ಗೊಲ್ಲರಹಟ್ಟಿಗಳಲ್ಲಿ ಇನ್ನೂ ಮೌಢ್ಯಾಚರಣೆ
Team Udayavani, Jul 31, 2023, 6:10 AM IST
ತುಮಕೂರು: ವಿಜ್ಞಾನ, ತಂತ್ರಜ್ಞಾನ ಬೆಳೆದಿ ರುವ 21ನೇ ಶತಮಾನದಲ್ಲಿಯೂ ಮಾನವೀಯತೆ ಮರೆತು ಮೌಢ್ಯಕ್ಕೆ ಒಳಗಾಗುತ್ತಿರುವ ಕಾಡುಗೊಲ್ಲ ಸಮುದಾಯದ ಹಟ್ಟಿಗಳಲ್ಲಿ ದೇವರ ಹೆಸರಿನಲ್ಲಿ ನಡೆಯುತ್ತಿರುವ ಮೌಡ್ಯ ಆಚರಣೆಗೆ ಹಟ್ಟಿಗಳಲ್ಲಿ ಇರುವ ಜನರಿಗೆ ಶಿಕ್ಷಣದ ಕೊರತೆಯೇ ಮೂಲಕಾರಣವಾಗಿದೆ.
ಕಾಡು ಗೊಲ್ಲ ಸಮುದಾಯದವರು ಈ ಹಿಂದೆ ಅಲೆಮಾರಿಗಳು ಕಾಡು ಮೇಡುಗಳಲ್ಲಿ ವಾಸಿಸುತ್ತಿದ್ದರು, ಕುರಿ ಸಾಕಾಣಿಕೆ, ಹೈನುಗಾರಿಗೆ ಇವರ ಮೂಲ ಕಸಬು. ಅಲ್ಲಲ್ಲಿ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದ ಈ ಜನರ ಜತೆಯಲ್ಲಿ ಕುರಿ, ಮೇಕೆ, ಹಸುಗಳು ಎಲ್ಲವೂ ಒಟ್ಟಿಗೆ ಇರುತ್ತಿದ್ದವು, ಈ ವೇಳೆಯಲ್ಲಿ ಋತುಮತಿಯಾದರೆ ಮತ್ತು ಬಾಣಂತಿಯಾದರೆ ಅವರ ಆರೋಗ್ಯದ ಮೇಲೆ ತೊಂದರೆ ಉಂಟಾ ಗುತ್ತದೆ ಎಂದು ಈ ಹಿಂದೆ ಪೂರ್ವಿಕರು ಅವರು ಬೇರೆ ಕಡೆ ಗುಡಿಸಲು ನಿರ್ಮಿಸಿ ಅಲ್ಲಿ ಸೌಲಭ್ಯ ಕಲ್ಪಿಸಿ ಇರಿಸುತ್ತಿದ್ದರು.
ಆನಂತರ ಅದು ಮೌಢ್ಯವಾಗಿ ಪರಿವರ್ತನೆ ಯಾಗಿ ಕಾಡುಗೊಲ್ಲ ಸಮುದಾಯದ ಆರಾಧ್ಯ ದೈವ ವೀರಗಾರರಾದ ಜುಂಜಪ್ಪ ದೇವರು, ಸಿದ್ಧಪ್ಪ ದೇವರು, ಯತ್ತಪ್ಪ ದೇವರಿಗೆ ಸೂತಕ ಆಗುತ್ತದೆ ಎನ್ನುವ ಭಾವನೆ ಬಂದು ಹಟ್ಟಿಯಿಂದ ಹೊರಗಡೆ ಇಡಲು ಆರಂಭಿಸಿದರು.
ಹೆಣ್ಣು ಮಕ್ಕಳು ಋತುಮತಿಯಾಗುವುದು, ಪ್ರತಿ ತಿಂಗಳ ಋತುಚಕ್ರ, ಹೆರಿಗೆಯಾದರೆ ಅದು ತೀವ್ರವಾದ ಸೂತಕವಾಗುತ್ತದೆ. ಅವರು ಹಟ್ಟಿಯಲ್ಲಿ ಇದ್ದರೆ ಆ ಸೂತಕ ಹಟ್ಟಿಗೂ ಹರಡಿ ದೇವರಿಗೆ ಮೈಲಿಗೆಯಾಗಿ ಇದರಿಂದ ಇಡೀ ಹಟ್ಟಿಗೆ ಕಷ್ಟ ಬರುತ್ತದೆ. ಮನೆಗೆ ಹಾವು, ಜೆರಿ, ಚೇಳುಗಳು ಬರುತ್ತವೆ. ಅಲ್ಲದೇ ದನ, ಕರು, ಕುರಿಗಳಿಗೂ ತೊಂದರೆಯಾಗುತ್ತದೆ ಎಂದು ನಂಬಿರುವ ಕಾಡುಗೊಲ್ಲ ಸಮುದಾಯದ ಹಲವರು ಇಂದಿಗೂ ತಮ್ಮ ಮೌಡ್ಯವನ್ನು ಬಿಡದೇ ಆಚರಣೆ ಮಾಡುತ್ತಲೇ ಇದ್ದಾರೆ.
ಯುವತಿ ಋತುಮತಿಯಾದರೆ, ಮಹಿಳೆ ಯರು ಪ್ರತೀ ತಿಂಗಳು ಋತುಚಕ್ರವಾದರೆ 5 ದಿನ ಹಟ್ಟಿಯಿಂದ ಆಚೆ ಗುಡಿಸಲಿನಲ್ಲಿ ಇರಬೇಕು, ವಿಶೇಷವಾಗಿ ಹೆರಿಗೆಯಾದರೆ ಅದು ತೀವ್ರವಾದ ಸೂತಕ. ಅವರನ್ನು ಹಟ್ಟಿಯಲ್ಲಿ ಇಟ್ಟುಕೊಳ್ಳಬಾ ರದು ಎಂದು 21 ದಿನದ ಸೂತಕ ಕಳೆಯುವವರೆಗೆ ಹೊರಗೆ ಇರಬೇಕು ಎಂದು ಹಟ್ಟಿಯಿಂದ ಆಚೆ ಗರಿಯಿಂದ ಗುಡಿಸಲು ಕಟ್ಟಿ ಅಲ್ಲಿಯೇ ಮಗು, ಬಾಣಂತಿ ಇರಬೇಕು. 21 ದಿನ ಕಳೆದ ಮೇಲೆ ಹಸುವಿನ ಗಂಜಲ ಹಾಕಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿದ ಮೇಲೆ ಸೂತಕ ಹೋಗುತ್ತದೆ ಎನ್ನುವ ಸಂಪ್ರದಾಯ ಇವರದ್ದು.
ಹಟ್ಟಿಯಿಂದ ಆಚೆ ಗುಡಿಸಲಿನಲ್ಲಿ ಆಗ ತಾನೇ ಹುಟ್ಟಿದ ಹಸುಗೂಸು ಮತ್ತು ಬಾಣಂತಿ ಇರಬೇಕು. ಆ ವೇಳೆ ವಿಷಜಂತುಗಳು, ಕಾಡು ಪ್ರಾಣಿಗಳ ಭಯ ಇರುತ್ತದೆ. ಜತೆಗೆ ವಾತಾ ವರಣದ ಏರು ಪೇರಿನಿಂದ ಬಾಣಂತಿಗೆ ಮತ್ತು ಮಗುವಿಗೆ ಕಾಯಿಲೆಗಳು ಕಾಣುತ್ತವೆ. ಇದರಿಂದ ಸಾವು ನೋವುಗಳು ಅಧಿಕವಾಗಿರುತ್ತವೆ.
ಈಗ ತುಮಕೂರು ತಾಲೂಕಿನ ಮಲ್ಲೇನ ಹಳ್ಳಿಯ ಗೊಲ್ಲರ ಹಟ್ಟಿಯಲ್ಲಿ ಬಾಣಂತಿ ಮಗುವನ್ನು ಹಟ್ಟಿಯಿಂದ ಆಚೆ ಗುಡಿಸಲಿನಲ್ಲಿ ಇಟ್ಟ ಪರಿಣಾಮ ತೀವ್ರ ಶೀತದಿಂದ ಗುಡಿಸಲಿ ನಲ್ಲಿ ಇಟ್ಟಿದ್ದ ಮಗು ಸಾವನ್ನಪ್ಪಿತ್ತು, ಆದರೂ ಸೂತಕ ಎಂದು ಬಾಣಂತಿಯನ್ನು ಗುಡಿಸಲಿನ ಲ್ಲಿಯೇ ಇರಿಸಲಾಗಿತ್ತು, ಈ ಪ್ರಕರಣ ಮಾಧ್ಯಮಗಳಲ್ಲಿ ಬರುತ್ತಲೇ ನ್ಯಾಯಾಧೀಶರು ಗೊಲ್ಲರ ಹಟ್ಟಿಗೆ ಭೇಟಿ ನೀಡಿ ಗುಡಿಸಲುತೆರವು ಗೊಳಿಸಿ ಹಟ್ಟಿಯ ಜನರಲ್ಲಿ ಜಾಗೃತಿ ಮೂಡಿಸಿ ಮಹಿಳೆಯ ಮನೆಗೆ ಕಳುಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಂತಿಯ ಅಪ್ಪ, ಅಮ್ಮ ಮತ್ತು ಗಂಡನ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೈಕ್ಷಣಿಕ ಪ್ರಗತಿ ಸಾಧಿಸಿರುವ ಹಲವು ಗೊಲ್ಲರ ಹಟ್ಟಿಗಳಲ್ಲಿ ಇಂತಹ ಮೌಢ್ಯ ಪದ್ದತಿ ದೂರವಾಗಿದೆ. ಆದರೆ ಶಿಕ್ಷಣ ಇಲ್ಲದ ಹಲವು ಹಟ್ಟಿಗಳಲ್ಲಿ ಇಂತಹ ಮೌಡ್ಯ ಪದ್ಧತಿ ಇಂದಿಗೂ ಇದ್ದು ಈ ಜನರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಅಗತ್ಯತೆ ಇದೆ.
ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.