Dark Tourism ಬಗ್ಗೆ ಇಲ್ಲಿದೆ ಮಾಹಿತಿ; ಭಾರತ ಟಾಪ್‌ 10 ಡಾರ್ಕ್‌ ತಾಣಗಳು


Team Udayavani, Aug 5, 2024, 7:40 AM IST

Dark Tourism ಬಗ್ಗೆ ಇಲ್ಲಿದೆ ಮಾಹಿತಿ; ಭಾರತ ಟಾಪ್‌ 10 ಡಾರ್ಕ್‌ ತಾಣಗಳು

300ಕ್ಕೂ ಅಧಿಕ ಜನರು ದುರ್ಮರಣ ಕಂಡಿರುವ ವಯನಾಡಿಗೆ “ಡಾರ್ಕ್‌ ಟೂರಿಸಮ್‌’ಗಾಗಿ (ಕಹಿತಾಣ ಪ್ರವಾಸ) ಬರಬೇಡಿ ಎಂದು ಕೇರಳದ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಭೂಕುಸಿತ ದುರಂತ ನಡೆದ ಸ್ಥಳಕ್ಕೆ ಪ್ರವಾಸಿಗರು ಹೆಚ್ಚುತ್ತಿದ್ದಂತೆ ಈಗ ನಡೆಯುತ್ತಿರುವ ರಕ್ಷಣ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ‌ ಎಂಬುದು ಅವರ ಮನವಿಯ ಹಿಂದಿನ ಕಳಕಳಿ. ಡಾರ್ಕ್‌ ಟೂರಿಸಮ್‌ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತ ಟಾಪ್‌ 10 ಡಾರ್ಕ್‌ ತಾಣಗಳು
1.ಭಾನಗಢ ದುರ್ಗ ಕೋಟೆ, ರಾಜಸ್ಥಾನ:ಇದು ದೆವ್ವ­ಗ­ಳಿ­ವೆ ಎನ್ನಲಾದ ಕೋಟೆ. ರಾತ್ರಿಇಲ್ಲಿ ಪ್ರವೇಶ ನಿಷಿದ್ಧ.
2.ಜಲಿಯನ್‌ವಾಲಾ ಬಾಗ್‌, ಪಂಜಾಬ್‌: ಸ್ವಾತಂತ್ರ್ಯ ಹೋ­ರಾ­ಟ­ದಲ್ಲಿ ಬ್ರಿಟಿಷರ ಗುಂಡಿಗೆ 1,500 ಜನರು ಮೃತಪಟ್ಟಿದ್ದರು. ಅಲ್ಲೀಗ ಸ್ಮಾರಕವಿದೆ.
3.ದುಮಾರ್‌ ಬೀಚ್‌, ಗುಜರಾತ್‌: ಅರಬಿ ಸಮುದ್ರದ ತಟ. ದೆವ್ವ ಪೀಡಿತ ಸ್ಥಳ. ರಾತ್ರಿ ನಗುವ ಶಬ್ದ ಕೇಳಿಸುತ್ತದೆ.
4.ಥ್ರಿ ಕಿಂಗ್ಸ್‌ ಚರ್ಚ್‌, ಗೋವಾ: ದಕ್ಷಿಣ ಗೋವಾದ ಚರ್ಚ್‌ ಮೇಲೆ ದೆವ್ವಗಳ ನಿಯಂತ್ರಣವಿದೆ ಎಂಬ ನಂಬಿಕೆ.
5.ರೂಪ್‌ಕುಂಡ್‌, ಉತ್ತರಾಖಂಡ: ಅಸ್ಥಿಪಂಜರ ಸರೋವರ ಎಂದೂ ಕರೆಯುತ್ತಾರೆ. ಇಲ್ಲಿ ಅಸ್ಥಿಪಂಜರಗಳಿವೆ.
6.ಶನಿವಾರವಾಡೆ, ಪುಣೆ: ಐತಿಹಾಸಿಕ ಕೋಟೆ. ದೆವ್ವಗಳ ಕಾರಸ್ಥಾನ. ರಾತ್ರಿಯಾದರೆ ಭೇಟಿ ನಿಷೇಧ.
7.ಸೆಲ್ಯುಲಾರ್‌ ಜೈಲ್‌: ಪೋರ್ಟ್‌ಬ್ಲೇರ್‌ನ ಜೈಲಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಇಡಲಾಗು­ತ್ತಿತ್ತು.
8.ತಾಜ್‌ಮಹಲ್‌ ಪ್ಯಾಲೇಸ್‌ ಹೊಟೇಲ್‌, ಮುಂಬಯಿ: 2008ರಲ್ಲಿ ಉಗ್ರರಿಂದ ದಾಳಿಗೀಡಾದ ಹೊಟೇಲ್‌.
9.ಅನಿಲ ದುರಂತ, ಭೋಪಾಲ್‌: 1986ರ ದುರಂತದಲ್ಲಿ 3,787ಕ್ಕೂ ಅಧಿಕ ಜನರ ಸಾವು ಕಂಡ ಸ್ಥಳ.
10.ಕುಲಧಾರಾ, ರಾಜಸ್ಥಾನ: ದೆವ್ವಪೀಡಿತ ಹಳ್ಳಿ. 2010ರಿಂದ ಪ್ರವಾಸಿ ಸ್ಥಳವಾಗಿ ರೂಪಿಸಲಾಗಿದೆ.

ಜಗತ್ತಿನ ಅಗ್ರ 10 ಡಾರ್ಕ್‌ ಪ್ರವಾಸಿ ತಾಣ
1.ಆಶ್ವಿ‌ಟ್ಜ್-ಬಿರ್ಕೆನೌ, ಪೋಲೆಂಡ್‌: ಹಿಟ್ಲರ್‌ನ ಕುಖ್ಯಾತ ಕಾನ್ಸಂಟ್ರೇಶನ್‌ ಕ್ಯಾಂಪ್‌. ಹತ್ಯಾಕಾಂಡ ಸಂಕೇತ.
2.ಚೆರ್ನೋಬಿಲ್‌, ಉಕ್ರೇನ್‌: 1986ರಲ್ಲಿ ಸಂಭವಿಸಿದ ಪರಮಾಣು ವಿಕಿರಣ ಸೋರಿಕೆ ಸ್ಥಳ.
3.ಗ್ರೌಂಡ್‌ ಜೀರೋ, ಅಮೆರಿಕ: ಉಗ್ರರ ದಾಳಿಗೆ ಧ್ವಂಸ ವರ್ಲ್ ಟ್ರೇಡ್‌ ಸೆಂಟರ್‌ಗಳ ಜಾಗದಲ್ಲಿನ ಸ್ಮಾರಕ.
4.ದಿ ಕಿಲ್ಲಿಂಗ್‌ ಫೀಲ್ಡ್‌, ಕಾಂಬೋಡಿಯಾ: ಖಮೇರ್‌ ಆಡಳಿತದಲ್ಲಿ ಸಾಮೂಹಿಕ ಹತ್ಯೆ ನಡೆದ ಸ್ಥಳಗಳು. ಈ ಸ್ಮಾರಕದಲ್ಲಿ ತಲೆಬುರುಡೆಗಳನ್ನು ಇಡಲಾಗಿದೆ.
5.ಹೀರೋಶಿಮಾ ಶಾಂತಿ ಸ್ಮಾರಕ, ಜಪಾನ್‌: ಜಗತ್ತಿನ ಮೊಟ್ಟ ಮೊದಲ ಅಣು ಬಾಂಬ್‌ ದಾಳಿ ನಡೆದ ಸ್ಥಳ.
6.ಪೊಂಬೈ, ಇಟಲಿ: ಜ್ವಾಲಾಮುಖೀ ಸ್ಫೋಟದಿಂದ ನಾಮಾವಶೇಷವಾದ ಇಟಲಿಯ ಪ್ರಾಚೀನ ನಗರ.
7.ರಾಬೆನ್‌ ಐಲ್ಯಾಂಡ್‌, ದ.ಆಫ್ರಿಕಾ: ಜೈಲಿರುವ ದ್ವೀಪ. ನೆಲ್ಸನ್‌ ಮಂಡೇಲಾ 18 ವರ್ಷ ಇಲ್ಲಿನ ಜೈಲಿನಲ್ಲಿದ್ದರು.
8.ಟಯೊಲ್‌ ಸ್ಲೇಂಗ್‌, ಕಾಂಬೋಡಿಯಾ: ಖಮೇರ್‌ ಕಾಲದಲ್ಲಿ ಚಿತ್ರಹಿಂಸೆ ನೀಡುವ ತಾಣವಾಗಿದ್ದ ಶಾಲೆ.
9.ಅಲ್ಕಾಟ್ರಾಜ್‌ ದ್ವೀಪ, ಅಮೆರಿಕ: ಸ್ಯಾನ್‌ಫ್ರಾನ್ಸಿಸ್ಕೋ ಕೊಲ್ಲಿಯಲ್ಲಿರುವ ಜೈಲು. ಇಲ್ಲಿ ಅಮೆರಿಕದ ಕುಖ್ಯಾತ ಅಪರಾಧಿಗಳನ್ನು ಇಡಲಾಗುತ್ತಿತ್ತು.
10.ಬರ್ಲಿನ್‌ ವಾಲ್‌ ಸ್ಮಾರಕ, ಜರ್ಮನಿ: ಪೂರ್ವ ಮತ್ತು ಪಶ್ಚಿಮ ಭಾಗಗಳಾಗಿ ವಿಭಜನೆಯಾಗಿದ್ದ ಜರ್ಮನಿ ಮತ್ತೆ ಒಂದಾದ ನೆನಪಿನ ಸ್ಮಾರಕ.

ನೋವಿನ ನೆಲದಲ್ಲಿ ಕುತೂಹಲದ ಕಣ್ಣುಗಳು…
ಏನಿದು ಡಾರ್ಕ್‌ ಟೂರಿಸಮ್‌?
ಐತಿಹಾಸಿಕವಾಗಿ ಸಾಕಷ್ಟು ಮಹತ್ವ ಪಡೆದುಕೊಂಡಿರುವಸಾವು, ನೋವು ಮತ್ತು ದುರಂತಗಳಿಗೆ ಸಂಬಂಧಿಸಿದ ತಾಣಗಳಿಗೆ ಪ್ರವಾಸ ಕೈಗೊಳ್ಳುವುದನ್ನು “ಡಾರ್ಕ್‌ ಟೂರಿಸಮ್‌’ (ಕಹಿತಾಣ ಪ್ರವಾಸ) ಎಂದು ಕರೆಯಲಾಗುತ್ತದೆ. ಐತಿಹಾಸಿಕವಾದ ಶ್ಮಶಾನ ಭೂಮಿಗಳು, ವಿಪತ್ತು ವಲಯಗಳು, ಯುದ್ಧ ಭೂಮಿಗಳು, ಸ್ಮಾರಕಗಳು, ಕಾರಾಗೃಹಗಳು, ಮರಣದಂಡನೆಯ ಸ್ಥಳಗಳು ಮತ್ತು ಭೀಕರ ಅಪರಾಧ ನಡೆದ ಸ್ಥಳಗಳು ಡಾರ್ಕ್‌ ಟೂರಿಸಮ್‌ ತಾಣಗಳಾಗಿರ­ಬಹುದು. ಕುತೂಹಲದ ಕಾರಣಕ್ಕಾಗಿ ಅಥವಾ ಇತಿಹಾಸ ಅಧ್ಯಯನದ ಉದ್ದೇಶದಿಂದ ಈ ಪ್ರವಾಸೋದ್ಯಮ ಹೆಚ್ಚಿನ ಪ್ರಮಾಣದಲ್ಲಿ ಜನಪ್ರಿಯಗೊಳ್ಳುತ್ತಿದೆ. “ಚರ್ನೋಬಿಲ್‌’ ಮತ್ತು “ಡಾರ್ಕ್‌ ಟೂರಿಸ್ಟ್‌’ ಟಿವಿ ಸರಣಿಗಳ ಪ್ರಸಾರದ ಬಳಿಕ ಡಾರ್ಕ್‌ ಟೂರಿಸಮ್‌ ಜಾಗತಿಕವಾಗಿ ಹೆಚ್ಚು ಪ್ರಚಲಿತ­ವಾಗುತ್ತಿದೆ.

ವಿಪತ್ತು ಪ್ರವಾಸೋದ್ಯಮ: ಡಾರ್ಕ್‌ ಟೂರಿಸಮ್‌ನಂತೆ
ಡಿಸಾಸ್ಟರ್‌ ಟೂರಿಸಂ(ವಿಪತ್ತು ಪ್ರವಾಸೋದ್ಯಮ) ಕೂಡ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ. ನೈಸರ್ಗಿಕವಾಗಿ ಮತ್ತು ಮಾನವ ಕಾರಣದಿಂದ ಸಂಭವಿಸಿದ ಭೀಕರ ಪರಿಸರ ದುರಂತ ಸ್ಥಳಗಳಿಗೆ ಭೇಟಿ ನೀಡುವುದನ್ನು ವಿಪತ್ತು ಪ್ರವಾಸೋದ್ಯಮ ಎಂದು ಕರೆಯಲಾಗುತ್ತದೆ. ವಿಪತ್ತು ಪ್ರವಾಸೋದ್ಯಮದಲ್ಲಿ ಹೆಚ್ಚು ಗಮನ ಸೆಳೆಯುವ ಸ್ಥಳ ಎಂದರೆ, ಜ್ವಾಲಾಮುಖೀ ಸ್ಫೋಟವಾಗಿರುವ ಸ್ಥಳಗಳು. ಇಂತಹ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ.

ದುರಂತ ತಾಣದ‌ಲ್ಲಿ ರೀಲ್ಸ್‌!
ಒಂದೆಡೆ ಅಧ್ಯಯನ ಕಾರಣಕ್ಕಾಗಿ ವಿಪತ್ತು ಸಂಭವಿಸಿದ ತಾಣಕ್ಕೆ ತೆರಳುವುದು ಸಕಾರಾತ್ಮಕ ಪ್ರವಾಸೋದ್ಯಮ ಎನಿಸಿಕೊಂಡರೆ, ದುರಂತ ನಡೆದ ಜಾಗಕ್ಕೆ ತೆರಳಿ ರೀಲ್ಸ್‌ ಮಾಡುವುದು, ಫೋಟೋಶೂಟ್‌ ಮಾಡುವುದು ಇನ್ನೊಂದು ನಕಾರಾತ್ಮಕ ಡಾರ್ಕ್‌ ಟೂರಿಸಂ! ಈಗ ಕೇರಳ ಪೊಲೀಸರು ತಲೆಕೆಡಿಸಿಕೊಂಡಿರುವುದು ಇದೇ ಕಾರಣಕ್ಕೆ. ವಯನಾಡು ದುರಂತದ ರಕ್ಷಣ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ಅಷ್ಟರಲ್ಲೇ ಮೊಬೈಲ್‌ ಹಿಡಿದುಕೊಂಡು ಜನರ ದಂಡು ಅಲ್ಲಿಗೆ ಧಾವಿಸಿದೆ.

“ಡಾರ್ಕ್‌ ಟೂರಿಸಮ್‌’ ಪದ ಬಳಕೆಗೆ ಬಂದಿದ್ದು ಹೇಗೆ?
ದುರಂತ ನಡೆದ ಸ್ಥಳಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಪ್ರವೃತ್ತಿಯನ್ನು ಅಮೆರಿಕದ ಸಂಶೋಧಕರಾದ ಜಾನ್‌ ಲೆನಾನ್‌ ಮತ್ತು ಮಾಲ್ಕಮ್‌ ಫೋಲಿ ಮೊದಲಿಗೆ ಗುರುತಿಸಿದರು. 1990 ದಶಕದ ಮಧ್ಯಾಂತರದಲ್ಲಿ ಅವರು “ಡಾರ್ಕ್‌ ಟೂರಿಸಮ್‌’ ಎಂಬ ಪದವನ್ನೂ ಟಂಕಿಸಿದರು. “ಡಾರ್ಕ್‌ ಟೂರಿಸಮ್‌: ದಿ ಅಟ್ರಾಕ್ಷನ್‌ ಆಫ್ ಡೆತ್‌ ಆ್ಯಂಡ್‌ ಡಿಸಾಸ್ಟರ್ಸ್‌’ ಎಂಬ ಕೃತಿಯನ್ನೂ ರಚಿಸಿದ್ದಾರೆ. 20ನೇ ಶತಮಾನದ ಕೊನೆಯ ಭಾಗದಲ್ಲಿ ಈ ಪ್ರವೃತ್ತಿ ಇನ್ನೂ ಹೆಚ್ಚಾಯಿತು.

ಭಾವನಾತ್ಮಕ ಕ್ಷಣಗಳು…
ಐತಿಹಾಸಿಕ ಇಲ್ಲವೇ ನೈಸರ್ಗಿಕ ವಿಪತ್ತು ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿದಾಗ ಪ್ರವಾಸಿಗರು ಆ ಸ್ಥಳಗಳೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಳ್ಳುತ್ತಾರೆ. ಈ ವೇಳೆ ಸ್ಥಳದ ಇತಿಹಾಸ ಮತ್ತು ಸಂಸ್ಕೃತಿ ಯೊಂದಿಗೆ ಮಿಳಿತಗೊಳ್ಳುವ ಕ್ಷಣಗಳು ಸೃಷ್ಟಿಯಾಗಬಹುದು. ಉದಾ: ಅಂಡಮಾನ್‌ನಲ್ಲಿರುವ ಸೆಲ್ಯುಲಾರ್‌ ಜೈಲಿಗೆ ಭೇಟಿ ನೀಡಿದಾಗ, ಸ್ವಾತಂತ್ರ್ಯ ಹೋರಾಟಗಾರರು ಅನುಭವಿಸಿದ ಕಷ್ಟ, ನೋವುಗಳು ಅಲ್ಲಿನ ಪರಿಸ್ಥಿತಿ ನೋಡಿದ ಮೇಲೆ ನಮಗೆ ಅನುಭವಕ್ಕೆ ಬರುತ್ತದೆ. ಒಂದು ರೀತಿಯಲ್ಲಿ ರಾಷ್ಟ್ರೀಯತೆಯ ಭಾವನೆಗಳು ಬೆಳೆಯುತ್ತದೆ.

ಕೇರಳದ ಕಹಿ ತಾಣ ಪ್ರವಾಸ!
ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಳ್ಳುವ ಕೇರಳದಲ್ಲಿ 2023ರಲ್ಲಿ 2.18 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕೇರಳದ ಪುರಾತನ ದೇವಸ್ಥಾನಗಳು, ಸುಂದರ ಪರ್ವತ ಪ್ರದೇಶಗಳು, ಸಮುದ್ರ ತಟಗಳು, ಹಿನ್ನೀರು ತಾಣಗಳಿಗೆ ಭೇಟಿ ನೀಡುವಂತೆ, ಇಲ್ಲಿರುವ ಡಾರ್ಕ್‌ ಪ್ರವಾಸಿ ತಾಣಗಳಿಗೂ ಜನರು ಭೇಟಿ ನೀಡುತ್ತಾರೆ. ಲಕ್ಕಿಡಿ ಗೇಟ್‌ವೇ, ತಿರುವನಂತಪುರದ ಬೋನಾಕಾಡ್‌ ಬಂಗಲೆ, ತ್ರಿಚೂರ್‌ ಫಾರೆಸ್ಟ್‌, ಕರಿಯವಟ್ಟಂ, ಪೆರಂದೂರ್‌ ಕಾಲುವೆ, ಕೊಲ್ಲಂನ ವೀಪಿಂಗ್‌ ಘೋಸ್ಟ್‌, ಮೊರಿಸ್‌ ಬಂಗ್ಲೆ ತಾಣಗಳಿಗೂ ಭೇಟಿ ನೀಡುತ್ತಾರೆ.

ಕರ್ನಾಟಕದಲ್ಲೂ ಡಾರ್ಕ್‌ ಟೂರಿಸಮ್‌!
ಇತಿಹಾಸದಲ್ಲಿ ದುರಂತ ಘಟಿಸಿದ ತಾಣಗಳು ಈಗ ಪ್ರವಾಸಿತಾಣಗಳಾಗಿ ಬೆಳೆದಿರುವ ಉದಾಹರಣೆ ಕರ್ನಾಟಕದಲ್ಲೂ ಇವೆ…

1.ಫ್ರೀಡಂ ಪಾರ್ಕ್‌: ಬೆಂಗಳೂರ­ಲ್ಲಿರುವ ಫ್ರೀಡಂ ಪಾರ್ಕ್‌ ಈ ಹಿಂದೆ ಸೆಂಟ್ರಲ್‌ ಜೈಲ್‌ ಆಗಿತ್ತು. ಈಗ ಪ್ರವಾಸಿ ತಾಣ.

2.ಟಿಪ್ಪು ಡ್ರಾಪ್‌: ನಂದಿ ಬೆಟ್ಟದಲ್ಲಿರುವ ತಾಣ. ಟಿಪ್ಪು ಆಡಳಿತದಲ್ಲಿ ಅಪರಾಧಿ­­ಗಳನ್ನು ಬೆಟ್ಟದ ತುದಿಯಿಂದ ತಳ್ಳಿ ಸಾಯಿಸಲಾಗುತ್ತಿತ್ತು.

3.ಕರ್ನಲ್‌ ಬೈಲ್‌ ಕತ್ತಲು ಕೋಣೆ: ಶ್ರೀರಂಗ­ಪಟ್ಟಣದ ಜೈಲು. ಟಿಪ್ಪು ಸುಲ್ತಾನ್‌ ಬ್ರಿಟಿಷ್‌ ಅಧಿ ಕಾರಿಗಳನ್ನು, ಕೈದಿಗಳನ್ನು ಇಡುತ್ತಿದ್ದ ಜಾಗ.

4.ವಿದುರಾಶ್ವತ್ಥ: ಕರ್ನಾಟಕದ ಜಲಿಯನ್‌ವಾಲಾ ಬಾಗ್‌ ಎಂಬ ಖ್ಯಾತಿ. ಬ್ರಿಟಿಷರ ಗುಂಡಿಗೆ 33 ರೈತರ ಹತ್ಯೆಯಾಗಿತ್ತು.

5.ಕವಳೆದುರ್ಗ ಕೋಟೆ: ಕೆಳದಿ ಅರಸ ಶಿವಪ್ಪನಾಯಕ ಕೋಟೆ ಕಟ್ಟುವಾಗಲೇ ದಾಳಿ. ಆತನ ಗರ್ಭಿಣಿ ಪತ್ನಿ ಹತ್ಯೆ.

ಟಾಪ್ ನ್ಯೂಸ್

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

Donald Trump Salry: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Kannada-Horata

Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

16

Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.