ತಾಯಿ ಮತ್ತು ನವಜಾತ ಶಿಶುವಿನ ಆರೈಕೆ: ಜಾಗೃತಿ, ಸುರಕ್ಷೆಯೇ ಆದ್ಯಮಂತ್ರವಾಗಲಿ
Team Udayavani, Sep 17, 2021, 7:20 AM IST
ಬದುಕು ಎನ್ನುವುದು ಸುಂದರ ಜೀವನದ ಅದ್ಭುತ ಪರಿಕಲ್ಪನೆ. ಈ ಸೌಧದ ಹಿಂದೆ ಪರಿಶ್ರಮದ ಫಲವಿದೆ. ಬೆವರಿನ ಹನಿಯ ಮೌಲ್ಯವಿದೆ. ಬಾಳ ಭವಿಷ್ಯದ ಸುಂದರ ಕನಸುಗಳ ವಿಹಾರವಿದೆ. ಜೀವನ ಪಯಣದ ಹಾದಿಯನ್ನು ಸುಂದರಗೊಳಿಸಿ ಅವಘಡಗಳಿಂದ ದೂರ ಮಾಡಿಸಬೇಕು ಎನ್ನುವ ಭವ್ಯ ಕ್ರಿಯಾಯೋಜನೆ ಅಡಕವಾಗಿದೆ. ಪ್ರಯಾಸದಿಂದ ನಮ್ಮ ಪಾಲಿಗೆ ಒಲಿಸಿ ಕೊಂಡ ಇಂಥ ಬೆಲೆಕಟ್ಟಲಾಗದ ಜೀವನವನ್ನು ಸುರಕ್ಷಿತ ವಾಗಿ ಕ್ಷಣಕ್ಷಣಕ್ಕೂ ಕಾಪಾಡಬೇಕಾದುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಆದ್ಯ ಕರ್ತವ್ಯ.
ಸುರಕ್ಷ ಕ್ರಮಗಳ ಅಳವಡಿಕೆ ಜೀವನವನ್ನು ಸುಂದರ ಗೊಳಿಸುವುದರ ಜತೆಯಲ್ಲಿ ಆಕಸ್ಮಿಕ ಅಪಘಾತಗಳನ್ನು ತಪ್ಪಿಸುವುದರಲ್ಲಿ ಎರಡು ಮಾತಿಲ್ಲ. ಜನಮಾನಸದಲ್ಲಿ ಈ ವಿಚಾರಗಳ ಗಂಭೀರತೆಯ ಪ್ರಜ್ಞೆ ಯನ್ನು ಮೂಡಿಸಬೇಕು ಎನ್ನುವ ಸದು ದ್ದೇಶದಿಂದ ಸರಕಾರವು ಸೆಪ್ಟಂಬರ್ 11ರಿಂದ 17ರ ವರೆಗೆ “ಸುರಕ್ಷ ಸಪ್ತಾಹ’ ವನ್ನು ಪ್ರತೀವರ್ಷ ಆಚರಿಸುತ್ತಾ ಬಂದಿದೆ. ಸಪ್ತಾಹದ ಕೊನೆಯಲ್ಲಿ ವಿಶ್ವ ರೋಗಿಗಳ ಸುರಕ್ಷ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿಯ ಘೋಷ ವಾಕ್ಯ “ತಾಯಿ ಮತ್ತು ನವಜಾತ ಶಿಶುವಿನ ಆರೈಕೆ’.
ಒಬ್ಬ ಹೆಣ್ಮಗಳು ಗರ್ಭ ಧರಿಸಿದಂದಿನಿಂದ, ಆಹ್ಲಾದ ಕರವಾದ ಸನ್ನಿ ವೇಶದಲ್ಲಿ ಪುಟ್ಟ ಕಂದಮ್ಮನಿಗೆ ಜನ್ಮವನ್ನು ನೀಡಿ, ತದನಂತರ ಸಂತೃಪ್ತಿಯ ತಾಯ್ತನದ ಸುಖವನ್ನು ಅನುಭವಿಸುವ ಇಷ್ಟೊಂದು ಸುದೀರ್ಘ ಸಮಯದ ಸುರಕ್ಷೆಯೇ ನಮ್ಮ ಮುಂದಿರುವ ಬಲುದೊಡ್ಡ ಸವಾಲು. ಒಂಬತ್ತು ತಿಂಗಳ ದೀರ್ಘ ಸುಸಮಯದ ಮೊದಲನೇ ತ್ತೈಮಾಸಿಕದಲ್ಲಿ ದುರ್ಬಲವಾದ ಗರ್ಭದ ಉಳಿವಿಗಾಗಿ ಅನಗತ್ಯವಾದ ಪ್ರಯಾಣವನ್ನು ತಡೆಹಿಡಿದು, ಕೆಳ ಹೊಟ್ಟೆಯ ಮೇಲೆ ಒತ್ತಡ ಬೀಳುವ ಕೆಲಸವನ್ನು ವರ್ಜಿಸಿ ಅತ್ಯಂತ ಜತನದಿಂದ ವರ್ತಿಸಿದಾಗ ಗರ್ಭಸ್ಥ ಶಿಶುವಿನ ಉಳಿವಿಗೆ ಹಾಗೂ ಗರ್ಭಪಾತದಿಂದ ಮಗುವಿನ ರಕ್ಷಣೆಯನ್ನು ಮಾಡುವ ನಿಟ್ಟಿನಲ್ಲಿ ತಾಯಿ ಮೊದಲ ಹೆಜ್ಜೆಯನ್ನಿಟ್ಟಂತಾಗುತ್ತದೆ. ವಿಪರೀತವಾದ ವಾಂತಿ ಗರ್ಭಿಣಿಯನ್ನು ಕಾಡಿದಾಗ ಮೊದಲ ಮೂರು ತಿಂಗಳು ಸಕ್ಕರೆಯ ಅಂಶವಿರುವ ಗ್ಲೂಕೋಸ್ ಅಥವಾ ಕಬ್ಬಿನ ಹಾಲಿನ ಸೇವನೆಯನ್ನು ಮಾಡಿದಾಗ ಕೀಟೋಸಿಸ್‌ಗೆ ಹೋಗಿ ಕೋಮಾವಸ್ಥೆಗೆ ತಲುಪುವ ವಿಷಮ ಸ್ಥಿತಿಯಿಂದ ತಾಯಿಯನ್ನು ಪಾರು ಮಾಡಬಹುದು.
ಗರ್ಭಾವಸ್ಥೆಯ ಯಾವುದೇ ಹಂತದಲ್ಲಿ ಗರ್ಭಿಣಿ ಯರಲ್ಲಿ ರಕ್ತಸ್ರಾವದ ಲಕ್ಷಣಗಳು ಕಾಣಿಸಿಕೊಂಡಾಗ ಸಕಾಲದಲ್ಲಿ ವೈದ್ಯಕೀಯ ಸಲಹೆಗೆ ಮೊರೆ ಹೋಗುವುದು ಅವಳ ಸುರಕ್ಷೆಯ ದೃಷ್ಟಿಯಿಂದ ವಿಹಿತ. ಈ ವಿಚಾರದಲ್ಲಿ ಆಕೆ ತೋರುವ ಔದಾಸೀನ್ಯ ಮೊದಲನೇ ಮತು ¤ಎರಡನೇ ತ್ರೆçಮಾಸಿಕದಲ್ಲಿ ಗರ್ಭಪಾತಕ್ಕೆ ಅಹ್ವಾನ ಕೊಟ್ಟಂತೆ. ಮೂರನೇ ತ್ರೆçಮಾಸಿಕದಲ್ಲಿ ಸಂಭವಿಸಬಹುದಾದ ರಕ್ತಸ್ರಾವ, ಪ್ಲಾಸೆಂಟಾ (ತಾಯಿಮಾಸು)ವು ಗರ್ಭ ಕೋಶದೊಳಗಣ ಅನಧಿಕೃತವಾದ ಜಾಗದಲ್ಲಿ ಇರು ವುದರಿಂದ ಅಥವಾ ಅಪರಿಪಕ್ವವಾಗಿ ಹೆರಿಗೆಗಿಂತ ಮುಂಚಿ ತವಾಗಿಯೇ ಬೇರ್ಪಡುವುದರಿಂದ ಆಗುವ ರಕ್ತಸ್ರಾವದ ಸಾಧ್ಯತೆಯನ್ನು ಮನವರಿಕೆ ಮಾಡಿಕೊಳ್ಳಬೇಕಾದ ಆವಶ್ಯಕತೆ ಇಂದು ಪ್ರತಿಯೊಬ್ಬ ಮಹಿಳೆಯ ಮುಂದಿದೆ. ಮೇಲೆ ತಿಳಿಸಿದ ರಕ್ತಸ್ರಾವಕ್ಕೆ ಕಾರಣವಾಗುವ ಸನ್ನಿವೇಶಗಳು ವೈದ್ಯಕೀಯ ರಕ್ಷಣೆ ರಹಿತವಾಗಿ ನಡೆದು ಹೋದಲ್ಲಿ ಅಥವಾ ವೈದ್ಯಕೀಯ ಸೌಲಭ್ಯ ವಂಚಿತವಾದ ಸ್ಥಳಗಳಲ್ಲಿ ಘಟಿಸಿ ದಲ್ಲಿ ಆ ತಾಯಿಯನ್ನು ಅಸುರಕ್ಷೆಯ ಕೂಪಕ್ಕೆ ತಳ್ಳಿ ಅವಳ ಮರಣಕ್ಕೆ ಕಾರಣವಾಗುವ ದುರಂತಕ್ಕೆ ನಾವೇ ಕಾರಣರಾಗುವ ಸಾಧ್ಯತೆ ಇದೆ.
ಗರ್ಭಿಣಿಯಲ್ಲಿ ಕೊನೆಯ ತ್ತೈಮಾಸಿಕದಲ್ಲಿ ಕಾಣಸಿಗ ಬಹುದಾದ ಅಧಿಕ ರಕ್ತದೊತ್ತಡ, ಮಧುಮೇಹ, ಗರ್ಭಿಣಿ ಹಾಗೂ ಗರ್ಭಸ್ಥ ಶಿಶುವಿನ ಪ್ರಾಣವನ್ನೇ ಹರಣ ಮಾಡಬಹುದು. ವಿವಿಧ ಪರೀಕ್ಷೆಗಳಿಂದ ಇಂಥವುಗಳನ್ನು ಪತ್ತೆಹಚ್ಚಿ ಅದನ್ನು ನಿಭಾವಣೆ ಮಾಡುವ ರೀತಿ ಮತ್ತು ನೀಡುವ ಆರೋಗ್ಯ ಶಿಕ್ಷಣದ ಪರಿಪಾಲನೆಯನ್ನು ತಜ್ಞರು ಮತ್ತು ಗರ್ಭಿಣಿ ಸಮರ್ಪಕ ರೀತಿಯಲ್ಲಿ ಅನುಸರಿಸಿದಲ್ಲಿ “ಸುರಕ್ಷಿತ ತಾಯ್ತನ ಮತ್ತು ಶಿಶು ಉಳಿವು’ ಎನ್ನುವ ಪದಪುಂಜಕ್ಕೆ ಸಾರ್ಥಕ್ಯದ ಅರ್ಥ ದೊರೆಯುತ್ತದೆ. ಪ್ರಸವದ ವೇದನೆಯನ್ನು ಅನುಭವಿಸುತ್ತಿರುವ ತಾಯಿಯ ಮತ್ತು ಗರ್ಭಸ್ಥ ಶಿಶುವಿನ ಪೂರ್ಣ ಪ್ರಮಾ ಣದ ಪರೀಕ್ಷೆ, ಅವಲೋಕನ ಹಾಗೂ ಅನುಸರಣೆ ತಾಯಿ ಮಗುವಿನ ಸುರಕ್ಷೆಯಲ್ಲಿ ಬಹುಮುಖ್ಯ ಪಾತ್ರ ವನ್ನು ವಹಿಸುತ್ತದೆ. ಪ್ರಸವೋತ್ತರ ರಕ್ತಸ್ರಾವದಂತಹ ಪ್ರಮಾದಗಳನ್ನು ತಡೆಗಟ್ಟಲು ಸಾಧ್ಯವಿರುವಂತಹ ಘಟನೆಗಳು ಸುಸಜ್ಜಿತವಾದ ಆರೋಗ್ಯ ಕೇಂದ್ರಗಳಲ್ಲಿ ಸಂಭವಿಸಿ ಆರೋಗ್ಯದ ಕ್ರಾಂತಿಯಲ್ಲಿ ಒಂದು ಕಪ್ಪು ಚುಕ್ಕೆಯಾಗದಿರಲಿ ಎನ್ನುವುದೇ ನಮ್ಮೆಲ್ಲರ ಹರಕೆ ಮತ್ತು ಹಾರೈಕೆ. ಬಾಣಂತಿಯರು ನೀರು ಕುಡಿಯುವುದನ್ನು ಹಲವರು ನಿರ್ಬಂಧಿಸುವುದನ್ನು ನಾವಿಂದು ನೋಡು ತ್ತಿದ್ದೇವೆ. ಇಂಥ ಅವೈಜ್ಞಾನಿಕ ವಿಧಾನಗಳಿಂದಲೇ ರಕ್ತವು ಹೆಪ್ಪುಗಟ್ಟಿ, ರಕ್ತದಲ್ಲಿ ಪರಿಚಲಿಸಲ್ಪಟ್ಟು ನೇರ ವಾಗಿ ಹೆಪ್ಪುಗಟ್ಟಿದ ರಕ್ತದ ಕಣಗಳು ಶ್ವಾಸಕೋಶ- ಹೃದಯಭಾಗಗಳಲ್ಲಿ ಸಿಕ್ಕಿ ಹಾಕಿಕೊಂಡು ಬಾಣಂತಿಯ ಮರಣಕ್ಕೆ ಕಾರಣ ವಾಗುವ ಸಾಧ್ಯತೆಗಳಿವೆ.
ನವಜಾತ ಶಿಶುಗಳ ಮರಣದತ್ತ ದೃಷ್ಟಿ ಹಾಯಿಸಿದಲ್ಲಿ ಸಾಕಷ್ಟು ನವಜಾತ ಶಿಶುಗಳ ಮರಣಕ್ಕೆ ಅಪರಿಪಕ್ವತೆ ಕಾರಣವಾಗಿರುವುದನ್ನು ನಾವೆಲ್ಲ ಕಂಡುಕೊಂಡಿರುವ ವಾಸ್ತವ ಸತ್ಯ. ತಾಯಿಯ ಅಪೌಷ್ಟಿಕತೆ ಮತ್ತು ರಕ್ತಹೀನತೆ ಯನ್ನು ತಡೆಗಟ್ಟಲು ಸಾಧ್ಯವಿರುವ ಕಾರಣಗಳನ್ನು ಗರ್ಭಾವಸ್ಥೆಯಲ್ಲಿಯೇ ಸಮರ್ಪಕ ರೀತಿಯಲ್ಲಿ ಸರಿಪಡಿಸಲು ಪ್ರಯತ್ನಿಸಿದಲ್ಲಿ ನವಜಾತ ಶಿಶು ತೀವ್ರ ನಿಗಾ ಘಟಕದ ದಾಖಲಾತಿಗಳು ಕಡಿಮೆಯಾಗಿ ಶಿಶು ಮರಣ ಪ್ರಮಾಣಗಳು ಕನಿಷ್ಠ ಮಟ್ಟಕ್ಕೆ ಬರಲು ಸಹಾಯಕವಾಗುತ್ತದೆ. ಗಂಡಾಂತರಕಾರಿ ಗರ್ಭಾ ವಸ್ಥೆಗಳ ಬಗೆಗಿನ ಅರಿವು, ಇಂಥ ಗರ್ಭಾವಸ್ಥೆಗಳ ದುಷ್ಪರಿಣಾಮಗಳ ಬಗೆಗಿನ ತಿಳಿವಳಿಕೆ, ಆರೋಗ್ಯ ಶಿಕ್ಷಣದ ಮೂಲಕ ತಾಯಿ-ಮಗುವಿನ ಉಳಿವಿನಲ್ಲಿ ಹಾಗೂ ಸುರಕ್ಷ ವಿಧಾನಗಳ ಅಳವಡಿಕೆಯಲ್ಲಿ ನಾವಿಡ ಬಹುದಾದ ಮಹತ್ವದ ಹೆಜ್ಜೆಗಳಾಗಿವೆ.
ಸರಕಾರಿ ಪ್ರಾಯೋಜಿತ ಅಪೂರ್ವ ಯೋಜನೆಗಳಾದ ಲಕ್ಷ್ಯ ಕಾರ್ಯಕ್ರಮ, ರಾಷ್ಟ್ರೀಯ ಗುಣಮಟ್ಟ ಖಾತ್ರಿ ಯೋಜನೆ ಮತ್ತು ಕಾಯಕಲ್ಪ ಕಾರ್ಯಕ್ರಮಗಳು ಆರೋಗ್ಯ ಇಲಾಖೆಯಲ್ಲಿ ಕ್ರಾಂತಿಕಾರಕ ಸುಧಾರಣೆಗೆ ಕಾರಣವಾಗಿವೆಯಲ್ಲದೆ ಜನಮಾನಸದಲ್ಲಿ ಅವಿಸ್ಮರ ಣೀಯ ಹೆಗ್ಗುರುತನ್ನು ಸೃಷ್ಟಿಸಿದೆ. ಈ ಎಲ್ಲ ಕಾರ್ಯ ಕ್ರಮಗಳು ಸುರಕ್ಷ ಮಾರ್ಗಗಳ ದಿಕ್ಸೂಚಿಯಾಗಿದ್ದು ತಾಯಿ ಮರಣವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವ ದೂರಗಾಮಿ ಪರಿಣಾಮ ಬೀರುವ ಮಹತ್ವಾಕಾಂಕ್ಷಿ ಯೋಜನೆಗಳಾಗಿವೆ.
ಹೆಣ್ಣು ಈ ನಾಗರಿಕ ಸಮಾಜದಲ್ಲಿ ಅತ್ಯಂತ ಗೌರವಯುತವಾದ ಸ್ಥಾನವನ್ನು ಪಡೆದಿರುವ ಪ್ರಕಾಶಮಾನವಾದ ಕಣ್ಣು. ಈ ಕಣ್ಣಿನಿಂದ ಹೊರ ಹೊಮ್ಮುವ ತೇಜಸ್ಸು ಯಾವುದೇ ಕ್ಷಣದಲ್ಲಿ ಮಬ್ಟಾಗ ಬಾರದು. ಇನ್ನೊಂದು ಜೀವದ ಉಗಮದ ಪ್ರಕ್ರಿಯೆಗೆ ಕಾರಣವಾಗುವ ಈ ತೇಜೋಮಯಿ ಅಸುರಕ್ಷಿತ, ಸ್ವಯಂ ಕೃತ ಅಪರಾಧಗಳಿಂದ ಅವಸಾನವನ್ನು ಕಾಣದಿರಲಿ. ಇಂಥ ಅನಪೇಕ್ಷಿತ ಅವಘಡಗಳಿಂದ ಸುಂದರ ಬಾಳು ನಾಶವಾಗದಿರಲಿ ಎನ್ನುವ ಕಳಕಳಿ ನಮ್ಮೆಲ್ಲರದಾಗಲಿ.
ಡಾ| ದುರ್ಗಾಪ್ರಸಾದ್ ಎಂ.ಆರ್.
ವೈದ್ಯಕೀಯ ಅಧೀಕ್ಷಕರು, ಸರಕಾರಿ ಲೇಡಿಗೋಶನ್ ಆಸ್ಪತ್ರೆ,
ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.