ಗ್ರಾಮ ಪಂಚಾಯತ್ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಹೇಗೆ?
Team Udayavani, Dec 9, 2020, 5:45 AM IST
ಸಾಂದರ್ಭಿಕ ಚಿತ್ರ
ಲೋಕಸಭೆ, ವಿಧಾನಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳ ಚುನಾವಣೆಗೆ ನಾಮಪತ್ರ ಸಲ್ಲಿಸುವಂತೆ ಆಕಾಂಕ್ಷಿಗಳು ಗ್ರಾಮ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಬೇಕು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ, ನಾಮಪತ್ರದ ಜತೆಗೆ ಸಲ್ಲಿಸಬೇಕಾದ ದಾಖಲೆಗಳು, ಚುನಾವಣ ಠೇವಣಿ ಹಾಗೂ ಚಿಹ್ನೆಗಳ ಹಂಚಿಕೆಯ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ನಾಮಪತ್ರ ಸಲ್ಲಿಕೆಗೆ ರಾಜ್ಯ ಚುನಾವಣ ಆಯೋಗ ನಿಗದಿಪಡಿಸಿದ ದಿನ ಹಾಗೂ ಸಮಯ ದೊಳಗೆ ನಾಮಪತ್ರ ಸಲ್ಲಿಸಬೇಕು. ಅದರಂತೆ ರಜಾ ದಿನಗಳನ್ನು ಹೊರತುಪಡಿಸಿ ನಾಮಪತ್ರ ಸಲ್ಲಿಕೆಗೆ ನಿಗದಿಪಡಿಸಿದ ದಿನಾಂಕಗಳ ಎಲ್ಲ ಕೆಲಸದ ದಿನ ಗಳಲ್ಲಿ ಬೆ. 11ರಿಂದ ಮ. 3 ಗಂಟೆಯೊಳಗೆ ನಮೂನೆ-5ರಲ್ಲಿ ನಾಮಪತ್ರ ಸಲ್ಲಿಸಬಹುದು.
ನಾಮಪತ್ರ ಸಲ್ಲಿಕೆಗೆ ಅಗತ್ಯ ವಿರುವ ದಾಖಲೆಗಳು
- ನಾಮಪತ್ರ ಸಲ್ಲಿಸುವ ಅಭ್ಯರ್ಥಿಯು ತಾನು ಪ್ರತಿನಿಧಿಸುವ ಗ್ರಾಮ ಪಂಚಾಯತ್‌ಯ ಮತ ದಾರರ ಪಟ್ಟಿಯಲ್ಲಿರುವ ತನ್ನ ಹೆಸರು ಮತ್ತು ಗುರುತಿನ ಸಂಖ್ಯೆಯನ್ನು ನಾಮಪತ್ರದಲ್ಲಿ ನಮೂ ದಿಸಬೇಕು. ಅದೇ ಗ್ರಾ.ಪಂ. ವ್ಯಾಪ್ತಿಯ ಮತ ದಾರರ ಪಟ್ಟಿಯಲ್ಲಿ ಹೆಸರು ಇರುವ ಒಬ್ಬ ಸೂಚಕರ ಹೆಸರನ್ನು ಅವರ ಮತದಾರ ಪಟ್ಟಿಯ ಸಂಖ್ಯೆ ಯನ್ನು ನಾಮಪತ್ರದಲ್ಲಿ ನಮೂದಿಸಬೇಕು.
- ಸಾಮಾನ್ಯ ಅಭ್ಯರ್ಥಿಗಳು 200 ರೂ. ಹಾಗೂ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಮಹಿಳೆಯರು 100 ಚುನಾವಣ ಠೇವಣಿ ಇಡಬೇಕು. ಇದನ್ನು ನಾಮಪತ್ರ ಸಲ್ಲಿಸುವ ವೇಳೆ ಚುನಾವಣ ಧಿಕಾರಿಗಳಿಗೆ ನಗದು ರೂಪದಲ್ಲಿ ಪಾವತಿಸ ಬೇಕು. ಬ್ಯಾಂಕ್ ಮೂಲಕವೂ ಪಾವತಿಸಲು ಅವಕಾಶವಿರುತ್ತದೆ.
ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವವರು ಸಂಬಂ ಧಿಸಿದ ಜಾತಿ ಹಾಗೂ ಸಿಂಧುತ್ವ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಹಿಂದೆ ಜಿ.ಪಂ. ತಾ.ಪಂ. ಅಥವಾ ಗ್ರಾ.ಪಂ ಸದಸ್ಯರಾಗಿದ್ದಾಗ ಯಾವುದಾದರೂ ಬಾಕಿ ಇದ್ದರೆ ಅದಕ್ಕೆ ನಾಮಪತ್ರದ ಜತೆಗೆ “ನಬಾಕಿ’ (ಎನ್‌ಒಸಿ) ಪ್ರಮಾಣಪತ್ರ ಸಲ್ಲಿಸಬೇಕು.
ಒಬ್ಬ ಅಭ್ಯರ್ಥಿ ಗರಿಷ್ಠ 4 ನಾಮಪತ್ರಗಳನ್ನು ಸಲ್ಲಿಸಬಹುದು. ಆದರೆ ಚುನಾವಣ ಠೇವಣಿ ಮಾತ್ರ ಒಂದು ನಾಮಪತ್ರಕ್ಕೆ ಅನ್ವಯವಾಗು ತ್ತದೆ. ನಾಮಪತ್ರ ಸಲ್ಲಿಸಿದ ದಿನಾಂಕ ಮತ್ತು ಸಮಯದ ಸ್ವೀಕೃತಿಯನ್ನು ಚುನಾವಣಾಧಿಕಾರಿ ಯಿಂದ ಪಡೆದುಕೊಳ್ಳಬೇಕು.
ನಾಮಪತ್ರ ಪರಿಶೀಲನೆ ವೇಳೆ ಪರಿಗಣಿಸುವ ಅಂಶಗಳು:
ಸಾಮಾನ್ಯವಾಗಿ ಕಾಗುಣಿತ ದೋಷ, ಮುದ್ರಣ ದೋಷಗಳನ್ನು ಗಂಭೀರವಾಗಿ ಪರಿಗಣಿಸಲಾಗು ವುದಿಲ್ಲ. ನಾಮಪತ್ರದಲ್ಲಿ ಅಭ್ಯರ್ಥಿ ಹೆಸರು ಇಲ್ಲದೇ ಇದ್ದರೆ ಅಥವಾ ಸೂಚಕ ಬೇರೆ ಗ್ರಾಮ ಪಂಚಾಯತ್ ವ್ಯಾಪ್ತಿಯವರಾಗಿದ್ದರೆ ನಾಮ ಪತ್ರ ತಿರಸ್ಕೃತಗೊಳ್ಳುತ್ತದೆ. ನಾಲ್ಕು ನಾಮಪತ್ರಗಳ ಪೈಕಿ ಒಂದು ತಿರಸ್ಕಾರಗೊಂಡು ಒಂದು ಅಂಗೀ ಕೃತಗೊಂಡರೆ ಉಮೇದುವಾರಿಕೆ ಊರ್ಜಿತಗೊಳ್ಳುತ್ತದೆ.
ಜಾತಿ ಪ್ರಮಾಣಪತ್ರ ಮತ್ತಿತರ ಸೂಕ್ಷ್ಮ ವಿಚಾರಗಳ ಬಗ್ಗೆ ಆಕ್ಷೇಪಗಳು ಬಂದಾಗ ಅಂತಹ ಸಂದರ್ಭದಲ್ಲಿ ನಾಮಪತ್ರ ಪರಿಶೀಲನೆಯನ್ನು ಒಂದು ದಿನಕ್ಕೆ ಮುಂದೂಡಿ ವಾದ-ಪ್ರತಿವಾದ ಆಲಿಸಿದ ಬಳಿಕ ಚುನಾವಣಾಧಿಕಾರಿ ತೀರ್ಮಾ ನ ತೆಗೆದುಕೊಳ್ಳುತ್ತಾರೆ. ನಾಮಪತ್ರ ತಿರ ಸ್ಕರಿಸಿ ಅಥವಾ ಅಂಗೀಕರಿಸಿ ಒಮ್ಮೆ ಚುನಾ ವಣ ಧಿಕಾರಿ ತೀರ್ಮಾನ ತೆಗೆದುಕೊಂಡರೆ ಅದು ಅಂತಿಮ. ಆದನ್ನು ಚುನಾವಣೆ ಮುಗಿದ ಬಳಿಕ ವಷ್ಟೇ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.
ಚಿಹೆØ ಹಂಚಿಕೆ
ರಾಷ್ಟ್ರೀಯ, ಪ್ರಾದೇಶಿಕ ಹಾಗೂ ಇತರೆ ನೋಂದಾ ಯಿತ ಮಾನ್ಯತೆ ಪಡೆದ ಪಕ್ಷಗಳಿಗೆ ಈಗಾಗಲೇ ಹಂಚಿಕೆಯಾಗಿರುವ ಚಿಹ್ನೆಗಳನ್ನು ಹೊರತುಪಡಿಸಿ ಹಂಚಿಕೆಗೆ ಮುಕ್ತವಾಗಿರುವ 94 ಚಿಹ್ನೆಗಳ ಪೈಕಿ ಯಾವುದಾದರೂ ಒಂದು ಚಿಹ್ನೆಯನ್ನು ಅಭ್ಯರ್ಥಿಗಳು ನಾಮಪತ್ರದಲ್ಲಿ ನಮೂದಿ ಸಬೇಕು. ಒಂದೇ ಚಿಹ್ನೆಯನ್ನು ಇಬ್ಬರು ಕೇಳಿ ಅದೇ ಚಿಹ್ನೆ ಬೇಕು ಎಂದು ಇಬ್ಬರು ಪಟ್ಟು ಹಿಡಿದಾಗ ಚೀಟಿ ಎತ್ತುವ ಮೂಲಕ ಚಿಹ್ನೆ ಹಂಚಿಕೆ ಮಾಡಲಾಗುತ್ತದೆ.
ನಾಮಪತ್ರ ವಾಪಸ್ ಪಡೆಯುವ ದಿನಾಂಕ ಮುಗಿದ ಬಳಿಕ ಅಭ್ಯರ್ಥಿಗಳ ಹೆಸರನ್ನು ಕನ್ನಡ ವರ್ಣಮಾಲೆಯ ಅಕಾರಾದಿಯಾಗಿ ಪ್ರಕಟಿಸ ಲಾಗುತ್ತದೆ.
ಎಂ.ಕೆ. ಕೆಂಪೇಗೌಡ, ನಿವೃತ್ತ ನಿರ್ದೇಶಕರು, ಪಂಚಾಯತ್‌ರಾಜ್ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.