ಸೂರ್ಯ ಸಿಡಿಯುತ್ತಿದ್ದಾನೆ!


Team Udayavani, Feb 14, 2023, 6:05 AM IST

ಸೂರ್ಯ ಸಿಡಿಯುತ್ತಿದ್ದಾನೆ!

ವಿಜ್ಞಾನಿಗಳ ಊಹೆಗೂ ಮೀರಿ ಈಗ ಕೆಲವು ದಿನಗಳಿಂದ ಸೂರ್ಯ ಸಿಡಿಯುತ್ತಿದ್ದಾನೆ. ಫೆ. 7ರಿಂದ ಇದೀಗ ಎರಡು ಗಜಗಾತ್ರದ ಸೂರ್ಯಕಲೆಗಳನ್ನು ಗಮನಿಸಿ ಬೃಹತ್‌ ಸಿಡಿತಗಳನ್ನು ಊಹಿಸಿ ಮುಂಬರಬಹುದಾದ ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಅತ್ಯಾಶ್ಚರ್ಯ, ಮೊನ್ನೆ ಕಂಡ ಸೂರ್ಯನ ಕಲೆ ಎಆರ್‌3213 ಫೆಬ್ರವರಿ 11 ಪುನಃ ಸಿಡಿದು ಸೌರ ಜ್ವಾಲೆಯನ್ನು ಬಿತ್ತರಿಸಿದೆ. ಕೊತಕೊತ ಕುದಿವ ಪ್ಲಾಸ್ಮಾದ ಸೂರ್ಯ ಉತ್ತರ ಧ್ರುವದ ಸಮೀಪ ಸಿಡಿಯುತ್ತಲೇ ಇದ್ದಾನೆ.

ಫೆಬ್ರವರಿ 9ರಂದು ಬೃಹತ್‌ ಸೂರ್ಯನ ಕಲೆ ಕಾಣಿಸಿಕೊಂಡ ಬೆನ್ನಲ್ಲೇ ಸೂರ್ಯ ಉತ್ತರ ಧ್ರುವ ಸಮೀಪ ಕಾಂತೀಯ ಸುಂಟರಗಾಳಿಯೊಂದಿಗೆ ಸಿಡಿಯುತ್ತಿರುವುದನ್ನು ನಾಸಾ ಗಮನಿಸಿದೆ. ಈ ಅಯಸ್ಕಾಂತೀಯ ಸುಳಿ ಇಡೀ ಧ್ರುವಕ್ಕೆ ಸುತ್ತಿದಂತೆ ಕಂಡ ವಿಜ್ಞಾನಿಗಳು ಸೂರ್ಯನ ಚಿಪ್ಪೇ ಸಿಡಿದಂತೆ ಎಂದು ವರ್ಣಿಸಿದ್ದಾರೆ.

ಈ ರೀತಿಯ ಕಾಂತೀಯ ನರ್ತನ ಸೂರ್ಯನಿದ ಹೊರನಡೆದಾಗ ವಿದ್ಯುತ್‌ ಕಂತೀಯ ಕಿರಣಗಳು ಚಿಮ್ಮುತ್ತವೆ. ಇವನ್ನು ಸೌರಮಾರುತಗಳು ಎನ್ನುವರು. ಭೂಮಿಯಲ್ಲಿದ್ದವರಿಗೆ ಇದು ಸೂರ್ಯಕಲೆಯಾಗಿ ಕಾಣಿಸುತ್ತದೆ.

ಕಾಂತೀಯ ಸುಳಿಯಲ್ಲಿ ವಿದ್ಯುತ್‌ ಕಾಂತೀಯ ಕಿರಣಗಳ ಪ್ರವಾಹದಲ್ಲಿ ರೇಡಿಯೋ ಅಲೆಗಳಿಂದ ಪ್ರಾರಂಭಿಸಿ ಶಕ್ತಿಯುತ ಗಾಮಾ ಅಲೆಗಳ ವರೆಗೆ ಎಲ್ಲವೂ ಇರಬಹುದು. ದಶದಿಶೆಗೆ ಚಿಮ್ಮುವ ಇವಕ್ಕೆ ಸನ್‌ ಫ್ಲೇರ್‌ ಸೂರ್ಯ ಮಾರುತ ಎನ್ನುವರು. ಇವುಗಳಲ್ಲಿ ಶಕ್ತಿಯುತ ಅತಿನೇರಳೆ ಹಾಗೂ ಎಕ್ಸ್ ಕಿರಣಗಳನ್ನು ಎಂ ಹಾಗೂ ಎಕ್ಸ್ ಸನ್‌ ಫ್ಲೇರ್‌ ಎನ್ನುವರು. ಎಮ್‌ ಸೂರ್ಯ ಮಾರುತಗಳಿಂದ ಭೂಮಿಯಲ್ಲಿ ಕೆಲ ಅವ್ಯವಸ್ಥೆಗಳು ನಡೆದರೆ ಎಕ್ಸ್ ಮಾರುತಗಳು ಗಂಡಾಂತರಕಾರಿ.

ಈ ಕೆಲವು ದಿನಗಳ ವಿದ್ಯಮಾನದಲ್ಲಿ ಎಂ ಕಿರಣಗಳು ಚೆಲ್ಲಿವೆ. ಹಾಗೆ ಎಕ್ಸ್ ಕಿರಣಗಳೂ ಬರಬಹುದೆಂದು ಅಂದಾಜಿಸಿದ್ದಾರೆ. ಇವುಗಳಿಂದ ಭೂಮಿಯ ಕೆಲ ಭಾಗಗಳಲ್ಲಿ ವಿದ್ಯುತ್‌ ನಲ್ಲಿ ವ್ಯತ್ಯಯ, ಗ್ಲೋಬಲ್‌ ಇಂಟರ್ನೆಟ್‌ಗಳ ಮೇಲೆ ರೇಡಿಯೊ ಅಲೆಗಳು ಸೇಲ್ಫೋನ್, ಮೊಬೈಲ್‌ ಸಿಗ್ನಲ್‌ಗ‌ಳ ಮೇಲೂ ಈ ಕೆಲ ದಿನ ಪರಿಣಾಮ ಬೀರಬಹುದೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಕಾಂತೀಯ ಕಿರಣಗಳ ಪ್ರವಾಹದ ಹಿಂದಿಂದ ಮೆರವಣಿಗೆಯೋಪಾದಿಯಲ್ಲಿ ಶಕ್ತಿಯುತಕಣಗಳ ಸಿಡಿತ ಸಂಭವಿಸುತ್ತದೆ. ಇವನ್ನು ಕೊರೋನಲ್‌ ಮಾಸ್‌ ಇಜೆಕ್ಸನ್‌ ಎನ್ನುವರು.
ಭೂಮಿಯ ಧ್ರುವ ಪ್ರದೇಶಗಳಲ್ಲಿ ಅತಿಯಾದ ಬಣ್ಣಬಣ್ಣದ ಧ್ರುವ ಪ್ರಭೆ ಯಥೇತ್ಛವಾಗಿ ಕಾಣಿಸಬಹುದು.

ಸುಮಾರು 11 ವರ್ಷಕ್ಕೊಮ್ಮೆ ಸೂರ್ಯ ಕಲೆಗಳ ಆವರ್ತನ ನಡೆಯುತ್ತಿದೆ. ಈಗ 25ನೇ ಆವರ್ತನ ಡಿಸೆಂಬರ್‌ 2019ರಿಂದ ಪ್ರಾರಂಭ. ಪ್ರತೀ 11 ವರ್ಷಗಳಲ್ಲಿ ಕೆಲ ವರ್ಷ ಅತೀ ಕಡಿಮೆ ಕಲೆಗಳು, ಕೆಲ ವರ್ಷ ಅತೀ ಹೆಚ್ಚು ಕಲೆಗಳನ್ನು ಗಮನಿಸುತ್ತಲೇ ಇದ್ದಾರೆ. ಈ ಸಾರಿಯ 25ನೇ ಆವರ್ತದಲ್ಲಿ 2023ರಿಂದ 2026ರ ವರೆಗೆ ಹೆಚ್ಚಿಗೆ ಸೌರಕಲೆಗಳನ್ನು ಕಾಣಬಹುದೆಂದು ಅಂದಾಜಿಸಿದ್ದರು. ಹಾಗೆಯೇ ಈಗ ನಡೆಯುತ್ತಿರುವ 25ನೇ ಸೈಕಲ್‌ ಹೆಚ್ಚೇನೂ ವಿಶೇಷವಿರುವುದಿಲ್ಲವೆಂದು ವಿಜ್ಞಾನಿಗಳು ಅಂದಾಜಿಸಿದ್ದರು. ಆದರೆ ಸೂರ್ಯ, ಈಗ ಅದೆಲ್ಲವನ್ನೂ ತಲೆಕೆಳಗೆ ಮಾಡಿಸಿ ಈ 25ನೇ ಸೈಕಲ್‌ ತುಂಬಾ ವಿಚಿತ್ರವೆಂಬಂತೆ ಸೂರ್ಯ ವಿಜ್ಞಾನಿಗಳನ್ನು ದಿಗ½$›ಮೆಗೊಳಿಸುತ್ತ ಸಿಡಿಯುತ್ತಿದ್ದಾನೆ.

ಸೂರ್ಯನ ಕಾಂತೀಯ ಧ್ರುವಗಳು ಭೂಮಿಯಂತೆ ಯಾವಾಗಲೂ ಒಂದೇಕಡೆ ಸ್ಥಿರವಲ್ಲ. 11 ವರ್ಷಕ್ಕೊಮ್ಮೆ ಕಾಂತೀಯ ಧ್ರುವಗಳು ಉತ್ತರದಿಂದ ದಕ್ಷಿಣಕ್ಕೆ ಪರಿವರ್ತನೆ ಗೊಳಗಾಗುತ್ತವೆ. ಇದಕ್ಕೆ ಸೂರ್ಯನ ಸಂಕೀರ್ಣ ಅಯಸ್ಕಾಂತೀಯ ವ್ಯವಸ್ಥೆಯೇ ಕಾರಣ. ಈಗ ನಡೆಯುತ್ತಿರುವ ಮಾಮೂಲಿನಂತಿರದ ವಿಚಿತ್ರ ಅಯಸ್ಕಾಂತೀಯ ರುದ್ರ ನರ್ತನಕ್ಕೆ ಕಾರಣ ತಿಳಿಯಬೇಕಿದೆಯಷ್ಟೇ. ಇದೊಂದು ಸೂರ್ಯನ ವಿಚಿತ್ರ ವಿಸ್ಮಯ.

– ಡಾ| ಎ.ಪಿ. ಭಟ್‌, ಉಡುಪಿ

ಟಾಪ್ ನ್ಯೂಸ್

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

OM BIrla

Waqf ಸಮಿತಿಯಿಂದ ದೂರ: ಇಂದು ಸ್ಪೀಕರ್‌ ಜತೆ ವಿಪಕ್ಷ ಚರ್ಚೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

science-AI-2

ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

current

Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು

mob

WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್‌ ಅಧಿಕಾರಿ ದೂರು

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.