Gowri-Ganesha Chathurthi ಹಬ್ಬ ನಮಗೆ ಸಾತ್ವಿಕ ಆನಂದ ನೀಡುತ್ತದೆ
Team Udayavani, Sep 18, 2023, 2:36 PM IST
ಗೌರಿ ಹಬ್ಬವನ್ನು ಭಾದ್ರಪದ ಮಾಸದ ಶುದ್ಧ ತೃತೀಯ ದಿನದಂದು, ಅಂದರೆ ಗಣೇಶ ಚತುರ್ಥಿಯ ಒಂದು ದಿನದ ಮೊದಲು ಆಚರಿಸಲಾಗುತ್ತದೆ.
ಗೌರಿ ಎಂದರೆ ತೇಜಸ್ಸಿನಿ, ಜ್ಞಾನಮಹಿ. ಹೆಣ್ಣುಮಕ್ಕಳಿಗೆ ವಿಶೇಷವಾಗಿ ಗೌರಿಮಾತೆಯ ಆದರ್ಶವನ್ನು ಹೇಳುವುದುಂಟು. ಗೌರಿ ಮಾತೆಯು, ಶಿವನನ್ನು ಒಲಿಸಿಕೊಳ್ಳಲು “ಪಂಚಾಗ್ನಿ” ಅಂತಹ ಘೋರ ತಪಸ್ಸನ್ನು ಆಚರಿಸಿದಳು. ಕಾಳಿದಾಸ ಹೇಳುವಂತೆ, ಮಹಾಋಷಿಗಳು ಆಕೆಯ ಬಳಿ ಬಂದು ಆಕೆ ಮಾಡುವ ತಪಸ್ಸನ್ನು ಕಲಿತುಹೋಗುತ್ತಿದ್ದರು.
ಈ ರೀತಿಯ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡ ಗೌರಿ ಶಿವನ ಪತ್ನಿಯಾದಳು. ತಾನು ರಾಜಕುಮಾರಿಯಾಗಿದ್ದರೂ, ತನ್ನ ಆಡಂಬರದ ಜೀವನವನ್ನೂ ಕಳಚಿ, ತನ್ನ ಪತಿಗೆ ಸಮಾನವಾದಳು. ಆಕೆ ಸಂದರ್ಭಕ್ಕೆ ತಕ್ಕಂತೆ ಮಾತೆಯಾಗಿ, ಪರಾಕ್ರಮಿಯಾಗಿ, ರಾಜರಾಜೇಶ್ವರಿಯಾಗಿ, ದುಷ್ಟಸಂಹಾರದ ಸಂದರ್ಭದಲ್ಲಿ ಕಾಳಿಯಾಗಿ, ದುರ್ಗೆಯಾಗಿ, ಚಾಮುಂಡೇಶ್ವರಿಯು ಆಗಿದ್ದಾಳೆ.
ತನ್ನ ಮಕ್ಕಳ ಪಾಲಿಗೆ ಆಕೆಯ ಪ್ರೇಮ ವರ್ಣಿಸಲಾಗದು. ಈ ಹಬ್ಬವನ್ನು ವಿವಾಹಿತ ಮಹಿಳೆಯರು ಸಂತೋಷದ ವೈವಾಹಿಕ ಜೀವನಕ್ಕಾಗಿ ತಾಯಿ ಗೌರಿಯನ್ನು ಪೂಜಿಸುತ್ತಾರೆ. ಗೌರಿ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೆ. ಉತ್ತರಪ್ರದೇಶ, ರಾಜಸ್ಥಾನದಲ್ಲಿ ಇದನ್ನು ‘ಹರ್ತಾಲಿಕ ವ್ರತ’ ಎನ್ನುವರು. ಗೌರಿ ಹಬ್ಬದಲ್ಲಿ ಪಾರ್ವತಿಯ ಅವತಾರ. ಗೌರಿದೇವಿಯ ಸಲುವಾಗಿ ಭಕ್ತರು ಸ್ವರ್ಣಗೌರಿ ವ್ರತ ಆಚರಿಸುತ್ತಾರೆ.
ಗಣೇಶ ಚತುರ್ಥಿಯು ಬಹು ನೀರಿಕ್ಷಿತ ಹಬ್ಬಗಳಲ್ಲಿ ಒಂದು. ಗಣೇಶ ಹಬ್ಬವನ್ನು ಭಾದ್ರಪದ ಮಾಸದ ಶುದ್ಧ ಚತುರ್ಥಿಯಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಅತ್ಯಂತ ಪ್ರಿಯವಾದ ಹಬ್ಬ.
ಈ ಹಬ್ಬವನ್ನು ಸ್ವಾತಂತ್ರ ಹೋರಾಟಗಾರ ಲೋಕಮಾನ್ಯ ತಿಲಕ ಅವರು ಬ್ರಿಟಿಷರ ವಿರುದ್ದ ದೇಶವನ್ನು ಒಗ್ಗೂಡಿಸುವ ಸಲುವಾಗಿ ಪ್ರಾರಂಭಿಸಿದರು. ಈ ದಿನದಂದೆ ತಂದೆ ಶಿವನಿಂದ ತುಂಡರಿಸಲ್ಪಟ್ಟ ಗಣೇಶನ ಮುಖದ ಜಾಗದಲ್ಲಿ ಆನೆಯ ಮುಖವನ್ನು ಸೇರಿಸಲಾಗಿ ಈ ಮೂಲಕ ಗಣೇಶನು ‘ಗಜಾನನ’ ಆದನು.
ಶಿವ ಮತ್ತು ಪಾರ್ವತಿಯ ಮಗನಾದ ಗಣೇಶನು ಅದೃಷ್ಟ, ಸಮೃದ್ಧಿ, ಬುದ್ದಿವಂತಿಕೆಯ ದೇವರು. ಚೌತಿಯಂದು ಭಕ್ತಾದಿಗಳು ತಮ್ಮ ಮನೆಗಳಲ್ಲಿ, ಊರುಗಳಲ್ಲಿ ಗಣಪನ ಮೂರ್ತಿ ಮಾಡಿ ಪೂಜಿಸುತ್ತಾರೆ.
ಕೆಲವು ಕಡೆಗಳಲ್ಲಿ 11 ದಿನಗಳ ಕಾಲ ಈ ಹಬ್ಬ ನಡೆಯುತ್ತದೆ. ಇದು ಪ್ರಾಣಪ್ರತಿಷ್ಟೆಯಿಂದ ಆರಂಭವಾಗಿ ವಿಸರ್ಜನೆ ಮಾಡುವ ಮೂಲಕ ಕೊನೆಗೊಳ್ಳುತ್ತದೆ. ವಿಸರ್ಜನೆಯಂದು ಗಣೇಶನು ತನ್ನ ಸ್ಥಳವಾದ ಕೈಲಾಸ ಪರ್ವತಕ್ಕೆ ಹಿಂತಿರುಗುತ್ತಾನೆ ಎಂದು ನಂಬಲಾಗಿದೆ.
ಹೀಗೆ ಗೌರಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಿಭಿನ್ನ ಪ್ರದೇಶಗಳಿಗೆ ತಕ್ಕಂತೆ ಆಚರಣೆ ಭಿನ್ನವಾಗುತ್ತದೆ.
-ಭಾಗ್ಯಶ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.