ದಿಲ್ಲಿಯ ಹೊಸ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ; ಇಲ್ಲಿದೆ ಮಾಹಿತಿ..
Team Udayavani, Sep 5, 2022, 7:05 AM IST
ರಾಷ್ಟ್ರ ರಾಜಧಾನಿ ನವದೆಹಲಿಯ ರೈಲ್ವೆ ನಿಲ್ದಾಣವನ್ನು ಪುನರ್ ಅಭಿವೃದ್ಧಿ ಮಾಡುವುದಕ್ಕೆ ರೈಲ್ವೆ ಇಲಾಖೆಯು ಯೋಜನೆ ಹಾಕಿಕೊಂಡಿದೆ. ಮುಂದೆ ರೈಲ್ವೆ ನಿಲ್ದಾಣ ಹೇಗೆ ಕಾಣಲಿದೆ ಎನ್ನುವುದಕ್ಕೆ ಫೋಟೋವೊಂದನ್ನೂ ಬಿಡುಗಡೆ ಮಾಡಿದೆ. ಹೇಗಿರಲಿದೆ ದೆಹಲಿಯ ಹೊಸ ರೈಲ್ವೆ ನಿಲ್ದಾಣ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ಅವಳಿ ಕಟ್ಟಡ
ರೈಲ್ವೆ ನಿಲ್ದಾಣವು 40 ಅಂತಸ್ತಿನ ಅವಳಿ ಕಟ್ಟಡವಾಗಿ ನಿರ್ಮಾಣವಾಗಲಿದೆ. ಗೋಲಾಕಾರದಲ್ಲಿರುವ ಎರಡೂ ಟವರ್‌ಗಳ ಮೇಲ್ಭಾಗವು ಗ್ಲಾಸ್‌ನಿಂದ ಕೂಡಿರ ಲಿದೆ. ನಿಲ್ದಾಣದ ಎತ್ತರ 80 ಮೀಟರ್ ಇದ್ದರೆ ಉದ್ದ 450 ಮೀಟರ್ ಇರಲಿದೆ. ಒಟ್ಟು 2.22 ಲಕ್ಷ ಚದರ ಮೀಟರ್ ಜಾಗ ದಲ್ಲಿ ನಿಲ್ದಾಣ ನಿರ್ಮಾಣ ಗೊಳ್ಳ ಲಿದ್ದು, ಈ ಪೈಕಿ 45,000 ಚ.ಮೀಟರ್ ಪ್ರದೇಶದಲ್ಲಿ ರೈಲ್ವೆ ಕಚೇರಿ ತಲೆಎತ್ತಲಿದೆ. 91 ಬಸ್ಸುಗಳು ನಿಲುಗಡೆಗೆ, 1500 ಕಾರುಗಳ ಪಾರ್ಕಿಂಗ್‌ಗೆ ಅವಕಾಶ ಸಿಗಲಿದೆ.
2 ಲಕ್ಷ ಜನರ
ಪ್ರಯಾಣ
ಸದ್ಯ ಈಗಿರುವ ರೈಲ್ವೆ ನಿಲ್ದಾಣದಲ್ಲಿ 16 ಪ್ಲಾಟ್‌ಫಾರ್ಮ್ಗಳಿದ್ದು, ಪ್ರತಿನಿತ್ಯ 2 ಲಕ್ಷದಷ್ಟು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಹಾಗೆಯೇ ಹೊಸ ರೈಲ್ವೆ ನಿಲ್ದಾಣದಲ್ಲೂ 16 ಪ್ಲಾಟ್ ಫಾರ್ಮ್ ಗಳಿರಲಿವೆ. ಆದರೆ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.
ಪಾದಚಾರಿ ಗಳಿಗೆ ಮಾರ್ಗ
ಇದೇ ರೈಲ್ವೆ ನಿಲ್ದಾಣದಲ್ಲಿ ಪಾದಚಾರಿಗಳು ಸಾಗಲೆಂದು ವಿಶೇಷ ಸ್ಕೈ-ವಾಕ್‌ಗಳನ್ನು ಮಾಡಲಾಗುವುದು. ರೈಲ್ವೆ ನಿಲ್ದಾಣದಿಂದಲೇ ಮೆಟ್ರೋ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಿಕೊಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.