Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

ಭೆಳೆ ಕನ್ನಡ-7: ನಾಡಿನ ಯುವಜನರಲ್ಲಿ ಸಾಂಸ್ಕೃತಿಕ ಮನಸ್ಸನ್ನು ಸೃಷ್ಟಿಸುವ ಕೆಲಸ ನಡೆಯಬೇಕು, ಈಗ ಸುವ್ಯವಸ್ಥಿತ ರಂಗಮಂದಿರಗಳ ಆವಶ್ಯಕತೆ ಹೆಚ್ಚಿದೆ

Team Udayavani, Nov 8, 2024, 7:35 AM IST

Rangavaibhava
1980ರ ಸಮಯದಲ್ಲಿ ಹೆಗ್ಗೋಡಿನಲ್ಲಿ “ನೀನಾಸಂ’ ರಂಗ ಶಾಲೆ ಆರಂಭ ವಾಯಿತು. ಬಿ. ವಿ. ಕಾರಂತರು ಮಕ್ಕಳ ನಾಟಕ “ಪಂಜರಶಾಲೆ’ ಪ್ರಯೋಗಿಸಿದರು. ನೀನಾಸಂ ರಂಗ ಶಾಲೆಯಲ್ಲಿ ತರಬೇತಿ ಪಡೆದ ಕಲಾವಿದರು, ತಿರುಗಾಟ ನಾಟಕಗಳನ್ನು ಕರ್ನಾಟಕದಾದ್ಯಂತ ಪ್ರವಾಸ ಮಾಡಿ, ಸಣ್ಣ ಸ್ಥಳಗಳಲ್ಲಿಯೂ ಪ್ರದರ್ಶನಗಳನ್ನು ನೀಡಿದರು. ಸಾಣೆಹಳ್ಳಿಯ ಶಿವ ಸಂಚಾರದ ಪ್ರದರ್ಶನಗಳು ಕೂಡ ರಂಗ ಚಲನೆಗೆ ಬಹಳಷ್ಟು ಕೊಡುಗೆ ನೀಡಿವೆ…
ವಿಲಾಸಿ ರಂಗದ ಅನಂತರ ಚಿಗುರೊಡೆದದ್ದು ಹವ್ಯಾಸಿ ರಂಗಭೂಮಿ. ಬಿ.ವಿ.ಕಾರಂತರು ಶ್ರೀರಂಗರ ನಾಟ್ಯಸಂಘ ಥಿಯೇಟರ್‌ ಸೆಂಟರ್‌ನ ಸಹಯೋಗದಲ್ಲಿ ಬೆಂಗಳೂರಿನಲ್ಲಿ ರಂಗ ಶಿಬಿರ ನಡೆಸಿದರು. ಹೀಗೆ ರಂಗ ಶಿಬಿರದಲ್ಲಿ ಭಾಗವಹಿಸಿ, ರಂಗ ಶಿಕ್ಷಣಕ್ಕೆ ತೆರೆದುಕೊಂಡ ಯುವಕರು ಹೊಸ ತಂಡಗಳನ್ನು ಮಾಡಿಕೊಂಡು, ರಂಗ ಪ್ರದರ್ಶನಗಳಿಗೆ ತೊಡಗಿಸಿಕೊಂಡರು. ಹವ್ಯಾಸಿ ರಂಗದ ಹೊಸ ಶಕೆ 1965ರ ನಂತರ ಆರಂಭಗೊಂಡಿತು.

ವಿಶೇಷವೆಂದರೆ ಗುರುದೇವ ರವೀಂದ್ರನಾಥ ಠಾಗೋರ್‌ ಅವರ ನೆನಪಿನಲ್ಲಿ ಭಾರತ ಸರಕಾರ‌ ದೇಶದ 5 ಕಡೆ ರವೀಂದ್ರ ಸಭಾಂಗಣಗಳನ್ನು ನಿರ್ಮಿಸಿತು. ಆಗಿನ ಮೈಸೂರು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಈಗಿರುವ ರವೀಂದ್ರ ಕಲಾಕ್ಷೇತ್ರವನ್ನು ನಿರ್ಮಾಣ ಮಾಡಿತು. 1963ರಲ್ಲಿ ಅದು ನಾಟಕ ಪ್ರದರ್ಶನಕ್ಕೆ ಸಿದ್ಧವಾಯಿತು. 1968-69ರಲ್ಲಿ ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿಯು, ಪ್ರೊ. ಬಿ. ಚಂದ್ರಶೇಖರ್‌ ಅವರ ನಿರ್ದೇಶನದಲ್ಲಿ ಬೆಂಗಳೂರಿನ ಹವ್ಯಾಸಿ, ಕಲಾವಿದರನ್ನು ಸೇರಿಸಿ ಗಿರೀಶ್‌ ಕಾರ್ನಾಡರ ಮಹತ್ವಪೂರ್ಣ ನಾಟಕ “ತುಘಲಕ್‌’ ಪ್ರದರ್ಶನವನ್ನು ಕಲಾಕ್ಷೇತ್ರದಲ್ಲಿ ನಡೆಸಿತು.

ಅನಂತರ 1972ರಲ್ಲಿ ಕಲಾಕ್ಷೇತ್ರವನ್ನು ಕೆಲವು ಕಾಲ ರಿಪೇರಿಗಾಗಿ ಮುಚ್ಚಿದ್ದರಿಂದ ಬಿ.ವಿ.ಕಾರಂತರು, ಗಿರೀಶ್‌ ಕಾರ್ನಾಡ್‌, ಪಿ.ಲಂಕೇಶ್‌, ಚಂದ್ರ­ಶೇಖರ ಕಂಬಾರ‌ ಮತ್ತು ವಿ.ರಾಮಮೂರ್ತಿ ಪರಿಶ್ರಮದಿಂದಾಗಿ “ದೊರೆ ಈಡಿಪಸ್‌’, “ಸಂಕ್ರಾಂತಿ’ ಮತ್ತು “ಜೋಕುಮಾರಸ್ವಾಮಿ’ ನಾಟಕಗಳ ಪ್ರದರ್ಶನವಾಯಿತು. ಆರ್‌. ನಾಗೇಶ್‌ ಮತ್ತು ಕೃಷ್ಣಪ್ಪ ಹಿರಿಯರ ಜೊತೆಗೂಡಿ ದುಡಿದರು.

ಮೈಸೂರು ರಾಜ್ಯ ಸರಕಾರ‌ 1973ರ ಅನಂತರ ಕರ್ನಾಟಕ ಸರಕಾರ‌ ಎಂದಾಯಿತು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಆರಂಭಗೊಂಡಿತು. ಇದರ ಮೊದಲ ಅಧ್ಯಕ್ಷರು ಗಿರೀಶ್‌ ಕಾರ್ನಾಡ್‌. ಅಲ್ಲಿಂದ ಮುಂದು­ವರಿದು ಇಲ್ಲಿಯವರೆಗೆ 16 ಜನ ಅಧ್ಯಕ್ಷರು ಅವರವರ ಅವಧಿಗೆ ಸೀಮಿತವಾಗಿ ಅನೇಕ ಮಹತ್ವಪೂರ್ಣ ಕಾರ್ಯಗಳನ್ನು ಮಾಡಿದ್ದಾರೆ.

ನೀನಾಸಂ, ರಂಗಾಯಣ… ಆರಂಭ
1980ರ ಸಮಯದಲ್ಲಿ ಹೆಗ್ಗೊàಡಿನಲ್ಲಿ “ನೀನಾಸಂ’ ರಂಗ ಶಾಲೆ ಆರಂಭವಾಯಿತು. ಬಿ.ವಿ.ಕಾರಂತರು ಮಕ್ಕಳ ನಾಟಕ “ಪಂಜರಶಾಲೆ’ ಪ್ರಯೋಗಿಸಿದರು. ಪ್ರೇಮಕಾರಂತ, ಎನ್‌. ಎಸ್‌. ವೆಂಕಟರಾಮ್‌ ಮುಂತಾದವರು ಈ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ನೀನಾಸಂ ರಂಗ ಶಾಲೆಯಲ್ಲಿ ತರಬೇತಿ ಪಡೆದ ಕಲಾವಿದರು, ತಿರುಗಾಟ ನಾಟಕಗಳನ್ನು ಕರ್ನಾಟಕದಾದ್ಯಂತ ಪ್ರವಾಸ ಮಾಡಿ, ಸಣ್ಣ ಸ್ಥಳಗಳಲ್ಲಿಯೂ ಪ್ರದರ್ಶನಗಳನ್ನು ನೀಡಿದರು. ಸಾಣೆಹಳ್ಳಿಯ ಶಿವ ಸಂಚಾರದ ಪ್ರದರ್ಶನಗಳು ಕೂಡ ರಂಗ ಚಲನೆಗೆ ಬಹಳಷ್ಟು ಕೊಡುಗೆ ನೀಡಿವೆ. 1984ರಲ್ಲಿ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಿ. ಜಿ. ಕೆ. ರಂಗ ನಿರಂತರ ತಂಡದಿಂದ 150 ದಿನಗಳ ರಂಗ ಪ್ರದರ್ಶನಗಳನ್ನು ಮಾಡಿಸಿದರು.

1985ರಲ್ಲಿ ಮೈಸೂರಿನ ರಂಗಾಯಣ ಸಂಸ್ಥೆಯ ಆರಂಭ. ಸರಕಾರ‌ ರಂಗಭೂಮಿಗೆ ನೀಡಿದ ಹೊಸದೊಂದು ಪ್ರೋತ್ಸಾಹ. ಬಿ. ವಿ. ಕಾರಂತರು ಮೊದಲ ನಿರ್ದೇಶಕರಾಗಿದ್ದರು. ಅನಂತರದಲ್ಲಿ ಹತ್ತಾರು ನಿರ್ದೇಶಕರು ಅಲ್ಲಿ ರಂಗ ಕಾರ್ಯ ಮಾಡಿ¨ªಾರೆ. ಈಗ ಸರಕಾರ‌ 6 ರಂಗಾಯಣಗಳನ್ನು ನಿರ್ವಹಿಸುತ್ತಿದೆ. ಮೈಸೂರು, ಧಾರವಾಡ, ಶಿವಮೊಗ್ಗ, ದಾವಣಗೆರೆ, ಕಲಬುರಗಿ ಮತ್ತು ಕಾರ್ಕಳದಲ್ಲಿ ಈ ಚಟುವಟಿಕೆ ನಡೆಯುತ್ತಿದೆ. ಆದರೆ ಇವುಗಳಿಗೆ ಹಣದ ಕೊರತೆ ಇದೆ.

ರಂಗಮಂದಿರಗಳಿವೆ, ಆದರೆ…
ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ರಂಗಮಂದಿರಗಳಿವೆ. ಅವುಗಳು ಎಲ್ಲವೂ ಎಲ್ಲ ರೀತಿಯಲ್ಲೂ ಸುಸಜ್ಜಿತವಾಗಿಲ್ಲ. ಸರಕಾರ‌ ಕಟ್ಟಿಸಿ, ನಿರ್ವಹಣೆ ಮಾಡುತ್ತಿರುವುದು. ಇವುಗಳ ಜತೆಯಲ್ಲಿ ಬೇರೆ ಬೇರೆ ಸಂಸ್ಥೆಗಳು ನಿರ್ಮಿಸಿ ನಿರ್ವಹಿಸುತ್ತಿರುವ ರಂಗ ಮಂದಿರಗಳು ಹಲವಾರು ಇವೆ. ಇಲ್ಲಿ ಸಿಗುವ ವ್ಯವಸ್ಥೆ ಮತ್ತು ಅನುಕೂಲಗಳನ್ನು ಬಳಸಿ ರಂಗತಂಡಗಳು ಪ್ರದರ್ಶನ ನೀಡುತ್ತವೆ. ಸುವ್ಯವ­ಸ್ಥಿತವಾದ ರಂಗ ಮಂದಿರಗಳ ಆವಶ್ಯಕತೆ ಇದೆ.

2010ರಲ್ಲಿ ಮೈಸೂರಿನ ರಂಗಾಯಣ ಕಲಾವಿದರು ರಾಷ್ಟ್ರಕವಿ ಕುವೆಂಪು ಅವರ “ಮಲೆಗಳಲ್ಲಿ ಮದುಮ­ಗಳು’ ಕಾದಂಬರಿಯನ್ನು ಇಡೀ ರಾತ್ರಿ ನಾಲ್ಕು ವೇದಿಕೆಗಳಲ್ಲಿ ಅಭಿನಯಿಸಿದರು. ರಂಗರೂಪ ಡಾ| ಕೆ. ವೈ. ನಾರಾಯಣ ಸ್ವಾಮಿ, ಸಂಗೀತ ಹಂಸಲೇಖ, ನಿರ್ದೇಶನ ಬಿ. ಬಸವಲಿಂಗಯ್ಯ ಅವರದ್ದು. ಅನೇಕ ಪ್ರದರ್ಶನಗಳಾದವು. ಈ ನಾಟಕದ ಮರು ಪ್ರದರ್ಶ­ನಗಳನ್ನು ಬೇರೆ ಕಲಾವಿದರನ್ನು ಬಳಸಿಕೊಂಡು ಎನ್‌.ಎಸ್‌.ಡಿ. ಬೆಂಗಳೂರು ಕೇಂದ್ರದ ವತಿಯಿಂದ ಬಸವಲಿಂಗಯ್ಯನವರು ಮಾಡಿಸಿದರು.

ರಂಗಭೂಮಿಯಲ್ಲಿ  ಸಮಸ್ಯೆಗಳ ಸಂತೆ!
2023ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ರಂಗ ಮಂದಿರಕ್ಕೆ 60 ವರ್ಷ. ಹಾಗೆಯೇ ಕರ್ನಾಟಕವೆಂದು ನಾಮಕರಣ ಆಗಿ 50 ವರ್ಷ. ರಂಗಭೂಮಿಯ ಏಳು ಬೀಳುಗಳು ಈ 60 ವರ್ಷಗಳಲ್ಲಿ ಸಿಹಿ ಕಹಿ ಆಗಿವೆ. ಸಮಾಧಾನಗಳು ಹಲವು, ಸಮಸ್ಯೆಗಳು ನೂರಾರು. ಕಲಾಕ್ಷೇತ್ರ ಕಾಯ್ದಿರಿಸುವಿಕೆಯಲ್ಲಿ ಸಮಸ್ಯೆ. ಇನ್ನೂ ವಿಚಿತ್ರವೆಂದರೆ, ಪ್ರೇಕ್ಷಕರೇ ಕಲಾಕ್ಷೇತ್ರದ ಕಡೆ ಬರುತ್ತಿಲ್ಲ. ನಗರೀಕರಣದ ಸಮಸ್ಯೆ. ಕಲಾಕ್ಷೇತ್ರದ ನವೀಕರಣ ಆಗಬೇಕು. ಧ್ವನಿ-ಬೆಳಕಿನ ವ್ಯವಸ್ಥೆ ಸರಿಯಾಗಬೇಕು. ನಾಲ್ಕು ದಶಕಗಳಿಂದ ಇದು ಕಲೆ ಸಂಸ್ಕೃತಿ ಕಾರ್ಯಕ್ರಮಗಳಿಂದ ತುಂಬಿತ್ತು. ಈ ಎರಡು ದಶಕದಲ್ಲಿ ಕಾರ್ಯಕ್ರಮಗಳು ಗರಿಗೆದರಲಿಲ್ಲ. 60 ವರ್ಷವಾದರೂ ಅದೇ ಸಮಸ್ಯೆ. ಸಮಾಧಾನ ಸಿಕ್ಕಿಲ್ಲ.

ನಾಟಕ ಬೆಂಗಳೂರು-ಬೆಂಗಳೂರಿನ ಹವ್ಯಾಸಿ ತಂಡಗಳು ಒಟ್ಟಾಗಿ ಸೇರಿ ಆರಂಭಿಸಿದ ಹೊಸ ನಾಟಕಗಳನ್ನಾಡುವ ಕಾರ್ಯಕ್ರಮ. ಇದರ ಉದ್ದೇಶ ಇದ್ದದ್ದು ಕಲಾಕ್ಷೇತ್ರಕ್ಕೆ ಹೇಗಾದರೂ ಮಾಡಿ ನಾಟಕ ನೋಡಲು ಪ್ರೇಕ್ಷಕರು ಬರುವಂತೆ ಮಾಡಬೇಕು ಎನ್ನುವುದಾಗಿತ್ತು. ಒಂದು ಸಕ್ರಿಯ ಉದ್ದೇಶದ ಕಾರ್ಯಕ್ಕೆ ಅಧಿಕಾರಿಗಳು ಸ್ಪಂದಿಸಲೇ ಇಲ್ಲ. ಈಗ ನಾಟಕ ಬೆಂಗಳೂರು ಕಲಾಗ್ರಾಮಕ್ಕೆ ಸ್ಥಳಾಂತರವಾಗಿದೆ. ಈಗ 25 ತಂಡಗಳ ಒಗ್ಗಟ್ಟಿನ ಪ್ರದರ್ಶನಗಳು ಕಲಾಕ್ಷೇತ್ರದಿಂದ ಹೊರಕ್ಕೆ ಹೋಗಿದೆ.

ಕಲಾ ಚಟುವಟಿಕೆ ಯಾರಿಗೂ ಬೇಕಿಲ್ಲ!
ಇರುವ ಒಂದೇ ಕಲಾಕ್ಷೇತ್ರವನ್ನು ನಿರ್ವಹಿಸಲು ನುರಿತ ಕೆಲಸಗಾರರೇ ಇಲ್ಲ. ಸರಕಾರಿ ನಿರ್ವಹಣೆ ಮತ್ತು ಖಾಸಗಿ ನಿರ್ವಹಣೆಯ ಏರುಪೇರುಗಳನ್ನು ಗಮನಿಸಲು, ಬೆಂಗಳೂರಿನ ಚೌಡಯ್ಯ ಮೆಮೋರಿಯಲ್‌ ಹಾಲ್‌ ಮತ್ತು ರಂಗಶಂಕರ ನೋಡಿದರೆ ತಿಳಿದು ಬರುತ್ತದೆ. ಬಿಬಿಎಂಪಿ ನಿರ್ಮಿಸಿರುವ ಕೆ. ಎಚ್‌. ಕಲಾಸೌಧ ನಿರ್ವಹಣೆ, ರಾಜಾಜಿನಗರದ ಆರ್‌. ಟಿ. ಒ. ಕಚೇರಿಯಲ್ಲಿರುವ ಸಭಾಂಗಣದ ನಿರ್ವಹಣೆ ಗಮನಿಸಿದರೆ, ಯಾರಿಗೂ ಕಲಾ ಸಂಸ್ಕೃತಿ ಚಟುವಟಿಕೆಗಳು ಬೇಕಿಲ್ಲ ಎನ್ನುವುದು ತಿಳಿದು ಬರುತ್ತದೆ.

ಸಂಸ ಬಯಲು ರಂಗ, ನಯನ ಮತ್ತು ಕಲಾಗ್ರಾಮ ಸಭಾಂಗಣ ಪ್ರತಿಯೊಂದೂ ಸಮಸ್ಯೆಗಳ ಗೂಡು. ಈ ಎಲ್ಲದರ ನಿರ್ವಹಣೆಗೆ ಒಂದು ಶ್ರದ್ಧಾವಂತ ಮನಃಸ್ಥಿತಿ ಬೇಕು. ಕಲೆ ಸಂಸ್ಕೃತಿಯನ್ನು ಉಳಿಸುವ, ಬೆಳೆಸುವ ಚಿಂತನೆ ಬೇಕು. ಒಂದು ಸಣ್ಣ ತಂಡ ನಾಟಕ ಮಾಡಲು ಪಡುವ ಪಾಡು ಸಣ್ಣದಲ್ಲ. ಆ ಶ್ರಮಕ್ಕೆ, ಸಾಹಸಕ್ಕೆ ಗೌರವ ಇಲ್ಲ. ಯುವ ಮನಸ್ಸುಗಳನ್ನು ಸಾಂಸ್ಕೃತಿಕವಾಗಿ ರೂಪಿಸದೆ ಹೋದರೆ, ಸಮಾಜದ ಗತಿ ಏನು? ರಾಜಧಾನಿಯಲ್ಲಿರುವ, ಸರಕಾರ‌ದ ಕಣ್ಣಳತೆ ದೂರದಲ್ಲಿರುವ ಕಲಾಕ್ಷೇತ್ರದ ಈ ಸ್ಥಿತಿ ವಿಷಾದನೀಯ.

ರಂಗಮಂದಿರಗಳ ವೈಭವ ಮರಳಲಿ
ಒಂದು ಪರಿಣಾಮಕಾರಿ ವ್ಯವಸ್ಥೆ, ಕಲೆ-ಸಂಸ್ಕೃತಿ ಬೆಳವಣಿಗೆಗೆ ಪೂರಕವಾದ ನಿಯಮಗಳು, ಪಾರದರ್ಶಕವಾದ ನಡೆ ಸಾಧ್ಯವಿಲ್ಲವೇ? ಈ ಅನಾದರ ಏಕೆ? ರಾಜ್ಯದ ಜಿಲ್ಲೆಗಳಲ್ಲಿರುವ ರಂಗಮಂದಿರಗಳ ನಿರ್ವಹಣೆಯ ಕಥೆಯೂ ಬೇರೆಯಾಗಿಲ್ಲ. 20ನೇ ಶತಮಾನದಲ್ಲಿ ನಳನಳಿಸುತ್ತಿದ್ದ ಕಲಾವಂತಿಕೆಯನ್ನು 21ನೇ ಶತಮಾನದಲ್ಲಿ ರೂಪಿಸುವುದು ಯಾರ ಜವಾಬ್ದಾರಿ? ಅಲ್ಲಲ್ಲೇ ಸರಿದು ಹೋಗುವ ಸಣ್ಣ ತಂಡಗಳು, ಸಂಸ್ಥೆಗಳು, ಮರೆಯಾಗುತ್ತವೆ. ರಂಗದ ಮೇಲೆ ಅಬ್ಬರಿಸಿದರೂ ಕ್ಷೀಣ ಧ್ವನಿ ಕಲೆ ಸಂಸ್ಕೃತಿಯದ್ದು. ಅದಕ್ಕೆ ಆಶ್ರಯ ಬೇಕು. ಆದರಣೆ ಬೇಕು. ಆ ಮನಸ್ಸುಗಳು ಮುದುರಿ ಕಮರಿ ಹೋಗುವಂತಾಗಬಾರದು. ನನ್ನ ಚಿಂತನೆ ಕಲಾಕ್ಷೇತ್ರದ ಸುತ್ತಲೇ ಗಿರಕಿ ಹೊಡೆಯುತ್ತಿದೆ. 50 ವರ್ಷಗಳು ಅಲ್ಲೇ ಸ್ನೇಹಿತರ ಜತೆ ಕೂಡಿ ಬೆಳೆದ ನೆನಪು. ನೆನಪುಗಳಿಗೆ ಸಾವಿಲ್ಲ-ನೋವಿದೆ- ನಲಿವಿದೆ. ಕಲಾಕ್ಷೇತ್ರ ಎಂಬ ಕಲ್ಲು ಕಟ್ಟಡಕ್ಕೆ ಕಟ್ಟಿಕೊಂಡು ಅಲ್ಲೇ ಸುತ್ತುತ್ತಿರುವ ಸಾವಿರಾರು ಮನಸ್ಸುಗಳ ಆಲಾಪ ಇದೇ.

ಆಗಬೇಕಾದ್ದೇನು?
1. ರಂಗ ವೀಕ್ಷಣೆಗೆ ಪ್ರೇಕ್ಷಕರನ್ನು ಕರೆತರಬೇಕಾದ ಸವಾಲನ್ನು ರಂಗತಂಡಗಳು ಸ್ವೀಕರಿಸಬೇಕಿದೆ.

2. ಎಲ್ಲ ಕಲಾಕ್ಷೇತ್ರಗಳ ನವೀಕರಣ, ಆಧುನೀಕರಣ ಕೈಗೊಳ್ಳುವುದು ಅಗತ್ಯವಾಗಿದೆ.

3. ಅಧಿಕಾರಿಗಳಲ್ಲೂ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮನಃಸ್ಥಿತಿ ಬೆಳೆಸಬೇಕು.

4. 20ನೇ ಶತಮಾನದಲ್ಲಿದ್ದ ಕಲಾವಂತಿಕೆಯನ್ನು ಮತ್ತೆ ತರಬೇಕಾದ ಜರೂರತ್‌ ಇದೆ

5. ಈಗಿನ ಕಾಲಘಟ್ಟದಲ್ಲಿ ಯುವಮನಸ್ಸುಗಳನ್ನು ಸಾಂಸ್ಕೃತಿಕವಾಗಿ ರೂಪಿಸುವ ಅಗತ್ಯ ಇದೆ.
– ಡಾ| ಬಿ. ವಿ. ರಾಜಾರಾಂ, ಹಿರಿಯ ರಂಗಕರ್ಮಿ, ನಿರ್ದೇಶಕರು

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.