ನನ್ನ ಜೀವನ ಬದಲು ಮಾಡಿದ ಜಾರ್ಜ್ ಸಾಹಿಬ್
Team Udayavani, Jan 30, 2019, 12:50 AM IST
ಕೆಲವೊಂದು ಬಾರಿ ಅವರು ನನ್ನ ವಿರುದ್ಧವೇ ಕೋಪದಿಂದ ಹಾರಾಡಿದ ಘಟನೆಗಳೂ ಇವೆ. ಇಷ್ಟು ಮಾತ್ರವಲ್ಲ, ಅಪರಿಚಿತರ ಎದುರಿಗೇ ಪತಿ ಜಾರ್ಜ್ ಸಾಹಿಬ್ ವಿರುದ್ಧ ಟೀಕೆ ಮಾಡಿದ್ದೂ ಉಂಟು. 2014ರಲ್ಲಿ ಜಾರ್ಜ್‌ರ ಸಹೋದರರು ಲೀಲಾ ಕಬೀರ್ ಜತೆಗಿನ ಕಾನೂನು ಹೋರಾಟಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ 24 ವರ್ಷಗಳ ಅವಧಿಯಲ್ಲಿ ಲೀಲಾ, ಜಾರ್ಜ್ ಅವರ ಜತೆಗೆ ಇರಲಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದೆ.
ಅದು 1984. ಹಲವು ಕಾರಣಗಳಿಂದ ನೆನಪಿನಲ್ಲಿ ಉಳಿಯುವಂಥ ವರ್ಷ. ಜಮ್ಮು ಮತ್ತು ಕಾಶ್ಮೀರದಲ್ಲಿ ಡಾ| ಫಾರೂಕ್ ಅಬ್ದುಲ್ಲಾ ನೇತೃತ್ವದ ಸರ್ಕಾರ ಪತನಗೊಂಡಿತ್ತು. ಸ್ವರ್ಣ ಮಂದಿರಕ್ಕೆ ಸೇನೆ ನುಗ್ಗಿ ಜರ್ನೈಲ್ ಸಿಂಗ್ ಬಿಂದ್ರನ್‌ವಾಲೆಯನ್ನು ಹತ್ಯೆ ಮಾಡಿತ್ತು. ಈ ಘಟನೆಯ ಬಳಿಕ ಇಂದಿರಾ ಗಾಂಧಿಯವರ ಹತ್ಯೆಯೂ ನಡೆಯಿತು. ಬಳಿಕ ನಡೆದದ್ದು ಸಿಖ್ ಸಮುದಾಯದವರ ಕಗ್ಗೊಲೆ.
1984ನೇ ಇಸ್ವಿಯ ಕೊನೆಯ ದಿನಗಳು ಮತ್ತು 1985ರ ಆರಂಭದಲ್ಲಿ ನಾನು ನಿರಾಶ್ರಿತರ ಶಿಬಿರವನ್ನು ನಡೆಸುತ್ತಿದ್ದೆ. ದಂಗೆಯಿಂದ ಬೆಂದ ನೂರಾರು ಮಂದಿ ಅಲ್ಲಿ ಆಶ್ರಯ ಪಡೆದಿದ್ದರು. ಇದೇ ಸಂದರ್ಭದಲ್ಲಿ ಜಾರ್ಜ್ ಸಾಹಿಬ್ ತಮ್ಮ ವೈಯಕ್ತಿಕ ಜೀವನದಲ್ಲಿ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದರು. ಅವರ ಪತ್ನಿ ಲೀಲಾ ಫೆರ್ನಾಂಡಿಸ್ ಅಮೆರಿಕ ಮತ್ತು ಯು.ಕೆ.ನಲ್ಲಿ ಹಲವು ವರ್ಷಗಳ ಕಾಲ ಇದ್ದರು. ಲೀಲಾ ಅವರಿಗೆ ಪದೇ ಪದೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು ಎಂದು ನನಗೆ ಯಾರೋ ಹೇಳಿದ್ದರು. ಅವಳನ್ನು ಹೋಗಿ ನೋಡಿಕೊಂಡು ಬರಬೇಕು ಎಂಬ ಬಗ್ಗೆ ಜಾರ್ಜ್ ಸಾಹಿಬ್ ನನ್ನ ಬಳಿ ಹೇಳಿದ್ದರು. ಹೀಗಾಗಿ ಅವರ ಪುತ್ರ ಸುಶಾಂತ (ಸಿಯಾನ್ ಫೆರ್ನಾಂಡಿಸ್ ಅವರನ್ನು ಸನ್ನು ಎಂದೂ ಕರೆಯುತ್ತಿದ್ದರು)ನನ್ನು ನೋಡಿಕೊಳ್ಳಬೇಕೆಂದು ಸೂಚಿಸಿದ್ದರು. ಸಿಯಾನ್ ಫೆರ್ನಾಂಡಿಸ್ ನನ್ನ ಮಕ್ಕಳ ಜತೆಗೆ ಚೆನ್ನಾಗಿ ಹೊಂದಿಕೊಂಡಿದ್ದುದರಿಂದ ಹಾಗೂ ಜಾರ್ಜ್‌ಗೆ ಇತರ ಸ್ನೇಹಿತರು ಇಲ್ಲದೇ ಇದ್ದುದರಿಂದ ಈ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಆತ ಕೆಲವು ದಿನಗಳ ಕಾಲ ನನ್ನ ಮನೆಯಲ್ಲಿಯೇ ಇದ್ದ. ಜಾರ್ಜ್ ಪುತ್ರ ಖುಷಿಯಾಗಿ ಕುಟುಂಬದ ಜತೆಗೆ ಕಾಲ ಕಳೆದ.
1989ರಲ್ಲಿ ರಾಷ್ಟ್ರೀಯ ರಂಗ ಸರ್ಕಾರ ರಚನೆ ಸಂದರ್ಭವದು. ಪ್ರಧಾನಮಂತ್ರಿಯಾಗಲಿದ್ದ ವಿ.ಪಿ.ಸಿಂಗ್ ಸಂಪುಟದಲ್ಲಿ ಯಾರು ಸೇರ್ಪಡೆಯಾಗಲಿದ್ದಾರೆ ಎಂಬ ಬಗ್ಗೆ ಸಣ್ಣ ಸುಳಿವು ನೀಡಿರಲಿಲ್ಲ. ಹೀಗಾಗಿ ಸಚಿವಾಕಾಂಕ್ಷಿಗಳು ಸಹಜವಾಗಿಯೇ ನಿರೀಕ್ಷೆಯಲ್ಲಿದ್ದರು. ಆದರೆ ಜಾರ್ಜ್ ಸಾಹಿಬ್ ಮಾತ್ರ ಆರಾಮವಾಗಿ ಮಧ್ಯಾಹ್ನ ಮನೆಗೆ ಬಂದು ನಿದ್ದೆ ಮಾಡಿದ್ದರು. ಸಂಜೆಯ ವೇಳೆಗೆ ಅವರು ಎದ್ದ ಸಂದರ್ಭದಲ್ಲಿ 20 ನಿಮಿಷದಲ್ಲಿ ರಾಷ್ಟ್ರಪತಿ ಭವನಕ್ಕೆ ತಲುಪಬೇಕೆಂದು ಸೂಚನೆಯಾಗಿತ್ತು. ಕುರ್ತಾ ಬದಲಿಸಲೂ ಸಮಯವಿಲ್ಲದ್ದರಿಂದ ನಿದ್ದೆ ಮಾಡಿದ್ದ ದಿರಿಸಿನಲ್ಲಿಯೇ ಹೊರಟಿದ್ದರು. ಕೆಲ ದಿನಗಳ ಬಳಿಕ ಖಾತೆಗಳ ಹಂಚಿಕೆಯಾಗಿ ಜಾರ್ಜ್‌ಗೆ ರೈಲ್ವೆ ಖಾತೆ ಸಿಕ್ಕಿತ್ತು. ಒಂದು ಕಾಲದಲ್ಲಿ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಮುಷ್ಕರ ನಡೆಸಿದ್ದ ಇಲಾಖೆಯ ಸಚಿವನಾಗುವುದು ಅವರಿಗೆ ಬೇಕಾಗಿರಲಿಲ್ಲ. ಹೀಗಾಗಿ 3 ದಿನಗಳ ಕಾಲ ಅವರು ರೈಲು ಭವನಕ್ಕೇ ಹೋಗಿರಲಿಲ್ಲ. ಪ್ರಧಾನಿ ವಿ.ಪಿ.ಸಿಂಗ್ 3 ತಿಂಗಳಲ್ಲಿ ಖಾತೆ ಬದಲು ಮಾಡುವುದಾಗಿ ಹೇಳಿದರೂ, ಆ ರೀತಿ ಆಗಲಿಲ್ಲ. ಹೀಗಾಗಿ ಅವರು ತಮ್ಮದೇ ಹಳೆಯ ಪ್ರೀಮಿಯರ್ ಪದ್ಮಿನಿ ಕಾರಿನಲ್ಲಿಯೇ ರೈಲು ಭವನಕ್ಕೆ ಹೋಗಿದ್ದರು. ಅಲ್ಲಿದ್ದ ಭದ್ರತಾ ಸಿಬ್ಬಂದಿ ಜಾರ್ಜ್‌ರನ್ನು ತಡೆದೇ ಬಿಟ್ಟ. ಸಚಿವರಾಗಿ ಬರುವವರು ಅದ್ಧೂರಿಯಾಗಿ ಬರುತ್ತಾರೆ ಎನ್ನುವುದೇ ಆತನ ಯೋಚನೆಯಾಗಿತ್ತು!
1998ರಲ್ಲಿ ಅಂದಿನ ಎನ್‌ಡಿಎ ಸರ್ಕಾರ ಜಾರ್ಜ್‌ರನ್ನು ಮೈತ್ರಿಕೂಟದ ಸಂಚಾಲಕರನ್ನಾಗಿ ನೇಮಿಸಿತ್ತು. ಅವರು ಮೈತ್ರಿಕೂಟಕ್ಕೆ ಅಗತ್ಯವಾಗಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರಚಿಸಿಕೊಟ್ಟರು. ಈ ಬೆಳವಣಿಗೆ ಜಾಜ್ ರ ಸಮಾಜವಾದಿ ಸ್ನೇಹಿತರಾಗಿರುವ ಮಧು ದಂಡವತೆ, ಸುರೇಂದ್ರ ಮೋಹನ್ ಸೇರಿದಂತೆ ಹಲವರನ್ನು ದೂರ ಸರಿಯುವಂತೆ ಮಾಡಿತು. ಕೆಲವೊಮ್ಮೆ ಈ ಹುದ್ದೆ ಅವರಿಗೆ ಬೇಸರ ತರಿಸುವಂತೆಯೂ ಮಾಡಿತ್ತು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಶಾಲೆಗಳಲ್ಲಿ ವಂದೇಮಾತರಂ ಅನ್ನು ಹಾಡಲು ಸರ್ಕಾರ ಆದೇಶಿಸಿದ್ದಾಗ ವಿವಾದವೆದ್ದಿತ್ತು. ಮಾಧ್ಯಮಗಳಿಗೆ ವಿಶೇಷವಾಗಿ ಜಾರ್ಜ್ ಏನು ಹೇಳುತ್ತಾರೆ ಎನ್ನುವುದು ಬೇಕಾಗಿತ್ತು.
“ಸಂಸತ್‌ನಲ್ಲಿಯೂ ಕೂಡ ವಂದೇಮಾತರಂ ಅನ್ನು ಹಲವು ಬಾರಿ ಹಾಡಲಾಗಿತ್ತು. ಅದನ್ನು ಕಾಂಗ್ರೆಸ್‌ನ ಒಬ್ಬ ಸದಸ್ಯರೇ ಜಾರಿಗೆ ತಂದಿದ್ದರು. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಹಿಂದೂಗಳು, ಮುಸ್ಲಿಮರು ಜತೆಯಾಗಿಯೇ ಹಾಡಿದ್ದರು. ಈಗ ಹಾಡಲು ಏಕೆ ಆಕ್ಷೇಪ ಮಾಡಬೇಕು?’ ಎಂದು ಪ್ರಶ್ನಿಸಿದರು ಜಾರ್ಜ್.
2002ರಲ್ಲಿ ಗುಜರಾತ್‌ನಲ್ಲಿ ಉಂಟಾದ ದಂಗೆಯ ಸಂದರ್ಭದಲ್ಲಿ ಅದನ್ನು ತಡೆಯಲು ಸೇನೆಯ ನೆರವು ಬೇಕು ಎಂದು ಮುಖ್ಯಮಂತ್ರಿ ಮೋದಿ ಮನವಿ ಮಾಡಿದ್ದರು. ರಾಜಸ್ಥಾನದಲ್ಲಿ “ಆಪರೇಷನ್ ಪರಾಕ್ರಮ’ದಲ್ಲಿ ಭಾಗವಹಿಸಿದ್ದ ಸೇನೆಯನ್ನು ಕೂಡಲೇ ಗುಜರಾತ್‌ಗೆ ಬರುವಂತೆ ಸೂಚಿಸಲಾಯಿತು. ಮುಂಜಾನೆಯ ಮೊದಲ ವಿಮಾನದಲ್ಲಿಯೇ ಅಹಮದಾಬಾದ್‌ಗೆ ತೆರಳಿ ಸೇನೆಯ ಜತೆ ದಂಗೆಯನ್ನು ಶಮನಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಮೋದಿ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದರು.
ಜಾರ್ಜ್‌ಮತ್ತು ಲೀಲಾ ಅವರು ನನಗೆ ಪದೇ ಪದೆ ಫೋನ್ ಮಾಡಿ ಬರುವಂತೆ ಆಹ್ವಾನಿಸುತ್ತಿದ್ದರು. ಹಾಸಿಗೆ ಹಿಡಿದು ಏನೊಂದು ಕೆಲಸವೂ ಮಾಡಲಾಗದೆ ತೀರಾ ಬೇಸರಗೊಂಡಿದ್ದ ಸಂದರ್ಭದಲ್ಲಿ ನನ್ನ ನೆರವು ಪಡೆಯುತ್ತಿದ್ದರು. ಕೆಲವೊಮ್ಮೆ ಅವರು ನನ್ನ ವಿರುದ್ಧವೇ ಕೋಪದಿಂದ ಹಾರಾಡಿದ ಘಟನೆಗಳೂ ಇವೆ. ಇಷ್ಟು ಮಾತ್ರವಲ್ಲ, ಅಪರಿಚಿತರ ಎದುರಿಗೇ ಪತಿ ಜಾರ್ಜ್ ವಿರುದ್ಧ ಟೀಕೆ ಮಾಡಿದ್ದೂ ಉಂಟು. 2014ರಲ್ಲಿ ಜಾರ್ಜ್‌ರ ಸಹೋದರರು ಲೀಲಾ ಕಬೀರ್ ಜತೆಗಿನ ಕಾನೂನು ಹೋರಾಟಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ 24 ವರ್ಷಗಳ ಅವಧಿಯಲ್ಲಿ ಲೀಲಾ, ಜಾರ್ಜ್ ಜತೆಗೆ ಇರಲಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದೆ. ಸದ್ಯ ಬಿಜೆಪಿಯಲ್ಲಿರುವ ಮೀನಾಕ್ಷಿ ಲೇಖೀ ಲೀಲಾ ಕಬೀರ್ ಪರ ನ್ಯಾಯವಾದಿಯಾಗಿದ್ದರು. ಕೋರ್ಟಲ್ಲಿ ವಾದ ಮಂಡಿಸುವ ಸಂದರ್ಭದಲ್ಲಿ ಜಾರ್ಜ್ ಜತೆಗೆ ನಾನಿದ್ದ ವೇಳೆ ಮಕ್ಕಳ ಯೋಗ ಕ್ಷೇಮದತ್ತ ಗಮನ ಹರಿಸಲಿಲ್ಲ ಎಂದು ಲೇಖೀ ನನ್ನ ವಿರುದ್ದ ಆರೋಪ ಮಾಡಿದ್ದರು. ಕಕ್ಷಿದಾರರಿಗೆ ನ್ಯಾಯ ದೊರಕಬೇಕು ಎಂಬ ಕಾರಣಕ್ಕೆ, ಆಕ್ರಮಣಕಾರಿಯಾಗಿ ವಾದ ಮಂಡಿಸಿದ್ದರು.
– ಜಯಾ ಜೇಟ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
Sullia: ಕನಕಮಜಲು; ಅಂಗಡಿ, ಹೊಟೇಲ್‌ನಿಂದ ಕಳವು
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.