ಅವರ ಜಗಳ ನಮಗೆ ಸಂಕಷ್ಟ

ಇರಾನ್‌-ಅಮೆರಿಕ ಸಂಘರ್ಷ

Team Udayavani, Jan 9, 2020, 6:32 AM IST

30

ಇಲ್ಲಿ ಹಾಕಿರುವ ಲೆಕ್ಕಾಚಾರ ಈ ಕ್ಷಣಕ್ಕೆ ಊಹಾತ್ಮಕವೆನಿಸಬಹುದು; ಸಾಧ್ಯವೇ ಎನ್ನಿಸಲೂಬಹುದು; ತುಸು ಅತಿ ರಂಜಿತ ಎನಿಸಲೂಬಹುದು. ಆದರೆ ಇವರಿಬ್ಬರ ಗುದ್ದಾಟ ಮುಂದುವರಿದರೆ ನಿತ್ಯ ಜೀವನದ ಕಥೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದೆ. ಇದು ವಾಸ್ತವ.

ಚಿನ್ನದ ಮೇಲೆ ಪರಿಣಾಮ
24 ಕ್ಯಾರೆಟ್‌ ಚಿನ್ನದ ದರದಲ್ಲಿ ಏರಿಳಿಕೆ ಅಮೆರಿಕ-ಇರಾನ್‌ ಸಂಘರ್ಷ ಶುರುವಾದ ಬಳಿಕ ಹೆಚ್ಚಾಗಿದೆ. ಯುದ್ಧದ ಭೀತಿ ಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ದುಬಾರಿ ಯಾಗಿದೆ. ರಾಷ್ಟ್ರಗಳು ಡಾಲರ್‌ ಮೇಲೆ ಹೂಡಿಕೆ ಮಾಡುವುದು ಬಿಟ್ಟು ಚಿನ್ನದ ಮೇಲೆ ಹೂಡಿಕೆ ಮಾಡಲಿವೆ. ಪರಿಣಾಮ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿ ದರ ಹೆಚ್ಚಾಗುತ್ತದೆ. ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌ನ ನಡೆಯ ಮೇಲೆ ಚಿನ್ನ ದರ ನಿಗದಿ ಯಾಗುತ್ತದೆ.

ತೈಲ ಬೆಲೆ ಏರಿಕೆ
ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ದಿಢೀರ್‌ ಏರಿಕೆಯಾಗಿದೆ. ಬ್ರೆಂಟ್‌ ಕಚ್ಚಾ ತೈಲದ ಬೆಲೆ ಶೇ. 4.39ರಷ್ಟು ಏರಿಕೆಯಾಗಿದ್ದು 1 ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 69.16 ಡಾಲರ್‌ (ಅಂದಾಜು 4,900 ರೂ.) ತಲುಪಿದೆ. ಈ ಹಿಂದೆ ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 66.25 ಡಾಲರ್‌ (ಅಂದಾಜು 4,700 ರೂ.) ಇತ್ತು. ಯುದ್ಧ ಮುಂದುವರಿದರೆ ಈಗಿರುವ ಇಂಧನದ ದುಪ್ಪಟ್ಟು ದರ ಏರಿಕೆಯಾಗಲಿದೆ.

ಭಾರತಕ್ಕೆ ಭಾರೀ ಹೊಡೆತ
ಅಮೆರಿಕ ಮತ್ತು ಇರಾನ್‌ ಸಂಘರ್ಷದಿಂದಾಗಿ ಭಾರತ ಭಾರೀ ಸಮಸ್ಯೆ ಎದುರಿಸಲಿದೆ. ಈಗಾಗಲೇ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಡಾಲರ್‌ಗೆ ಶೇ 4.5 ಏರಿಕೆಯಾಗಿ, 69.02ರಿಂದ 71.75 ಡಾಲರ್‌ಗೆ ತಲುಪಿದೆ. ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚಳವಾಗಿ, ಅವುಗಳ ಬೆಲೆಯೂ ಏರಿಕೆಯಾಗಿದೆ. ಇದು ಆಭರಣ ಉದ್ಯಮಕ್ಕೆ ಸಂಕಷ್ಟವಾಗಲಿದೆ. ವಿದೇಶಿ ವಿನಿಮಯಕ್ಕೆ ಸಮಸ್ಯೆ, ರೂಪಾಯಿ ಇಳಿಕೆ, ರಫ್ತು ಕಡಿತದ ಭೀತಿ ಕಾಡಲಿದೆ.

ಇರಾನ್‌ ನಡೆ ಮೇಲೆ ಕಣ್ಣು
ಹತ್ಯೆ ಬಳಿಕ ಬ್ಯಾರೆಲ್‌ ಕಚ್ಚಾ ತೈಲದ ಬೆಲೆ ಶೇ. 4 ಏರಿಕೆ ಆಗಿದ್ದನ್ನು ಗಮನಿಸಿರಬಹುದು. ಅಮೆರಿಕದ ಮೇಲೆ ಪ್ರತೀಕಾರ ತೀರಿಸಬೇಕು ಎನ್ನುತ್ತಿರುವ ಇರಾನ್‌ಗೆ ಹಲವು ಆಯ್ಕೆಗಳಿವೆ. ಯುದ್ಧದ ಜತೆಗೆ ಆರ್ಥಿಕವಾಗಿ ಸೆಡ್ಡು ಹೊಡೆಯುವುದು, ಹರ್ಮಜ್‌ ಜಲಸಂಧಿಯನ್ನು ಮುಚ್ಚುವುದು. ಎರಡು ವರ್ಷಗಳ ಹಿಂದೆ ಅಮೆರಿಕವು ಇರಾನ್‌ ಮೇಲೆ ಆರ್ಥಿಕ ದಿಗ್ಬಂಧನ ಹಾಕಿದಾಗ ಹೀಗೇ ಮಾಡಲಾಗಿತ್ತು.

ಭಾರತಕ್ಕೆ ದರ ಏರಿಕೆಯ ಬರೆ
ಯುದ್ಧ ನಿಂತ ಮೇಲಿನ ಪರಿಣಾಮ ದುಪ್ಪಟ್ಟು. ತೈಲ ಬೆಲೆ ಏರಿಕೆಯ ಪ್ರಭಾವ ಅಗತ್ಯ ವಸ್ತುಗಳ ದರಗಳಲ್ಲಿಯೂ ಏರಿಕೆಯಾಗಲಿದೆ. ಇಂಧನ ದರ ಶೇ. 75ರಷ್ಟು ಹೆಚ್ಚಾದರೆ ಇದು ದಿನೋಪಯೋಗಿ ವಸ್ತುಗಳ ಬೆಲೆ ಮತ್ತಷ್ಟು ಹೊರೆ ಯಾಗಲಿದೆ. ಮಾತ್ರವಲ್ಲದೇ ಸಾರಿಗೆ ಮತ್ತು ಸಂಪರ್ಕ
ದಲ್ಲಿ ದರ ಏರಿಕೆಯ ಬಿಸಿ ತಾಗಲಿದೆ. ಯುದ್ಧದ ಬಳಿಕದ ಪರಿಣಾಮ ಎಷ್ಟು ವರ್ಷಗಳ ಕಾಲ ಮುಂದುವರಿಯಲಿದೆ ಎಂದು ಹೇಳುವುದು ಕಷ್ಟ.

ಮುಂಗಡ ಪತ್ರಕ್ಕೆ ಹಿನ್ನಡೆ
ಕೇಂದ್ರ ಸರಕಾರ ತನ್ನ ವಾರ್ಷಿಕ ಮುಂಗಡ ಪತ್ರವನ್ನು ತಯಾರಿಸುವ ಸಂದರ್ಭದಲ್ಲಿಯೇ ಈ ಬಿಕ್ಕಟ್ಟು ಸೃಷ್ಟಿಯಾಗಿದೆ. ಹಾಗಾಗಿ, ದೊಡ್ಡ ಮಟ್ಟದ ತೆರಿಗೆ ವಿನಾಯಿತಿಗಳು ಈ ಬಜೆಟ್‌ನಲ್ಲಿ ಕಂಡುಬರುವುದು ಕಷ್ಟ ಎಂದು ಹೇಳಲಾಗುತ್ತಿದೆ. ತೈಲದ ಮೇಲೆ ಮಾಡುತ್ತಿರುವ ವೆಚ್ಚ ಹೆಚ್ಚುತ್ತಿರುವುದರ ಬಗ್ಗೆ ಆರ್‌ಬಿಐ ಈಗಾಗಲೇ ಕಳವಳ ವ್ಯಕ್ತಪಡಿಸಿದೆ.

ಇಂಧನ ಹೆಚ್ಚು ಅಪಾಯ ಯಾಕೆ?
ಸಂಘರ್ಷ ಮುಂದುವರಿದರೆ ಇರಾನ್‌ನಿಂದ ತೈಲ ಪೂರೈಕೆಗೆ ತೊಡಕಾಗಬಹುದು. ಅಮೆರಿಕದಿಂದ ಜಲ ಮಾರ್ಗದ ಮೂಲಕ ಆಗುವ ತೈಲ ಪೂರೈಕೆಯನ್ನು ಇರಾನ್‌ ಗುರಿ ಮಾಡಿಕೊಳ್ಳುವ ಅಪಾಯವೂ ಇದೆ. ಈಗಾಗಲೇ ಇರಾನ್‌ನಿಂದ ತೈಲ ಖರೀದಿ ಮಾಡಬಾರದು ಎಂದು ಭಾರತದ ಮೇಲೆ ಅಮೆರಿಕ ಒತ್ತಡ ಹೇರುತ್ತಲೇ ಬಂದಿದೆ. ಈ ಉಭಯ ರಾಷ್ಟ್ರಗಳ ವ್ಯಾಪಾರ ನೀತಿ ಗ್ರಾಹಕ ರಾಷ್ಟ್ರ ಭಾರತದ ಮೇಲೆ ಹೆಚ್ಚು ಬಾಧಿತವಾಗುತ್ತದೆ.

ಇಂಧನದ ಬೇಡಿಕೆ ಹೇಗಿದೆ ?
ಭಾರತಕ್ಕೆ ತೈಲ ಪೂರೈಸುವ ದೇಶಗಳಲ್ಲಿ ಇರಾನ್‌ ಕೂಡ ಒಂದು. 2018-19ರಲ್ಲಿ ಇರಾನ್‌ನಿಂದ 2.3 ಕೋಟಿ ಟನ್‌ ತೈಲ ಆಮದಾಗಿದೆ. ಇದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 5ರಷ್ಟು ಹೆಚ್ಚು. ಇರಾಕ್‌ ಮತ್ತು ಸೌದಿ ಅರೇಬಿಯಾ ಅತಿ ಹೆಚ್ಚು ತೈಲ ಪೂರೈಸುವ ದೇಶವಾಗಿದ್ದು, ಬಳಿಕದ ಸ್ಥಾನದಲ್ಲಿ ಇರಾನ್‌ ಇದೆ. ಡಿ. 2ರ ಬಳಿಕ ಕಚ್ಚಾ ತೈಲದ ಬೆಲೆ ಶೇ. 14 ಏರಿಕೆಯಾಗಿದೆ. ಹಾಗಾಗಿ, ಈಗಿನ ಪರಿಸ್ಥಿತಿಯೇ ಭಾರತದ ಬಜೆಟ್‌ ಲೆಕ್ಕಾಚಾರ ವನ್ನು ಏರುಪೇರಾಗಿಸಬಹುದು. ಸೌದಿಯ ಅರಾಮೊR ಕಂಪೆನಿ ಮೇಲೆ ಸೆಪ್ಟಂಬರ್‌ನಲ್ಲಿ ಡ್ರೋನ್‌ ದಾಳಿಯಾದಾಗ ಕಚ್ಚಾ ತೈಲ ಬೆಲೆ ಬ್ಯಾರಲ್‌ ಒಂದಕ್ಕೆ 71.95 ಡಾಲರ್‌ ಏರಿಕೆಯಾಗಿದ್ದು, ಇದು ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರಿತ್ತು.

112 ಬಿಲಿಯನ್‌ ಡಾಲರ್‌
ಭಾರತ 2020ರಲ್ಲಿ 112 ಬಿಲಿಯನ್‌ ಡಾಲರ್‌ ಮೌಲ್ಯದ ಇಂಧನವನ್ನು ಆಮದು ಮಾಡಲು ಉದ್ದೇಶಿಸಿದೆ. ಆದರೆ ದರ ಏರಿಕೆಯಿಂದ ಈ ಮೀಸಲು ಮೊತ್ತ ಕಡಿಮೆಯಾಗಲಿದೆ.

ಬಸ್‌ ದರ ಖಂಡಿತ ಹೆಚ್ಚಿಸುತ್ತೇವೆ
ಇಂಧನ ದರದಲ್ಲಿ ಏರಿಕೆಯಾದರೆ ರಾಜ್ಯದಲಿ ಬಸ್‌ ಪ್ರಯಾಣ ದರವನ್ನು ಹೆಚ್ಚಿಸಲಾಗುವುದು. ಸದ್ಯ ಡೀಸೆಲ್‌ಗೆ 56 ರೂ.ಗಳು ಇರುವಾಗ ನಿಗದಿ ಮಾಡಿದ ದರ ಇಂದೂ ಇದೆ. ಸರಕಾರ ಇನ್ನೂ ದರ ಪರಿಷ್ಕರಣೆ ಮಾಡಿಲ್ಲ. ಈಗಾಗಲೇ ನಷ್ಟದಲ್ಲಿದ್ದು, ಇನ್ನು ಇಂಧನ ದರ ಹೆಚ್ಚಳವಾದರೆ ಖಂಡಿತವಾಗಿ ಪ್ರಯಾಣ ದರವನ್ನು ಹೆಚ್ಚಿಸಲಾಗುವುದು. ಇನ್ನು ನಮ್ಮ ಮುಂದಿರುವುದು ಎರಡೇ ಆಯ್ಕೆ. ಒಂದಾ ಬಸ್‌ ಸೇವೆ ನಿಲ್ಲಿಸುವುದು ಅಥವಾ ಟಿಕೆಟ್‌ ದರ ಹೆಚ್ಚಿಸುವುದು.
-ರಾಜವರ್ಮ ಬಳ್ಳಾಲ
ರಾಜ್ಯ ಬಸ್‌ ಮಾಲಕರ ಸಂಘದ ಅಧ್ಯಕ್ಷ

ಅಗತ್ಯ ವಸ್ತುಗಳ ದರವೂ ಏರಿಕೆ
ಇಂಧನ ದರದಲ್ಲಿ ಏರಿಕೆಯಾದರೆ ಸಹಜವಾಗಿ ಅದು ಇತರ ಎಲ್ಲಾ ಚಟುವಟಿಕೆಯ ಮೇಲೆ ಪ್ರಭಾವ ಬೀರಲಿದೆ. ಸಾರಿಗೆಯಲ್ಲಿ ಹೆಚ್ಚು ಹಣ ಹೂಡಬೇಕಾದ ಕಾರಣ ಅದರ ವೆಚ್ಚವನ್ನು ವಸ್ತುಗಳ ಮೇಲೆ ಹೇರಲಾಗುತ್ತದೆ. ಇದರ ಪರಿಣಾಮವಾಗಿ ಅಗತ್ಯ ವಸ್ತುಗಳಲ್ಲಿಯೂ ದರ ಏರಿಕೆಯಾಗಲಿದೆ. ಕಚ್ಚಾ ವಸ್ತುಗಳನ್ನು ಸಿದ್ಧವಸ್ತುವನ್ನಾಗಿಸುವ ಬಗೆಯಲ್ಲಿಯೂ ಹೆಚ್ಚು ಹಣ ವ್ಯಯವಾಗಲಿದ್ದು ಅದನ್ನು ವಿವಿಧ ಮೂಲಗಳಿಂದ ಭರಿಸಬೇಕಾಗುತ್ತದೆ.
-ದಿವಾಕರ್‌ ಸನಿಲ್‌, ವರ್ತಕರ ಹಿತರಕ್ಷಣಾ ವೇದಿಕೆ, ಉಪಾಧ್ಯಕ್ಷರು ಉಡುಪಿ

46%
ಆಯಿಲ್‌ ಆ್ಯಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೊರೇಶನ್‌ ಲಿ. (ಒಎನ್‌ಜಿಸಿ) ಮತ್ತು ಆಯಿಲ್‌ ಇಂಡಿಯಾದಲ್ಲಿ ಶೇ. 46 ಏರಿಕೆ ಯಾಗುವ ಸಾಧ್ಯತೆ ಇದೆ.

ಸಿಮೆಂಟ್‌
ಸಿಮೆಂಟ್‌ ತಯಾರಿಕೆಗೂ ಪೆಟ್ಟು ಬೀಳಲಿದೆ ಎಂದು ಹೇಳಲಾಗುತ್ತಿದೆ. ಇವುಗಳಲ್ಲಿ ಶೇ. 18ರಷ್ಟು ಏರಿಕೆಯಾಗಲಿದೆ. ತ್ವರಿತ ಮಾರಾಟ ಗ್ರಾಹಕ ಸರಕುಗಳು (ಎಫ್ಎಂಜಿಸಿ) ಏರಿಕೆ ಯಾಗದ್ದು, ಅದರ ನಿರ್ವಹಣೆ ವೆಚ್ಚ ಸಹಿತ ಒಟ್ಟಾರೆಯಾಗಿ ಏರಿಕೆಯಾಗಲಿದೆ.

ಟಯರ್‌ಗಳು
ಸಾರಿಗೆ ವಲಯಕ್ಕೆ ಪೂರಕವಾದ ಟಯರ್‌ ತಯಾರಿಕೆಗೂ ಹೆಚ್ಚಿನ ಹೊಡೆತ ಬೀಳಲಿದ್ದು,
ಶೇ. 17ರಷ್ಟು ದರ ಏರಿಕೆಯಾಗಲಿದೆ.

ಭಾರತದ ಇಂಧನ ಆಮದು
84% ಒಟ್ಟು ಆಮದು
60% ಮಧ್ಯಪ್ರಾಚ್ಯಗಳಿಂದ

-  ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

Forest: ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.