ಅವು ಗಳನ್ನು ಕಂಡದ್ದೇ ತಡ, ವಿಮಾನದ Gun sight ಮಧ್ಯಕ್ಕೆ ಬರುವಹಾಗೆ ಒಂದು ಏರೋಬ್ಯಾಟಿಕ್‌ ವಿನ್ಯಾಸವನ್ನು ರಚಿಸಿ ಗುಂಡಿನ ಮಳೆಗರೆದರು ಗಣಪತಿಯವರು. ಪ್ರತಿ ಸೆಕೆಂಡಿಗೆ 120 ಗುಂಡುಗಳು!
ಕ್ಷಣಾರ್ಧದಲ್ಲೇ ಪಾಕಿಸ್ತಾನಿ ಜೆಟ್ಟುಗಳು ಪತನಗೊಂಡವು. ಪಾಕ್‌ ಪೈಲಟ್ಟುಗಳು ಇಜೆಕ್ಷನ್‌ ಸೀಟ್‌ ಮತ್ತು ಪ್ಯಾರಾಚೂಟಿನ ಸಹಾಯದಿಂದ ಬಚಾವಾಗಿ ಕೆಳಕ್ಕೆ ಇಳಿದರು. ಕೆಳಗೆ ಕಾಯುತ್ತಿದ್ದ ಭಾರತೀಯ ಸೇನೆಯ “ಅತಿಥಿ’ಗಳಾದರು. ಇದೆಲ್ಲವನ್ನೂ gun sight ಪಕ್ಕದಲ್ಲಿದ್ದ ಕ್ಯಾಮೆರಾದಲ್ಲಿ ಕ್ಲಿಕ್ಕಿಸಲಾಯಿತು.

Murder..Murder.. Murder… ಎಂದು ಮೂರು ಸಲ ರೇಡಿಯೋದಲ್ಲಿ ಗಣಪತಿಯವರು ಉದ್ಗರಿಸಿದ್ದು ಒಂದು ಕೋಡ್‌ ವರ್ಡ್‌. ಅಂದರೆ ಮೂರೂ ವಿಮಾನಗಳನ್ನೂ ಪತನಗೊಳಿಸಲಾಗಿದೆ ಎಂದು. ಬರೀ ಹದಿನಾರು ನಿಮಿಷಗಳಲ್ಲಿ ಈ ಕಾರ್ಯಾಚರಣೆ ಮುಗಿಯಿತು. ಮುಂದೆ ನಡೆಯಲಿದ್ದ ಯುದ್ಧಕ್ಕೆ, ಪೂರ್ವ ಪಾಕಿಸ್ತಾನದ ಪತನಕ್ಕೆ, ಬಾಂಗ್ಲಾದೇಶದ ಉದಯಕ್ಕೆ ಈ ಘಟನೆ ಮುನ್ನುಡಿಯಾಯಿತು.

ಹೀಗೆ ವಿಜಯೋತ್ಸಾಹದಿಂದ ಕಲ್ಕತ್ತಾ ಏರ್ಪೋರ್ಟಿಗೆ ಮರಳಿದ ಈ ನಾಲ್ಕು ವಿಮಾನಗಳು ಮುಂದೆ ಮಾಡಿದ್ದೇನು ಗೊತ್ತೇ?
“ವಿಮಾನಗಳಲ್ಲಿ ಇನ್ನೂ ಸಾಕಷ್ಟು ಇಂಧನವಿದೆ ಇಷ್ಟು ಬೇಗ ಏಕೆ ಲ್ಯಾಂಡ್‌ ಮಾಡಬೇಕು?’ ಎಂದು ಕಲ್ಕತ್ತಾದ ಬಾನಿನಲ್ಲಿ ಏರೋ ಬ್ಯಾಟಿಕ್‌ ಪ್ರದರ್ಶನಕ್ಕೆ ಅನುಮತಿ ಪಡೆದು ಆಕಾಶದಲ್ಲಿ ತಮ್ಮ ಕಲಾಪ್ರದರ್ಶನ ಮಾಡಿ ಇಡೀ ಕಲ್ಕತ್ತಾಕ್ಕೆ ತಮ್ಮ  ವಿಜಯೋತ್ಸವವನ್ನು, ಸಾಹಸವನ್ನು ಬಿತ್ತರಿಸಿದರು ಧೀರ ಪೈಲಟ್‌ಗಳು!

3 ಡಿಸೆಂಬರ್‌ 1971ರಂದು ಭಾರತ ಅಧಿಕೃತವಾಗಿ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಿತು. ಭಾರತದ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನ ಹೀನಾಯ ಸೋಲನ್ನು ಅನುಭವಿಸಿತು. ಪೂರ್ವ ಪಾಕಿಸ್ತಾನಿ ಸೈನ್ಯ ಭಾರತೀಯ ಸೈನ್ಯಕ್ಕೆ ಶರಣಾಗತವಾಯಿತು. ಅಂದು ಪಾಕಿಸ್ತಾನದ ಸೈನ್ಯಾಧಿಕಾರಿಗಳು ಸೇರಿದಂತೆ ಒಟ್ಟು 93,000 ಸೈನಿಕರನ್ನು ಭಾರತೀಯ ಸೇನೆ ಯುದ್ಧ ಕೈದಿಗಳಾಗಿ ವಶಪಡಿಸಿ ಕೊಂಡಿತು. ಈ ಹೀನಾಯ ಸೋಲನ್ನು ಅರಗಿಸಿಕೊಳ್ಳಲು ಪಾಕಿಸ್ತಾನಕ್ಕೆ ಸಾಧ್ಯವಾ ಗಲಿಲ್ಲ. ಇದರ ಪರಿಣಾಮ ಭಾರತದ ಪಶ್ಚಿಮ ಗಡಿಯಲ್ಲಿಯೂ ಯುದ್ಧ ಪ್ರಾರಂಭವಾಯಿತು!

ಆಗ ವಾಯುಸೇನೆಯಲ್ಲಿ ಮಿಗ್‌-21, ಹಂಟರ್‌ ಮತ್ತು Gnat ಯುದ್ಧ ವಿಮಾನಗಳಿದ್ದವು. ಇವುಗಳಲ್ಲಿ Gnat ಅತಿ ಚಿಕ್ಕ ವಿಮಾನ. Gnat ಅಂದರೆ ಗುಂಡಾಗಿ ಎನ್ನುವ ಅರ್ಥ, ಅದರ ಗಾತ್ರ ಹಾಗಿತ್ತು. ನೋಡಲು ಬಲು ಸಾಧು ವಿಮಾನದಂತೆ ಕಾಣುತ್ತಿತ್ತು ಮತ್ತು ಈಗಿರುವ ಯುದ‌œ ವಿಮಾನಗಳಿಗಿರುವಂತೆ ಆಧುನಿಕ ತಂತ್ರದ ಬಾಂಬುಗಳು, ಮಿಸೈಲುಗಳು ಮತ್ತು ಜಾಮರ್‌ ಅಳವಡಿಸಿರಲಿಲ್ಲ. ಸುಮಾರು 2000 ದಷ್ಟು ದೊಡ್ಡಗಾತ್ರದ ಬುಲೆಟ್ಟುಗಳನ್ನು ಹೋಲುವ ರಾಕೆಟ್ಟುಗಳನ್ನು ಲೋಡ್‌ ಮಾಡಬಹುದಾಗಿತ್ತು, ಫೈರ್‌ ಮಾಡಿದಾಗ 120 ಬುಲೆಟ್ಟುಗಳು ಪ್ರತಿ ಸೆಕೆಂಡಿಗೆ ಹೊರ ಬರುತ್ತಿದ್ದವು!

ಆಕಾಶದಲ್ಲಂತೂ ಇದರ ಪ್ರತಾಪ ಅದ್ಭುತ. ಒಂದು ನಿಮಿಷದಲ್ಲಿ ಸುಮಾರು ಇಪ್ಪತ್ತು ಸಾವಿರ ಅಡಿ ಎತ್ತರಕ್ಕೆ ಜಿಗಿಯುವ ಮತ್ತು ಸುಮಾರು ಒಂದು ಸಾವಿರ ಕಿಮೀಗೂ ಹೆಚ್ಚು ವೇಗದಲ್ಲಿ ಹಾರುವ ಈ ಉಕ್ಕಿನ ಹಕ್ಕಿಗೆ ಆ ಸೇಬರ್‌ ಜೆಟ್ಟು ಗಳು ಹೆದರುತ್ತಿದ್ದುದೇ ಅದರ ವೇಗಕ್ಕೆ ಮತ್ತು ಅದರೊಳಗೆ ಕೂತಿರುವ ಪೈಲಟ್ಟಿನ ಸಾಮರ್ಥ್ಯಕ್ಕೆ.  ಪೂರ್ವ ಪಾಕಿಸ್ತಾನ ಇನ್ನೇನು ಪಾಕಿಸ್ತಾನದ ಹಿಂಸೆಯಿಂದ ಬಿಡುಗಡೆ ಹೊಂದಿ ಬಾಂಗ್ಲಾದೇಶವಾಗಿ ಉದಯಿಸುವುದರಲ್ಲೇ ಇತ್ತು, ಹತಾಶಗೊಂಡ ಪಾಕಿಸ್ತಾನ, ಪುನಃ ಕಾಶ್ಮೀರವನ್ನು ಕಬಳಿಸುವ ಅಥವಾ ಅದಾಗದಿದ್ದರೆ ಶ್ರೀನಗರವನ್ನು ನೆಲಸಮಗೊಳಿಸುವ ದುಸ್ಸಾಹಸಕ್ಕೆ ಕೈಹಾಕಿತು.

ದಿನಾಂಕ 14 ಡಿಸೆಂಬರ್‌ 1971.ಆರು ಪಾಕಿಸ್ತಾನಿ ಯುದ್ಧವಿಮಾನಗಳು ಶ್ರೀನಗರದ ಕಡೆ ಬರುತ್ತಿವೆ ಎನ್ನುವ ಮಾಹಿತಿ ಬಂತು. ಫ್ಲೈಟ್‌ ಲೆಫ್ಟಿನೆಂಟ್‌ ಘುಮ್ಮನ್‌ ಮತ್ತು ಫ್ಲೆçಯಿಂಗ್‌ ಆಫೀಸರ್‌ ಸೇಖೋನ್‌ ಕೂಡಲೇ ತಮ್ಮ ವಿಮಾನಗಳ ಕಡೆ ಓಡಿಹೋಗಿ, ಜಿಗಿದು ಕುಳಿತುಕೊಂಡು ಎಂಜಿನ್‌ ಚಾಲೂ ಮಾಡಿ ಟೇಕಾಫ್ ಮಾಡುವಷ್ಟರಲ್ಲೇ ಪಾಕಿಸ್ತಾನದ ವಿಮಾನಗಳು ಮೊದಲಾ ವೃತ್ತಿಯ ದಾಳಿಯನ್ನು ಪ್ರಾರಂಭಿಸಿದ್ದವು. ಆದರೆ ಘುಮ್ಮನ್‌ ಮತ್ತು ಸೇಖೋನ್‌ ಅವರು ಬೀಳುತ್ತಿದ್ದ ಬಾಂಬುಗಳನ್ನು ಲೆಕ್ಕಿಸದೆ ಟೇಕಾಫ್ ಮಾಡೇ ಬಿಟ್ಟರು! ಎರಡೇ ನಿಮಿಷದಲ್ಲಿ ಎnಚಠಿ ವಿಮಾನಗಳಲ್ಲಿ ಬಾನಿಗೇರಿದರು. ಅದಾದ ಕೆಲವೇ ಸೆಕೆಂಡುಗಳಲ್ಲಿ ಆರು ಪಾಕಿಸ್ತಾನಿ ಯುದ್ಧವಿಮಾನಗಳು ಶ್ರೀನಗರದ ವಾಯುನೆಲೆಯ ಮೇಲೆ ದಾಳಿ ಮಾಡಲು ಪ್ರಾರಂಭಿಸಿದವು. ರನ್‌ ವೇ ಮೇಲೆ ಎರಡು ಬಾಂಬು ಗಳು ಬಿದ್ದು ಆಳವಾದ ಕಂದರವನ್ನೇ ಸೃಷ್ಟಿಸಿದವು. “ಇನ್ನು ಇಲ್ಲಿಂದ ಭಾರತದ ಯಾವ ಏರೋಪ್ಲೇನು ಟೇಕಾಫ್ ಆಗುವುದಿಲ್ಲ ಎನ್ನುವ ಭರವಸೆ ಬಂತು ಪಾಕಿಸ್ತಾನಿ ಪೈಲಟ್ಟುಗಳಿಗೆ. ಶ್ರೀನಗರದ ರನ್ವೇ ನಿಷ್ಕ್ರಿಯಗೊಂಡಿದೆ ಅಲ್ಲಿಂದ ಯಾವ ವಿಮಾನಗಳೂ ಹಾರಲಾರವು, ಹೀಗಾಗಿ ಆಕಾಶದಲ್ಲಿ ನಮ್ಮದೇ ಅಧಿಪತ್ಯ, ಯಾವುದೇ ಅಡತಡೆ ಯಿಲ್ಲದೆ ಶ್ರೀನಗರದ ಮೇಲೆ ದಾಳಿ ನಡೆಸಬಹುದು’ ಎನ್ನುವ ಹುನ್ನಾರದಿಂದ ಬಂದಿದ್ದರು ಪಾಕಿಸ್ತಾನಿ ಯುದ್ಧ ಪೈಲಟ್‌ಗಳು.

  ಆದರೆ ಅವರಿಗೆ ಗೊತ್ತಿರಲಿಲ್ಲ ಸೇಖೋನ್‌ ಮತ್ತು ಘುಮ್ಮನ್‌ ಶ್ರೀನಗರದ ವಾಯುನೆಲೆಯ ಮೇಲೆ ಬಾಂಬುಗಳ ದಾಳಿಯ ನಡುವೆಯೇ ಆಕಾಶಕ್ಕೆ ಹಾರಿದ್ದರು ಅಂತ!  ಅದೊಂದು ಆಕಾಶ ದಲ್ಲಿನ ಚಕ್ರವ್ಯೂಹ .. ಆರು ಪಾಕಿಸ್ತಾನದ ವಿಮಾನಗಳ ಎದುರು, ಭಾರತದ ಏಕೈಕ ಯುದ್ಧವಿಮಾನದ ಮುಖಾಮುಖೀ! ಸೇಖೋನ್‌ ಪಾಕಿಸ್ತಾನಿ ಪೈಲಟ್ಟುಗಳಿಗೆ ಕಾಣದಂತೆ ಮೇಲಕ್ಕೇರಿ ಆಗಲೇ ಇವರ ಹಿಂದಿನಿಂದ ಬಂದು ಪಾಕ್‌ ಯುದ್ಧ ವಿಮಾನಗಳನ್ನು ಗನ್‌ ಸೈಟ್‌ನಲ್ಲಿ ಫೋಕಸ್‌ ಮಾಡುತ್ತಿದ್ದರು. “ಎರಡು ಸೇಬರ್‌ ಜೆಟ್ಟುಗಳ ಹಿಂದೆ ಇದ್ದೇನೆ…ಛೋಡೂಂಗ ನಹೀ’ ಎಂದು ರೇಡಿಯೋದಲ್ಲಿ ಅಬ್ಬರಿಸಿ ಗುಂಡಿನ ಮಳೆ ಸುರಿಸಿದರು. ಕ್ಷಣಾರ್ಧದಲ್ಲಿ ಪಾಕ್‌ನ ಜೆಟ್ಟುಗಳು ತತ್ತರಿಸಿ ಧರೆಗೆ ಬಿದ್ದವು. ಇನ್ನುಳಿದ ಸೇಬರ್‌ ಪೈಲಟ್ಟುಗಳು ಕಕ್ಕಾಬಿಕ್ಕಿಯಾದರು. ಇದಲ್ಲಿಂದ ಬಂದಿತು ಈ Gnat?!

ದುರದೃಷ್ಟ ಎಂದರೆ ಸೇಖೋನ್‌ ಎಷ್ಟು ವೇಗವಾಗಿ ಹಾರಾಟ ನಡೆಸಿದ್ದರು ಎಂದರೆ, ಅವರ ಜೊತೆ ಇರಬೇಕಿದ್ದ ಘುಮ್ಮನ್‌ ದೂರ ಉಳಿದುಬಿಟ್ಟಿದ್ದರು. ಅಷ್ಟೊಂದು ಶರವೇಗದಲ್ಲಿ ಸೇಖೋನ್‌ ಅವರು ಪಾಕಿಸ್ತಾನಿಯರನ್ನು ಅಟ್ಟಾಡಿಸಿಕೊಂಡು ಬೇಟೆಯಾಡು ತ್ತಿದ್ದರು. ಆಕಾಶದಲ್ಲಿ ಗರಗರನೆ ಯುದ್ಧವಿಮಾನವನ್ನು ಸುತ್ತಿಸಿ ಪಾಕಿಸ್ತಾನಿ ಸೇಬರ್‌ಗಳನ್ನು ವಿಚಲಿತಗೊಳಿಸಿ ಅವರ ಮೇಲೆ ಫೈರ್‌ ಮಾಡುತ್ತಿದ್ದರು. ಆದರೆ, ಪಾಕ್‌ನ ಒಂದು ಯುದ್ಧವಿಮಾನ ಸೇಖೋನ್‌ರ ಹಿಂದೆ ಬಿದ್ದು ಆಕ್ರಮಣ ಮಾಡಿತು. ಸೇಖೋನ್‌ರ Gnat ವಿಮಾನದಿಂದ ಹೊಗೆ ಬರಲು ಶುರುವಾಯಿತು. ಪರಿಸ್ಥಿತಿಯನ್ನು ಅರಿತ ರಡಾರ್‌ ಕಂಟ್ರೋಲರ್‌ “eject… eject’ ಎಂದು ಕೂಗುವವರೆಗೂ ಸೇಖೋನ್‌ ಸೇಬರ್‌ಗಳ ಹಿಂದೆ ಬಿದ್ದಿದ್ದರು!  ಕೊನೆಗೆ ಇವರು eject ಆದರು…ಆದರೆ ಭೂಮಿಗೆ ಬಹಳ ಹತ್ತಿರ ದಲ್ಲಿದ್ದ ಕಾರಣ ಪ್ಯಾರಾಚೂಟು ಬಿಚ್ಚಿಕೊಳ್ಳುವಷ್ಟರಲ್ಲೇ ಆ ದಟ್ಟವಾದ ಕಾಶ್ಮೀರದ ಕಾಡಿನ ಮರದ ಮೇಲೆ ಬಿದ್ದರು. ಅಲ್ಲೇ ಇದ್ದ ಕಾಶ್ಮೀರಿ ಮಹಿಳೆಯೊಬ್ಬಳು ಇವರನ್ನು ಕೆಳಗಿಳಿಸಿ, ಬದುಕಿಸಲು ಹರಸಾಹಸ ಮಾಡಿದಳಾದರೂ ಆಕೆಯ ಪ್ರಯತ್ನ ಫ‌ಲಿಸಲಿಲ್ಲ. ಸೇಖೋನ್‌ ಆ ಮಹಿಳೆಯ ತೊಡೆಯ ಮೇಲೆ ಕೊನೆಯುಸಿ ರೆಳೆದರು.

14 ಡಿಸೆಂಬರ್‌. ಶ್ರೀನಗರದ ಮೇಲೆ ಆರು ಸೇಬರ್‌ ಜೆಟ್ಟುಗಳು ನಡೆಸಿದ ದಾಳಿಯನ್ನು ಏಕಾಂಗಿಯಾಗಿ ಹಿಮ್ಮೆಟ್ಟಿಸಿ ಹೋರಾಡಿದ ಫ್ಲೈಯಿಂಗ್‌ ಆಫೀಸರ್‌ ನಿರ್ಮಲ್ಜಿತ್‌ ಸಿಂಗ್‌ ಸೇಖೋನ್‌ ಶ್ರೀನಗರ ವನ್ನು ರಕ್ಷಿಸಿದ ಸಾಹಸಗಾಥೆಯೊಂದಿಗೆ ಮತ್ತು ಅವರ ವೀರಮರಣ ದೊಂದಿಗೆ ಯುದ‌œಕ್ಕೂ ಸಹ ತೆರೆಬಿದ್ದಿತು. ಪಾಕಿಸ್ತಾನ ಹೀನಾಯವಾಗಿ ಸೋತು ಭಾರತಕ್ಕೆ ಶರಣಾಯಿತು. ನಿರ್ಮಲ್ಜಿತ್‌ ಸೇಖೋನ್‌ರವರಿಗೆ ಮರಣೋತ್ತರ ಪರಮವೀರ ಚಕ್ರ ಮತ್ತು ಕೊಡಗಿನ ವೀರ ಗಣಪತಿಯವರನ್ನು ವೀರಚಕ್ರ ಪ್ರಶಸ್ತಿಗಳಿಂದ ಗೌರವಿಸಲಾಯಿತು.

ವಿಂಗ್‌ ಕಮಾಂಡರ್‌ ಸುದರ್ಶನ್‌

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.