ರಾಜ್ಯಪಾಲ- ಒಂದು ವೈಶಿಷ್ಟ್ಯ ಪೂರ್ಣ ಹುದ್ದೆ


Team Udayavani, Nov 18, 2022, 6:00 AM IST

ರಾಜ್ಯಪಾಲ- ಒಂದು ವೈಶಿಷ್ಟ್ಯ ಪೂರ್ಣ ಹುದ್ದೆ

ನಮ್ಮ ಸಮಗ್ರ ಸಂವಿಧಾನದಲ್ಲಿ ಅತ್ಯಂತ ವಿಶಿಷ್ಟ ಸ್ತರದಲ್ಲಿ ನಿರ್ಮಿತಗೊಂಡ ಹುದ್ದೆ ರಾಜ್ಯಪಾಲರದು ಎಂದು ಗುರುತಿಸಬಹುದಾಗಿದೆ. ಸಂವಿಧಾನ ರಚನಾ ಸಭೆಯಲ್ಲಿ ಈ ಸ್ಥಾನದ ವಿಷಯ ಚರ್ಚೆಗೆ ಬಂದಾಗ, ಜನತಂತ್ರ ತಣ್ತೀದ ಆಧಾರಿತವಾಗಿ ಆಯಾಯ ರಾಜ್ಯಗಳಿಂದಲೇ ರಾಜ್ಯಪಾಲರು ಚುನಾ

ಯಿತಗೊಳ್ಳಬೇಕು ಎನ್ನುವ ವಿಚಾರ ಅಂಗೀಕೃತ ಗೊಳ್ಳಲಿಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಾದರೆ ಅಲ್ಲಿನ ಎಲ್ಲ 50 ರಾಜ್ಯಗಳಿಗೂ ಆಯಾಯ ರಾಜ್ಯದ ಮತದಾರರೇ ರಾಜ್ಯಪಾಲರನ್ನು ಆರಿಸು ತ್ತಾರೆ. ಆದರೆ ಆ ವಿಚಾರಧಾರೆಗೆ ನಮ್ಮಲ್ಲಿ ಎರಡು ಪ್ರಮುಖ ಕಾರಣಗಳಿಂದಾಗಿ ಪುಷ್ಠಿ ದೊರಕಲಿಲ್ಲ. ಅವೆಂದರೆ ಒಂದನೆಯದಾಗಿ ನಮ್ಮಲ್ಲಿ ಸಚಿವ ಸಂಪುಟ ಪದ್ಧತಿಯ ಅನ್ವಯ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟವಿದೆ. ಆದರೆ ಅಮೆರಿಕದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಇಲ್ಲ. ಹಾಗಾಗಿ ಒಂದೊಮ್ಮೆ ರಾಜ್ಯಪಾಲರ ಹುದ್ದೆಗೂ ಜನಮತಗಣನೆ ನಡೆದು ಅವರು ಚುನಾಯಿತಗೊಂಡ ಪಕ್ಷ ಒಂದಾದರೆ ವಿಧಾನಸಭೆಯಲ್ಲಿ ಬಹುಮತ ಹೊಂದಿದ ಆಡಳಿತ ಪಕ್ಷ ಇನ್ನೊಂದಾದರೆ ಘರ್ಷಣೆ ತಪ್ಪುವಂತಿಲ್ಲ. ಒಂದೊಮ್ಮೆ ಒಂದೇ ಪಕ್ಷ ರಾಜಭವನದಲ್ಲಿ ಹಾಗೂ ವಿಧಾನಮಂಡಲದಲ್ಲಿ ಮೆರೆದರೂ ಎರಡು ಶಕ್ತಿ ಕೇಂದ್ರಗಳು ಒಂದೇ ರಾಜ್ಯಾಡಳಿತಕ್ಕೆ ಪೂರಕವೆನಿ ಸದು. ಎರಡನೆಯದಾಗಿ, ನಮ್ಮದು “ಸಂಯುಕ್ತ ರಾಜ್ಯ ಪದ್ಧತಿ’ಯಿಂದ ಸ್ವಲ್ಪ ಬಿಗಿಗೊಂಡ “ರಾಜ್ಯಗಳ ಒಕ್ಕೂಟ’. ಹಾಗಾಗಿ ಅಧಿಕಾರದ ತಕ್ಕಡಿಯನ್ನು ಉದ್ದೇಶಪೂರ್ವಕವಾಗಿ, ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯ ಆಧಾರವಾಗಿರಿಸಿ, ರಾಷ್ಟ್ರಪತಿಯವರೇ ಅರ್ಥಾತ್‌ ಸ್ವತಃ ಕೇಂದ್ರ ಸರಕಾರವೇ ಎಲ್ಲ ರಾಜ್ಯಗಳಿಗೂ ರಾಜ್ಯಪಾಲರನ್ನು ನಿಯುಕ್ತಿಗೊಳಿಸ ತಕ್ಕದ್ದು ಎಂಬುದಾಗಿ 155ನೇ ವಿಧಿ ಸ್ಪಷ್ಟವಾಗಿ ವಿಧಿಸಿದೆ. 1789ರಲ್ಲಿ ಜಾರಿಗೆ ಬಂದ ಅಮೆರಿಕದ ಸಾಂವಿಧಾನಿಕ ಪಥದಲ್ಲಿ ಅಬ್ರಾಹಂ ಲಿಂಕನ್‌ ಹಾಗೂ ಜಾನ್‌.ಎಫ್. ಕೆನಡಿ ಅವರ ಆಡಳಿತದ ದಿನಗಳಲ್ಲಿ- ಹೀಗೆ ಎರಡು ಬಾರಿ ಅಲ್ಲಿನ ಚುನಾಯಿತ ರಾಜ್ಯಪಾಲರುಗಳೇ ರಾಷ್ಟ್ರಾಧ್ಯಕ್ಷರ ವಿರುದ್ಧ ತಿರುಗಿ ಬಿದ್ದ ಕಂಪನದ ಅನುಭವದ ನೆಲೆಯಲ್ಲಿಯೂ ಸಂವಿಧಾನ ರಚನೆಯ ಸಂದರ್ಭದಲ್ಲಿಯೇ ಈ ಮುನ್ನೆಚ್ಚರಿಕೆ ಹೊಂದಲಾಯಿತು.

ಈ ರಾಜ್ಯಪಾಲರ ಹುದ್ದೆಯೇ ಒಂದು ವೈಶಿಷ್ಟ್ಯ

ಪೂರ್ಣವಾಗಿರುವುದನ್ನು ಸೂಕ್ಷ್ಮವಾಗಿ ಅವ ಲೋಕಿಸಬಹುದು. ರಾಜ್ಯಪಾಲರಿಗೆ ಇನ್ನೊಬ್ಬರು ಉಪರಾಜ್ಯಪಾಲರು ಎಂಬ ಸಹಾಯಕರಿಲ್ಲ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಪರಾಜ್ಯಪಾಲರು (Lieutenant Governor) ಎಂಬ ಹುದ್ದೆ ಇದ್ದರೂ ಅಲ್ಲಿ ರಾಜ್ಯಪಾಲರು ಎಂಬುದಾಗಿ ಯಾರೂ ಇಲ್ಲ. ರಾಜ್ಯಪಾಲರೂ ಸಾಮಾನ್ಯವಾಗಿ ಹೊರ ರಾಜ್ಯದವರೇ ಆಗಿರಬೇಕು ಎಂಬ ಸಾಂವಿಧಾನಿಕ ವಿಧಿಯಿಲ್ಲ. ಆದರೆ ಅದೊಂದು ರಾಜಕೀಯ ಸಂಪ್ರದಾಯ (Political Convention) ಇನ್ನು ಇವರ ಅವಧಿ 5 ವರ್ಷಗಳು ಎಂದಾದರೂ ಅವಧಿಪೂರ್ವವಾಗಿ ಅವರನ್ನು ಯಾವುದೇ ಸಂದರ್ಭದಲ್ಲಿ ಕೇಂದ್ರ ಹಿಂದೆ ಕರೆಸಿಕೊಳ್ಳಬಹುದು, ವರ್ಗಾಯಿಸಬಹುದು ಹಾಗೂ ಏಳನೇ ತಿದ್ದುಪಡಿ ಅನುಸಾರ (1956) ಒಂದರಿಂದ ಹೆಚ್ಚು ರಾಜ್ಯಗಳ ಜವಾಬ್ದಾರಿಯನ್ನು ನೀಡಬಹುದು.

ಇಲ್ಲಿ ಗುರುತಿಸಬೇಕಾದ ಮುಖ್ಯ ಅಂಶವೆಂದರೆ ರಾಜ್ಯಪಾಲರು ಏಕಕಾಲದಲ್ಲಿ ಹಲವು ಗುರುತರ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಕೇಂದ್ರದ ಪ್ರತಿನಿಧಿಯಾಗಿ ರಾಜ್ಯದ ರಾಜಧಾನಿಯ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರ ಬೇಕು. ಮಾತ್ರವಲ್ಲದೆ ಕೇಂದ್ರ ಸರಕಾರಕ್ಕೆ ಯಥಾ ವತ್ತಾಗಿ ರಾಜ್ಯಾಡಳಿತದ ಪ್ರಮುಖ ಅಂಶಗಳ ವರದಿ ನೀಡಬೇಕು. ಯಾವುದೇ ತೆರದಲ್ಲಿ ಸಾಂವಿ ಧಾನಿಕ ನಿಯುಕ್ತಿಗಳಿಗೆ ಚ್ಯುತಿ ಒದಗದಂತೆ ರಾಷ್ಟ್ರದ ಸಮಗ್ರತೆ ಹಾಗೂ ಸಾರ್ವಭೌಮತೆಗೆ ಹಾನಿ ಒದಗುವ ನೀತಿ-ರೀತಿಗಳು ರಾಜ್ಯ ಸರಕಾರ ದಿಂದ ಹೊರಹೊಮ್ಮದಂತೆ ಹೊಸದಿಲ್ಲಿಯ ರಾಯ

ಭಾರಿಯಂತೆ ರಾಜ್ಯದ ಕೇಂದ್ರದಲ್ಲಿ ರಾಜ ಭವನ ಪಾತ್ರವಹಿಸಬೇಕು. ಇಲ್ಲೇ ಒಂದೊಮ್ಮೆ “ರಾಜ್ಯ ಸರಕಾರ ಭಾರತ ಸಂವಿಧಾನದ ಅನ್ವಯ ಕಾರ್ಯ ನಿರ್ವಹಿಸುವಂತಿಲ್ಲ; ರಾಜ್ಯದಲ್ಲಿ 356ನೇ ವಿಧಿಯನ್ವಯ ರಾಷ್ಟಪತಿ ಆಳ್ವಿಕೆಗೆ ಪರಿಸ್ಥಿತಿ ಪಕ್ವಗೊಂಡಿದೆ’ ಎಂಬ ವರದಿ ಒಪ್ಪಿಸುವ ವಿವೇಚನಾಧಿಕಾರ ಇವರ ಪಾಲಿಗಿದೆ. ಈ ವರದಿ ನೀಡುವಲ್ಲಿ ಮುಖ್ಯಮಂತ್ರಿಯವರ ಅಥವಾ ರಾಜ್ಯ ಸಚಿವ ಸಂಪುಟದ ಒಪ್ಪಿಗೆಯ ಮೊಹರು ಅಗತ್ಯವಿಲ್ಲ; ಅದೇ ರೀತಿ ವಿಧಾನಮಂಡಲದಲ್ಲಿ ಬಹುಮತ ಹೊಂದಿ ಸಹಿಗಾಗಿ ರಾಜ್ಯಪಾಲರಿಗೆ ಮಸೂದೆ ಕಳುಹಿಸಬೇಕಾಗಿದೆ. ಇಲ್ಲಿಯೂ ರಾಜ್ಯಪಾಲರ ವಿವೇಚನಾಧಿಕಾರದ ಸ್ವತಂತ್ರ ಪರಿಧಿ ಗಮನಾರ್ಹ. ಅಂತಹ ಮಸೂದೆಯನ್ನು ಒಪ್ಪಿ ಅಂಕಿತ, ಮೊಹರು ನೀಡಿ ಅಧಿಕೃತ ರಾಜ್ಯಶಾಸನವಾಗಿಸಬಹುದು ಅಥವಾ ಆ ಮಸೂದೆಯ ಪರಿಷ್ಕರಣೆ ಅಗತ್ಯ ಎಂಬ ಷರಾವನ್ನು ಹಾಗೂ ಅದರೊಂದಿಗೆ ನಿರ್ದಿಷ್ಟ ವಿಚಾರವನ್ನು ಉಲ್ಲೇಖೀಸಿ ಮರು ಪರೀಶಿಲನೆಗೆ ವಿಧಾನಮಂಡಲಕ್ಕೆ ಹಿಂದಿರುಗಿಸಬಹುದು ಅಥವಾ ರಾಜ್ಯದ ಮಸೂದೆಗಳನ್ನು ನೇರವಾಗಿ ರಾಷ್ಟ್ರಪತಿಯವರ ಅಂಕಿತಕ್ಕೆ, ಅರ್ಥಾತ್‌ ಕೇಂದ್ರ ಸಚಿವ ಸಂಪುಟದ ಪರಿಶೀಲನೆಯ ಕಕ್ಷೆಗೆ ನೀಡಿ

“ಕೈ ತೊಳೆದುಕೊಳ್ಳಬಹುದು’. ಇಲ್ಲಿಯೂ ರಾಜ್ಯ ಪಾಲರ ಸ್ವ ಇಚ್ಛೆ ಹಾಗೂ ನಿರ್ಧಾರಕ್ಕೆ ಸಂವಿಧಾನ ಮಣೆ ಹಾಕಿದೆ.

ರಾಜ್ಯಪಾಲರ ಹುದ್ದೆ ಆಯಾಯ ರಾಜ್ಯ ಸರಕಾರದ ನಿಟ್ಟಿನಲ್ಲಿ ಕೇವಲ “ಸಾಂವಿಧಾನಿಕ ಮುಖ್ಯಸ್ಥರದು’ ಎಂಬ ನಿಯುಕ್ತಿಯನ್ನೂ ರಾಜ್ಯಾಂಗ ಘಟನೆ ಧ್ವನಿಸುತ್ತಿದೆ ಹಾಗೂ ಸಚಿವ ಸಂಪುಟದ ಜತೆ “ಅನ್ಯೋನ್ಯ ಸಹಕಾರ’ ತತ್ತÌ ಹಾಗೂ ಸತ್ವದ ಬಗೆಗೆ ಸಂವಿಧಾನದ ಒಳಶ್ರುತಿ ಮಿಡಿಯುತ್ತದೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದು “ಡಬಲ್‌ ಎಂಜಿನ್‌ ಸರಕಾರ’ ಎಂಬ ಪ್ರಚಲಿತ  ವ್ಯಾಖ್ಯೆಯ ವ್ಯವಸ್ಥೆ ಇದ್ದಲ್ಲಿ ರಾಜ್ಯಪಾಲರ ಆಸನ ಒಂದಿನಿತು “ಆರಾಮ ಕುರ್ಚಿ’ ಎನಿಸುತ್ತದೆ. ಬದಲಾಗಿ ಪರಸ್ಪರ ಕೆಂಡಕಾರುವ, ಕತ್ತಿ ಮಸೆಯುವ, ಕಿಡಿಕಾರುವ ಅತಿಶಯೋಕ್ತಿಗಳ ಸಾಕಾರ ಎನಿಸಿ ವೈರುಧ್ಯದ ಕೇಂದ್ರ-ರಾಜ್ಯಗಳ ಆಡಳಿತ ಪಕ್ಷಗಳಿದ್ದಲ್ಲಿ ರಾಜ್ಯಪಾಲಗಿರಿ ಸದಾ ಕಂಪನಕ್ಕೆ ಒಳಪಡುವುದರಲ್ಲಿ ಸಂದೇಹವಿಲ್ಲ. ಆಗ ಅತ್ತ ಕೇಂದ್ರಕ್ಕೂ ಇತ್ತ ರಾಜ್ಯಕ್ಕೂ “ಸಮಾಧಾನಕರ’ ದೃಷ್ಟಿ ಬೀರುವ ರಾಜಕೀಯ ಮುತ್ಸದ್ಧಿತನ, ಹಗ್ಗ-ಜಗ್ಗಾಟದ ಮಧ್ಯೆ, ಶಾಂತಿ, ಕಾನೂನು ಕಾಯ್ದುಕೊಳ್ಳುವ ಆಟದ ತೀರ್ಪುಗಾರನ ತೆರದಲ್ಲಿ ಕಾರ್ಯನಿರ್ವಹಣೆ ಅತ್ಯಂತ ಮಹತ್ತಮ ಸಾಧನೆ. ಈ ಬಗೆಗೇ ತಮ್ಮ ಅನುಭವ ಕಥನದಲ್ಲಿ ಹಲವಾರು ರಾಜ್ಯಪಾಲರು ತಮ್ಮ ಕಠಿನ ಪರಿಶ್ರಮದ “ವೀರಗಾಥೆ’ಯನ್ನು ದಾಖಲಿಸಿದ್ದಾರೆ.

ಈ ಸಮಗ್ರ ಸಾಂವಿಧಾನಿಕ ಹಿನ್ನಲೆಯಲ್ಲಿ “ಭವಿಷ್ಯದ ದಾಖಲಿತ ಇತಿಹಾಸ’ ಎನ್ನುವ ತೆರದಲ್ಲಿ ಕೇರಳ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಲ ಅಂತೆಯೇ ದಿಲ್ಲಿ ಹಾಗೂ ಪುದುಚೇರಿ ಕೇಂದ್ರಾಡಳಿತದ ರಾಜ್ಯಪಾಲರು, ಉಪರಾಜ್ಯ ಪಾಲರುಗಳ ನುಡಿ ನಡೆ, ಘರ್ಷಣೆ ವಿಶ್ಲೇಷ ಣಾರ್ಹ. ಕುಲಾಧಿಪತಿಗಳ ಹುದ್ದೆಯಿಂದ ನಿಮ್ಮನ್ನೇ

ಕಿತ್ತು ಹಾಕುತ್ತೇವೆ “ಸಹಿ ಹಾಕಿ’ ಎಂದು ರಾಜಭವನಕ್ಕೇ  ವಿಶೇಷಾಜ್ಞೆಯ ಪ್ರತಿ ಕಳುಹಿಸುವ ಕೇರಳ ಮುಖ್ಯಮಂತ್ರಿಗಳ ವರಸೆ ರಾಜಕೀಯ ವಿಶ್ಲೇಷಕರ ಪಾಲಿಗೆ ಗಮನಾರ್ಹ ಸಂಗತಿ. ಕೇಂದ್ರದಲ್ಲಾದರೆ ರಾಷ್ಟ್ರಪತಿಯವರಿಗೆ ನಿರ್ಗಮನದ ದಾರಿ  ತೋರಿಸುವ 61ನೇ ವಿಧಿಯ “ಮಹಾಭಿಯೋಗ’ದ ಉಲ್ಲೇಖ ತುಂಬಿ ನಿಂತಿದೆ. ಆದರೆ ನಮಗೆ ಇವರು ಒಲ್ಲದವರು ಎಂಬುದಾಗಿ ರಾಜಭವನ ದಿಂದ ರಾಜ್ಯಪಾಲರನ್ನು ಹೊರಹಾಕಲು ಮುಖ್ಯ ಮಂತ್ರಿಯವರಿಗೆ ಯಾವುದೇ  ಸಾಂವಿಧಾನಿಕ ಸೂತ್ರದ ದ್ವಾರವೇ ಇಲ್ಲ!  ಇಲ್ಲಿ ಪರಸ್ಪರ “ಗೌರವ, ನಂಬಿಕೆ ಹಾಗೂ ಸಹಕಾರಿ’ ತತ್ತ್ವವೊಂದೇ ಇಂದಿನ ಹಾಗೂ ಮುಂದಿನ ಸಂಘರ್ಷ ವಿರಹಿತ ಕಾರ್ಯ ಪರಿಧಿಗೆ ದಿಕ್ಸೂಚಿ. ಅತ್ತ ಪ್ರಧಾನಿ ನಾಯಕತ್ವದ ಕೇಂದ್ರದ ಪ್ರತಿನಿಧಿಯಾಗಿ, ಇತ್ತ ಮುಖ್ಯಮಂತ್ರಿ ನೇತಾರಿಕೆಯ ರಾಜ್ಯ ಸರಕಾರದ “ಸಾಂವಿಧಾನಿಕ  ಮುಖ್ಯಸ್ಥ’ನಾಗಿ ಅತ್ಯಂತ ವಿಚಕ್ಷಣೆ,

ಮುತ್ಸದ್ಧಿತನ ಹಾಗೂ ಕಾನೂನುಬದ್ಧ ಪಾತ್ರವಹಿ ಸುವಿಕೆ ಮುಂಬರುವ ದಿನಗಳ ರಾಜ್ಯಪಾಲರುಗಳ ಧೀಮಂತಿಕೆಯ ಸಂಕೇತ ಎನಿಸಬೇಕಾಗಿದೆ.

ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

ಟಾಪ್ ನ್ಯೂಸ್

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನು ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

Astronamy-moon

Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.