![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 9, 2021, 12:57 PM IST
-ರಮೇಶ ಪೂಜಾರ
ಗಣೇಶ ಹಬ್ಬವನ್ನು ನಾವು ವರ್ಷ ನಾಳೆ(ಸೆ.10, ಶುಕ್ರವಾರ) ಆಚರಿಸುತ್ತೇವೆ. ಗಣೇಶನಿಗೆ ತಾಯಿ ಪಾರ್ವತಿ ಎಳ್ಳುಂಡೆ, ಮೋದಕ, ಕಾಯಿಕಡುಬುಗಳ ಭಕ್ಷ್ಯಗಳನ್ನು ಮಾಡಿ ಉಣಬಡಿಸುತ್ತಿದ್ದಳು ಎಂದು ಪುರಾಣ ಕಥೆಗಳಲ್ಲಿ ಕೇಳಿದ್ದೇವೆ. ಹೀಗಾಗಿಯೇ ಗಣೇಶ ಚತುರ್ಥಿಯಂದು ಎಲ್ಲರ ಮನೆಗಳಲ್ಲೂ ಮೋದಕವನ್ನು ಒಳಗೊಂಡು ಹಲವು ನೈವೇದ್ಯವನ್ನು ಇಡಲಾಗುತ್ತದೆ.
ಇನ್ನು, ಚೌತಿ ಹಬ್ಬದಂದು ಗಣೇಶನಿಗೆ ಪ್ರಿಯವಾದ ಮೋದಕ ತಯಾರಿಸಿ ನೈವೇದ್ಯ ಅರ್ಪಿಸಿದರೆನೇ ಹಬ್ಬ ಪರಿಪೂರ್ಣವಾಗುವುದು ಎಂಬ ನಂಬಿಕೆಯಿದೆ. ಸಾಮಾನ್ಯವಾಗಿ ಅನೇಕ ಬಗೆಯಲ್ಲಿ ಮೋದಕವನ್ನು ತಯಾರಿಸಲಾಗುತ್ತದೆ. ಗಣೇಶನಿಗೆ ಇಷ್ಟವಾದ ಮೋದಕ ಮಾಡುವ ವಿಧಾನ ಇಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ತಾಲಿಬಾನ್ ಆಡಳಿತದ ವಿರುದ್ಧ ತೀವ್ರಗೊಂಡ ಪ್ರತಿಭಟನೆ; ಕಾಬೂಲ್ ನಲ್ಲಿ ಇಂಟರ್ನೆಟ್ ಸ್ಥಗಿತ
ಮೋದಕವನ್ನು ಬೆಲ್ಲ ಹಾಕಿ, ಹಬೆಯಲ್ಲಿ ಬೇಯಿಸಿ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ..
ಮೋದಕ ಒಳಗೆ ತುಂಬಲು ಹೂರಣ ಮತ್ತು ಮೋದಕವನ್ನು ಮಾಡುವ ವಿಧಾನ
* ಕಡಾಯಿಯನ್ನು ಬಿಸಿ ಮಾಡಿ ಒಂದು ಚಮಚ ತುಪ್ಪ ಹಾಕಿ.
* ಈಗ ಅದರಲ್ಲಿ 2 ಕಪ್ ತೆಂಗಿನ ತುರಿ ಹಾಕಿ ಹುರಿಯಿರಿ.
* ಈಗ 1 ಕಪ್ ಬೆಲ್ಲ ಹಾಕಿ ಮಿಕ್ಸ್ ಮಾಡಿ
* ಬೆಲ್ಲ ಕರಗಿ, ತೆಂಗಿನಕಾಯಿ ಹಾಕಿ ಮಿಶ್ರ ಮಾಡಿ, ಅದು ಗಟ್ಟಿಯಾಗುವವರೆಗೆ ಬೇಯಿಸುತ್ತಾ ಇರಬೇಕು.
* ಮಿಶ್ರಣ ಗಟ್ಟಿಯಾದ ಬಳಿಕ ಉರಿ ಆಫ್ ಮಾಡಿ ತೆಗೆದಿಡಿ.
ಮೋದಕ ಹಿಟ್ಟು ತಯಾರಿಸುವುದು ಹೇಗೆ ?
* ಒಂದು ದೊಡ್ಡ ಕಡಾಯಿ ತೆಗೆದು ಅದರಲ್ಲಿ 1 ಕಪ್ ನೀರು ಹಾಕಿ.
* ನೀರನ್ನು ಬಿಸಿ ಮಾಡಿ, ಅದರಲ್ಲಿ 1 ಚಮಚ ತುಪ್ಪ, 1/2 ಚಮಚ ಉಪ್ಪು ಹಾಕಿ.
* ನೀರು ಚೆನ್ನಾಗಿ ಕುದಿಯಲಿ.
* ನೀರು ಕುದಿಯಲಾರಂಭಿಸಿದಾಗ ಅಕ್ಕಿ ಹಿಟ್ಟು ಹಾಕಿ, ಅಕ್ಕಿ ಹಿಟ್ಟು ಮೆಲ್ಲನೆ ಸುರಿಯಿರಿ, ಸುರಿಯುವಾಗ ಹಿಟ್ಟು ಗಂಟು ಕಟ್ಟದಿರಲು ಸೌಟಿನ ಸಹಾಯದಿಂದ ತಿರುಗಿಸುತ್ತಾ ಇರಿ.
* ಉರಿ ಕಡಿಮೆ ಮಾಡಿ ಹಿಟ್ಟನ್ನು ತಿರುಗಿಸುತ್ತಲೇ ಬೇಯಿಸಿ.
* ನಂತರ ಉರಿಯಿಂದ ಇಳಿಸಿ, 5 ನಿಮಿಷ ತಣ್ಣಗಾಗಲು ಇಡಿ.
ಮೋದಕ ಮಾಡುವ ವಿಧಾನ
* ಮೊದಲಿಗೆ ನೀವು ಹಿಟ್ಟಿನಿಂದ ಚಿಕ್ಕ-ಚಿಕ್ಕ ಉಂಡೆ ಮಾಡಿ.
* ಈಗ ಉಂಡೆ ತೆಗೆದು ಕೈಯಲ್ಲಿ ತಟ್ಟಿ, ಮಧ್ಯದಲ್ಲಿ ಸ್ವಲ್ಪ ಗುಂಡಿ ಮಾಡಿ, ಅದರೊಳಗೆ ತೆಂಗಿನಕಾಯಿ ಮಿಶ್ರಣ ಹಾಕಿ ಅದರ ತುದಿ ಕ್ಲೋಸ್ ಮಾಡಿ ಅದರ ತುದಿ ಹಿಡಿದು ತಿರುಗಿಸಿ.
* ಈಗ ಎಲ್ಲಾ ಹಿಟ್ಟನ್ನುಅವುಗಳನ್ನು ಹಬೆಯಲ್ಲಿ ಬೇಯಿಸಿ.
ಹಬೆಯಲ್ಲಿ ಬೇಯಿಸುವಾಗ ಬಾಳೆ ಎಲೆ ಮೇಲೆ ಈ ಮೋದಕಗಳನ್ನು ಇಟ್ಟು 10 ರಿಂದ 15 ನಿಮಿಷ ಬೇಯಿಸಿ.
ಈಗ ಗಣೇಶನಿಗೆ ಇಷ್ಟವಾದ ಮೋದಕ ತಯಾರಾಯಿತು. ಭಕ್ತಿಯಿಂದ ಗಣೇಶನಿಗೆ ನೈವೇದ್ಯ ಅರ್ಪಿಸಿ. ಹಬ್ಬವನ್ನು ಆಚರಿಸಿ.
ಇದನ್ನೂ ಓದಿ : ಕಲಬುರಗಿಪಾಲಿಕೆಯಲ್ಲಿ ಬಿಜೆಪಿಯವರೇ ಮೇಯರ್ ಆಗುತ್ತಾರೆ: ಸಿಎಂ ಬೊಮ್ಮಾಯಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.