ಮಾಧ್ಯಮ ವೈಖರಿ ಅನುಕರಿಸಬಾರದೇ ಸರ್ಕಾರ?
Team Udayavani, Sep 9, 2018, 12:30 AM IST
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇವುಗಳು ಪ್ರಜಾಪ್ರಭುತ್ವದ 3 ಆಧಾರ ಸ್ತಂಭಗಳಾದರೆ 4ನೇಯದು ಮಾಧ್ಯಮ. ಎಂದಿಗೂ ಆಡಳಿತ ಪಕ್ಷದೊಂದಿಗೆ ರಾಜಿಯಾಗದೆ, ವಿಪಕ್ಷಗಳ ಜತೆ ಗುರತಿಸಿಕೊಳ್ಳದೆ ತನ್ನದೇ ರೀತಿಯಲ್ಲಿ ಸರಕಾರದ ಕಾರ್ಯ ವೈಖರಿಯನ್ನು ಗಮನಿಸುವ ಒಂದು ಅವಕಾಶ ಮಾಧ್ಯಮಕ್ಕೆ ಸಂವಿಧಾನಾತ್ಮಕವಾಗಿ ದೊರಕಿದೆ. ಹೀಗಾಗಿಯೇ ಮಾಧ್ಯಮವನ್ನು ಪ್ರಜಾ ತಂತ್ರದ ಕಾವಲು ನಾಯಿ ಎಂದು ಕರೆಯುವುದು.
ಒಂದು ಮಾಧ್ಯಮದ ಕಾರ್ಯವೈಖರಿಯನ್ನು ಸರಕಾರದ ಕಾರ್ಯವೈಖರಿಗೆ ತುಲನೆ ಮಾಡಿದಾಗ ಯಾವುದು ಹೆಚ್ಚು ಚುರುಕಾಗಿರುತ್ತದೆ ಎಂದರೆ ಮಾಧ್ಯಮವೇ. ಮಾಧ್ಯಮ ಹೊಂದಿರುವ ಸಂಪರ್ಕ ಜಾಲ (ನೆಟ್ರ್ಕ್) ಇದಕ್ಕೆ ಕಾರಣ. ಕ್ಷಣಕ್ಷಣದ ಘಟನೆಗಳ ಮಾಹಿತಿ, ಹಂಚಿಕೆ, ಚರ್ಚೆಗಳು ಇವೆಲ್ಲವೂ ಏಕಕಾಲದಲ್ಲಿ ಸಾಧ್ಯವಾಗುವುದಾದರೆ ಅದಕ್ಕೆ ಕಾರಣ ಮಾಧ್ಯಮ ಹೊಂದಿರುವ ನೆಟÌರ್ಕ್. ಮಾಹಿತಿಗಳು ಮಾಧ್ಯಮ ಸಂಸ್ಥೆಗಳನ್ನು ತಲುಪುವ ವೇಗ, ಅನಂತರ ನಡೆಯುವ ವಿಶ್ಲೇಷಣೆಯಂತಹ ಪ್ರಕ್ರಿಯೆಗಳು ಕಲ್ಪನೆಗೂ ನಿಲುಕದಷ್ಟು ತ್ವರಿತವಾಗಿರುತ್ತವೆ.
ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಶಾಡೋ ಗವರ್ನ್ ಮೆಂಟ್ ಕಾರ್ಯನಿರ್ವಹಿಸಿದರೆ ಭಾರತದಲ್ಲಿ ಆ ಪ್ರಯೋಗ ಹಲವು ಕಾರಣಗಳಿಗೆ ಯಶಸ್ವಿಯಾಗದೆ ಉಳಿದಿದೆ. ಇಲ್ಲಿ ಪ್ರತಿಪಕ್ಷಗಳು ತಕ್ಕ ಮಟ್ಟಿಗೆ ಚುರುಕಾಗಿವೆ ಅಷ್ಟೇ. ಪ್ರತಿಪಕ್ಷ ಎಷ್ಟು ಚುರುಕಾಗಿ ಕರ್ತವ್ಯ ನಿರ್ವಹಿಸುತ್ತದೆ ಎಂಬುದರ ಮೇಲೆ ಆ ಸರಕಾರದ ಕಾರ್ಯವೈಖರಿ ನಿರ್ಧರಿಸಲ್ಪಡುತ್ತದೆ. ವಿಪಕ್ಷವೆ ಆಲಸ್ಯದ ಧೋರಣೆ ಅನುಸರಿಸಿದರೆ ಸರಕಾರ ನಿದ್ದೆ ಮಾಡುತ್ತದೆ. ಸರಕಾರ ವಿಫಲವಾಗಿದೆ ಎಂದು ನಾವು ಆರೋಪಿಸಿದರೆ ವಿಪಕ್ಷಗಳು ತಮ್ಮ ಕೆಲಸ ನಿರ್ವಹಿಸಲು ವಿಫಲವಾಗಿವೆ ಎಂದರ್ಥ. ಹಾಗಾದರೆ ಸರಕಾರ ಚುರುಕಾಗಿ ಕೆಲಸ ಮಾಡುವ ಸಲುವಾಗಿ ಇದೇ ಮಾದರಿಯನ್ನು ಏಕೆ ಅನುಕರಿಸಬಾರದು? ಮಾಧ್ಯಮದ ಕಾರ್ಯ ಚಟುವಟಿಕೆ ವ್ಯಾಪ್ತಿಯನ್ನು ಸರಕಾರ ಅನುಕರಿಸಬಹುದೆ ಎಂಬುದನ್ನು ಮನವರಿಕೆ ಮಾಡುವ ಪ್ರಯತ್ನ ಇಲ್ಲಿದೆ.
ಮುದ್ರಣ ಮಾಧ್ಯಮ, ಇಲೆಕ್ಟ್ರಾನಿಕ್ ಮಾಧ್ಯಮ ಅಥವಾ ಆನ್‌ಲೈನ್ ಮೀಡಿಯಾ ತನ್ನ ಸ್ಟಾಫ್ ಜತೆ ಸದಾ ಸಂಪರ್ಕದಲ್ಲಿರುತ್ತದೆ. ಎಡಿಟರ್, ಅಸಿಸ್ಟೆಂಟ್ ಎಡಿಟರ್, ಅಸೋಸಿಯೇಟ್ ಎಡಿಟರ್, ನ್ಯೂಸ್ ಎಡಿಟರ್, ಚೀಫ್ ಸಬ್ ಎಡಿಟರ್, ಸೀನಿಯರ್ ಸಬ್‌ಎಡಿಟರ್ ಹಾಗೂ ಸಬ್‌ಎಡಿಟರ್ ಕಚೇರಿಯಲ್ಲಿದ್ದು ಕೆಲಸ ನಿರ್ವಹಿಸುವವರಾದರೆ, ಇನ್ನು ಪ್ರತಿ ಜಿಲ್ಲೆಗೆ ಬ್ಯೂರೊ ಚೀಫ್ಗಳು ಇರುತ್ತಾರೆ. ಚೀಫ್ ರೀಪೋರ್ಟರ್, ರಿಪೋರ್ಟರ್ಗಳು ಹಾಗೂ ಸ್ಟ್ರಿಂಜರ್ ಹೀಗೆ ಪತ್ರಿಕೆಯ ತಂಡದಲ್ಲಿರುತ್ತಾರೆ. ಇವರ ನಡುವೆ ಸದಾ ಸಂಪರ್ಕ ಇರುತ್ತದೆ. ಈ ಕಾರಣದಿಂದ ಯಾವುದೇ ವಿಷಯ ಕ್ಷಿಪ್ರವಾಗಿ ಹರಿದಾಡಿ ಮಾಹಿತಿ ಪರಸ್ಪರ ಹಂಚಿಕೆಯಾಗುತ್ತದೆ. ಇಂತಹದ್ದೇ ವ್ಯವಸ್ಥೆ ಸರಕಾರಗಳಲ್ಲಿಯೂ ಇದೆ. ಆದರೆ ಅದು ಸರಿಯಾಗಿ ಬಳಕೆಯಾಗುತ್ತಿಲ್ಲ ಎಂಬುದು ವಿಪರ್ಯಾಸ.
ಸರಕಾರಕ್ಕೆ ತನ್ನದೇ ಆದ ಅಧಿಕಾರಿ ವರ್ಗವಿದೆ. ಇವುಗಳಿಗೆ ಪೂರಕ ಎಂಬಂತೆ ರಾಜ್ಯ ಸರಕಾರದ ಕುರಿತು ಹೇಳುವುದಾದರೆ, ವಿಧಾನಸಭಾ ಹಾಗೂ ವಿಧಾನ ಪರಿಷತ್‌ನ ಸದಸ್ಯರು ಇದರ ಬಹುದೊಡ್ಡ ಸಂಪನ್ಮೂಲ. ಪ್ರತಿ ವಿಧಾನಸಭಾ ಕ್ಷೇತ್ರಗಳನ್ನು ಸಂಪರ್ಕಿಸುವ ಕೆಲಸ ಇದರಿಂದ ಸಾಧ್ಯವಾಗುತ್ತದೆ. ಇನ್ನು “ತ್ರಿ-ಟಯರ್ ಸಿಸ್ಟಮ್’ ಎಂದೇ ಕರೆಯಲ್ಪಡುವ ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಪದ್ಧತಿ ಆಡಳಿತ ಜಾರಿಯಲ್ಲಿದ್ದರೆ, ನಗರ ಪ್ರದೇಶಗಳಲ್ಲಿ ಪಟ್ಟಣ ಪಂಚಾಯತ್, ನಗರ ಪಂಚಾಯತ್, ನಗರ ಸಭೆ, ಮಹಾನಗರ ಪಾಲಿಕೆಗಳಿವೆ. ರಾಜ್ಯದ ಅಥವಾ ದೇಶದಲ್ಲಿ ಪ್ರತಿ ಪ್ರದೇಶವನ್ನೂ ಸಂಪರ್ಕಿಸಲು ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಕೆಲಸ ಕಾರ್ಯಗಳು ಚುರುಕಾಗಿ ಸಾಗುತ್ತಿಲ್ಲ.
ಹಾಗಾದರೆ ಲೋಪದ ಬೇರುಗಳನ್ನು ಹುಡುಕುತ್ತಾ ಸಾಗಿದಂತೆ ಒಂದಷ್ಟು ಸ್ತಬ್ಧªತೆಗಳು ಕಂಡು ಬರುತ್ತದೆ. ಚೈನ್ ಮಾದರಿಯಲ್ಲಿ ಕೆಲಸಗಳನ್ನು ನಿರ್ವಹಿಸಬೇಕಾದರೆ ಒಂದು ಕೊಂಡಿ ಕಳಚಿದರೆ ಅಥವಾ ಚಲನೆ ಇಲ್ಲದೇ ಹೋದರೆ ಉಳಿದ ಯಾವುದೇ ವ್ಯವಸ್ಥೆಗಳಿಂದ ನಾವು ಫಲಿತಾಂಶ ನಿರೀಕ್ಷಿಸುವುದು ಸಾಧ್ಯವಿಲ್ಲ. ನಮ್ಮಲ್ಲಿ ಇಂದು ಸಚಿವರಿಂದ ಹಿಡಿದು ಡಿ ದರ್ಜೆ ಸಿಬಂದಿ ತನಕ ಆಯಾ ಸಂಬಂಧಪಟ್ಟ ಇಲಾಖೆಗಳಿಗೆ ಕೆಲಸ ಮಾಡುವ, ನಿರ್ವಹಿಸುವ ಅಧಿಕಾರಿ ವರ್ಗವಿದೆ. ಕೆಲಸಗಳು ಸುಲಭಗೊಳ್ಳಲು, ಹೆಚ್ಚವರಿ ಹೊರೆ ಆಗದಂತೆ ನೋಡಿಕೊಳ್ಳಲು ಹೊಸ ನೇಮಕಾತಿ ನಡೆಯುತ್ತಿರುತ್ತದೆ. ಆದರೆ ಇಲಾಖೆಗಳಲ್ಲಿ ಮಾತ್ರ ಆ ಮಟ್ಟದ ಚುರುಕುತನ ಮೂಡುತ್ತಿಲ್ಲ. ಇಂತಹ ಸಾಕಷ್ಟು ಸಮಸ್ಯೆಗಳು ನಮ್ಮ ಹಲವು ಕಚೇರಿಗಳು ಎದುರಿಸುತ್ತಿವೆ. ಈ ಕಾರಣದಿಂದಾಗಿ ತತ್‌ಕ್ಷಣಕ್ಕೆ ಸ್ಪಂದಿಸಲು ಮಾಹಿತಿ ಕೊರತೆ ಉದ್ಭವವಾಗುತ್ತಿದೆೆ. ಇವುಗಳು ಕಾರ್ಯಾಂಗದ ತೊಡಕಾದರೆ ಇನ್ನು ಶಾಸಕಾಂಗ ವ್ಯವಸ್ಥೆಗಳೂ ಇದಕ್ಕಿಂತ ಏನೂ ಭಿನ್ನವಾಗಿಲ್ಲ.
ಮುಖ್ಯಮಂತ್ರಿಯಿಂದ ಹಿಡಿದು ಗ್ರಾಮ ಪಂಚಾಯತ್ ಸದಸ್ಯರ ತನಕ ಇರುವ ಪ್ರತಿಯೊಬ್ಬರೂ ಈ ರಾಜ್ಯದ ಜನರ ಪ್ರತಿನಿಧಿಗಳು. ಸರಕಾರವು ರೂಪಿಸುವ ಯೋಜನೆಗಳನ್ನು ಜಾರಿಗೆ ತರುವುದು ವ್ಯವಸ್ಥೆಯ ಒಟ್ಟು ಆಶಯವಾಗಿದೆ. ರಾಜ್ಯ ಸರಕಾರಗಳಿಗೆ ನೇರವಾಗಿ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣದಿಂದ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಶಕ್ತಿಯುತವಾಗಿಸಲು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ 3 ವಿಭಾಗಗಳು ಸರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೋ/ವ್ಯವಸ್ಥೆಯಲ್ಲಿನ ತೊಡಕೊ ಅರಿವಾ ಗುತ್ತಿಲ್ಲ. ಈ ವೈಫಲ್ಯಕ್ಕೆ ರಾಜಕೀಯ ಸಂಘರ್ಷ, ಆರ್ಥಿಕ ಸಂಪನ್ಮೂಲ-ಇಚ್ಛಾಶಕ್ತಿಯ ಕೊರತೆ, ಸಮನ್ವ ಯದ ಅಭಾವ ಕಾರಣವಾಗಿದೆಯೇ ತಿಳಿಯುತ್ತಿಲ್ಲಾ.
ಸರಕಾರ ಜಾರಿಗೆ ತರುವ ಯೋಜನೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ ಹಿರಿದಾಗಿದೆ. ಆದರೆ ಅಧಿಕಾರಿಗಳ ಕರ್ತವ್ಯಲೋಪಗಳು ಇಡೀ ಸರಕಾರಕ್ಕೆ ಕೆಟ್ಟ ಹೆಸರನ್ನು ತರುವ ಸಾಧ್ಯತೆ ಇಂತಹ “ಪಿರಾಮಿಡ್ ಮಾದರಿ’ಯ ವ್ಯವಸ್ಥೆಯಲ್ಲಿದೆ. ಸರಕಾರಿ ಸೂಚನೆಗಳು ತನ್ನ ಇಲಾಖೆಗಳ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಲುಪದೇ ಅಥವಾ ಅನುಷ್ಠಾನದಲ್ಲಿನ ನಿರಾಸಕ್ತಿಯ ಕಾರಣಗಳಿಂದ ಜಾರಿಯಾಗುತ್ತಿಲ್ಲ. ಈ ವ್ಯವಸ್ಥೆಯ ಒಂದು ವಿಭಾಗ ಸ್ತಬ್ಧಗೊಂಡರೆ ಉಳಿದ ಎಲ್ಲ ಮಾದರಿಗಳು ನಿಷ್ಕ್ರಿಯವಾಗಿಬಿಡುತ್ತವೆ. ಮುಖ್ಯಮಂತ್ರಿಗಳ ಜನತಾ ದರ್ಶನ ಮಾದರಿಯನ್ನು ಎಲ್ಲಾ ಜಿಲ್ಲಾಧಿಕಾರಿಗಳು ಅನುಸರಿಸಬೇಕು ಎಂಬ ಸುತ್ತೋಲೆ ಇದ್ದರೂ ಅವುಗಳು ಬಹಳ ಕಡೆಗಳಲ್ಲಿ ಇನ್ನೂ ಅನುಷ್ಠಾನವಾದಂತಿಲ್ಲ.
ಕನಿಷ್ಠ ತಿಂಗಳಿಗೊಮ್ಮೆಯಾದರೂ ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಚಿವರ ಸಮಕ್ಷಮದಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳ ಶಾಸಕರು, ಲೋಕಸಭಾ ಸದಸ್ಯರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾ ಯತ್ ಹಾಗೂ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಪಟ್ಟಣ ಪಂಚಾಯತ್, ನಗರ ಪಂಚಾಯತ್, ಪುರಸಭೆ ಹಾಗೂ ನಗರ ಪಾಲಿಕೆಗಳ ಅಧ್ಯಕ್ಷರು, ಜತೆಗೆ ಜಿಲ್ಲಾಧಿಕಾರಿಗಳು, ತಹಶಿಲ್ದಾರ್‌ಗಳು, ಸಿಇಒಗಳು, ವಿವಿಧ ಸ್ಥಾಯಿ ಸಮಿತಿ ಹಾಗೂ ಪಂಚಾಯತ್ ಪಿಡಿಒಗಳ ಮಧ್ಯೆ ಸಭೆಗಳು ನಡೆಯಬೇಕು. ಪ್ರತಿ ಮಾಸಿಕ ಸಭೆಗಳಲ್ಲಿ ಸರಕಾರಗಳ ವಿವಿಧ ಯೋಜನೆಗಳು ಹಾಗೂ ಇದರ ಪ್ರಗತಿಗಳ ಪರಿಶೀಲನೆ ನಡೆಯಬೇಕಾಗಿದೆ. ಜಿಲ್ಲಾ ಮಟ್ಟದಲ್ಲಿನ ಸಮಸ್ಯೆಗಳು ಏನೇನಿದೆ ಎಂಬುದನ್ನು ಆಯಾ ಇಲಾಖೆಗಳು ಸಭೆಯ ಗಮನಕ್ಕೆ ತಂದು ತ್ವರಿತ ಪರಿಶೀಲನೆಗೆ ಒಳಪಡಿಸಬೇಕು. ಬಾಕಿಯಿರುವ ನೇಮಕಾತಿಗಳನ್ನು ಸಭೆಯ ಗಮನಕ್ಕೆ ತಂದು ತತ್‌ಕ್ಷಣದಿಂದ ನೇಮಕಾತಿ ಆಗುವಂತೆ ನೋಡಿಕೊಳ್ಳಬೇಕು.
ಈ ಸಭೆಯಲ್ಲಿ ತಾಲೂಕು ಪಂಚಾಯತ್ ಸಭೆಗಳು ಹಾಗೂ ವಿವಿಧ ಗ್ರಾಮ ಸಭೆಗಳು ಕೈಗೊಂಡ ನಿರ್ಣಯಗಳು ಹಾಗೂ ಬೇಡಿಕೆಗಳನ್ನು ಸಭೆಯಲ್ಲಿ ಮಂಡಿಸಿ ಆಡಳಿತ ವ್ಯವಸ್ಥೆಯನ್ನು ಚುರುಕು ಗೊಳಿಸಬಹುದಾಗಿದೆ. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಭಾಗವಹಿಸುವುದರಿಂದ ಸಮಸ್ಯೆಗಳನ್ನು ಶೀಘ್ರವಾಗಿ ತಾರ್ಕಿಕ ಅಂತ್ಯಕ್ಕೆ ಕೊಂಡೊ ಯ್ಯಲು ಇದು ಸಹಕಾರಿಯಾಗಬಲ್ಲುದು. ಇಂತಹ ಸಭೆಗಳು ರಾಜ್ಯದ ನಾನಾ ಜಿಲ್ಲೆಗಳಲ್ಲಿ ನಡೆದು ಆ ವರದಿಯನ್ನು ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರು ಸಿಎಂ/ಕ್ಯಾಬಿನೆಟ್ ಗಮನಕ್ಕೆ ತರಬೇಕು. ಇದರಿಂದ ಮುಂದಿನ ಸಭೆಯಲ್ಲಿ ಈ ಹಿಂದಿನ ಸಭೆಯಲ್ಲಿ ಕೈಗೊಂಡ ಯೋಜನೆಯ ಸ್ಥಿತಿಗತಿ ಅವಲೋಕಿಸಬಹುದು.
ಎಲ್ಲರನ್ನು ಒಳಗೊಂಡ ಇಂತಹ ಸಭೆಗಳು ನಡೆಯುವುದರಿಂದ ನಮ್ಮಲ್ಲಿರುವ ಕಮ್ಯೂನಿಕೇಶನ್ ಗ್ಯಾಪ್ ಅಥವಾ ಸಮನ್ವಯದ ಕೊರತೆಯನ್ನು ನೀಗಿಸಬಹುದಾಗಿದೆ. ಪ್ರಾಕೃತಿಕ ವಿಕೋಪಗಳು ಅಥವಾ ಏನಾದರೂ ವಿಪತ್ತುಗಳು ಸಂಭವಿಸಿದ್ದೇ ಆದಲ್ಲಿ ಅಂತಹ ಸಂದರ್ಭದಲ್ಲಿ ವ್ಯವಸ್ಥೆ ಚುರುಕಾಗಲು ಇದು ಪೂರಕವಾಗಲಿದೆ.
ಕಾರ್ತಿಕ್ ಅಮೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.