ಕುಣಿಕೆಯ ಕಥೆ…


Team Udayavani, Mar 19, 2020, 6:48 AM IST

ಕುಣಿಕೆಯ ಕಥೆ…

ನಿರ್ಭಯಾ ಪ್ರಕರಣದ ಅಪರಾಧಿಗಳು ಕಾನೂನನ್ನು ದುರ್ಬಳಕೆ ಮಾಡಿಕೊಂಡು, ಶಿಕ್ಷೆ ಮುಂದೂಡಲು ಪ್ರಯತ್ನಿಸುತ್ತಿದ್ದಾರೆ. ಈಗಲೂ ಅವರು ನೇಣಿನ ಕುಣಿಕೆಯಿಂದ ನುಣುಚಿಕೊಳ್ಳುತ್ತಾರಾ? ಅಥವಾ ಮಾರ್ಚ್‌-20ರಂದೇ ಶಿಕ್ಷೆ ಜಾರಿ ಆಗಲಿದೆಯೇ? ಶಿಕ್ಷೆ ಜಾರಿಯಾಗುವುದಾದರೆ, ನೇಣಿಗೆ ಹಾಕಲು ಏನೆಲ್ಲ ವಿಧಾನಗಳಿವೆ, ಅಂದು ಅನುಸರಿಸಲಾಗುವ ಕ್ರಮಗಳೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಸೂರ್ಯೋದಯದ ಸಮಯಕ್ಕೆ
ನಿಗದಿತ ದಿನದಂದು ಸೂರ್ಯೋದಯದ ಸಮಯಕ್ಕೆ ಸರಿಯಾಗಿ ಗಲ್ಲಿಗೇರಿಸಬೇಕು. ಗಲ್ಲುಶಿಕ್ಷೆ ವಿಧಿಸುವ ದಿನ ಜೈಲಿನ ಸೂಪರಿಂಟೆಂ ಡೆಂಟ್‌, ಡೆಪ್ಯುಟಿ ಸೂಪರಿಂಟೆಂಡೆಂಟ್‌, ಅಸಿಸ್ಟೆಂಟ್‌ ಸೂಪರಿಂ ಟೆಂಡೆಂಟ್‌ ಹಾಗೂ ವೈದ್ಯಕೀಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿರು ತ್ತಾರೆ. ಗಲ್ಲುಶಿಕ್ಷೆಯ ಮೇಲುಸ್ತುವಾರಿ ನೋಡಿಕೊಳ್ಳಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಂದ ನಿಯುಕ್ತಿಗೊಂಡ ಎಕ್ಸಿಕ್ಯೂಟಿವ್‌ ಮ್ಯಾಜಿ ಸ್ಟ್ರೇಟ್‌ ಇರುತ್ತಾರೆ. ಗಲ್ಲುಶಿಕ್ಷೆಯ ಆದೇಶಕ್ಕೆ ಇವರೇ ಸಹಿ ಹಾಕುತ್ತಾರೆ.

ಧರ್ಮಗುರು ಇರಬಹುದು
ಅಪರಾಧಿ ಬಯಸಿದರೆ ಆತನ ಧರ್ಮದ ಗುರುವೊಬ್ಬರನ್ನು ಒಳಗೆ ಕರೆಯಿಸಿಕೊಳ್ಳುವುದಕ್ಕೆ ಅವಕಾಶ ಇದೆ. ಇಂತಹ ಸಂದರ್ಭ ಜೈಲು ಸೂಪರಿಂಟೆಂಡೆಂಟ್‌ ಅವರ ಒಪ್ಪಿಗೆಯಿರಬೇಕು. ಕೈದಿಯ ಸಂಬಂಧಿಕರಾಗಲಿ, ಜೈಲಿನ ಇತರ ಕೈದಿಗಳಾಗಲೀ ಅಲ್ಲಿರುವಂತಿಲ್ಲ. ಗಲ್ಲುಶಿಕ್ಷೆಯ ಬಗ್ಗೆ ಸಂಶೋಧನೆ ನಡೆಸುತ್ತಿರುವ ಸಾಮಾಜಿಕ ವಿಜ್ಞಾನಿಗಳು, ಮನಃಶಾÏಸ್ತ್ರಜ್ಞರು ಅಥವಾ ಮನೋವೈದ್ಯರು ಒಳಗೆ ಪ್ರವೇಶಿಸಬಹುದು.

ಸ್ನಾನ, ಹೊಸ ಬಟ್ಟೆ
ಜೈಲಿನ ಹೊರಗೆ ಬಿಗಿ ಭದ್ರತೆಯಿರುತ್ತದೆ. ಕೈದಿಯ ಇಷ್ಟದ ಊಟ, ಸ್ನಾನ ಹಾಗೂ ಗಲ್ಲುಶಿಕ್ಷೆಯ ಮುನ್ನಾದಿನ ರಾತ್ರಿ ಕೈದಿ ಬಯಸಿದ ರೀತಿಯ ಆಹಾರವನ್ನು ನೀಡಲಾಗುತ್ತದೆ. ಮರುದಿನ, ಗಲ್ಲುಶಿಕ್ಷೆಗೆ ಎರಡು ತಾಸಿರುವಾಗ ಅವನನ್ನು ಎಬ್ಬಿಸಿ ಸ್ನಾನ ಮಾಡಲು ಹೇಳಲಾಗುತ್ತದೆ. ಬಳಿಕ ಹೊಸ ಬಟ್ಟೆ ತೊಡಿಸಿ ಜೈಲು ಕೋಣೆಯಿಂದ ಹೊರಗೆ ಕರೆತಂದು ಮುಖಕ್ಕೆ ಕಪ್ಪು ಬಟ್ಟೆ ಮುಚ್ಚಲಾಗುತ್ತದೆ. ಅಪರಾಧಿ ಹಲಗೆ ಏರಿದ ಬಳಿಕ ಅಧಿಕಾರಿಗಳು ನೇಣು ಹಾಕುವವನಿಗೆ ಸೂಚನೆ ಕೊಡುತ್ತಾರೆ. ಈ ವೇಳೆ ಆತ ಅಪರಾಧಿ ನಿಂತಿರುವ ಹಲಗೆಯನ್ನು ಲಿವರ್‌ ಮೂಲಕ ಸರಿಸುತ್ತಾನೆ. ಅಪರಾಧಿ ದೇಹ ನೇತಾಡುವ ಮೂಲಕ ಪ್ರಾಣ ಹೋಗುತ್ತದೆ.

ಗಲ್ಲು ಹಾಕುವುದು ಯಾರು?
ಗಲ್ಲಿಗೇರಿಸುವುದು, ಅದಕ್ಕಾಗಿ ಸಮಯ ನಿಗದಿ ಆಯಾ ರಾಜ್ಯಗಳ ಕೆಲಸ. ಗಲ್ಲುಶಿಕ್ಷೆಯ ಆದೇಶವನ್ನು ಸರಕಾರದಿಂದ ಸ್ವೀಕರಿಸಿದ ಆನಂತರ ಕಾರಾಗೃಹ ಅಧೀಕ್ಷಕರು ಆ ಬಗ್ಗೆ ಗಲ್ಲು ಶಿಕ್ಷೆಗೊಳಗಾಗುವ ವ್ಯಕ್ತಿಯ ಸಂಬಂಧಿಕರಿಗೆ ಮಾಹಿತಿ ನೀಡುತ್ತಾರೆ. ಗಲ್ಲಿಗೇರುವ ವ್ಯಕ್ತಿ ಉಯಿಲು ಬರೆಯಬೇಕೆಂದು ಬಯಸಿದರೆ ಅದಕ್ಕೆ ವ್ಯವಸ್ಥೆ ಮಾಡಬೇಕು.

ಹಗ್ಗ ಹೇಗಿರುತ್ತದೆ?
ಪ್ರತಿ ಗಲ್ಲುಶಿಕ್ಷೆಗೂ ಹೊಸ ಹಗ್ಗ ನೇಯಲಾಗುತ್ತದೆ. ಗಲ್ಲಿಗೇರಿಸುವ ವ್ಯಕ್ತಿಯೇ ಈ ಕೆಲಸ ಮಾಡುತ್ತಾನೆ. ಅದಕ್ಕೆ ಕಾನೂನುಬದ್ಧ ಅಳತೆ ಗಳಿವೆ. ಕೈದಿ 45 ಕೆ.ಜಿ. ತೂಕದವನಾಗಿದ್ದರೆ. ಎಂಟು ಅಡಿಯ ಹಗ್ಗ ಬಳಸಬೇಕು. 45ರಿಂದ 60 ಕೆ.ಜಿ ಒಳಗಿದ್ದರೆ. ಏಳು ಅಡಿ ಎಂಟು ಇಂಚು ಉದ್ದದ ಹಗ್ಗ ಬಳಸಬೇಕು. 60ರಿಂದ 75 ಕೆ.ಜಿ ತೂಕವಿದ್ದರೆ ಏಳು ಅಡಿ, 75ರಿಂದ 91 ಕೆ.ಜಿ. ಇದ್ದರೆ ಆರು ಅಡಿ ಆರು ಇಂಚು ಹಾಗೂ 91 ಕೆ.ಜಿ.ಗಿಂತ ಹೆಚ್ಚು ತೂಕವಿದ್ದರೆ ಆರು ಅಡಿಗಿಂತ ಚೂರು ಉದ್ದದ ಹಗ್ಗ ಬಳಸಲಾಗುತ್ತದೆ. ಈ ಹಗ್ಗ ಜಾರಲು ಅನುಕೂಲವಾ ಗುವಂತೆ ಎಣ್ಣೆ, ಬೆಣ್ಣೆ, ತುಪ್ಪ ಅಥವಾ ಬಾಳೆಹಣ್ಣನ್ನು ಸವರಲಾಗುತ್ತದೆ.

ಹ್ಯಾಂಗ್‌ಮೆನ್‌ಗಳು
ಪ್ರಸ್ತುತ ಭಾರತದಲ್ಲಿ ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಲ ಎರಡು ರಾಜ್ಯಗಳಲ್ಲಿ ಮಾತ್ರ ಅಧಿಕೃತವಾಗಿ ನೇಣುಗಂಬಕ್ಕೆ ಏರಿಸುವವರು ಇ¨ªಾರೆ. 2000 ಇಸವಿಯವರೆಗೂ ನೇಣುಗಂಬಕ್ಕೆ ಏರಿಸುವ ಕೆಲಸ ಮಾಡಿ, ಖ್ಯಾತಿ ಪಡೆದವರು ಬಂಗಾಲದ ನಾಟಾ ಮಲ್ಲಿಕ್‌ ಅವರು. ಇವರು ತಮ್ಮ ಸೇವಾವಧಿಯಲ್ಲಿ ಒಟ್ಟು 25 ಅಪರಾಧಿಗಳನ್ನು ನೇಣಿಗೇರಿಸಿ¨ªಾರೆ. ಇವರು ಕಡೆಯದಾಗಿ 2004ರಲ್ಲಿ ಧನಂಜಯ್‌ ಚಟರ್ಜಿಯನ್ನು ಗಲ್ಲಿಗೇರಿಸಿದ್ದರು. ಪ್ರತಿ ಬಾರಿ ನೇಣುಗಂಬಕ್ಕೆ ಏರಿಸಿದಾಗ 5ರಿಂದ 10 ಸಾವಿರ ನೀಡಲಾಗುತ್ತಿತ್ತು. ಮಲ್ಲಿಕ್‌ ಅವರಿಗೆ ಪಶ್ಚಿಮ ಬಂಗಾಲ ಸರಕಾರ ಪ್ರತಿ ತಿಂಗಳು 10 ಸಾವಿರ ರೂ. ಸಂಬಳ ನೀಡುತ್ತಿತ್ತು. 2008ರಲ್ಲಿ ನಾಟಾ ಮಲ್ಲಿಕ್‌ ನಿಧನರಾದರು. ಆಗ ಅವರ ಮಗ ಮೆಹ್ತಾಬ್‌ ಆ ಸ್ಥಾನಕ್ಕೆ ನೇಮಕವಾದರು. ನೇಣಿಗೆ ಏರಿಸುವ ವೃತ್ತಿ ಆ ಕುಟುಂಬಕ್ಕೆ ಸಂಪ್ರದಾಯವಾಗಿ ಬಂದಿತ್ತು. ನಾಟಾ ಮಲ್ಲಿಕ್‌ಗೂ ಹಿಂದೆ ಅವರ ತಂದೆ ಮತ್ತು ತಾತ ಇದೇ ವೃತ್ತಿ ಮಾಡಿಕೊಂಡಿದ್ದರು.

ಅರ್ಧ ತಾಸು ಕುಣಿಕೆಯಲ್ಲಿ
ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಲಾಗುತ್ತದೆ. ಯಾವುದೇ ಸಂದರ್ಭದಲ್ಲೂ ಆತ ನೇಣು ಗಂಬವನ್ನು ನೋಡುವಂತಿಲ್ಲ. ಗಲ್ಲುಗಂಬಕ್ಕೆ ಇರುವ 20 ಮೀಟರ್‌ ಅಂತರವನ್ನು ಕೈದಿ ಒಂದು ನಿಮಿಷದೊಳಗೆ ನಡೆದುಕೊಂಡು ಕ್ರಮಿಸಬೇಕು. ಗಲ್ಲಿಗೇರಿಸಿದ ಮೇಲೆ ಅರ್ಧ ತಾಸು ಕೈದಿಯನ್ನು ನೇಣು ಕುಣಿಕೆಯಲ್ಲೇ ಬಿಡಲಾಗುತ್ತದೆ. ಅನಂತರ ವೈದ್ಯಕೀಯ ಅಧಿಕಾರಿ ಪರೀಕ್ಷೆ ನಡೆಸಿ ನಿಧನವನ್ನು ಖಚಿತ
ಪಡಿಸುತ್ತಾರೆ.

ಮಹಜರು, ಸಂಬಂಧಿಕರಿಗೆ ದೇಹ
ಅಪರಾಧಿ ಮೃತನಾದ ಬಳಿಕ ಆತನ ದೇಹದ ಮಹಜರು ನಡೆಯುತ್ತದೆ. ಬಳಿಕ ಸಂಬಂಧಿಕರಿಗೆ ಮೃತದೇಹ ಹಸ್ತಾಂತರವಾಗುತ್ತದೆ. ಒಂದು ವೇಳೆ ಅವರು ದೇಹ ಪಡೆದುಕೊಳ್ಳಲು ನಿರಾಕರಿಸಿದರೆ ಮಾತ್ರ ಅಧಿಕಾರಿಗಳೇ ಆತನ ಧರ್ಮಕ್ಕೆ ಅನುಗುಣವಾಗಿ ಅಂತ್ಯಸಂಸ್ಕಾರ ನಡೆಸುತ್ತಾರೆ. ಶವ ಹಸ್ತಾಂತರವಾದರೆ ಅದನ್ನು ಸಾರ್ವಜನಿಕ ವೀಕ್ಷಣೆಗೆ ಇಡಬಾರದು, ಮೆರವಣಿಗೆ ನಡೆಸಬಾರದು ಎಂಬ
ಷರತ್ತು ಇದೆ.

ಯಾವ ಅಪರಾಧಗಳಿಗೆ ಈ ಶಿಕ್ಷೆ?
– ಗಂಭೀರವಾದ ಅಪರಾಧ, ಹತ್ಯೆಯ ಸಂಚು (ಐಪಿಸಿ 120ಬಿ)
– ದೇಶದ್ರೋಹ, ಸರಕಾರದ ವಿರುದ್ಧ ಯುದ್ಧ ಸಂಚು (ಐಪಿಸಿ 121)
– ಸಶಸ್ತ್ರ ಪಡೆಯೊಳಗೆ ದಂಗೆಗೆ ಪ್ರಚೋದನೆ (ಐಪಿಸಿ 132ಬಿ)
– ಹತ್ಯೆ (ಐಪಿಸಿ 302, 303)
– ಅಪ್ರಾಪ್ತನ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 305)
– ಸತಿ ಪದ್ಧತಿಯ ಆಚರಣೆ (ಸತಿ ಕಾಯ್ದೆ)
– ಡಕಾಯಿತಿ ಮತ್ತು ಕೊಲೆ (ಐಪಿಸಿ 396)-ಅತ್ಯಾಚಾರ ಮತ್ತು ಹತ್ಯೆ (ಐಪಿಸಿ 376ಎ)

ಜಾಹೀರಾತು ನೀಡಿದ್ದ ಶ್ರೀಲಂಕಾ
ಕೆಲವು ಸಮಯಗಳ ಹಿಂದೆ ಶ್ರೀಲಂಕಾದ ಪತ್ರಿಕೆಗಳಲ್ಲಿ ನೇಣಿಗೆ ಹಾಕುವವರ ನೇಮಕಾತಿಯ ಜಾಹೀರಾತು ನೀಡಲಾಗಿತ್ತು. 43 ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ಗಲ್ಲು ಶಿಕ್ಷೆ ಮತ್ತೆ ಆರಂಭಿಸಲಾಗಿದೆ. 2014ರಲ್ಲಿ ಅಲ್ಲಿ ನೇಣುಗಂಬಕ್ಕೆ ಹಾಕುತ್ತಿದ್ದ ವ್ಯಕ್ತಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಇಬ್ಬರು ಹ್ಯಾಂಗ್‌ಮನ್‌ಗಳನ್ನು ಪೂರ್ಣಾವಧಿಗೆ ನೇಮಿಸಿಕೊಂಡಿದೆ. ಅವರಿಗೆ ಪ್ರತಿ ತಿಂಗಳು 36,310 ರೂ. ನೀಡಲಾಗುತ್ತಿದೆ.

ಎಲ್ಲಿ ಹೆಚ್ಚು?
ಚೀನ, ಇರಾನ್‌, ಸೌದಿ ಈರೇಬಿಯಾ, ಇರಾಕ್‌ ಮತ್ತು ವಿಯೆಟ್ನಾಂ ದೇಶಗಳಲ್ಲಿ
ಅತಿ ಹೆಚ್ಚು ಪ್ರಮಾಣದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಚೀನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗುತ್ತದೆ. ಆದರೆ, ಇರಾನ್‌, ಇರಾಕ್‌, ಸೌದಿ ಆರೇಬಿಯಾ ಮತ್ತು ವಿಯೆಟ್ನಾಂನಲ್ಲಿ ನೇಣುಗಂಬಕ್ಕೆ ಏರಿಸಲಾಗುತ್ತದೆ ಅಥವಾ ಶಿರಚ್ಛೇದನ ಮಾಡಲಾಗುತ್ತದೆ.

ಎಷ್ಟು ದೇಶಗಳಲ್ಲಿದೆ ಗಲ್ಲು?
195 ದೇಶಗಳ ಪೈಕಿ 103 ದೇಶಗಳಲ್ಲಿ ಮರಣದಂಡನೆ ಶಿಕ್ಷೆ ರದ್ದುಪಡಿಸಲಾಗಿದೆ. ಭಾರತದಲಿ ಗಲ್ಲು ಶಿಕ್ಷೆಯ ಮೂಲಕ ಮರಣ ದಂಡನೆ ಜಾರಿಯಲ್ಲಿದೆ. ಚೀನ ಮತ್ತು ಉ.ಕೊರಿಯಾ ಸರಕಾರಗಳು ಲೆಕ್ಕಕ್ಕೆ ಸಿಗದಷ್ಟು ಮಂದಿಯನ್ನು ನಾನಾ ಕಾರಣಕ್ಕಾಗಿ ಪ್ರತಿವರ್ಷ ಸಾಯಿಸುತ್ತವೆ. ಕೆಲವು ರಾಷ್ಟ್ರಗಳು ಮರಣ ದಂಡನೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ಕೈದಿಗಳಿಂದ ಬಲವಂತದ ತಪ್ಪೊಪ್ಪಿಗೆಗಳನ್ನು ಪಡೆದು ಶಿಕ್ಷೆಗೆ ಒಳಪಡಿಸುವುದೂ ಇದೆ.

ಹ್ಯಾಂಗ್‌ಮೆನ್‌
ಬರ್ಬರ ಕೊಲೆ, ಅಪರೂಪದಲ್ಲಿ ಅಪರೂಪ ಪ್ರಕರಣ (ಭಾರತ, ಅಮೆರಿಕ)
ವ್ಯಭಿಚಾರ (ಮಾಲ್ಡೀವ್ಸ್‌, ಸೌದಿ ಅರೇಬಿಯಾ)
ಪ್ರವಾದಿ ನಿಂದನೆ, ಧರ್ಮನಿಂದನೆ
(ಸೌದಿ, ಇರಾನ್‌, ಪಾಕಿಸ್ತಾನ)
ಮಾದಕದ್ರವ್ಯ ಸಾಗಣೆ (ಹಾಂಕಾಂಗ್‌, ಸಿಂಗಾಪುರ)
ಆರ್ಥಿಕ ಅಪರಾಧ(ಚೀನ, ಉ.ಕೊರಿಯಾ, ವಿಯೆಟ್ನಾಂ)

ಟಾಪ್ ನ್ಯೂಸ್

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.