ಭಾರತದ ಆರ್ಥಿಕತೆಗೆ ಮಾರಕ ತಾಪಮಾನ ಏರಿಕೆ
ಉದಯವಾಣಿ ಪ್ಯಾಕೇಜ್
Team Udayavani, Feb 24, 2020, 7:31 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಜಾಗತಿಕ ತಾಪಮಾನ ಏರಿಕೆ 2050ರ ವೇಳೆಗೆ ಭಾರತದ ಜಿಡಿಪಿ ಬೆಳವಣಿ ಗೆಯ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮಗಳನ್ನು ಬೀರಲಿದೆ ಎಂದು ಮೆಕಿನ್ಸೆ ಗ್ಲೋಬಲ್ ಇನ್‌ಸ್ಟಿಟ್ಯೂಟ್ ವರದಿ ಹೇಳಿದೆ. ಹೆಚ್ಚುತ್ತಿರುವ ತಾಪಮಾನದಿಂದ ದೇಶದ ಆರ್ಥಿಕತೆ ಕ್ಷೇತ್ರಕ್ಕೆ ಎದುರಾಗುವ ಸಮಸ್ಯೆಗಳೇನು? ಬೆಳವಣಿಗೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಮೊದಲಾದ ಮಾಹಿತಿ ಇಲ್ಲಿದೆ.
ಮುಂದಿನ ಮೂರು ದಶಕಗಳಲ್ಲಿ ಜಾಗತಿಕವಾಗಿ ತಾಪಮಾನ ಮತ್ತಷ್ಟು ಹೆಚ್ಚಾಗಲಿದೆ. ಇದರ ಬಿಸಿ ಉದ್ಯೋಗಸ್ಥರು ಮತ್ತು ಕಾರ್ಮಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ವಿಪರೀತ ಶಾಖದ ಪರಿಣಾಮ ದೇಶದ ಕಾರ್ಮಿಕರ ಕೆಲಸದ ಸಾಮರ್ಥ್ಯ ಗಮನಾರ್ಹವಾಗಿ ಕುಸಿಯಲಿದೆ.
ಶೇ.75 ಕಾರ್ಮಿಕರಿಗೆ ತಾಪಮಾನದ ಒತ್ತಡ
ದೇಶದಲ್ಲಿ ಶೇ.75ರಷ್ಟು ಅಂದರೆ 38 ಕೋಟಿ ಕಾರ್ಮಿಕರು ತಾಪ ಮಾ ನದ ಏರಿ ಕೆ ಯಿಂದಾಗಿ ಒತ್ತಡ ಸಂಬಂಧಿ ಕಾಯಿಲೆಗೆ ತುತ್ತಾಗಲಿದ್ದು, ಇದರ ಪರಿಣಾ ಮವಾಗಿ 2030ರ ವೇಳೆಗೆ ಒಟ್ಟು ದೇಶೀಯ ಉತ್ಪನ್ನದ ಪ್ರಮಾಣದಲ್ಲಿ ಶೇ.2.5ರಿಂದ ಶೇ.4.5ರಷ್ಟು ಹಗಲು ಹೊತ್ತಿನ ಕಾರ್ಮಿಕ ಅವಧಿ ನಷ್ಟ ಆಗಲಿದೆ.
ಆರ್ಥಿಕ ಅಭಿವೃದ್ಧಿಗೆ ಉಷ್ಣಾಘಾತ
ವಿಪರೀತ ಶಾಖದಿಂದಾಗಿ ಪ್ರಸ್ತುತ ಕಾರ್ಮಿಕರ ಕೆಲಸದ ಸಾಮರ್ಥ್ಯವು ಶೇ.10ರಷ್ಟು ಕುಸಿದಿದ್ದು, 2050ರ ವೇಳೆಗೆ ಕುಸಿ ತದ ಪ್ರಮಾಣ ಶೇ.15ರಿಂದ 20ಕ್ಕೆ ಏರಿಕೆಯಾಗಲಿದೆ ಎಂದು ವರದಿ ತಿಳಿ ಸಿದೆ. ಇದರ ಪರಿಣಾಮವಾಗಿ ಆರ್ಥಿಕ ಕ್ಷೇತ್ರದ ಬೆಳವಣಿಗೆಗೆ ಹೊಡೆತ ಬೀಳಲಿದೆ.
ಮತ್ಸ್ಯೋದ್ಯಮಕ್ಕೂ ತಟ್ಟಲಿದೆ ಬಿಸಿ ತಾಪಮಾನ ಏರಿಕೆಯಿಂದ ಸಮುದ್ರದ ಉಷ್ಣತೆ ಹೆಚ್ಚು ತ್ತಿದ್ದು, ಸುಮಾರು 65ರಿಂದ 80 ಕೋಟಿ ಬೆಸ್ತ ಕುಟುಂಬಗಳ ಜೀವನೋಪಾಯದ ಮೇಲೆ ಪರಿಣಾಮ ಬೀರಲಿದೆ.
ಉಷ್ಣ ಮಾರುತಕ್ಕೆ ಮನುಷ್ಯ ಕಂಗಾಲು
2030ರ ವೇಳೆಗೆ ಸುಮಾರು 20ಕೋಟಿ ಭಾರತೀಯರು ಉಷ್ಣ ಮಾರುತದ ಅಪಾಯಕ್ಕೆ ಸಿಲುಕಿಕೊಳ್ಳಲಿದ್ದಾರೆ. 34 ಡಿಗ್ರಿ ಸೆ. ಮೇಲ್ಪಟ್ಟ ಉಷ್ಣಮಾರುತ ಸತತ ಮೂರು ದಿನ ಬೀಸಿ ದರೆ ಮನುಷ್ಯ ಕಂಗಾಲಾಗುತ್ತಾನೆ.
ಭಾರತದ ಅನೇಕ ಪ್ರದೇಶಗಳಲ್ಲಿ ವಾಸ, ಬಿಸಿಲಿನಲ್ಲಿ ಕೆಲಸ ಮಾಡುಲು ಅಸಾಧ್ಯವಾಗಬಹುದು. 35 ಡಿಗ್ರಿ ಸೆ.ಗಿಂತ ಹೆಚ್ಚಿನ ಉಷ್ಣತೆಯಲ್ಲಿ ಮನುಷ್ಯ ದೇಹ ಬೆವರುವ ಮತ್ತು ತಣಿಯುವ ನೈಸರ್ಗಿಕ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. 35 ಡಿಗ್ರಿ ಸೆ.ಗಿಂತ ಹೆಚ್ಚಿನ ತಾಪಮಾನವನ್ನು ವೆಟ್ ಬಲ್ಬ್ ಟೆಂಪರೇಚರ್ ಎನ್ನಲಾಗುತ್ತಿದೆ.
ಈ ಪರಿಸ್ಥಿತಿಯಲ್ಲಿ ಎರಡು ತಾಸಿಗಿಂತ ಹೆಚ್ಚಿನ ಹೊತ್ತು ಬಿಸಿಲಲ್ಲಿರುವುದು ಅಸಾಧ್ಯ. ಜಾಗತಿಕ ತಾಪಮಾನ ಏರಿಕೆಯಿಂದ ಹಿಮ ಕರಗುವ ಪ್ರಮಾಣ ಏರಿಕೆಯಾಗಿದ್ದು, 2100 ರ ವೇಳೆಗೆ ಸಮುದ್ರ ಮಟ್ಟದಲ್ಲಿ 1 ಮೀಟರ್‌ನಷ್ಟು ಹೆಚ್ಚಲಿದೆ. ಇದರಿಂದ 140 ಕೋಟಿ ಜನರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ.
ರಾಜ್ಯಕ್ಕೂ ಇದೆ ಕಂಟಕ
ರಾಜ್ಯದಲ್ಲಿ ಮಾರ್ಚ್, ಎಪ್ರಿಲ್ ಹೊತ್ತಿಗೆ ಸರಾಸರಿ ತಾಪಮಾನ 34ರಿಂದ 35 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಈ ಬಾರಿ ಫೆಬ್ರವರಿ ಆರಂಭದಲ್ಲಿ ತಾಪಮಾನ 32 ಡಿಗ್ರಿ ಸೆ.ಗೆ ತಲುಪಿದೆ.
ತೀರಾ ಕಡಿಮೆ ತಲಾ ಜಿಡಿಪಿ ಸರಾಸರಿಯನ್ನು ಹೊಂದಿರುವ ಬಡ ದೇಶಗಳು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಗೆ ಮೊದಲು ತುತ್ತಾಗಲಿದ್ದು, 2050ರ ಕಾರ್ಮಿಕ ಅವಧಿಯ ನಷ್ಟದ ಪ್ರಮಾಣ ಶೇ.15-20ಕ್ಕೇರಲಿದೆ.
ಕಾರಣಗಳೇನು
– ಹೆಚ್ಚುತ್ತಿರುವ ಕಾಂಕ್ರೀಟೀಕರಣ ಮತ್ತು ನಗರೀಕರಣ.
– ಪರಿಸರ ಮಾಲಿನ್ಯ ಮತ್ತು ವಾಯು ಮಾಲಿನ್ಯ.
– ಪ್ಲಾಸ್ಟಿಕ್, ಇಂಧನ ತ್ಯಾಜ್ಯಗಳ ದಹನ.
– ವಾಹನ ದಟ್ಟಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.