ಕ್ಷಮೆಯೆಂಬ ಒಂದು ಮುತ್ತಿನ ಕಥೆ; ಇಂದು ಗುಡ್‌ಫ್ರೈಡೆ
Team Udayavani, Mar 30, 2018, 8:54 AM IST
ಅದು ಅವನಿಂದಲ್ಲದೆ ಮತ್ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ದೈವತ್ವವನ್ನು ಹೊತ್ತುಕೊಂಡು, ಮನುಕುಲವನ್ನು ಪಾಪದ ಕೂಪದಿಂದ ರಕ್ಷಿಸಲು ಮಾನವನಾಗಿ ಈ ಧರೆಗಿಳಿದು ಬಂದ.ಬಂದವನು ದೇವನಾಗಿ ಮೆರೆಯದೆ ಸಾಮಾನ್ಯ ಮನುಜನಾಗಿ ಜೀವಿಸಿದ ಹಾಗೂ ಪ್ರೀತಿಯ ಸಂದೇಶವನ್ನು ಜಗತ್ತಿಗೆ ಸಾರಿದ. ಎಲ್ಲಕ್ಕೂ ಮಿಗಿಲಾಗಿ ಕ್ಷಮೆ ಎಂಬುದು ಎಲ್ಲಾ ಗುಣಗಳಲ್ಲಿ ಶ್ರೇಷ್ಠವಾದದ್ದು ಎಂದು ಜಗತ್ತಿಗೆ ತೋರಿಸಿಕೊಟ್ಟ. ಅವನ ಶಿಷ್ಯರಲ್ಲಿ ಓರ್ವನಾದ ಪೇತ್ರನು “ಸ್ವಾಮಿ, ನನಗೆ ದ್ರೋಹ ಮಾಡುತ್ತಿರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳು ಸಲವೇ?’ ಎಂದು ವಿಚಾರಿಸಿದಾಗ ಅವನ ಉತ್ತರ ಹೀಗಿತ್ತು: “ಏಳು ಸಲವಲ್ಲ, ಏಳೆಪ್ಪತ್ತು ಸಲ ಕ್ಷಮಿಸಬೇಕೆಂದು ನಾನು ನಿನಗೆ ಒತ್ತಿ ಹೇಳುತ್ತೇನೆ.’
ಈ ಮಾತನ್ನು ಸ್ವತಃ ಅವನು ಪಾಲಿಸಿದ. ತನ್ನ ಎರಡೂ ಕೈಗಳನ್ನು ಶಿಲುಬೆಯ ಅಡ್ಡಪಟ್ಟಿಗೆ ಒಡ್ಡಿ ಹಾಗೂ ಕೈ ಕಾಲುಗಳಿಗೆ ಮೊಳೆಗಳನ್ನು ಜಡಿಸಿಕೊಂಡ ಅನಂತರ, ತಾನು ಇನ್ನೇನು ಸಾಯುವುದರಲ್ಲಿದ್ದೇನೆ ಎಂದು ತಿಳಿದ ನಂತರವೂ ಸಾಯುವ ಮೊದಲು ತನ್ನ ದೈವ ದರುಶನವನ್ನು ಕರುಣೆಯ ಗರ್ಭದಲ್ಲಿ ತೋರಿಸಿದ. ತನ್ನನ್ನು ಸಾಯಿಸುವವರಿಗೋಸ್ಕರ ದೇವರಲ್ಲಿ ಪ್ರಾರ್ಥಿಸಿದ. ಸಾವಿನ ನೋವನ್ನು ಅದುಮಿ ಹಿಡಿದು, ತನ್ನನ್ನು ಹಿಂಸಿಸುವವರಿಗೋಸ್ಕರ ಪ್ರಾರ್ಥಿಸಿದ. “ಪ್ರಭುವೇ ಅವರನ್ನು ಕ್ಷಮಿಸು, ಅವರೇನು ಮಾಡುತ್ತಿರುವರೆಂದು ಅವರರಿಯರು…’ ಅವನೇ ಪವಿತ್ರ ಶುಕ್ರವಾರದಂದು ಶಿಲುಬೆಯಲ್ಲಿ ಮರಣ ಹೊಂದಿ ಪಾಸ್ಖ ದಿನದಂದು ಪುನರುತ್ಥಾನಗೊಂಡ ಪ್ರಭು ಏಸು ಸ್ವಾಮಿ.
ಇದೆಲ್ಲ ನಡೆದು ಎರಡು ಸಾವಿರ ವರ್ಷಗಳು ದಾಟಿ ಹೋದವು. ಅವನ ನೆನಪು ಹಾಗೂ ಅವನ ತ್ಯಾಗವನ್ನು ಸದಾ ಸ್ಮರಿಸುತ್ತಾ ಅವನು ತೋರಿಸಿಕೊಟ್ಟ ದಾರಿಯಲ್ಲಿ ನಡೆಯಲು ಅನುಯಾಯಿಗಳು ಸದಾ ಶ್ರಮಿಸುತ್ತಾರೆ. ಆದರೆ ಅವನ ಹಾಗೆ ಕ್ಷಮಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡವರು ಭೂಮಿಯಲ್ಲಿ ಅತಿ ವಿರಳ. ಆದರೂ ಕೆಲವು ಘಟನೆಗಳನ್ನು ನೆನಪಿಸಿಕೊಂಡಾಗ ಪ್ರಭು ಏಸು ಕ್ರಿಸ್ತ ಸದಾ ನಮ್ಮೊಂದಿಗಿದ್ದಾನೆ ಎನ್ನುವ ನಂಬಿಕೆ ಬಲಗೊಳ್ಳುತ್ತದೆ. ಹಿಂದಿನ ಜಗದ್ಗುರು, ಈಗ ಸಂತ ಪದವಿಯನ್ನು ಪಡೆದಿರುವ ಜಾನ್ ಪೌಲ್ ದ್ವಿತೀಯ ಅವರ ಮೇಲೆ 1981, ಮೇ 13ರಂದು ವ್ಯಾಟಿಕನ್‌ನಲ್ಲಿ ಟರ್ಕಿ ದೇಶದ ಮೆಹಮೆತ್ ಆಲಿ ಆಗಾ ಎಂಬವನು ಬಹಳ ಹತ್ತಿರದಿಂದ ಗುಂಡು ಹಾರಿಸಿ ಹತ್ಯೆಗೆ ಪ್ರಯತ್ನ ನಡೆಸಿದ. ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿ ದೈವೇಚ್ಛೆಯಂತೆ ಅವರು ಬದುಕಿ ಹಿಂತಿರುಗಿದರು. ಅದಾದ ನಂತರ 1983ರಲ್ಲಿ ಜಗದ್ಗುರು ಜಾನ್ ಪೌಲ್‌ರವರು ಸೆರೆಮನೆಯಲ್ಲಿದ್ದ ಆಗಾನನ್ನು ಭೇಟಿಮಾಡಿ ನಾಲ್ಕು ಗೋಡೆಗಳ ನಡುವೆ ಗುಟ್ಟಾಗಿ ಮಾತುಕತೆ ನಡೆಸಿ ಅವನನ್ನು ಸಂಪೂರ್ಣವಾಗಿ ಕ್ಷಮಿಸಿದರು ಮಾತ್ರವಲ್ಲದೆ ಅವನನ್ನು ಜೈಲಿನಿಂದ ಬಿಡುಗಡೆ ಮಾಡಲು ಶ್ರಮಿಸಿದರು.
1999 ಜನವರಿ 22ರಂದು ಒಡಿಶಾದ ಮನೋಹರಪುರದಲ್ಲಿ ಆಸ್ಟ್ರೇಲಿಯದ ಕ್ರಿಶ್ಚಿಯನ್ ಮಿಶಿನರಿ ಗ್ರಹಾಮ್ ಸ್ಟೈನ್ಸ್‌ರನ್ನು ಅವರ ಇಬ್ಬರು ಸಣ್ಣ ಪ್ರಾಯದ ಗಂಡು ಮಕ್ಕಳೊಂದಿಗೆ ವಾಹನದೊಳಗೆ ಕೂಡಿ ಹಾಕಿ ದಾರಾ ಸಿಂಗ್ ಎನ್ನುವವನು ತನ್ನ ಸಂಗಡಿಗರೊಂದಿಗೆ ಪೆಟ್ರೋಲ್ ಸುರಿಸಿ ಬೆಂಕಿಯಿಟ್ಟು ಕೊಂದನು. ಮೂರು ಮುಗ್ಧ ಜೀವಗಳು ನೋಡ ನೋಡುತ್ತಾ ಬೆಂಕಿಯ ಕೆನ್ನಾಲಿಗೆಗಳಿಗೆ ಆಹುತಿಯಾದವು. ಅವರ ಆಕ್ರಂದನ ಅಲ್ಲಿ ನೆರೆದಿದ್ದ ಸಂಘಟನೆಯ ಸದಸ್ಯರಿಗೆ ಮನೋರಂಜನೆಯಾಗಿತ್ತಾದರೆ ಕೇವಲ ಒಂದು ಹೃದಯ ನಿಶಬ್ದತೆಯ ಭೋರ್ಗರೆತದಲ್ಲಿ ತೊಡಗಿತ್ತು. ಆ ನಿಶಬ್ದ ಭೋರ್ಗರೆತ ಗ್ರಹಾಂ ಸ್ಟೈನ್ಸ್ ಪತ್ನಿ ಗ್ಲಾಡಿಸ್ ಅವರದ್ದಾಗಿತ್ತು. ತನ್ನ ಗಂಡ ಹಾಗೂ ಮಕ್ಕಳನ್ನು ಕಳಕೊಂಡರೂ ಸೇಡಿನ ಜ್ವಾಲೆ ಅವರ ಹೃದಯದಲ್ಲಿ ಉರಿಯಲಿಲ್ಲ. ಬದಲಾಗಿ ಕ್ಷಮೆಯ ಝರಿ ಹರಿಯುತ್ತಿತ್ತು. ಭಾರತವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅವರು ಹೇಳಿದ ಮಾತು ಮನಕುಲುಕುವಂತಿತ್ತು, “ನಾನು ನನ್ನ ಗಂಡ ಹಾಗೂ ಮಕ್ಕಳನ್ನು ಕೊಂದವರನ್ನು ಕ್ಷಮಿಸಿದ್ದೇನೆ. ನನಗೆ ಅವರ ಮೇಲೆ ಯಾವುದೇ ದ್ವೇಷವಿಲ್ಲ. ಏಕೆಂದರೆ ಕ್ಷಮೆಯು ಎಲ್ಲವನ್ನು ಗುಣಪಡಿಸುತ್ತದೆ. ನಮ್ಮ ನಾಡಿಗೆ ದ್ವೇಷ ಹಾಗೂ ಹಿಂಸೆಯಿಂದ ಮುಕ್ತಿ ಸಿಗಬೇಕಾಗಿದೆ’ ಎಂದರು ಅವರು.
ಇವೆಲ್ಲ ದೊಡ್ಡ ವ್ಯಕ್ತಿಗಳು, ಸುಶಿಕ್ಷಿತರು ಹಾಗೂ ದೈವಬಲ ಇರುವವರು ಮಾತ್ರ ಮಾಡಲು ಸಾಧ್ಯ. ನಮ್ಮ ಹಾಗೆ ಇರುವ ಸಾಮಾನ್ಯ ವ್ಯಕ್ತಿಗಳು ಇಂತಹ ಶ್ರೇಷ್ಠ ಗುಣವನ್ನು ತೋರಿಸಲು ಸಾಧ್ಯವಿಲ್ಲ ಎಂದು ನಂಬುತ್ತಿರುವಾಗ ಎಲ್ಲರ ಕಣ್ಣು ತೆರೆಸುವಂತಹ ಹಾಗೂ ದೈವಾತ್ಮ ಎಲ್ಲರಲ್ಲಿಯೂ ನೆಲೆ ನಿಂತಿದೆ ಹಾಗೂ ಅದನ್ನು ಹುಡುಕುವುದು, ಅದನ್ನು ಶ್ರೇಷ್ಠತೆಯೆಡೆಗೆ ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ತೋರಿಸಿಕೊಡುವ ನಂಬಲಾರದ ಘಟನೆಯೊಂದು ಕೇರಳದ ಕಡಲ ತೀರದಲ್ಲಿ ನಡೆಯಿತು. ಮೊದಲೇ ದೇವರ ನೆಲ ಎಂದು ಕರೆಸಿಕೊಳ್ಳುವಂತಹ ನಾಡಿಗೆ ಮುಕುಟ ಪ್ರಾಯವಾಗಿತ್ತು ಈ ಘಟನೆ. ಒಂದು ತಾಯಿಯು ಮಗನನ್ನು ಕಳೆದುಕೊಂಡಂತಹ ಘಟನೆ. ಎಲ್ಲೆಡೆಯಲ್ಲೂ ದ್ವೇಷ ಸಾಧನೆ, ಕೊಲೆ ಎಂದು ಅರ್ಭಟಿಸುತ್ತಿದ್ದ ಈ ಸಂದರ್ಭದಲ್ಲಿ ಮಗನನ್ನು ಕಳೆದುಕೊಂಡ ತಾಯಿ “ಕ್ಷಮಿಸಿ… ಕ್ಷಮಿಸಿ… ಕ್ಷಮಿಸಿ…’ ಎಂದು ವಿನಂತಿ ಮಾಡುತ್ತಿದ್ದರು.
ಕೇರಳದ ಮಲಯಟ್ಟೂರು ಎಂಬಲ್ಲಿ ಸೈಂಟ್ ಥಾಮಸ್ ಶೈನ್. ಇದರ ಮುಖ್ಯಸ್ಥರಾದ ಫಾ| ಕ್ಸೇವಿಯರ್ ತೆಲಕ್ಕಟ್ ಎಂಬುವರನ್ನು ಮಾರ್ಚ್ 2ರಂದು ಅವರ ಸಹಾಯಕನಾಗಿದ್ದ ಹಾಗೂ ಕುಡಿತದ ಚಟದಿಂದಾಗಿ ಸೇವೆಯಿಂದ ಅಮಾನತುಗೊಂಡ ಜಾನಿ ಎಂಬಾತನು ಇರಿದು ಕೊಲೆ ಮಾಡಿದನು. ದ್ವೇಷ ಸಾಧನೆಗಾಗಿ ಒಂದು ಜೀವ ಬಲಿಯಾಯಿತು. ಮಗನ ನಿಸ್ತೇಜವಾದ ದೇಹ ಶವಪೆಟ್ಟಿಗೆಯಲ್ಲಿ ಚಿರನಿದ್ರೆಗೆ ಜಾರಿದೆ.
ನೆರೆದವರೆಲ್ಲರೂ ನ್ಯಾಯ- ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಮಗನನ್ನು ಕಳೆದುಕೊಂಡ ತಾಯಿ ತ್ರೇಸಿಯಮ್ಮಳ ಹೃದಯ ಮಾತ್ರ ಏಸು ಕ್ರಿಸ್ತನ ಕೊನೆಯ ಮಾತುಗಳನ್ನು ನೆನಪಿಸಿಕೊಳ್ಳುತ್ತಿತ್ತು. ಶವ ಸಂಸ್ಕಾರದ ಬಳಿಕ ತನ್ನ ಮನೆಯ ಕಡೆಗೆ ತಿರುಗದೆ ತ್ರೇಸಿಯಮ್ಮಳ ಹೆಜ್ಜೆಗಳು ತನ್ನ ಮಗನನ್ನು ಕೊಂದ ಜಾನಿ ಮನೆ ಕಡೆಗೆ ತಿರುಗಿದವು. ತನ್ನ ಮಗ ಹಾಗೂ ಮಗಳೊಂದಿಗೆ ತ್ರೇಸಿಯಮ್ಮ ಜಾನಿ ಮನೆಯ ಬಾಗಿಲನ್ನು ಬಡಿದಳು. ನರಕದಂತಿದ್ದ ಮನೆಯೊಳಗೆ ಆ ತಾಯಿ ಪ್ರವೇಶ ಮಾಡಿ ಜಾನಿಯ ಹೆಂಡತಿ ಆನ್ನಿಯನ್ನು ತಬ್ಬಿಹಿಡಿದು ಅವಳ ಹಣೆಗೆ ಕ್ಷಮೆಯ ಮುತ್ತಿಟ್ಟಳು. ಅಲ್ಲಿ ಮಾತುಗಳಿರಲಿಲ್ಲ. ಕೇವಲ ನಿಶ್ಶಬ್ದ. ಅದರ ಜೊತೆಗೆ ಬಿಕ್ಕಳಿಕೆ ಹಾಗೂ ಮಮತೆಯ ಅಪ್ಪುಗೆ. ನರಕದಂತಿದ್ದ ಆ ಮನೆ ಗಳಿಗೆಯೊಳಗೆ ಸ್ವರ್ಗವಾಯಿತು. ಅದೂ ಕೂಡ ಕೇವಲ ಒಂದು ಕ್ಷಮೆಯ ಮುತ್ತಿನಿಂದ. ಈ ಮಹಾತಾಯಿ ನಮ್ಮೆಲ್ಲರಿಗೂ ಒಂದು ಸ್ಫೂರ್ತಿಯ ಸೆಲೆಯಾಗಲಿ. ಎಲ್ಲೆಡೆ ದ್ವೇಷ ಸಾಧನೆಗಾಗಿ ಕತ್ತಿಯನ್ನು ಮಸೆಯುತ್ತಿರುವ ಈ ಸಂದರ್ಭದಲ್ಲಿ ತ್ರೇಸಿಯಮ್ಮ ಪ್ರೀತಿ, ಪ್ರೇಮ ಹಾಗೂ ಕ್ಷಮೆಯ
ನಿಜವಾದ ಅರ್ಥ ಹಾಗೂ ಮಹತ್ವವನ್ನು ಜಗತ್ತಿಗೆ ಸಾರುತ್ತಿದ್ದಾರೆ. ಏಸು ಕ್ರಿಸ್ತನು ಶಿಲುಬೆಯಿಂದ ಹೇಳಿದ ಮಾತುಗಳನ್ನು ನಿಜವಾಗಿಸಲು ಈಗಲೂ ನಮ್ಮ ನಡುವೆ ಮಹಾತ್ಮರು ಜೀವಂತವಾಗಿದ್ದಾರೆ.
* ಡಾ| ವಿನ್ಸೆಂಟ್ ಆಳ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Story Of Generations: ಪೀಳಿಗೆಗಳ ವೃತ್ತಾಂತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್ ಬೆಳ್ಳುಳ್ಳಿ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.