ದೇಶದ ಅಭಿವೃದ್ಧಿಯಲ್ಲಿ “ಸಂತೋಷ’ವೂ ಮುಖ್ಯ
Team Udayavani, Sep 12, 2019, 5:30 AM IST
ಭಾರತಕ್ಕಿಂತಲೂ ನೆರೆಯ ಪಾಕ್, ಚೀನವೇ ಮುಂದೆ
ಡಬ್ಲ್ಯುಎಚ್‌ಆರ್ ವರದಿಯಲ್ಲಿ ಭಾರತಕ್ಕೆ 140ನೇ ಸ್ಥಾನ
ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) “ದೇಶದ ಆರ್ಥಿಕ ಅಭಿವೃದ್ಧಿ’ಯ ಹಾದಿಯ ಬಗ್ಗೆ ಹೇಳಿದರೆ, ಒಂದು ದೇಶದ ಜನ ನೆಮ್ಮದಿಯಾಗಿದ್ದಾರೆಯೇ ಎನ್ನುವುದನ್ನು ತಿಳಿಸುವುದು “ಸಂತೋಷದ ಸೂಚ್ಯಂಕ’. ಜಾಗತಿಕ ಸಂತುಷ್ಟ ವರದಿ (ಡಬ್ಲ್ಯುಎಚ್‌ಆರ್) ಮೂಲಕ ಇದನ್ನು ಅಳೆಯಲಾಗುತ್ತದೆ.
ಹಾಗಿದ್ದರೆ ಯಾವೆಲ್ಲ ರಾಷ್ಟ್ರಗಳು ಅತ್ಯಂತ ಸಂತೃಪ್ತಿ, ಸಂತೋಷ ಹೊಂದಿವೆ? ಅತಿ ಸಂತೋಷದ ಜೀವನ ನಡೆಸುತ್ತಿರುವವರು ಯಾವ ದೇಶದ ಜನ, ಅತಿ ಕಡಿಮೆ ಎಲ್ಲಿ ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ಸಂತೋಷದ ಜೀವನ ಎಂದರೇನು?
ಸಂತೋಷವನ್ನು ಜೀವನದ ಮುಖ್ಯ ಗುರಿಯಾಗಿಸಿಕೊಂಡು, ಉತ್ತಮ ಆಡಳಿತ ವ್ಯವಸ್ಥೆಯಡಿ ಯಶಸ್ಸು , ಅಭಿವೃದ್ಧಿ ಮತ್ತು ಸಂಬಂಧಗಳನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳುವ ಮೂಲಕ ಆನಂದದ ಬದುಕನ್ನು ನಡೆಸುವುದು. ಇದನ್ನು ಈ ವರದಿ ವೇಳೆ ಪ್ರಮುಖವಾಗಿ ಪರಿಗಣಿಸಲಾಗುತ್ತದೆ.
ಸಮೀಕ್ಷೆ ನಡೆಸಿದ್ದು ಯಾರು?
ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರ ಸಂಸ್ಥೆ ಈ ಸಮೀಕ್ಷೆಯನ್ನು ಪ್ರತಿ ವರ್ಷ ನಡೆಸುತ್ತದೆ. ಯಾವ ದೇಶದ ಜನರು ಸುಖಮಯ ಜೀವನ ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದನ್ನು ತನ್ನ ವರದಿಯಲ್ಲಿ ಉಲ್ಲೇಖೀಸುತ್ತದೆ.
ಮಾನದಂಡಗಳೇನು?
ಜನರು ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ನಿರ್ದಿಷ್ಟ ಮಾನದಂಡ ಅನ್ವಯ ಸಂತುಷ್ಟವಾಗಿರುವ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತದೆ. ಈ ಮಾನದಂಡಗಳು ಹೀಗಿವೆ.
· ಸಾಮಾನ್ಯ ಜೀವಿತಾವಧಿ
· ಆದಾಯ
· ಸ್ವಾತಂತ್ರ್ಯ
· ಆರೋಗ್ಯ
· ಔದಾರ್ಯ, ನಂಬಿಕೆ
· ಸಾಮಾಜಿಕ ಕಳಕಳಿ
8 ವರ್ಷಗಳಿಂದ ಸಮೀಕ್ಷೆ
ಎಂಟು ವರ್ಷಗಳಿಂದ ಈ ಸಮೀಕ್ಷೆ ನಡೆಯುತ್ತಾ ಬಂದಿದ್ದು, ಅಧಿಕೃತವಾಗಿ 2012ರ ಏಪ್ರಿಲ್ 12ರಂದು ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರ ಸಂಸ್ಥೆ ಸಮೀಕ್ಷೆಯ ಮೊದಲ ವರದಿಯನ್ನು ಪ್ರಕಟಿಸಿತ್ತು.
ಭಾರತಕ್ಕೆ 140ನೇ ಸ್ಥಾನ
ಭಾರತ 2018ರ ಸಾಲಿನಲ್ಲಿ 133ನೇ ಸ್ಥಾನ ಪಡೆದುಕೊಂಡಿತ್ತು. ಈ ವರ್ಷ 7 ಸ್ಥಾನ ಕುಸಿದು 140ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ನೆರೆಯ ರಾಷ್ಟ್ರಗಳೇ ಮುಂದೆ
ಈ ಸಮೀಕ್ಷೆಯ ಫಲಿತಾಂಶದ ಪ್ರಕಾರ ನೆರೆಯ ಪಾಕಿಸ್ತಾನ, ಚೀನದ
ಪ್ರಜೆಗಳೇ ಹೆಚ್ಚು ಸಂತೋಷಿಗಳು. ಪಾಕಿಸ್ತಾನ 67ನೇ ಸ್ಥಾನ ಪಡೆದಿದ್ದರೆ,
ಚೀನ 100ನೇ ಸ್ಥಾನ ಪಡೆದಿದೆ.
ಫಿನ್ಲೆಂಡ್ ಅಗ್ರಗಣ್ಯ
ವಿಶ್ವದ ಅತ್ಯಂತ ಸಂತೃಪ್ತ ರಾಷ್ಟ್ರವಾಗಿ ಫಿನ್ಲಂಡ್ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ಅದು ಎರಡನೇ ಬಾರಿಗೆ ಮೊದಲ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರ ಸಂಸ್ಥೆಯ ಈ ಸಮೀಕ್ಷೆಯಲ್ಲಿ ಒಟ್ಟು 156 ರಾಷ್ಟ್ರಗಳಿಗೆ ಸ್ಥಾನಗಳನ್ನು ನೀಡಲಾಗಿದೆ.
ಸ್ಥಿರತೆ ಕಾಯ್ದುಕೊಂಡ ನಾಲ್ಕು ದೇಶಗಳು
ಕಳೆದ ನಾಲ್ಕು ವರ್ಷಗಳಿಂದ ತನ್ನ ಸ್ಥಾನಮಾನದಲ್ಲಿ ಡೆನ್ಮಾರ್ಕ್, ಸ್ವಿಜರ್‌ಲ್ಯಾಂಡ್, ನಾರ್ವೆ ಹಾಗೂ ಫಿನ್ಲಂಡ್ ಸ್ಥಿರತೆಯನ್ನು ಕಾಯ್ದುಕೊಂಡಿವೆ.
117 ದೇಶಗಳಿಗೆ ವಲಸಿಗರಿಂದ ಸ್ಥಾನ
ಸಮೀಕ್ಷೆಯಲ್ಲಿ ಭಾಗವಹಿಸಿದ 156 ದೇಶಗಳ ಪೈಕಿ 117 ದೇಶಗಳಲ್ಲಿ ತನ್ನ ಮೂಲ ನಿವಾಸಿಗಳಿಗಿಂತ ವಲಸೆ ಬಂದ ಜನರೇ ಹೆಚ್ಚು ಸಂತೋಷದಾಯಕರಾಗಿದ್ದು, ಸಂತುಷ್ಟ ಜೀವನ ನಡೆಸುವುದರಿಂದ ಆ ದೇಶಗಳಿಗೆ ಸಮೀಕ್ಷೆಯಲ್ಲಿ ಸ್ಥಾನ ದೊರಕಿದೆ.
ಪ್ರಜೆಗಳೇ ತೀರ್ಪುಗಾರರು
ಸಮೀಕ್ಷೆಯು ಓರ್ವ ಮಾನವನ ಸಂತೋಷದ ಪ್ರಮಾಣದ ಆಧಾರದ ಮೇಲೆ ನಡೆದಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದವರಿಗೆ ಪ್ರಶ್ನೆ ಕೇಳಿ
0 ಯಿಂದ 10ರವರೆಗೆ ಅಂಕಗಳನ್ನು ನೀಡಲು ಹೇಳಲಾಗುತ್ತದೆ. ಅವರು ತಮ್ಮ ಸಂತುಷ್ಟತೆ ಆಧಾರದಲ್ಲಿ ಅಂಕವನ್ನು ನೀಡುತ್ತಾರೆ.
4 ವರ್ಷಗಳಿಂದ ಹಿನ್ನಡೆ
2015ರಲ್ಲಿ 117ನೇ ಸ್ಥಾನದಲ್ಲಿದ್ದ ಭಾರತ 2016ರಲ್ಲಿ ಒಂದು ಸ್ಥಾನಕ್ಕೆ ಕೆಳಿಗಿಯುವ ಮೂಲಕ 188 ಸ್ಥಾನವನ್ನು ಪಡೆದುಕೊಂಡಿತ್ತು. 2017ರಲ್ಲಿ 122ನೇ ಸ್ಥಾನ ಗಳಿಸಿ ತುಸು ಸಮಾಧಾನ ಪಟ್ಟುಕೊಂಡಿದ್ದು, ಕಳೆದ ವರ್ಷ 132ನೇ ಸ್ಥಾನಕ್ಕೆ ಇಳಿಯುವ ಮೂಲಕ ಸತತವಾಗಿ ನಾಲ್ಕು ವರ್ಷಗಳಿಂದ ಹಿನ್ನಡೆ ಸಾಧಿಸಿದೆ.
ಹಿಂದುಳಿಯಲು ಕಾರಣಗಳೇನು?
ಸುಸ್ಥಿರ ಅಭಿವೃದ್ಧಿ ದರ ಕಾಯ್ದುಕೊಳ್ಳುವಿಕೆಯಲ್ಲಿ ಸೋಲು, ಜನರಲ್ಲಿ ಹೆಚ್ಚಿದ ನಕಾರಾತ್ಮಕ ಚಿಂತನೆಗಳು, ಆಡಳಿತ ವ್ಯವಸ್ಥೆಯಲ್ಲಿನ ತೊಡಕುಗಳು, ನಿರುದ್ಯೋಗ, ಬಡತನ, ಮೂಲ ಸೌಕರ್ಯಗಳ ಕೊರತೆಯಿಂದಾಗಿ ಜನರು ಕಡಿಮೆ ಸಂತುಷ್ಟರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ವಲಸೆ ಪ್ರದೇಶಗಳೇ ಬೆಸ್ಟ್
ಕಳೆದ ಬಾರಿಗಿಂತ ಈ ಬಾರಿ ವಿಶ್ವದೆಲ್ಲೆಡೆ ಇರುವ ವಲಸೆ ನಿವಾಸಿಗಳು ತಮ್ಮ ಮೂಲ ಸ್ಥಳಕ್ಕಿಂತ ವಲಸೆ ಪ್ರದೇಶಗಳಲ್ಲೇ ನೆಮ್ಮದಿಯಾಗಿದ್ದೇವೆ ಎಂದು ಹೇಳಿದ್ದಾರೆ. ಹೊಸ ಪ್ರದೇಶವಾದರೂ ಸಂತುಷ್ಟಕರ ಜೀವನ ನಮ್ಮದು ಎಂದಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಸಂತೋಷ ಇಲ್ಲೇ ಹೆಚ್ಚು
· ಫಿನ್ಲಂಡ್
· ಡೆನ್ಮಾರ್ಕ್
· ಸ್ವಿಜರ್‌ಲ್ಯಾಂಡ್
· ನಾರ್ವೆ
· ಐಸ್‌ಲ್ಯಾಂಡ್
· ನೆದರ್ಲೆಂಡ್
· ಸ್ವೀಡನ್
· ನ್ಯೂಜಿಲೆಂಡ್
ಸಂತೋಷ ಇಲ್ಲಿ ಕಡಿಮೆ
· ದಕ್ಷಿಣ ಸುಡಾನ್
· ಕೇಂದ್ರ ಆಫ್ರಿಕಾ
· ಅಫ್ಘಾನಿಸ್ಥಾನ
· ತಾಂಜೇನಿಯಾ
· ರವಾಂಡ
· ಯೆಮನ್
· ಮಾಲ್ವಿ
· ಸಿರಿಯಾ
· ಬೋಟ್ಸಾನ
· ಹೈಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.