ಎಲೆಮರೆ ಕಾಯಿಗಳಿಗೆ “ರಾಜ್ಯ’ ಗೌರವ


Team Udayavani, Nov 30, 2018, 12:30 AM IST

53.jpg

ಪ್ರತಿಬಾರಿ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾದಾಗಲೂ “ಅರ್ಹರನ್ನು ಕಡೆಗಣಿಸಲಾಗುತ್ತಿದೆ’ ಎನ್ನುವ ಅಸಮಾಧಾನ ಭುಗಿಲೇಳುತ್ತಿತ್ತು. ಆದರೆ ಈ ಬಾರಿ ನಿಜಕ್ಕೂ ಅರ್ಹರಿಗೆ ಗೌರವ ಸಲ್ಲಿಕೆಯಾಗಿರುವುದು ಸಂತಸದ ಸಂಗತಿ. ಪ್ರಶಸ್ತಿ ಪಡೆದ ರಾಜ್ಯದ ನಾನಾ ಭಾಗಗಳ, ವಿವಿಧ ಕ್ಷೇತ್ರದ ಆಯ್ದ ಸಾಧಕರ ಕುರಿತ ಪುಟ್ಟ ಪರಿಚಯ ಇಲ್ಲಿದೆ…

ರಾಚಪ್ಪ ಹಡಪದ, ಹೋರಾಟಗಾರ

ವೃತ್ತಿಯಲ್ಲಿ ಕ್ಷೌರಿಕ. ಸಮಾಜವಾದಿ ಹೋರಾಟವೇ ಜೀವಾಳ. ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಹೊಳೆಹೊಸೂರಿನ ರಾಚಪ್ಪ ಹಡಪದ, ಹೋರಾಟದ ಜೊತೆಗೆ ತಮ್ಮ ಕುಲಕಸುಬನ್ನು ಅಷ್ಟೇ ಶ್ರದ್ಧೆಯಿಂದ ಮಾಡಿಕೊಂಡು ಬಂದವರು. ಹಳೆ ಮೈಸೂರು ಮತ್ತು ಉತ್ತರ ಕರ್ನಾಟಕದ ಇತರ ಜಿಲ್ಲೆ ಗಳಿಂದ ಧಾರವಾಡಕ್ಕೆ ಬರುವ ಎಲ್ಲ ಸಮಾಜವಾದಿ ಗಳಿಗೆ ಇವರ ಸಲೂನ್‌ ಅಂಗಡಿಯೇ ಹೋರಾಟ ರೂಪಿಸುವ ತಾಣವಾಗಿತ್ತು. ಜೆಪಿ ಚಳವಳಿ, ನಂತರ ನಡೆದ ರೈತ ಚಳವಳಿ, ಕಾರ್ಮಿಕ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಶಾಂತವೇರಿ ಗೋಪಾಲಗೌಡರ ನೇರ ಶಿಷ್ಯರಾಗಿದ್ದರಿಂದ ಭೂ ಆಂದೋಲನದಲ್ಲೂ ಭಾಗಿಯಾಗಿದ್ದರು. 81 ವರ್ಷದ ಹಿರಿಯ ಜೀವವೀಗ ಧಾರವಾಡದಲ್ಲಿ ಸಮಾಜವಾದಿ ಗೆಳೆಯರೆಲ್ಲರೂ ಸೇರಿ ಕಟ್ಟಿಕೊಟ್ಟ ಮನೆಯಲ್ಲಿ ವಾಸವಾಗಿದ್ದಾರೆ. ಮನೆ ಮುಂದಿನ ಅಂಗಡಿಯ ಬಾಡಿಗೆಯೇ ಜೀವನೋಪಾಯಕ್ಕೆ ಆಧಾರ.

ಮೂಕಪ್ಪ ಪೂಜಾರ, ಕೃಷಿಕ

ಸಾವಯವ ಕೃಷಿಕ ಬ್ಯಾಡಗಿ ತಾಲೂಕು ಚಿನ್ನಿಕಟ್ಟಿ ಗ್ರಾಮದ ಮೂಕಪ್ಪ ಪೂಜಾರ “ನಾಟಿ ರಾಗಿ’ ಕೃಷಿಕ ಎಂದೇ ಖ್ಯಾತಿ. ಪಾರಂಪರಿಕ ರಾಗಿ ತಳಿ ಸಂರಕ್ಷಣೆ ಹಾಗೂ ಗುಣಿ ಇಲ್ಲವೇ ನಾಟಿ ಪದ್ಧತಿಯಲ್ಲಿ ರಾಗಿ ಕೃಷಿ ಕುರಿತು ರಾಜ್ಯದಲ್ಲಷ್ಟೇ ಅಲ್ಲ ದೇಶದ ವಿವಿಧ ಭಾಗಗಳಲ್ಲಿ ಅರಿವು ಮೂಡಿಸುವ ವಿಶೇಷ ಕೆಲಸ ಮಾಡಿದ್ದಾರೆ. ಎರಡು ದಶಕಗಳಿಂದ ಅತೀ ಹಳೆಯ ರಾಗಿ ತಳಿ ಎನಿಸಿದ “ಉಂಡೆರಾಗಿ’ ತಳಿಯನ್ನು ಸಂರಕ್ಷಿಸಿ, ರೈತರಿಗೆ ಪರಿಚಯಿದ್ದಾರೆ. ಇದರೊಂದಿಗೆ ನಾಟಿ ಪದ್ಧತಿಯ ರಾಗಿ ಕೃಷಿ ಬಗ್ಗೆ 8-10 ಸಾವಿರ ರೈತರಿಗೆ ತಿಳಿಸುವ ಮೂಲಕ ಕಡಿಮೆ ಖರ್ಚಿನಲ್ಲಿ ಅ ಧಿಕ ಇಳುವರಿ ಪಡೆಯುವ ಜ್ಞಾನ ನೀಡಿದ್ದಾರೆ. ಮೂಕಪ್ಪ ಅವರ “ಉಂಡೆರಾಗಿ’ ತಳಿಯ ಬೀಜ ಬಳಸುವ ಮೂಲಕ ನಾಟಿ ಪದ್ಧತಿಯಲ್ಲಿ ಬೆಳೆದರೆ ಒಂದು ಎಕರೆಗೆ ಒಂದು ಕೆಜಿ ಮಾತ್ರ ಬಿತ್ತನೆಬೀಜ ಸಾಕು. ಇಳುವರಿಗೆ ಸರಾಸರಿ 18ರಿಂದ 20ಕೆಜಿ ಬರುತ್ತದೆ.  

ಯಲ್ಲವ್ವ ರೊಡ್ಡಪ್ಪನವರ, ಬಯಲಾಟ 

ಪಾರಿಜಾತದ ತವರೂರು ಬಾಗಲಕೋಟೆ ಜಿಲ್ಲೆಯ ಲೋಕಾಪುರ. ಈ ಭಾಗದಲ್ಲಿ ಇದಕ್ಕೆ ಜೀವ ತುಂಬಿದ್ದು ಯಲ್ಲವ್ವ ರೊಡ್ಡಪ್ಪನವರ. ಅಂದಿನ ಕಾಲದ ಜಾನಪದ ಕಲೆಯ ಪ್ರಧಾನ ಬಯಲಾಟ ಶ್ರೀ ಕೃಷ್ಣ ಪಾರಿಜಾತವನ್ನು ಸಣ್ಣ ಪುಟ್ಟ ಪ್ರದರ್ಶನಗಳೊಂದಿಗೆ ಆರಂಭಿಸಿದ್ದರು. ಶ್ರೀಕೃಷ್ಣ ಪಾರಿಜಾತ ತಂಡ ಕಟ್ಟಿ ನಂತರ ದಿ|  ಕೃಷ್ಣಾಜಿ ದೇಶಪಾಂಡೆಯವರ ಪ್ರವೇಶದೊಂದಿಗೆ ದೇಶಾದ್ಯಂತ ಪ್ರಖ್ಯಾತಿಗೊಳಿಸಿದರು. ಯಲ್ಲವ್ವ ರೊಡ್ಡಪ್ಪನವರ ಶ್ರೀಕೃಷ್ಣ ಪಾರಿಜಾತ ಬಯಲಾಟದಲ್ಲಿ  ಕೃಷ್ಣನಾಗಿ, ಕೊರವಂಜಿಯಾಗಿ, ಗೌಳಗಿತ್ತಿಯಾಗಿ, ನಾರದನಾಗಿ ಹೀಗೆ ಹಲವಾರು ಪಾತ್ರಗಳಿಗೆ ಸೈ ಎನಿಸಿಕೊಂಡಿದ್ದರು. ಅದ್ಭುತ ಅಭಿನಯದಿಂದ ಹೆಸರುವಾಸಿಯಾಗಿ ತಮ್ಮ ಬದುಕನ್ನು ಪಾರಿಜಾತ ಕಲೆಗಾಗಿ ಧಾರೆ ಎರೆದಿದ್ದಾರೆ. 

ಯಮನಪ್ಪ ಪಾಂಡಪ್ಪ, ಶಿಲ್ಪಕಲಾವಿದ

ಇಡೀ ಬದುಕನ್ನೇ ಶಿಲ್ಪಕಲೆಗೆ ಮೀಸಲಿಡುವ ಮೂಲಕ ಕೋಟೆ ನಾಡಿನ ಶಿಲ್ಪವೀರ ಎನಿಸಿಕೊಂಡಿರುವ ಹಿರಿಯ ಜೀವ ಶಿಲ್ಪ ಕಲಾವಿದ ಯಮನಪ್ಪ ಪಾಂಡಪ್ಪ ಚಿತ್ರಗಾರ. ಗಜೇಂದ್ರಗಡದ 94 ವರ್ಷದ ಯಮನಪ್ಪ ಅವರ ಮಕ್ಕಳಾದಿಯಾಗಿ ಇಡೀ ಕುಟುಂಬವೇ ಶಿಲ್ಪಕಲೆಯಲ್ಲಿ ತೊಡಗಿಸಿಕೊಂಡಿದೆ. ಈ ಭಾಗದ ಹಲವಾರು ಕಲಾವಿದರಿಗೆ ಶಿಲ್ಪಕಲೆಯ ವಿದ್ಯೆಯನ್ನು ಧಾರೆ ಎರೆದಿದ್ದಾರೆ. ಅವರ ಕೈಚಳಕದಲ್ಲಿ ಹಲವಾರು ದೇವಾಲಯಗಳ ರಥಗಳು, ಮೂರ್ತಿಗಳು, ವಿಭಿನ್ನವಾದ ಶಿಲ್ಪಗಳನ್ನು ಕೆತ್ತನೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ.  

ಡಾ.ವಿ.ಜಿ.ನಾಡಗೌಡ, ವೈದ್ಯಕೀಯ ಸೇವೆ 

ದುಬಾರಿ ದುನಿಯಾದಲ್ಲಿ ದುಡ್ಡೇ ಮುಖ್ಯ. ಆದರೆ, ಹುಬ್ಬಳ್ಳಿಯ ಹೃದ್ರೋಗ ಹಾಗೂ ಮಧುಮೇಹ ತಜ್ಞ ಡಾ| ವಿಠuಲರಾವ್‌ ಗುರುರಾವ್‌ ನಾಡಗೌಡ ಮಾತ್ರ ಇದಕ್ಕೆ ತದ್ವಿರುದ್ಧ. ವೈದ್ಯಕೀಯ ಕ್ಷೇತ್ರದ ದಿಗ್ಗಜರಾದರೂ ಉಚಿತ ಚಿಕಿತ್ಸೆಗೆ ಹೆಸರುವಾಸಿ. ಹೃದ್ರೋಗ, ಮಧುಮೇಹ, ನೇತ್ರ ಸೇರಿದಂತೆ ಬಡ ರೋಗಿಗಳಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆಯೊಂದಿಗೆ ಔಷಧ ವಿತರಿಸುತ್ತಿರುವುದು ಇವರ ಹೆಗ್ಗಳಿಕೆ. ಜಯಪ್ರಿಯಾ ಮೆಡಿಕಲ್‌ ಫೌಂಡೇಷನ್‌ ಸಹಕಾರದೊಂದಿಗೆ ವಿವಿಧ 18 ಪ್ರಕಾರದ 363 ಉಚಿತ ಆರೋಗ್ಯ ಶಿಬಿರ ಆಯೋಜಿಸಿದ್ದಾರೆ. ರಾಜ್ಯವಷ್ಟೇ ಅಲ್ಲ ಆಂಧ್ರ, ಗೋವಾ ರಾಜ್ಯಗಳಲ್ಲೂ ಶಿಬಿರಗಳನ್ನು ನಡೆಸಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ರೋಗಿಗಳ ತಪಾಸಣೆ ಹಾಗೂ ಚಿಕಿತ್ಸೆ ನೀಡಿದ್ದಾರೆ. 

ಚೂಡಾಮಣಿ ಆರ್‌, ಡೊಳ್ಳು ಕುಣಿತ

ಪ್ರಥಮ ಬಾರಿಗೆ ಮಹಿಳಾ ಡೊಳ್ಳು ತಂಡ ಕಟ್ಟಿ ಕುಣಿದ ಸಾಧಕಿ, ಸಾಗರದ   ಚೂಡಾಮಣಿ ರಾಮಚಂದ್ರ. ಡೊಳ್ಳು ಕುಣಿತದಂತಹ ತ್ರಾಣಾಧಾರಿತ ಕಲೆ ಗಂಡಸರಿಗೇ ಮಾತ್ರ ಎನ್ನುವ ಸಾಮಾನ್ಯ ಅಭಿಪ್ರಾಯವನ್ನು ಹುಸಿ ಮಾಡಿದವರು. ದೇಶಾದ್ಯಂತ ಅನೇಕ ಪ್ರತಿಷ್ಠಿತ ಸಮ್ಮೇಳನಗಳಲ್ಲಿ ತಮ್ಮ ತಂಡದ ಕಲಾವಿದರ ಜತೆ ಡೊಳ್ಳು ಕುಣಿತ ಪ್ರದರ್ಶಿಸಿದ್ದಾರೆ. ನೇಪಾಳ, ಕುವೈಟ್‌, ಥೈಲ್ಯಾಂಡ್‌, ಲಂಡನ್‌, ಸಿಂಗಾಪುರ, ಅಬುದಾಬಿ ಮುಂತಾದ ಕಡೆಗಳಲ್ಲಿನ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರದರ್ಶನ ನೀಡಿದ ಗರಿಮೆ ಇವರದ್ದು. 

ಚೆನ್ನಮಲ್ಲೇಗೌಡರು, ಗೊರವರ ಕುಣಿತ

ಚಾಮರಾಜನಗರದ 79 ವರ್ಷದ ಗೊರವರ ಕುಣಿತ ಕಲಾವಿದ ಚೆನ್ನಮಲ್ಲೇಗೌಡರು ಗೊರವರ ಕುಣಿತ ಕಲೆಯನ್ನು ಪ್ರಸಿದ್ಧಗೊಳಿಸಿದವರು. ಅಲ್ಲದೇ ತಾವು ಕಲಿತ ಕಲೆಯನ್ನು ಮತ್ತಷ್ಟು ಮಂದಿಗೆ ಧಾರೆ ಎರೆದಿದ್ದಾರೆ. ಗೊರವರ ಕುಣಿತವನ್ನು ಮೈಗೂಡಿಸಿಕೊಂಡು ಜಿಲ್ಲೆ, ರಾಜ್ಯ ಹಾಗೂ ದೇಶದ ನಾನಾ ಭಾಗದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿ, ಜಾನಪದವನ್ನು ಜೀವಂತವಾಗಿರಿಸಿರುವ ಸಾಧನೆಗಾಗಿ ಚನ್ನಮಲ್ಲೇಗೌಡರು ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ.  

ಗುರುವ ಕೊರಗ, ಕಡ್ಡಾಯಿ ವಾದ್ಯಗಾರ

ಕೊರಗ ಪರಂಪರೆಯ ವಾದ್ಯ ಕಡ್ಡಾಯಿ (ಡೋಲು) ನುಡಿಸುವುದರ ಮೂಲಕ ಜನಪದ ಸಂಸ್ಕೃತಿಯ ಅನನ್ಯತೆಯನ್ನು ಪರಿಚಯಿಸುತ್ತಿರುವ ಶತಾಯುಷಿ ಗುರುವ ಕೊರಗ ಅವರು ಕಡ್ಡಾಯಿ ಸಂಸ್ಕೃತಿಯ ಬಗ್ಗೆ ಮೊದಲು ರಾಷ್ಟ್ರೀಯ ಗಮನ ಸೆಳೆದದ್ದು 1988ರಲ್ಲಿ ಮಂಗಳೂರು ಆಕಾಶವಾಣಿಯ ಮೂಲಕ. ಗುರುವ ಅವರು ಇಳಿ ವಯಸ್ಸಿನಲ್ಲೂ ಡೋಲು ಬಾರಿಸಲು ಆರಂಭಿಸಿದರೆ ತರುಣರನ್ನು ನಾಚಿಸುತ್ತಾರೆ. ಸುಮಾರು ಐದೂ ಮುಕ್ಕಾಲು ಅಡಿ ಎತ್ತರದ ಆಜಾನುಬಾಹು 15 ಕೆ.ಜಿ. ತೂಕದ ಡೋಲನ್ನು ಹೊತ್ತು ಒಂದೂವರೆ ಗಂಟೆ ಕಾಲ ಲೀಲಾಜಾಲವಾಗಿ ಬಾರಿಸುತ್ತಾರೆ. ಸಾಂಪ್ರದಾಯಿಕ ಡೋಲು ಬಾರಿಸುವಿಕೆಯಲ್ಲಿ ಅಪ್ರತಿಮ ಪ್ರತಿಭೆ. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ ಸಂಸ್ಥೆಗಳು, ಉಡುಪಿ ಆರ್‌ಆರ್‌ಸಿ, ಮಣಿಪಾಲದ ಮಾಹೆ, ಎಂಜಿಎಂ ಕಾಲೇಜು ವತಿಯಿಂದ ಕಳೆದ ಮಾರ್ಚ್‌ನಲ್ಲಿ ಗುರು ಕೊರಗ ಅವರ ಶತಮಾನೋತ್ಸವ ವನ್ನು ಉಡುಪಿಯಲ್ಲಿ ಆಯೋಜಿಸಲಾಗಿತ್ತು.

ಮಳೂರು ಪುಟ್ಟಸ್ವಾಮಿ, ಜಾನಪದ ಗಾಯಕ

ಚನ್ನಪಟ್ಟಣ ತಾಲೂಕಿನ ಮಳೂರು ಪುಟ್ಟಸ್ವಾಮಿ 5 ದಶಕಗಳಿಂದ ಲಾವಣಿ ಗಾಯನವನ್ನು ರಾಜ್ಯದ ವಿವಿಧ ಕಡೆ ಹರಡಿದವರು. 84ನೇ ವಯಸ್ಸಿನಲ್ಲೂ ಇವರ ಉತ್ಸಾಹ ಕುಗ್ಗಿಲ್ಲ. ಲಾವಣಿ ಗಾಯನ ಕಲೆಯನ್ನು ಮುಂದಿನ ಪೀಳಿಗೆಗಳಿಗೂ ಉಳಿಸಿಕೊಡಬೇಕು ಎಂಬುದು ಇವರ ಉದ್ದೇಶ.  ಎಲ್ಲೇ ಪ್ರದರ್ಶನ ಕೊಟ್ಟರೂ ಶೋತೃಗಳ ಮೆಚ್ಚುಗೆ ಪಡೆಯುವಲ್ಲಿ ಪ್ರತಿಬಾರಿಯೂ ಯಶಸ್ವಿಯಾಗಿದ್ದಾರೆ. “ನಿಟ್ಟೂರ್‌ ನಿಂಗಕ್ಕನೇ ಕೇಳುಹೊಟ್ಟೇಲ್‌ ಹುಟ್ಟಿದ್‌ ಮಕ್ಕಳು ಬಿಟುºಟ್‌ ರೊಟ್ಟಿ ತಿಂದೋಳ………” ಎನ್ನುವ ಲಾವಣಿ ಬಹಳ ಜನಪ್ರಿಯ. ಪುಟ್ಟಸ್ವಾಮಿಯವ ಕಂಠದಿಂದ ಈ ಹಾಡು ಕೇಳುತ್ತಿದ್ದಂತೆ ಶಾಲಾ, ಕಾಲೇಜಿನ ವಿದ್ಯಾರ್ಥಿಗಳೇ ಅಲ್ಲದೆ ಹಿರಿಯರು ಸಹ ಉಲ್ಲಾಸ ಭರಿತರಾಗಿ ಪ್ರತಿಕ್ರಿಯಿಸುವುದುಂಟು.  ಹಿಂದೆ ದೂರದೂರುಗಳಿಗೂ ಸೈಕಲ್‌ನಲ್ಲೇ ಸುತ್ತಿದ ಇವರು ಇಂದು ಸ್ಕೂಟರ್‌ನಲ್ಲೇ ಸುತ್ತುವುದುಂಟು. 

ಹಿರಿಯಡ್ಕ ಗೋಪಾಲ ರಾವ್‌, ಮದ್ದಳೆ

ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲರಾಯರು 1919 ಡಿ.15ರಂದು ಜನಿಸಿದವರು. 99ರ ಹರೆಯದ ಗೋಪಾಲ ರಾಯರು ಸ್ವಾತಂತ್ರ್ಯ ಹೋರಾಟಗಾರರೂ ಹೌದು. ತಂದೆ ಶೇಷಗಿರಿ ರಾವ್‌ ಅವರಿಂದ ಮದ್ದಳೆ, ಗುರು ನಾಗಪ್ಪ ಕಾಮತ್‌ ಅವರಿಂದ ನೃತ್ಯ ಕಲಿತರು. 1934ರಲ್ಲಿ ಹಿರಿಯಡಕ ಮೇಳ ದಲ್ಲಿ ಪಾತ್ರಧಾರಿಯಾಗಿ ಪ್ರವೇಶ. 1936ರಲ್ಲಿ ಒತ್ತು ಮದ್ದಳೆಗಾರರಾದರು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಅಧ್ಯಾಪಕರಾಗಿದ್ದರು, ಡಾ| ಶಿವರಾಮ ಕಾರಂತ ಅವರ ಯಕ್ಷ ಪ್ರಯೋಗಗಳಿಗೆ ಸಾಥ್‌ ನೀಡಿದ್ದರು. 1972ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. 1969ರಲ್ಲಿ ಅಮೆರಿಕದ ಜಾನಪದ ತಜ್ಞ ಪೀಟರ್‌ ಕ್ಲಾಸ್‌ ಅವರಿಗೆ ಮದ್ದಳೆ ವಾದನ, ಯಕ್ಷಗಾನ ಕಲಿಸಿ ವಿದೇಶದಲ್ಲೂ ಯಕ್ಷಗಾನದ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಸಂಶೋಧಕಿ ಮಾರ್ಥಾ ಆ್ಯಶrನ್‌ ಅವರ ಯಕ್ಷಗಾನ ಸಂಶೋಧನೆಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ.

ಕಟೀಲು ಸೀತಾರಾಮ ಕುಮಾರ್‌,  ಯಕ್ಷಗಾನ

ಉದ್ಯೋಗ ಅರಸಿ ಮುಂಬ ಯಿಗೆ ಹೋದರೂ ಬಳಿಕ ಯಕ್ಷಗಾನ ಆಸಕ್ತಿ ಬೆಳೆಸಿಕೊಂಡು ತೆಂಕು- ಬಡಗು ತಿಟ್ಟು ಗಳಲ್ಲಿ ಪ್ರಸಿದ್ಧ ಹಾಗೂ ಬೇಡಿಕೆಯ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡವರು ಸೀತಾ ರಾಮ ಕುಮಾರ್‌. ವಿಶಿಷ್ಟ ಬಣ್ಣಗಾರಿಕೆ, ಸಂಭಾಷಣೆ, ವಾದ ಸಂವಾದಗಳಲ್ಲಿ ಅವರದು ಸೃಜನಶೀಲತೆಯ ಶುದ್ಧ ಹಾಸ್ಯ. 1955ರ ಅ.10ರಂದು ಜನಿಸಿದ ಸೀತಾರಾಮ ಅವರು ಬಾಲ್ಯದಲ್ಲಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಏಕಲವ್ಯನಂತೆ ಗುರುವಿಲ್ಲದೆ ಕಲಿತರು. ಉದ್ಯೋಗ ಅರಸಿ ಮುಂಬಯಿಗೆ ಹೋದವರು ಸಂಘ ಸಂಸ್ಥೆಗಳ ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ಮಾಡತೊಡಗಿದರು. ಅನಂತರ ಕದ್ರಿ ಮೇಳಕ್ಕೆ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರ ಮೂಲಕ ಪುಂಡುವೇಷಧಾರಿಯಾಗಿ ಸೇರಿದರು. ಕ್ರಮೇಣ ವಾಸುದೇವ ಸಾಮಗರಿಂದಾಗಿ ಹಾಸ್ಯಗಾರರಾದರು. 

ಕೆನ್ನತ್‌ ಪೊವೆಲ್‌, ಮಾಜಿ ಅಥ್ಲೀಟ್‌

ಕೆನ್ನತ್‌ ಪೊವೆಲ್‌ ರಾಜ್ಯದಿಂದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಮೊದಲ ಟ್ರ್ಯಾಕ್‌ ಅಂಡ್‌ ಫೀಲ್ಡ್‌ ಅಥ್ಲೀಟ್‌. 17 ಬಾರಿಯ ರಾಷ್ಟ್ರೀಯ ಚಾಂಪಿಯನ್‌. ಪೂರ್ಣ ಹೆಸರು ಕೆನ್ನತ್‌ ಲಾರೆನ್ಸ್‌ ಪೊವೆಲ್‌. 1940ರಲ್ಲಿ ಕೋಲಾರದಲ್ಲಿ ಜನನ.  “ಜಂಟಲ್‌ಮಾÂನ್‌ ಓಟಗಾರ’ ಎಂದೇ ಖ್ಯಾತಿ. 100 ಮೀ. ಹಾಗೂ 200 ಮೀ. ಫೇವರಿಟ್‌ ಸ್ಪರ್ಧೆ. 1964ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ ನಲ್ಲಿ ಭಾಗವಹಿಸಿದ್ದರು. ಮರು ವರ್ಷವೇ 1965ರಲ್ಲಿ ಕೇಂದ್ರ ಸರ್ಕಾರದಿಂದ ಕೊಡಮಾಡುವ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.
ಒಲಿಂಪಿಕ್ಸ್‌ಗೂ ಮೊದಲು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಅಭ್ಯಾಸ ಅಥ್ಲೆಟಿಕ್ಸ್‌ ಕೂಟವೊಂದರಲ್ಲಿ ಪೊವೆಲ್‌ 100 ಮೀ. ಓಟವನ್ನು 10.6 ಸೆಕೆಂಡ್ಸ್‌ನಲ್ಲಿ ಪೂರೈಸಿದ್ದರು.  ಇದಾದ ಬಳಿಕ ಪಟಿಯಾಲದಲ್ಲಿ ನಡೆದಿದ್ದ ಓಟದಲ್ಲಿ 10.7 ಸೆಕೆಂಡ್ಸ್‌ನಲ್ಲಿ 100 ಮೀ. ಪೂರೈಸಿದ್ದರು. ಮಾತ್ರವಲ್ಲ 200 ಮೀ. ಓಟದಲ್ಲೂ ಗಮನಾರ್ಹ ಸಾಧನೆ ಮಾಡಿದ್ದರು. ಅಂತಾರಾಷ್ಟ್ರೀಯ ಕೂಟವೊಂದರಲ್ಲಿ ಇವರನ್ನೊಳಗೊಂಡಿದ್ದ  4/100 ಮೀ. ರಿಲೇ ತಂಡ 40.5 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ಏಷ್ಯನ್‌ ದಾಖಲೆ ಸ್ಥಾಪಿಸಿತ್ತು. ಜಪಾನ್‌, ಮಲೇಷ್ಯಾದ ಪ್ರಬಲ ಅಥ್ಲೀಟ್‌ಗಳನ್ನು ಸೋಲಿಸಿದ್ದು ಪೊವೆಲ್‌ ಜೀವನದ ಅವಿಸ್ಮರಣೀಯ ಸಾಧನೆಯಾಗಿದೆ. 

ಪೊವೆಲ್‌ರನ್ನು ಮೆಚ್ಚಿದ ಮಿಲಾ: ಪೊವೆಲ್‌ ಒಬ್ಬ ಪ್ರತಿಭಾವಂತ ಕ್ರೀಡಾಪಟು. ಟ್ರ್ಯಾಕ್‌ನಲ್ಲಿ ಮಿಂಚಿನ ಓಟಗಾರ. ವೇಗದ ಓಟದಲ್ಲಿ ಹಲವಾರು ದಾಖಲೆಗಳ ಸರದಾರ. ಅಂತಹ ಓಟಗಾರನನ್ನು ನೋಡಿ ಸ್ವತಃ ಭಾರತ ಟ್ರ್ಯಾಕ್‌ ಅಂಡ್‌ ಫೀಲ್ಡ್‌ನ ದಂತಕಥೆ ಮಿಲಾ ಸಿಂಗ್‌ ಅವರೇ ಮೆಚ್ಚಿಕೊಂಡಿದ್ದರು. ಕೆನ್ನತ್‌ ಪೊವೆಲ್‌ ಸಾಧನೆ ಕುರಿತಾಗಿ ಶ್ಲಾಘನೆ ವ್ಯಕ್ತಪಡಿಸಿದ್ದರು. ಯಾರಿವನು ದಿಗ್ಗಜ ಓಟಗಾರ. ತುಂಬಾ ಚೆನ್ನಾಗಿ ಓಡುತ್ತಾನೆ. ಈತನಿಗೆ ಉತ್ತಮ ಭವಿಷ್ಯವಿದೆ ಎಂದಿದ್ದರಂತೆ.

ಕಲ್ಮನೆ ಕಾಮೇಗೌಡರು, ಪರಿಸರ ರಕ್ಷಕ

ಕೆರೆಗಳ ನಿರ್ಮಾಣದೊಂದಿಗೆ ಅಂತರ್ಜಲ ವೃದ್ಧಿಗೆ ಕಾಯಕಲ್ಪ ನೀಡಿ ಆಧುನಿಕ ಭಗೀರಥ ಎನಿಸಿಕೊಂಡಿರುವವರು ಮಳವಳ್ಳಿ ತಾಲೂಕಿನ ಕಲ್ಮನೆ ಕಾಮೇಗೌಡರು. ಮಳವಳ್ಳಿ ತಾಲೂಕಿನ ಕುಂದೂರು ಬೆಟ್ಟದ ಸುತ್ತ ದೇಶಕ್ಕೆ ಮಾದರಿಯಾಗುವಂತಹ 14 ಚೆಕ್‌ ಡ್ಯಾಂಗಳನ್ನು ನಿರ್ಮಾಣ ಮಾಡಿದ್ದಾರೆ. ಕೆಆರ್‌ಎಸ್‌ ಜಲಾಶಯದಲ್ಲಿ ನೀರಿಲ್ಲದಿದ್ದರೂ ಇವರ ಕೆರೆಗಳಲ್ಲಿ ನೀರು ಸದಾಕಾಲ ಇರುತ್ತದೆ. ಕೆರೆಗಳಲ್ಲಿ ಕಲ್ಲುಗಳನ್ನು ಜೋಡಿಸಿರುವ ವಿಧಾನವೂ ಅಚ್ಚರಿ ಮೂಡಿಸುವಂತಿದೆ. ಕೆರೆಯಲ್ಲಿ ನೀರು ಕುಡಿಯಲು ಹೋದವರು ಜಾರಿ ಬೀಳದಂತೆ ಹಾಗೂ ದನ-ಕರುಗಳು ನೀರು ಕುಡಿಯುವುದಕ್ಕೆ ಸರಾಗವಾಗಿ ನಡೆದುಹೋಗುವಂತೆ ಕಲ್ಲುಗಳನ್ನು ಜೋಡಿಸಿದ್ದಾರೆ. ಜಾನುವಾರುಗಳು ನೀರು ಕುಡಿಯುವ ವೇಳೆ ಮೈಯ್ಯನ್ನು ಕಲ್ಲಿಗೆ ಉಜ್ಜುವಾಗಲೂ ಅವುಗಳಿಗೆ ನೋವಾಗದ ರೀತಿ ಕಲ್ಲುಗಳನ್ನು ಜೋಡಿಸಿದ್ದಾರೆ. ಕುಂದೂರು ಬೆಟ್ಟದ ಸುತ್ತ ಬಿಲ್ವಪತ್ರೆ, ಬೇವು, ಆಲದ ಮರ ಸೇರಿದಂತೆ ಗಿಡ-ಮರಗಳನ್ನು ಬೆಳೆಸಿ ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸಿದ್ದಾರೆ. ಹಣ್ಣಿನ ಗಿಡಗಳನ್ನು ಬೆಳೆಸಿ ಪ್ರಾಣಿ-ಪಕ್ಷಿಗಳಿಗೆ ಆಹಾರ ಒದಗಿಸುವಂತೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

ಗಂಗಹುಚ್ಚಮ್ಮ, ಜಾನಪದ ಸಂಗೀತ

ಕುಣಿಗಲ್‌ ತಾಲೂಕಿನ ಜಲದಗೆರೆ ಗ್ರಾಮದ ಗಂಗ ಹುಚ್ಚಮ್ಮ ಅವರು ಜಾನಪದ ಸಂಗೀತ ಪ್ರಕಾರದಲ್ಲಿ ಪ್ರಮುಖವಾಗಿ ಸೋಬಾನೆ ಪದಗಳನ್ನು ಹಾಡುತ್ತಾ ಸಾಧನೆ ಮಾಡಿದವರು. ಜಿಲ್ಲೆಯ ಹಲವಾರು ಕಡೆಗಳಲ್ಲಿ ಸೋಬಾನೆ ಪದಗಳನ್ನು ಹಾಡುವ ಮೂಲಕ ಸೊಬಾನೆ ಗಂಗಹುಚ್ಚಮ್ಮ ಎಂದೇ ಹೆಸರು ಪಡೆದಿದ್ದಾರೆ. 70 ವರ್ಷದ ಗಂಗಹುಚ್ಚಮ್ಮ ಅವರು ಈ ಇಳಿವಯಸ್ಸಿನಲ್ಲೂ ತಮ್ಮ ಹಾಡುಗಾರಿಕೆ ಬಿಟ್ಟಿಲ್ಲ. ಈಗಲೂ ತಮ್ಮ ಕಲಾ ತಂಡದೊಂದಿಗೆ ಸೋಬಾನೆ ಪದ ಹಾಡಿ ಜಾನಪದ ಹಾಡಿನ ಮೂಲಕ ಗ್ರಾಮೀಣ ಸೊಗಡನ್ನು ಉಣಬಡಿಸುತ್ತಾರೆ. 

ಟಾಪ್ ನ್ಯೂಸ್

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

PUNJAB

Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-tallur

ತಲ್ಲೂರು: ಪಿಕಪ್‌- ಕಾರು ಢಿಕ್ಕಿ

1-gooli

Gangolli:ಅರ್ಧ ಗಂಟೆಗೂ ಹೆಚ್ಚು ಭೀತಿ ಮೂಡಿಸಿದ ಗೂಳಿ ಕಾಳಗ

accident

Sringeri; ಪ್ರವಾಸಿ ವಾಹನಗಳ ಢಿಕ್ಕಿ: ವೃದ್ಧೆ ಸಾ*ವು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

1-kambala

Mangaluru Kambala; ಬಂಗ್ರಕೂಳೂರಿನಲ್ಲಿ ಚಾಲನೆ, ನಾಳೆ ಸಮಾರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.