Green hydrogen ಭವಿಷ್ಯದ ಇಂಧನ!ಭಾರತವನ್ನು ವಿಶ್ವದ ಹೈಡ್ರೋಜನ್‌ ಕೇಂದ್ರವಾಗಿಸಲು ಭಾರೀ ಯತ್ನ

2030ರ ವೇಳೆಗೆ ಗ್ರೀನ್‌ ಹೈಡ್ರೋಜನ್‌ ಬಳಕೆಯನ್ನು ಹೆಚ್ಚಿಸುವ ಗುರಿ

Team Udayavani, Sep 23, 2024, 7:15 AM IST

hGreen hydrogen ಭವಿಷ್ಯದ ಇಂಧನ!ಭಾರತವನ್ನು ವಿಶ್ವದ ಹೈಡ್ರೋಜನ್‌ ಕೇಂದ್ರವಾಗಿಸಲು ಭಾರೀ ಯತ್ನ

ಭಾರತವನ್ನು ಹಸುರು ಹೈಡ್ರೋಜನ್‌ ನಿರ್ಮಿಸುವ ಜಾಗತಿಕ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ಮೋದಿ ಹೊಂದಿದ್ದು, ಈ ಬಗ್ಗೆ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಸ್ತಾವಿಸಿದ್ದರು. ಹಾಗಿದ್ದರೆ ಈ ಹಸುರು ಹೈಡ್ರೋಜನ್‌ ಏನು? ಇದರ ಉಪಯೋಗವೇನು? ಏನಿದರ ಲಾಭ? ಮೂಲ ಹೈಡ್ರೋಜನ್‌ಗಿಂತ ಇದು ಹೇಗೆ ಭಿನ್ನ ಎಂಬುದರ ಮಾಹಿತಿ ಇಲ್ಲಿದೆ.

ಇಂಗಾಲದ ಮಾಲಿನ್ಯವನ್ನು ತಡೆಯುವ ಗುರಿಗಳನ್ನು ಪೂರೈಸಲು ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಭವಿಷ್ಯದ ಇಂಧನವಾಗಿ ಹೈಡ್ರೋಜನ್‌ ಅನ್ನು ಪರಿಗಣಿಸಲಾಗುತ್ತದೆ. ಈ ನಿಟ್ಟಿನಲ್ಲಿ ಭಾರತವು ಮಾಲಿನ್ಯ ಭರಿತ ಇಂಧನಗಳ ಬದಲಿಗೆ ಹಸುರು ಹೈಡ್ರೋಜನ್‌ ಅನ್ನು ಬಳಸಲು ಯೋಜನೆ ಮಾಡಿದೆ. ಇತ್ತೀಚೆಗೆ ನಡೆದ ಹಸುರು ಹೈಡ್ರೋಜನ್‌ ಮೇಲಿನ ಅಂತಾರಾಷ್ಟ್ರೀಯ ಸಂವಾದ ಕಾರ್ಯ ಕ್ರಮದಲ್ಲಿ ಪ್ರಧಾನಿ ಮೋದಿ “2030ರ ವೇಳೆಗೆ ಭಾರತವು ಹಸುರು ಹೈಡ್ರೋಜನ್‌ನ ಉತ್ಪಾದಕ, ಬಳಕೆದಾರ ಹಾಗೂ ರಫ್ತುದಾರನಾಗಿ ಜಾಗತಿಕ ಮಟ್ಟದಲ್ಲಿ ಪ್ರಗತಿ ಸಾಧಿಸುವ ಗುರಿ ಹೊಂದಿದೆ’ ಎಂದು ಹೇಳಿದ್ದಾರೆ. ಅದಕ್ಕಾಗಿ ಕೇಂದ್ರ ಸರಕಾರ ಯೋಜನೆಗಳನ್ನೂ ರೂಪಿಸಿದ್ದು, ಆ ಗುರಿಯತ್ತ ಸಾಗಲು ಕಾರ್ಯನಿರ್ವಹಿಸುತ್ತಿದೆ.

ಏನಿದು ಹಸುರು ಹೈಡ್ರೋಜನ್‌?
ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸಲಾದ ಹೈಡ್ರೋಜನ್‌ ಅನ್ನು ಹಸುರು ಹೈಡ್ರೋಜನ್‌ ಎಂದು ಕರೆಯಲಾಗುತ್ತದೆ. ಅದ­ರಲ್ಲೂ ನವೀಕರಿಸಬಹುದಾದ ವಿದ್ಯುತ್ಛಕ್ತಿ ಬಳಸಿ­ಕೊಂಡು ನೀರಿನ ವಿದ್ಯುತ್‌ ವಿಭಜನೆ ಅಥವಾ ಎಲೆಕ್ಟ್ರೋಲಿಸಿಸ್‌ನಿಂದ ಉತ್ಪತ್ತಿಯಾಗುವ ಹೈಡ್ರೋ­ಜನ್‌. ಗಮನಾರ್ಹವಾಗಿ ಹಸುರು ಹೈಡ್ರೋಜನ್‌ ಉತ್ಪಾದನೆ ವೇಳೆ ಹಸುರುಮನೆ ಅನಿಲ ಹೊರಸೂಸು­ವಿಕೆಯು ಸಾಮಾನ್ಯ ಹೈಡ್ರೋಜನ್‌ ಉತ್ಪಾದಿಸುವಾಗ ಉಂಟಾಗುವುದಕ್ಕಿಂತ ಬಹಳ ಕಡಿಮೆ ಪ್ರಮಾಣದ್ದಾಗಿದೆ.

ಶುದ್ಧ ಶಕ್ತಿಯ ಮೂಲ
ಹೈಡ್ರೋಜನ್‌ ಪ್ರಕೃತಿಯಲ್ಲಿ ಹೇರಳವಾಗಿ ಲಭಿಸುವ ಮೂಲಧಾತುವಾಗಿದೆ. ಅಲ್ಲದೇ ಇದು ಶುದ್ಧವಾದ ಮೂಲಧಾತು ಹಾಗೂ ಇಂಧನ ಮೂಲ. ಈ ಶುದ್ಧ ಶಕ್ತಿಯ ಕಾರಣದಿಂದ 1975ರಿಂದ ಈಚೆಗೆ ಹೈಡ್ರೋಜನ್‌ನ ಜಾಗತಿಕ ಬೇಡಿಕೆ 3 ಪಟ್ಟು ಹೆಚ್ಚಾಗಿದೆ. 2018ರ ವೇಳೆಗೆ ಜಾಗತಿಕವಾಗಿ ಹೈಡ್ರೋಜನ್‌ ಬಳಕೆ 7 ಕೋಟಿ ಟನ್‌ಗಳಷ್ಟಿತ್ತು. ಅದರಲ್ಲೂ ಹಸುರು ಹೈಡ್ರೋಜನ್‌ ನೀರಿನ ಆವಿಯನ್ನು ಮಾತ್ರವೇ ಹೊರಸೂಸುತ್ತದೆ. ಕಲ್ಲಿದ್ದಲು ಅಥವಾ ಇತರ ಪಳೆಯುಳಿಕೆ ಇಂಧನಗಳಂತೆ ಇಂಗಾಲವನ್ನು ಹೊರಸೂಸುವುದಿಲ್ಲ.ಮೂರು ಪಟ್ಟು ಶಕ್ತಿಯ ಸಾಂದ್ರತೆ ಮತ್ತು ಹಾನಿಕಾರಕ ಹೊರಸೂಸುವಿಕೆಯ ಬದಲಾಗಿ ಹೈಡ್ರೋಜನ್‌ ಶಕ್ತಿಯ ಅಗತ್ಯವನ್ನು ಪೂರೈಸಲು ಶುದ್ಧವಾದ, ಹೆಚ್ಚು ಪರಿಣಾಮಕಾರಿ ಆಯ್ಕೆಯಾಗಿ ಬಳಕೆಯಾಗುತ್ತದೆ. ಒಂದು ಕಿಲೋ ಹಸುರು ಹೈಡ್ರೋಜನ್‌ ಉತ್ಪಾದನೆಗೆ 50 ಯುನಿಟ್‌ ನವೀಕರಿಸಬಹುದಾದ ವಿದ್ಯುತ್‌ ಮತ್ತು 9 ಕೆ.ಜಿ. ಡಿಯೋನೈಸ್ಡ್ ನೀರು ಬೇಕಾಗುತ್ತದೆ. 125 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನ ಉತ್ಪಾದನ ಸಾಮರ್ಥ್ಯದಿಂದ 60-100 ಗಿಗಾ ವ್ಯಾಟ್‌ ಸಾಮರ್ಥ್ಯದ ಎಲೆಕ್ಟ್ರೋಲೈಜರ್‌ ಸಹ ಸ್ಥಾಪನೆ ಗೊಳ್ಳಲಿದ್ದು, ಇದರಿಂದಾಗಿ ವಾರ್ಷಿಕ 50 ಎಂಎಂಟಿ(ಮಿಲಿಯನ್‌ ಮೆಟ್ರಿಕ್‌ ಟನ್‌) ಇಂಗಾಲದ ಡೈಆಕ್ಸೆ„ಡ್‌ ಹೊರಸೂಸುವಿಕೆ ತಪ್ಪುತ್ತದೆ.

ಇಂಧನವಾಗಿ ಹೈಡ್ರೋಜನ್‌
19ನೇ ಶತಮಾನದಿಂದಲೇ ಹೈಡ್ರೋಜನ್‌ ಅನ್ನು ಇಂಧನವಾಗಿ ಬಳಕೆ ಮಾಡಲಾಗುತ್ತಿದೆಯಾದರೂ ಪ್ರಮುಖ ಇಂಧನದ ಸ್ಥಾನವನ್ನು ಇನ್ನೂ ಪಡೆದಿಲ್ಲ. ಇತ್ತೀಚಿನ ದಿನಗಳಲ್ಲಿ ಇಂಗಾಲ ಆಧಾರಿತ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಹಾಗಾಗಿ ಇಂಗಾಲದ ಹೊರಸೂಸುವಿಕೆ ಪ್ರಮಾಣ ಕಡಿಮೆ ಮಾಡುವಂತಹ ಇಂಧನ ಬಳಕೆಯ ಕೂಗು ಹೆಚ್ಚಾಗುತ್ತಿದೆ. 2030ರ ವೇಳೆಗೆ ಹಸುರು ಹೈಡ್ರೋಜನ್‌ ಬಳಕೆ ಶೇ.50ರಷ್ಟು ಹೆಚ್ಚಳವಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪಳೆಯುಳಿಕೆ ಇಂಧನಗಳಾದ ಡೀಸೆಲ…, ಪೆಟ್ರೋಲ್‌ಗ‌ಳ ಬಳಕೆಯಿಂದ ಮುಕ್ತವಾಗಲು ಹೈಡ್ರೋಜನ್‌ ಭಾರತದ ಹಾಗೂ ಜಗತ್ತಿನ ಪರಿವರ್ತನ ಇಂಧನವಾಗಲಿದೆ ಎಂದು ಅದಾಜಿಸಲಾಗಿದೆ.

2030ರ ವೇಳೆಗೆ ಭಾರತದ ಗುರಿ
ವಾರ್ಷಿಕ ಹಸುರು ಹೈಡ್ರೋಜನ್‌ ಉತ್ಪಾದನ ಸಾಮರ್ಥ್ಯ 50 ಲಕ್ಷ ಟನ್‌ಗಳಿಗೆ ಹೆಚ್ಚಿಸುವುದು
ಹಸುರು ಹೈಡ್ರೋಜನ್‌ ಉತ್ಪಾದನ ಕ್ಷೇತ್ರಕ್ಕಾಗಿ ಸುಮಾರು 8 ಲಕ್ಷ ಕೋಟಿ ರೂ. ಹೂಡಿಕೆ
ಹಸುರು ಹೈಡ್ರೋಜನ್‌ ಉತ್ಪಾದನ ಕ್ಷೇತ್ರದಲ್ಲಿ ಸುಮಾರು 6 ಲಕ್ಷ ಉದ್ಯೋಗಗಳ ಸೃಷ್ಟಿ
ಪಳೆಯುಳಿಕೆ ಇಂಧನದ ವಾರ್ಷಿಕ ಆಮದು ಮೊತ್ತದಲ್ಲಿ 1 ಲಕ್ಷ ಕೋಟಿ ರೂ.ನಷ್ಟು ಇಳಿಕೆ
ಇಂಗಾಲದಿಂದಾಗುವ ಮಾಲಿನ್ಯದ ಪ್ರಮಾಣ ವಾರ್ಷಿಕ 5 ಕೋಟಿ ಟನ್‌ನಷ್ಟು ಇಳಿಕೆ

ಭವಿಷ್ಯದಲ್ಲಿ ಹೈಡ್ರೋಜನ್‌ ಎಲ್ಲೆಲ್ಲಿ ಬಳಕೆ?
1.ಗಗನಯಾನಿಗಳಿಗೆ ವಿದ್ಯುತ್‌, ನೀರು
ಇಂಧನ ಕೋಶದಲ್ಲಿ ಹೈಡ್ರೋಜನ್‌ ಮತ್ತು ಆಮ್ಲಜನಕಗಳನ್ನು ರಾಸಾಯನಿಕ ಕ್ರಿಯೆಗೆ ಒಳಪಡಿಸುವ ಮೂಲಕ ವಿದ್ಯುತ್‌ ಮತ್ತು ನೀರನ್ನು ಪಡೆಯಲಾಗುತ್ತದೆ. ಇದು ಗಗಯಾನಿಗಳಿಗೆ ಬಹಳ ಸಹಾಯವಾಗಲಿದೆ.
2.ಶಕ್ತಿ ಸಂಗ್ರಹಣೆ ಸುಲಭ
ಸಂಕುಚಿತ ಹೈಡ್ರೋಜನ್‌ ಟ್ಯಾಂಕ್‌ಗಳು ದೀರ್ಘ‌ಕಾಲದವರೆಗೆ ಶಕ್ತಿಯನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ. ಇವು ಹಗುರವಾಗಿರುವ ಕಾರಣ ಲಿಥಿಯಂ-ಅಯಾನ್‌ ಬ್ಯಾಟರಿಗಳಿಗಿಂತ ಇವುಗಳ ನಿರ್ವಹಣೆ ಸುಲಭ.
3.ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿ
ಇಂಗಾಲ ಬಳಕೆಯನ್ನು ತಗ್ಗಿಸುವುದು ಬೃಹತ್‌ ವಾಹನಗಳಲ್ಲಿ ಕಷ್ಟಕರವಾದ ಕೆಲಸ. ಆದರೆ ಇದನ್ನು ಹೈಡ್ರೋಜನ್‌ ಬಳಕೆ ಸಾಧ್ಯವಾಗಿಸಲಿದೆ. ಯುರೋಪಿಯನ್‌ ಯೂನಿಯನ್‌ ಹೈಡ್ರೋಜನ್‌ ಉತ್ತೇಜಿಸು ತ್ತಿದ್ದು, ಇದನ್ನು ಪ್ರಯಾಣಿಕರ ವಿಮಾನಗಳಲ್ಲಿ ಪರಿಚಯಿಸುವ ಗುರಿಯನ್ನು ಹೊಂದಿದೆ.

ರಾಷ್ಟ್ರೀಯ ಹಸುರು ಹೈಡ್ರೋಜನ್‌ ಯೋಜನೆ
2023ರಲ್ಲಿ ಆರಂಭವಾದ ಕೇಂದ್ರ ಸರಕಾರದ ಹಸುರು ಹೈಡ್ರೋಜನ್‌ ಯೋಜನೆಯು ಹಸುರು ಹೈಡ್ರೋಜನ್‌ ಮತ್ತು ಅದರ ಉತ್ಪನ್ನಗಳ ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವ ಗುರಿ ಹೊಂದಿದೆ. ಇದು ಶುದ್ಧ ಇಂಧನದ ಮೂಲಕ ಆತ್ಮನಿರ್ಭರ ವಾಗಬೇಕೆಂಬ ಭಾರತದ ಗುರಿಗೆ ಕೊಡುಗೆ ನೀಡುತ್ತದೆ ಮತ್ತು ಜಾಗತಿಕ ಶುದ್ಧ ಇಂಧನ ಪರಿವರ್ತನೆಗೆ ಸ್ಫೂರ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಯೋಜನೆ ಆರ್ಥಿಕತೆಯ ಗಮನಾರ್ಹ ಡಿಕಾರ್ಬನೈಸೇಶನ್‌ಗೆ ಕಾರಣವಾಗುತ್ತದೆ, ಪಳೆಯುಳಿಕೆ ಇಂಧನ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಹಸುರು ಹೈಡ್ರೋಜನ್‌ನಲ್ಲಿ ತಂತ್ರಜ್ಞಾನ ಮತ್ತು ಮಾರುಕಟ್ಟೆ ನಾಯಕತ್ವವನ್ನು ವಹಿಸಿಕೊಳ್ಳಲು ಭಾರತಕ್ಕೆ ಅನುವು ಮಾಡಿಕೊಡುತ್ತದೆ. ಈ ಯೋಜನೆಯ ಅಡಿಯಲ್ಲಿ ಭಾರತದಲ್ಲಿ 2029-30ರ ವರೆಗೆ ಈ ಕ್ಷೇತ್ರಕ್ಕೆ 17,490 ಕೋಟಿ ರೂ.ಗಳಷ್ಟು ಹಣ ಮೀಸಲಿಡಲಾಗಿದೆ.

ಹಸುರು ಹೈಡ್ರೋಜನ್‌ನ ಅನುಕೂಲ
ಹಸುರು ಹೈಡ್ರೋಜನ್‌ ಅನ್ನು ದಹಿಸುವಾಗ ಅಥವಾ ಉತ್ಪಾದಿಸುವಾಗ ಇಂಗಾಲ ಅಥವಾ ಇನ್ನಿತರ ಮಾಲಿನ್ಯಕಾರಕ ಅನಿಲಗಳನ್ನು ಹೊರಸೂಸುವುದಿಲ್ಲ.
ಹಸುರು ಹೈಡ್ರೋಜನ್‌ ಅನ್ನು ಸಂಗ್ರಹಿಸಲು ಸುಲಭ, ಉತ್ಪಾದಿಸಿದ ತತ್‌ಕ್ಷಣ ಅಥವಾ ಅನಂತರದ ಸಮಯದಲ್ಲೂ ಇದನ್ನು ಇಂಧನವಾಗಿ ಸುಲಭವಾಗಿ ಉಪಯೋಗಿಸಬಹುದು.
ಹಸುರು ಹೈಡ್ರೋಜನ್‌ ಅನ್ನು ವಿದ್ಯುತ್‌ ಅಥವಾ ಸಂಶ್ಲೇಷಿತ ಅನಿಲವಾಗಿ ಪರಿವರ್ತಿಸಬಹುದು ಮತ್ತು ವಾಣಿಜ್ಯ, ಕೈಗಾರಿಕ ಅಥವಾ ಚಲನಶೀಲತೆ ಉದ್ದೇಶಗಳಿಗಾಗಿ ಬಳಸಬಹುದು.

ಹಸುರು ಹೈಡ್ರೋಜನ್‌ನ ಅನನುಕೂಲ
ಹಸುರು ಜಲಜನಕವನ್ನು ಪ್ರಮುಖವಾದ ನವೀಕರಿಸಬಹುದಾದ ಮೂಲಗಳಿಂದ ಶಕ್ತಿಯನ್ನು ಉತ್ಪಾದಿಸುವುದು ಹೆಚ್ಚು ದುಬಾರಿ. ಹಾಗಾಗಿ ಹೈಡ್ರೋಜನ್‌ ಪಡೆಯುವುದು ದುಬಾರಿಯಾಗಿದೆ.
ಸಾಮಾನ್ಯವಾಗಿ ಹೈಡ್ರೋಜನ್‌ ಉತ್ಪಾದನೆಗೆ ಅದರಲ್ಲೂ ಹಸುರು ಹೈಡ್ರೋಜನ್‌ ಉತ್ಪಾದನೆಗೆ ಇತರ ಇಂಧನಗಳಿಗಿಂತ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ.
ಹೈಡ್ರೋಜನ್‌ ವೇಗವಾಗಿ ಆವಿ­­ ಯಾ­ಗು­ತ್ತದೆ ಹಾಗೂ ತ್ವರಿತವಾಗಿ ಬೆಂಕಿಯ ಸಂಪರ್ಕಕ್ಕೆ ಬರುತ್ತದೆ. ಆದ್ದರಿಂದ ಸೋರಿಕೆ ಮತ್ತು ಸ್ಫೋಟ ಸಾಧ್ಯತೆ ಹೆಚ್ಚು.

ತೇಜಸ್ವಿನಿ .ಸಿ. ಶಾಸ್ತ್ರಿ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.